Site icon Vistara News

Dina Bhavishya: ಇಂದು ಈ ರಾಶಿಯವರು ಮುಂದಿನ ನಿರ್ಣಯ ತೆಗೆದುಕೊಳ್ಳಲು ಒಳ್ಳೇ ಸಮಯ!

dina bhavishya read your daily horoscope predictions for April 7 2024

ಚಂದ್ರನು ಭಾನುವಾರ ಬೆಳಗ್ಗೆ 7.24ಕ್ಕೆ ಮೇಷ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಇದರಿಂದಾಗಿ ವೃಷಭ, ಮಿಥುನ, ಕನ್ಯಾ, ತುಲಾ, ಮಕರ ಹಾಗೂ ಮೀನ ರಾಶಿಯವರಿಗೆ ಚಂದ್ರನ ಬಲ ಸಿಗಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಸಿಂಹ ರಾಶಿಯವರಿಗೆ ಇಂದು ಕೆಲಸದ ಸ್ಥಳದಲ್ಲಿ ಪ್ರೀತಿ – ವಿಶ್ವಾಸ ಮೇಲುಗೈ ಸಾಧಿಸುತ್ತದೆ. ನಿಮ್ಮ ಶಕ್ತಿ ಮತ್ತು ನಿಮ್ಮ ಮುಂದಿನ ಯೋಜನೆಗಳನ್ನು ಮರು ನಿರ್ಣಯಿಸುವ ಸಮಯ ಇದಾಗಿದೆ. ಆರೋಗ್ಯದಲ್ಲಿ ಪ್ರಗತಿ ಕಾಣುವಿರಿ. ಕೌಟುಂಬಿಕವಾಗಿ ಶುಭ ಫಲ ಇರಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (7-04-2024)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ.
ತಿಥಿ: ತಿಥಿ: ತ್ರಯೋದಶಿ 06:53 / ಚತುರ್ದಶಿ 27:20 ವಾರ: ಭಾನುವಾರ
ನಕ್ಷತ್ರ: ಪೂರ್ವ ಭಾದ್ರಪದ 12:57 ಯೋಗ: ಬ್ರಹ್ಮ 22:15
ಕರಣ: ವಿಷ್ಟಿ (ಭದ್ರ) 17:07 ಅಮೃತ ಕಾಲ: ಬೆಳಗ್ಗೆ 05:58

ಸೂರ್ಯೋದಯ : 06:12   ಸೂರ್ಯಾಸ್ತ : 06:32

ರಾಹುಕಾಲ : ಸಂಜೆ 4.30 ರಿಂದ 6.00
ಗುಳಿಕಕಾಲ: ಸಂಜೆ 3.00 ರಿಂದ 4.30
ಯಮಗಂಡಕಾಲ: ಮಧ್ಯಾಹ್ನ 12.00 ರಿಂದ 1.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ಆರೋಗ್ಯದಲ್ಲಿ ಪ್ರಗತಿ ಕಾಣುವಿರಿ. ವ್ಯಾಪಾರ ವ್ಯವಹಾರದಲ್ಲಿ ಲಾಭ ಆಗಲಿದೆ. ಅತಿಯಾದ ಸಂಶಯಾತ್ಮಕ ಸ್ವಭಾವ ಮನಸ್ಸಿಗೆ ಘಾಸಿ ಮಾಡುವ ಸಾಧ್ಯತೆ ಇದೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ ಇರಲಿದೆ.
ಅದೃಷ್ಟ ಸಂಖ್ಯೆ: 5

ವೃಷಭ: ಕೈಗೆ ಬಂದ ತುತ್ತು ಬಾಯಿಗೆ ಬರುವ ಮುನ್ನ ಯಾವುದೇ ಕೋಪತಾಪವನ್ನು ತೋರಬೇಡಿ. ಸಾಧ್ಯವಾದಷ್ಟು ತಾಳ್ಮೆಯಿಂದ ವರ್ತಿಸಿ. ಕೆಲಸ ಕಾರ್ಯಗಳಲ್ಲಿ ನಿಧಾನ ಗತಿಯನ್ನು ಅನುಸರಿಸಿ. ಕುಟುಂಬದ ಬೆಂಬಲ ನಿಮಗೆ ಸಿಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

ಮಿಥುನ: ಆಪ್ತ ವ್ಯಕ್ತಿಗಳಿಂದ ಸಲಹೆ ಸಿಗಲಿದೆ. ಆರ್ಥಿಕವಾಗಿ ಬಲ ಸಿಗಲಿದೆ. ಎರಡು ಸ್ವಭಾವವುಳ್ಳ ನಿಮಗೆ ಆಂತರಿಕವಾಗಿ ಭಯ ಉಂಟಾದಂತೆ ಅನ್ನಿಸಬಹುದು. ಇದರ ಬಗ್ಗೆ ಅಷ್ಟಾಗಿ ಗಮನ ಕೊಡಬೇಡಿ. ಆರೋಗ್ಯದಲ್ಲಿ ಪ್ರಗತಿ ಕಾಣುವಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಕಟಕ: ಹಾಸ್ಯ ಪ್ರಜ್ಞೆಯಿಂದ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಹೊಸ ವ್ಯವಹಾರದಲ್ಲಿ ತೊಡಗುವಿರಿ. ಆತುರದ ತೀರ್ಮಾನಗಳು ಬೇಡ. ಕುಟುಂಬದ ಸದಸ್ಯರೊಂದಿಗೆ ಚರ್ಚೆ ನಡೆಸುವಿರಿ. ಸಂಗಾತಿಯ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಸಿಂಹ: ಅತಿಯಾದ ವ್ಯಾಮೋಹ ದುಃಖಕ್ಕೆ ಕಾರಣವಾಗಬಹುದು. ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ – ವಿಶ್ವಾಸ ಮೇಲುಗೈ ಸಾಧಿಸುತ್ತದೆ. ನಿಮ್ಮ ಶಕ್ತಿ ಮತ್ತು ನಿಮ್ಮ ಮುಂದಿನ ಯೋಜನೆಗಳನ್ನು ಮರು ನಿರ್ಣಯಿಸುವ ಸಮಯ ಇದಾಗಿದೆ. ಆರೋಗ್ಯದಲ್ಲಿ ಪ್ರಗತಿ ಕಾಣುವಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಕನ್ಯಾ: ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಅತಿಥಿಗಳ ಆಗಮನ ಸಂತಸ ತರಲಿದೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಆಪ್ತರ ಮಾತುಗಳು ಅಗಾದ ಪರಿಣಾಮ ಬೀರುವ ಸಾಧ್ಯತೆ ಇದೆ. ಹಣಕಾಸು ವ್ಯವಹಾರದಲ್ಲಿ ಕುಂಠಿತ ಬೆಳವಣಿಗೆಯನ್ನು ಕಾಣಲಿದ್ದೀರಿ. ಕುಟುಂಬದ ಸದಸ್ಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ದೃತಿಗೆಡದೆ ಕಾರ್ಯದಲ್ಲಿ ಮುನ್ನುಗ್ಗಿ. ಕೌಟುಂಬಿಕವಾಗಿ ಶುಭ ಫಲ ಇರಲಿದೆ.
ಅದೃಷ್ಟ ಸಂಖ್ಯೆ: 5

ವೃಶ್ಚಿಕ: ಆಹಾರ ಕ್ರಮದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಉದಾರ ವರ್ತನೆಯನ್ನು ಬಳಸಿಕೊಂಡು ಬೇರೆಯವರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ ನಿಮ್ಮದಾಗಲಿದೆ.
ಅದೃಷ್ಟ ಸಂಖ್ಯೆ: 6

ಧನಸ್ಸು: ದೈಹಿಕ ಆಯಾಸವಾಗುವುದು. ಇನ್ನು ಅತಿಯಾದ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳಲ್ಲಿ ನಿಧಾನ ಆಗಲಿದೆ. ಕೌಟುಂಬಿಕವಾಗಿ ಮಿಶ್ರಫಲ ಇರಲಿದೆ.
ಅದೃಷ್ಟ ಸಂಖ್ಯೆ: 3

ಮಕರ: ಆರೋಗ್ಯ ದೃಷ್ಟಿಯಿಂದ ಉತ್ತಮವಾದ ದಿನ. ಎಂದಿಗಿಂತ ಇಂದು ಉತ್ಸಾಹದಿಂದ ಇರುವಿರಿ. ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಪ್ರೀತಿ ಅಂಕುರವಾಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3

ಕುಂಭ: ಭರವಸೆಯು ನಿಮ್ಮ ಕೆಲಸದಲ್ಲಿ ಸಹಾಯಕ್ಕೆ ಬರಲಿದೆ. ಕುಟುಂಬದ ಸದಸ್ಯರ ಬೆಂಬಲ ದೊರೆಯಲಿದೆ. ವ್ಯಾಪಾರ-ವ್ಯವಹಾರದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡು ಬರುವುದು. ಕೌಟುಂಬಿಕವಾಗಿ ಶುಭ ಫಲ ಇರಲಿದೆ.
ಅದೃಷ್ಟ ಸಂಖ್ಯೆ: 1

ಮೀನ: ಪ್ರೀತಿ, ಭರವಸೆ, ನಂಬಿಕೆ, ಸಹಾನುಭೂತಿ, ಆಶಾವಾದ ಮತ್ತು ನಿಷ್ಠೆಗಳಂಥ ಧನಾತ್ಮಕ ಭಾವನೆಗಳನ್ನು ಗ್ರಹಿಸಲು ಮನಸ್ಸು ಪ್ರೋತ್ಸಾಹಿಸುವುದು. ಕಾರ್ಯದಲ್ಲಿ ಪ್ರಗತಿ ಕಾಣುವಿರಿ. ಹಿರಿಯರ ಆಶೀರ್ವಾದ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version