ಚಂದ್ರನು ಬುಧವಾರವೂ ಮೇಷ ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ವೃಷಭ, ಮಿಥುನ, ಕನ್ಯಾ, ತುಲಾ, ಮಕರ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರಿಗೆ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮಾನಸಿಕ ಒತ್ತಡದಿಂದ ಮುಕ್ತರಾಗಿ, ದೊಡ್ಡ ಯೋಜನೆಯತ್ತ ಗಮನ ಹರಿಸುವಿರಿ. ವೃಷಭ ರಾಶಿಯವರಿಗೆ ಕುಟುಂಬ ಸದಸ್ಯರ ವರ್ತನೆ ನಿಮಗೆ ಹಿಡಿಸದಿರಬಹುದು, ಆದರೆ ವಿನಾ ಕಾರಣ ಮಾತಿಗಿಳಿದು ಮನಸ್ಸು ಕೆಡಿಸಿಕೊಳ್ಳುವುದು ಬೇಡ. ನಂಬಿದ ವ್ಯಕ್ತಿಗಳು ನಿಮ್ಮನ್ನು ನಿರಾಸೆ ಮಾಡಬಹುದು. ಉದ್ಯೋಗದ ಸ್ಥಳದಲ್ಲಿ ನಿಮ್ಮ ಕಾರ್ಯದ ಯಶಸ್ಸು ಬೇರೆಯವರ ಪಾಲಾಗದಂತೆ ಎಚ್ಚರಿಕೆ ವಹಿಸಿ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.
ಇಂದಿನ ಪಂಚಾಂಗ (kannada panchanga) (20-12-2023)
ಮೇಷ: ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮಾನಸಿಕ ಒತ್ತಡದಿಂದ ಮುಕ್ತರಾಗಿ, ದೊಡ್ಡ ಯೋಜನೆಯತ್ತ ಗಮನ ಹರಿಸುವಿರಿ. ಬಹಳ ದಿನಗಳ ನಂತರ ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಹಣಕಾಸು ಪ್ರಗತಿ ಸಾಮಾನ್ಯವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1
ವೃಷಭ: ಕುಟುಂಬ ಸದಸ್ಯರ ವರ್ತನೆ ನಿಮಗೆ ಹಿಡಿಸದಿರಬಹುದು, ಆದರೆ ವಿನಾ ಕಾರಣ ಮಾತಿಗಿಳಿದು ಮನಸ್ಸು ಕೆಡಿಸಿಕೊಳ್ಳುವುದು ಬೇಡ. ನಂಬಿದ ವ್ಯಕ್ತಿಗಳು ನಿಮ್ಮನ್ನು ನಿರಾಸೆ ಮಾಡಬಹುದು. ಉದ್ಯೋಗದ ಸ್ಥಳದಲ್ಲಿ ನಿಮ್ಮ ಕಾರ್ಯದ ಯಶಸ್ಸು ಬೇರೆಯವರ ಪಾಲಾಗದಂತೆ ಎಚ್ಚರಿಕೆ ವಹಿಸಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಹಣಕಾಸು ಪ್ರಗತಿ ಮಧ್ಯಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1
ಮಿಥುನ: ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುವುದು ಉತ್ತಮ. ಅದರಲ್ಲೂ ಗರ್ಭಿಣಿಯರು ಹೆಚ್ಚು ಕಾಳಜಿ ವಹಿಸಿ. ಹೊಸ ಒಪ್ಪಂದ ಮಾಡುವುದು ಇಂದಿನ ಮಟ್ಟಿಗೆ ಬೇಡ. ಆತುರದಲ್ಲಿ ಯಾವ ತೀರ್ಮಾನಗಳನ್ನು ಮಾಡುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8
ಕಟಕ: ಬಿಡುವಿಲ್ಲದ ಕಾರ್ಯ ಯೋಜನೆಯು ಅಪಾರ ಯಶಸ್ಸನ್ನು ಹಾಗೂ ಕೀರ್ತಿಯನ್ನು ತಂದು ಕೊಡುವುದು. ಪ್ರಯಾಣದ ಕುರಿತಾಗಿ ಯೋಜನೆ ಮಾಡುವಿರಿ. ಹೂಡಿಕೆ ವ್ಯವಹಾರವು ಇಂದು ಹೆಚ್ಚು ಲಾಭ ತರುವುದು. ಪರಿಪೂರ್ಣ ಆರೋಗ್ಯ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2
ಸಿಂಹ: ದಿನದ ಮಟ್ಟಿಗೆ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದ್ದು, ಎಚ್ಚರಿಕೆ ಇರಲಿ. ವಿಶ್ವಾಸದಿಂದ ಕಾರ್ಯ ಸಿದ್ಧಿ. ಲಾಭದ ಹೂಡಿಕೆ ಕುರಿತಾಗಿ ಆಲೋಚನೆ ಮಾಡುವಿರಿ. ಕುಟುಂಬದ ಜತೆಗೆ ಕಾಲ ಕಳೆಯಲು ಹೆಚ್ಚು ಸಮಯ ವಿನಿಯೋಗಿಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 9
ಕನ್ಯಾ: ಪ್ರಯತ್ನದಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ವ್ಯವಹಾರದಲ್ಲಿ ಲಾಭ ಸಿಗಲಿದೆ. ಆತುರದಲ್ಲಿ ಮಾತನಾಡಿ ಅಪಾಯ ತಂದುಕೊಳ್ಳುವುದು ಬೇಡ. ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆ ಇದೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಭರವಸೆಯ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸೌಂದರ್ಯದ ಕುರಿತು ಕಾಳಜಿ ವಹಿಸುವಿರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಹಣಕಾಸು ವ್ಯವಹಾರದಲ್ಲಿ ಲಾಭ ಇರಲಿದೆ. ಕುಟುಂಬದ ಸದಸ್ಯರಿಂದ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1
ವೃಶ್ಚಿಕ: ಮಾನಸಿಕ ಒತ್ತಡದಿಂದ ದೂರವಾಗಲು ಧ್ಯಾನ ಮಾಡಿ. ಚಿಂತೆಯು ನಿಮ್ಮನ್ನು ಮತ್ತಷ್ಟು ಖಿನ್ನತೆಗೆ ಒಳಪಡಿಸುವುದು. ಆದರಿಂದ ಸಕಾರಾತ್ಮಕ ಆಲೋಚನೆಗಳನ್ನು ಮಾಡಿ. ಕೌಟುಂಬಿಕ ಕಲಹದಲ್ಲಿ ಧ್ವನಿ ಸೇರಿಸುವುದು ಬೇಡ, ಮನೆಯ ವಾತಾವರಣ ಹದಗೆಡಬಹುದು. ಮೌನದಿಂದ ಕಾರ್ಯ ಸಿದ್ಧಿಸಿಕೊಳ್ಳಿ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 3
ಧನಸ್ಸು: ಪ್ರಭಾವಿ ವ್ಯಕ್ತಿಗಳ ವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಅನಿರೀಕ್ಷಿತ ಖರ್ಚು ಇರಲಿದೆ. ಇದರ ಹೊರಾತಾಗಿಯೂ ಲಾಭ ಪಡೆಯುವಿರಿ. ಮಾತಿನ ಮೇಲೆ ಹಿಡಿತವಿರಲಿ. ಸಮಯ ವ್ಯರ್ಥ ಮಾಡದೆ ಕಾರ್ಯದಲ್ಲಿ ಮುನ್ನುಗ್ಗಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 9
ಮಕರ: ಘಟಿಸಿದ ಘಟನೆಗಳನ್ನು ಮೆಲುಕು ಹಾಕುತ್ತಾ ಕಾಲಹರಣ ಮಾಡುವ ಬದಲು ಕಾರ್ಯದಲ್ಲಿ ಮುನ್ನುಗ್ಗಿ. ಮಾನಸಿಕ ಒತ್ತಡ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಉಂಟು ಆಗುವ ಸಾಧ್ಯತೆ ಇದೆ. ಅತಿರೇಕವಾಗಿ ಕೋಪದಿಂದ ಮಾತನಾಡುವುದು ಬೇಡ. ಆರ್ಥಿಕ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 9
ಕುಂಭ: ನಿಮ್ಮ ಸಹಾಯ ಮಾಡುವ ಗುಣವನ್ನು ಇತರರಿಂದ ಪ್ರಶಂಸೆ ಸಿಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7
ಮೀನ: ಉದ್ಯೋಗದಲ್ಲಿ ಹೊಸ ಭರವಸೆ ಮೂಡಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕುಟುಂಬದ ಸದಸ್ಯರ ವರ್ತನೆ ಮುಜುಗರ ಉಂಟು ಮಾಡುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com