Site icon Vistara News

Dina Bhavishya : ಈ ರಾಶಿಯವರಿಗೆ ಇಂದು ಅದೃಷ್ಟವೇ ಹುಡುಕಿಕೊಂಡು ಬರುತ್ತೆ

daily horoscope predictions for december 17 2023

ಚಂದ್ರನು ಕುಂಭ ರಾಶಿಯಿಂದ ಭಾನುವಾರ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ಕನ್ಯಾ, ಧನಸ್ಸು, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರಿಗೆ ಈ ದಿನ ಮುಟ್ಟಿದ್ದೆಲ್ಲವೂ ಚಿನ್ನವಾಗಲಿದೆ. ಭೂಮಿ ಖರೀದಿ ಮಾಡಿದರೂ ಜಯವಾಗಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಇರಲಿದೆ. ಹಣಕಾಸು ವ್ಯವಹಾರಗಳಲ್ಲಿ ಲಾಭ ಇರಲಿದೆ. ಸಿಂಹ ರಾಶಿಯವರಿಗೆ ಕೆಲಸದಲ್ಲಿ ಹಿರಿಯರಿಂದ ಒತ್ತಡ ಮತ್ತು ಮನೆಯಲ್ಲಿ ಅಪಶ್ರುತಿ ನಿಮ್ಮ ಏಕಾಗ್ರತೆಗೆ ತೊಂದರೆ ತರಬಹುದು. ಕನ್ಯಾ ರಾಶಿಯ ವಿವಾಹಿತರಿಗೆ ಇಂದು ಅತ್ತೆ ಮನೆ ಕಡೆಯಿಂದ ಹಣದ ಪ್ರಯೋಜನವಾಗುವ ಸಾಧ್ಯತೆ ಇದೆ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (17-12-2023)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶೀರ್ಷ ಮಾಸ, ಶುಕ್ಲ ಪಕ್ಷ.
ತಿಥಿ: ಪಂಚಮಿ 17:32 ವಾರ: ಭಾನುವಾರ
ನಕ್ಷತ್ರ: ಧನಿಷ್ಠಾ 26:53 ಯೋಗ: ಹರ್ಷಣ 24:34
ಕರಣ: ಬಾಲವ 17:32 ಅಮೃತಕಾಲ: ಬೆಳಗ್ಗೆ 5:15 ರಿಂದ 6:44 ರವರೆಗೆ
ದಿನದ ವಿಶೇಷ: ಧನುರ್ಮಾಸ ಆರಂಭ, ಸುಬ್ರಮಣ್ಯ ಪಂಚಮಿ

ಸೂರ್ಯೋದಯ : 06:35  ಸೂರ್ಯಾಸ್ತ : 05:57

ರಾಹುಕಾಲ : ಸಂಜೆ 4.30 ರಿಂದ 6.00
ಗುಳಿಕಕಾಲ: ಮಧ್ಯಾಹ್ನ 3.00 ರಿಂದ 4.30
ಯಮಗಂಡಕಾಲ: ಮಧ್ಯಾಹ್ನ 12.00 ರಿಂದ 1.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ಭೂಮಿ ಖರೀದಿ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಇರಲಿದೆ. ಹಣಕಾಸು ವ್ಯವಹಾರಗಳಲ್ಲಿ ಲಾಭ ಇರಲಿದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ವೃಷಭ: ಸ್ನೇಹಿತರೊಂದಿಗೆ ಮನೋರಂಜನೆಯೊಂದಿಗೆ ಕಾಲಕಳೆಯುವ ಸಾಧ್ಯತೆ ಇದೆ. ಸಾಲವನ್ನು ತೆಗೆದುಕೊಂಡಿದ್ದರೆ, ಇಂದು ಯಾವುದೇ ಪರಿಸ್ಥಿತಿಯಲ್ಲೂ ಸಾಲವನ್ನು ಮರುಪಾವತಿಸ ಬೇಕಾಗುತ್ತದೆ. ಇದರಿಂದ ಆರ್ಥಿಕ ಪರಿಸ್ಥಿತಿ ಸ್ವಲ್ಪ ದುರ್ಬಲವಾಗುತ್ತದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಮಿಥುನ: ಆರೋಗ್ಯ ಪರಿಪೂರ್ಣವಾಗಿರಲಿದೆ. ಮನಸ್ಸು ಉತ್ಸಾಹದಿಂದ ಕೂಡಿರಲಿದೆ. ನಿಮಗೆ ನಿಮ್ಮ ಸಹೋದರ ಅಥವಾ ಸಹೋದರಿಯ ಸಹಾಯದಿಂದ ಲಾಭವಾಗುವ ಸಾಧ್ಯತೆ ಇದೆ. ಹೊಸ ಸಂಬಂಧಗಳು ಕೂಡಿ ಬರಲಿದೆ ಮತ್ತು ಹೆಚ್ಚು ಅನುಕೂಲಕರವಾಗಿರುತ್ತವೆ. ಆರ್ಥಿಕವಾಗಿ ಸದೃಢವಾಗಿರಲಿದೆ. ಉದ್ಯೋಗಿಗಳಿಗೆ ಹೆಚ್ಚು ಒತ್ತಡ ಇರಲಿದೆ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಕಟಕ: ಮನೆಯಲ್ಲಿನ ಒತ್ತಡವು ನಿಮಗೆ ಸಿಟ್ಟು ತರಿಸಬಹುದು. ಅವುಗಳನ್ನು ದಮನಗೊಳಿಸುವುದು ಕೇವಲ ದೈಹಿಕ ಸಮಸ್ಯೆಯನ್ನು ಹೆಚ್ಚಿಸುತ್ತದೆ. ದೈಹಿಕ ಚಟುವಟಿಕೆಯೊಂದಿಗೆ ಇದನ್ನು ತೊಡೆದುಹಾಕಿ. ಕಿರಿಕಿರಿಯುಂಟು ಮಾಡುವ ಪರಿಸ್ಥಿತಿಯಿಂದ ಹೊರಬರುವುದು ಉತ್ತಮ. ನಿಮ್ಮ ಜ್ಞಾನದಾಹ ನಿಮಗೆ ಹೊಸ ಸ್ನೇಹಿತರನ್ನು ಪಡೆಯಲು ಸಹಾಯ ಮಾಡುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ತಕ್ಕ ಮಟ್ಟಿಗೆ ಲಾಭ ಸಿಗಲಿದೆ. ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2

ಸಿಂಹ: ಕೆಲಸದಲ್ಲಿ ಹಿರಿಯರಿಂದ ಒತ್ತಡ ಮತ್ತು ಮನೆಯಲ್ಲಿ ಅಪಶ್ರುತಿ ನಿಮ್ಮ ಏಕಾಗ್ರತೆಗೆ ತೊಂದರೆ ತರಬಹುದು. ಕುಟುಂಬದ ಸದಸ್ಯರೊಂದಿಗೆ ನಿಮ್ಮ ಸಮಸ್ಯೆಗಳನ್ನು ಹಂಚಿಕೊಂಡು ನೀವು ಒಳ್ಳೆಯದನ್ನು ಅನುಭವಿಸಬಹುದು .ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಕನ್ಯಾ: ಈ ರಾಶಿ ಚಕ್ರದ ವಿವಾಹಿತ ಜನರಿಗೆ ಇಂದು ಅತ್ತೆ ಮನೆ ಕಡೆಯಿಂದ ಹಣದ ಪ್ರಯೋಜನವಾಗುವ ಸಾಧ್ಯತೆ ಇದೆ. ನೀವು ಭಾವಿಸಿದ್ದಕ್ಕಿಂತ ಹೆಚ್ಚಾಗಿ ನಿಮ್ಮ ಸಹೋದರರು ನಿಮ್ಮ ಅಗತ್ಯಗಳಿಗೆ ಬೆಂಬಲ ನೀಡುತ್ತಾರೆ. ಭಾವನಾತ್ಮಕ ತೊಂದರೆಗಳು ನಿಮ್ಮನ್ನು ಕಾಡುತ್ತವೆ. ಶ್ರೇಷ್ಠ ಜನರೊಡನೆ ಸಂಬಂಧ ನಿಮ್ಮಲ್ಲಿ ಒಳ್ಳೆಯ ವಿಚಾರಗಳು ಮತ್ತು ಯೋಜನೆಗಳನ್ನು ತರುತ್ತದೆ. ಪ್ರಯಾಣ ಸಂತೋಷಕರ ಮತ್ತು ಹೆಚ್ಚು ಅನುಕೂಲಕರವಾಗಿರುತ್ತದೆ.ಆರೋಗ್ಯದ ಕುರಿತು ಕಾಳಜಿ ವಹಿಸಿ.ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ. ಆದರೆ ತುಂಬಾ ಸಂತೋಷ ಸ್ವಲ್ಪ ಸಮಸ್ಯೆಗಳನ್ನು ಉಂಟು ಮಾಡಬಹುದಾದ್ದರಿಂದ ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ದೀರ್ಘ ಕಾಲ ಬಾಕಿಯಿದ್ದ ಬಾಕಿಗಳು ಕೊನೆಗೂ ದೊರಕುತ್ತವೆ. ನಿಮ್ಮ ಮನೆಯ ಪರಿಸರದಲ್ಲಿ ಒಳ್ಳೆಯ ಬದಲಾವಣೆಗಳನ್ನು ಮಾಡುತ್ತೀರಿ. ಕೆಲಸದ ಒತ್ತಡ ಇನ್ನೂ ನಿಮ್ಮ ಮನಸ್ಸನ್ನು ಆವರಿಸುತ್ತದೆ ಹಾಗೂ ಇದು ಕುಟುಂಬ ಮತ್ತು ಸ್ನೇಹಿತರಿಗೆ ಯಾವುದೇ ಸಮಯವಿಲ್ಲದಂತೆ ಮಾಡುತ್ತದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

ವೃಶ್ಚಿಕ: ನಿಮ್ಮ ಹಠಮಾರಿ ಧೋರಣೆಯಿಂದಾಗಿ ಮನೆಯಲ್ಲಿ ಕಿರಿಕಿರಿ ಸಾಧ್ಯತೆ ಇದೆ. ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ. ಕುಟುಂಬದ ಒಟ್ಟಾಗಟ್ಟಿಗೆ ನೀವೇ ಕೇಂದ್ರ ಬಿಂದುವಾಗಿರುತ್ತೀರಿ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಅಸಮಾಧಾನ ತರಬಹುದು. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3

ಧನಸ್ಸು: ಅನೇಕ ಒತ್ತಡಗಳಿಂದ ವಿಶ್ರಾಂತಿ ಸಿಗಲಿದೆ. ಆಭರಣ,ಹೂಡಿಕೆ ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಸಿಗಲಿದೆ.ಅನಿರೀಕ್ಷಿತವಾಗಿ ಸ್ನೇಹಿತರ ಭೇಟಿ ಮಾಡುವಿರಿ. ಆರೋಗ್ಯ ಪರಿಪೂರ್ಣ ಇರಲಿದೆ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗಲಿವೆ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಮಕರ: ಕೌಟುಂಬಿಕ ಒತ್ತಡ ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಸಾಧ್ಯತೆ ಇದೆ. ಕೋಪದಲ್ಲಿ ಆಡಿದ ಮಾತುಗಳ ಮನವರಿಕೆ ಆಗುವುದು. ಜೀವನದಲ್ಲಿ ಹೊಸ ಪಾಠ ಕಲಿಯುವಿರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗದ ಸ್ಥಳದಲ್ಲಿ ಪ್ರೋತ್ಸಾಹ ಸಿಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

ಕುಂಭ: ಆತ್ಮವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು ,ಕೀರ್ತಿ ಸಿಗುವುದು. ದಿನದ ಮಟ್ಟಿಗೆ ಅನಗತ್ಯವಾಗಿ ಖರ್ಚು ಮಾಡುವ ಸಾಧ್ಯತೆ ಇದೆ. ಗೌಪ್ಯ ವಿಷಯಗಳನ್ನು ಹಂಚಿಕೊಂಡು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಕುಟುಂಬದ ಕಲಹದಲ್ಲಿ ಧ್ವನಿ ಸೇರಿಸುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

ಮೀನ: ಒತ್ತಡದ ಜೀವನಕ್ಕೆ ಕೊಂಚ ಮಟ್ಟಿಗೆ ಸಮಾಧಾನದ ಮಾತುಗಳು ಸೂಕ್ತ ವ್ಯಕ್ತಿಗಳಿಂದ ಸಿಗಲಿವೆ. ನಿಮ್ಮ ವರ್ತನೆಯಿಂದ ಕುಟುಂಬದ ಸದಸ್ಯರು ಕೋಪಗೊಳ್ಳವ ಸಾಧ್ಯತೆ ಇದೆ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಅವಶ್ಯಕ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version