ವಿವಾಹವು ಜೀವನದ ಒಂದು ಪ್ರಮುಖ ಘಟ್ಟ. ಹುಡುಗನಿಗಾಗಲಿ ಅಥವಾ ಹುಡುಗಿಗಾಗಲಿ ಸರಿಯಾದ ವಯಸ್ಸಿಗೆ ಮದುವೆ ಆಗಲಿಲ್ಲ, ಮದುವೆಗೆ ಸಂಬಂಧ ಕೂಡಿ ಬರಲಿಲ್ಲ ಎಂದು ಕೂಡಲೇ ಒಂದು ರೀತಿಯ ಆತಂಕ ಆರಂಭವಾಗುತ್ತದೆ. ಮದುವೆ ಆಗುವುದು ಎಷ್ಟು ಮುಖ್ಯವೋ ಸರಿಯಾದ ಸಮಯಕ್ಕೆ ಆಗುವುದು ಸಹ ಅಷ್ಟೇ ಮುಖ್ಯ ಎನ್ನುತ್ತಾರೆ (Astrology Tips) ಬಲ್ಲವರು.
ಹೀಗಾಗಿಯೇ ನಮ್ಮ ಹಿರಿಯರು ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲು ಅನೇಕ ಉಪಾಯಗಳನ್ನು ಮಾಡುತ್ತಿದ್ದರು. ಜ್ಯೋತಿಷ್ಯ ಶಾಸ್ತ್ರದಲ್ಲೂ ಮದುವೆ ಫಿಕ್ಸ್ ಆಗಲು ಅನೇಕ ಉಪಾಯಗಳನ್ನು ಹೇಳಲಾಗಿದೆ. ಮದುವೆಯ ವಯಸ್ಸಿಗೆ ಬಂದರೂ ಯಾವುದೇ ಜಾತಕ ಹೊಂದಾಣಿಕೆಯಾಗುತ್ತಿಲ್ಲ ಅಥವಾ ಮದುವೆ ವರೆಗೂ ಬಂದ ಸಂಬಂಧಗಳು ಮುರಿದು ಬೀಳುತ್ತಿವೆ ಎಂಬುದು ಅನೇಕರ ಸಾಮಾನ್ಯ ಸಮಸ್ಯೆಯಾಗಿದೆ. ಇವೆಲ್ಲದಕ್ಕೆ ಜಾತಕದಲ್ಲಿರುವ ಗ್ರಹ, ನಕ್ಷತ್ರಗಳು ಕಾರಣವಾಗಿರುತ್ತವೆ ಎನ್ನುತ್ತದೆ ಈ ಶಾಸ್ತ್ರ.
ಜಾತಕದಲ್ಲಿ ಗ್ರಹಗಳು ಸರಿಯಾದ ಸ್ಥಾನ ಮತ್ತು ಸ್ಥಿತಿಯಲ್ಲಿದ್ದರೆ ಅಂಥ ಸಂದರ್ಭದಲ್ಲಿ ಯಾವುದೇ ತಾಪತ್ರಯವಿಲ್ಲದೇ ಮದುವೆ ಸಂಬಂಧ ಕೂಡಿ ಬರುತ್ತದೆಯಂಥೆ. ಅದೇ ಜಾತಕದಲ್ಲಿ ಗ್ರಹಗಳ ಸ್ಥಿತಿ ಚೆನ್ನಾಗಿಲ್ಲವೆಂದಾದರೆ ವಿವಾಹಕ್ಕೆ ತೊಂದರೆ ಉಂಟಾಗುತ್ತದೆ. ಅಂಥ ಸಂದರ್ಭಗಳಲ್ಲಿ ಜ್ಯೋತಿಷ್ಯದಲ್ಲಿ ಹೇಳಿರುವ ಕೆಲವು ಪರಿಹಾರಗಳನ್ನು ಮಾಡಿದರೆ ಎಲ್ಲವೂ ಸರಿಹೋಗುತ್ತದೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು.
ಜ್ಯೋತಿಷ್ಯ ಶಾಸ್ತ್ರದ ಅನುಸಾರ ಜಾತಕದಲ್ಲಿ ಮುಖ್ಯವಾಗಿ ಸಪ್ತಮ, ನವಮ ಮತ್ತು ಪಂಚಮ ಸ್ಥಾನಗಳ ಅಧಿಪತಿ ಗ್ರಹವು ಉತ್ತಮ ಸ್ಥಿತಿಯಲ್ಲಿದ್ದರೆ ಅಂಥವರ ವಿವಾಹ ಸಮಯಕ್ಕೆ ಸರಿಯಾಗಿ ಆಗುತ್ತದೆ. ಚಂದ್ರ, ಶುಕ್ರ ಮತ್ತು ಗುರು ಗ್ರಹಗಳ ಸ್ಥಿತಿ ಉತ್ತಮವಾಗಿದ್ದರೆ ಕೂಡ ಮದುವೆಯು ಅತ್ಯಂತ ಸುಲಭವಾಗಿ ಆಗಿ ಹೋಗುತ್ತದೆ. ಗುರು ಬಲ ಚೆನ್ನಾಗಿದ್ದರೆ ಮದುವೆ ಸರಿಯಾದ ಸಮಯಕ್ಕೆ ಆಗುತ್ತದೆ. ಇಲ್ಲದಿದ್ದರೆ ಗುರು ಬಲ ಬರುವವರೆಗೂ ಕಾಯಬೇಕಾಗುತ್ತದೆ.
ಒಂದು ವೇಳೆ ನಿಮ್ಮ ಜಾತಕದಲ್ಲಿ ಗುರು ಗ್ರಹದ ಸ್ಥಿತಿ ಉತ್ತಮವಾಗಿದೇ ಇದ್ದರೂ, ಕಂಕಣ ಬಲ ಕೂಡಿ ಬರಲು ಪ್ರಾತಃಕಾಲದಲ್ಲಿ ಅಥವಾ ಸಂಧ್ಯಾಕಾಲದಲ್ಲಿ ಹಳದಿ ವಸ್ತ್ರವನ್ನು ಧರಿಸಿ ಬೃಹಸ್ಪತಿಗೆ ಅಂದರೆ ಗುರು ಗ್ರಹಕ್ಕೆ ಕೆಂಪು ಮತ್ತು ಹಳದಿ ಹೂವುಗಳಿಂದ ಪೂಜೆ ಮಾಡಬೇಕು. ಬೃಹಸ್ಪತಿ ಮಂತ್ರವನ್ನು ಜಪಿಸಬೇಕು. ನಂತರದಲ್ಲಿ ಸಿಹಿಯನ್ನು ನೈವೇದ್ಯ ಮಾಡಬೇಕು. ಬೃಹಸ್ಪತಿ ದೇವರಲ್ಲಿ ಬೇಗ ವಿವಾಹವಾಗುವಂತೆ ಕೇಳಿಕೊಳ್ಳಬೇಕು. ಜೊತೆಗೆ ಅರಿಶಿಣ ಮಿಶ್ರಿತ ನೀರನ್ನು ಬಾಳೆ ಮರಕ್ಕೆ ಹಾಕಬೇಕು. ಇದೇ ರೀತಿ ಮೂರು ಗುರುವಾರಗಳ ಕಾಲ ಮಾಡಿದರೆ ಗುರು ಗ್ರಹದ ಕೃಪೆ ಪ್ರಾಪ್ತವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
ಮಹಿಳೆಯರು ಏನು ಮಾಡಬೇಕು?
ಹುಡುಗಿಯರ ವಿವಾಹಕ್ಕಂತೂ ಗುರು ಬಲ ಚೆನ್ನಾಗಿರಲೇಬೇಕು. ಗುರು ಬಲವಿಲ್ಲದೇ ಮದುವೆ ಆದದ್ದೇ ಆದರೆ ವೈವಾಹಿಕ ಜೀವನದಲ್ಲಿ ತೊಂದರೆಗಳು ಎದುರಾಗುತ್ತವೆ. ಜಾತಕದಲ್ಲಿ ಗುರು ಗ್ರಹವು ನೀಚ ಸ್ಥಿತಿಯಲ್ಲಿದ್ದರೆ ವಿವಾಹ ವಿಳಂಬವಾಗುತ್ತದೆ. ಗುರು ಗ್ರಹದ ಸ್ಥಿತಿ ಸ್ವಲ್ಪ ಮಟ್ಟಿಗೆ ಉತ್ತಮವಾಗಿದ್ದರೂ ಸಹ ವಿವಾಹಕ್ಕೆ ಯಾವುದೇ ತೊಂದರೆಗಳು ಆಗುವುದಿಲ್ಲ. ಹಾಗಾಗಿ ಹುಡುಗಿಯರ ವಿವಾಹಕ್ಕೆ ಗುರು ಗ್ರಹದ ಪಾತ್ರ ಅತ್ಯಂತ ಮುಖ್ಯವಾಗಿರುತ್ತದೆ.
ಗುರು ಬಲ ಚೆನ್ನಾಗಿರದೇ ಇದ್ದಾಗ ಈ ರೀತಿ ಮಾಡಿ;
- ನಿತ್ಯವೂ ಅರಿಶಿಣ ಮಿಶ್ರಿತ ನೀರನ್ನು ಸೂರ್ಯನಿಗೆ ಅರ್ಪಿಸಿ.
- ನಿತ್ಯವೂ ತುಪ್ಪದ ದೀಪ ಹಚ್ಚಿ ಪಾರ್ವತಿ ದೇವಿಯನ್ನು ಆರಾಧಿಸಬೇಕು. 21 ಸೋಮವಾರ ವ್ರತವನ್ನು ಕೈಗೊಂಡರೆ ಬೇಗ ಕಂಕಣ ಬಲ ಕೂಡಿ ಬರುತ್ತದೆ.
- ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಠಿಸಬೇಕು. ಜೊತೆಗೆ ಸಾತ್ವಿಕ ಆಹಾರವನ್ನು ಸೇವಿಸಬೇಕು. ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಮಾಡುತ್ತಿರಬೇಕು.
ಪುರುಷರು ಏನು ಮಾಡಬೇಕು?
ಪುರುಷರಿಗೆ ವಿವಾಹ ಯೋಗ ಕೂಡಿ ಬರಲು ಜಾತಕದಲ್ಲಿ ಶುಕ್ರ ಗ್ರಹದ ಸ್ಥಿತಿ ಚೆನ್ನಾಗಿರಬೇಕು. ಆದರೆ ಪತ್ನಿಯಾಗುವವಳ ಯೋಗವನ್ನು ಪರಿಶೀಲಿಸುವಾಗ ಪುರುಷನ ಜಾತಕದಲ್ಲಿ ಗುರು ಗ್ರಹ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಪತ್ನಿಯಾಗುವವಳ ರೂಪ, ಸ್ವಭಾವ, ಗುಣ, ಬಣ್ಣ ಮತ್ತು ಹೊಂದಾಣಿಕೆಗೆ ಸಂಬಂಧಿಸಿದ ವಿಚಾರಗಳನ್ನು ಪುರುಷನ ಜಾತಕದಲ್ಲಿ ಗುರು ಗ್ರಹದ ಸ್ಥಿತಿಯ ಆಧಾರದ ಮೇಲೆ ತಿಳಿದುಕೊಳ್ಳಬಹುದಾಗಿರುತ್ತದೆ. ವಿವಾಹ ಯೋಗ ಕೂಡಿ ಬರಲು ಪುರುಷರು ಮಾಡಬೇಕಾದ ಜ್ಯೋತಿಷ್ಯ ಪರಿಹಾರಗಳು ಹೀಗಿವೆ;
- ಸೂರ್ಯನಿಗೆ ಪ್ರತಿನಿತ್ಯ ಅರ್ಘ್ಯವನ್ನು ಅರ್ಪಿಸುವುದರ ಜೊತೆಗೆ ಸೂರ್ಯನಿಗೆ ನಮಿಸಿ ಪ್ರಾರ್ಥಿಸಿಕೊಳ್ಳಬೇಕು. ಹೆಚ್ಚು ಹಳದಿ ವಸ್ತ್ರವನ್ನು ಧರಿಸಬೇಕು.
- ಪ್ರತಿನಿತ್ಯ ‘ಓಂ ನಮಃ ಶಿವಾಯ’ ಜಪವನ್ನು 108 ಬಾರಿ ಪಠಿಸಬೇಕು.
ಇದನ್ನೂ ಓದಿ : Vastu Tips : ಆರ್ಥಿಕ ಲಾಭ ಪಡೆಯಲು ಮನೆಯ ಉತ್ತರ ದಿಕ್ಕಿನಲ್ಲಿ ಹೀಗೆ ಮಾಡಿ!