Site icon Vistara News

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಪ್ರಮೋಶನ್‌ ಸಿಗಬಹುದು!

Astrology august 26 2023 and job promotion for some zodiac sign people

ಚಂದ್ರನು ಶನಿವಾರ ಬೆಳಗ್ಗೆ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದಾಗಿ ವೃಷಭ, ಮಿಥುನ, ಕರ್ಕಾಟಕ, ತುಲಾ, ಧನು, ಕುಂಭ ಹಾಗೂ ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರು ಈ ದಿನದ ಮಟ್ಟಿಗೆ ಹಣಕಾಸಿನ ಹೂಡಿಕೆ ವ್ಯವಹಾರ ಮಾಡುವುದು ಬೇಡ. ಕಟಕ ರಾಶಿಯವರು ಅಪರಿಚಿತರೊಂದಿಗೆ ಅತಿಯಾದ ಸಲುಗೆ ಹೊಂದುವುದು ಬೇಡ. ಇದರು ಅಪಾಯವನ್ನು ತರಬಹುದಾಗಿದೆ. ಈ ಬಗ್ಗೆ ಎಚ್ಚರಿಕೆ ವಹಿಸಿ. ಮೀನ ರಾಶಿಯ ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಇತರೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (26-08-2023)

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ.
ತಿಥಿ: ದಶಮಿ 24:07 ವಾರ: ಶನಿವಾರ
ನಕ್ಷತ್ರ: ಜೇಷ್ಠಾ 08:36 ಯೋಗ: ವಿಷ್ಕುಂಭ 16:24
ಕರಣ: ತೈತುಲ 13:10 ಅಮೃತ ಕಾಲ: ಮಧ್ಯರಾತ್ರಿ 01:14 ರಿಂದ 02:44 ರವರೆಗೆ
ದಿನದ ವಿಶೇಷ: ಶ್ರಾವಣ ಶನಿವಾರ

ಸೂರ್ಯೋದಯ : 06:08  ಸೂರ್ಯಾಸ್ತ : 06:35

ರಾಹುಕಾಲ: ಬೆಳಗ್ಗೆ 9.00 ರಿಂದ 10.30
ಗುಳಿಕಕಾಲ: ಬೆಳಗ್ಗೆ 6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ಆಪ್ತರ ವರ್ತನೆಯಿಂದ ನಿಮ್ಮ ಮನಸ್ಸಿಗೆ ನೋವು ತರುವ ಸಾಧ್ಯತೆಗಳು ಹೆಚ್ಚಿದ್ದು, ತಾಳ್ಮೆಯಿಂದ ಇರಿ. ದಿನದ ಮಟ್ಟಿಗೆ ಹಣಕಾಸಿನ ಹೂಡಿಕೆ ವ್ಯವಹಾರ ಮಾಡುವುದು ಬೇಡ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ತಲೆದೋರಬಹುದು ಮಾತಿನಲ್ಲಿ ಹಿಡಿತವಿರಲಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

ವೃಷಭ: ಆಹಾರ ಕ್ರಮದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಆರೋಗ್ಯದ ಕಡೆಗೆ ಗಮನ ಹರಿಸಿ. ದೀರ್ಘಕಾಲದ ಹೂಡಿಕೆ ವ್ಯವಹಾರದಲ್ಲಿ ಪ್ರಗತಿಯಾಗಲಿದ್ದು, ಲಾಭ ಪಡೆಯುವಿರಿ. ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ. ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಮಿಥುನ: ಯಾರಾದರೂ ನಿಮ್ಮ ಸಹಾಯ ಬೇಡಿ ಬರಬಹುದು, ಈ ಬಗ್ಗೆ ವಿಮರ್ಶಿಸಿ ಸಹಾಯ ಮಾಡಿ. ಆರ್ಥಿಕ ಪ್ರಗತಿ ದಿನದ ಮಟ್ಟಿಗೆ ಸಾಧಾರಣವಾಗಿರಲಿದೆ. ನಿಮ್ಮ ಭಾವನೆಗಳಿಗೆ ನಿರಾಸೆ ಆಗುವಂತೆ ಯಾರಾದರೂ ಮಾತನಾಡುವ ಸಾಧ್ಯತೆ ಇದೆ. ಆದರೆ, ಅವರ ಮಾತಿಗೆ ಬೆಲೆ ಕೊಡದೆ ನಿಮ್ಮ ಕಾರ್ಯದಲ್ಲಿ ಮುನ್ನುಗ್ಗಿ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಹೊಸ ಭರವಸೆ ಸಿಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2

ಕಟಕ: ಕೆಲವು ಆಘಾತಗಳನ್ನು ಎದುರಿಸುಬಹುದಾಗಿದ್ದು, ಧೈರ್ಯದಿಂದ ಇರಿ. ನಿಮ್ಮ ಆಸೆ-ಆಕಾಂಕ್ಷೆಗಳು ಯಶಸ್ಸನ್ನು ತಂದುಕೊಡಲಿವೆ. ಪ್ರಯಾಣ ಮಾಡುವ ಮತ್ತು ಹಣ ಖರ್ಚು ಮಾಡುವ ಸಾಧ್ಯತೆ ಇದೆ. ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದೀತು. ಈ ಬಗ್ಗೆ ಎಚ್ಚರಿಕೆ ವಹಿಸಿ. ಉದ್ಯೋಗಿಗಳಿಗೆ ಹಾಗೂ ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಸಿಂಹ: ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಹುಡುಕಲು ಸಾಧ್ಯವಾಗಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕವಾಗಿ ಲಾಭ ಕಡಿಮೆ ಆಗಲಿದೆ. ಹೊಸ ಆಲೋಚನೆಗಳು ನಿಮ್ಮನ್ನು ಸೃಜನಾತ್ಮಕವಾಗಿ ಏನಾದರೂ ಮಾಡಲು ಪ್ರಯತ್ನಿಸುವಂತೆ ಮಾಡಲು ಪ್ರೇರೇಪಿಸುತ್ತದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ಕನ್ಯಾ: ಕುಟುಂಬದ ಆಪ್ತರೊಂದಿಗೆ ಸಂತಸ ಹಂಚಿಕೊಳ್ಳುವಿರಿ. ಹಣಕಾಸು ಪರಿಸ್ಥಿತಿ ಸಾಧಾರಣವಾಗಿರಲಿದೆ. ದಿನದ ಮಟ್ಟಿಗೆ ಖರ್ಚು ಇರಲಿದೆ. ದುಬಾರಿ ವಸ್ತುಗಳನ್ನು ಖರೀದಿಸುವ ಮುನ್ನ ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ನೋಡಿಕೊಂಡು ಹಾಸಿಗೆ ಇದ್ದಷ್ಟು ಕಾಲು ಚಾಚಿ. ಆರೋಗ್ಯ ಮಧ್ಯಮ ಪ್ರಮಾಣದಲ್ಲಿರಲಿದೆ. ಉದ್ಯೋಗಿಗಳಿಗೆ ಹಾಗೂ ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಪ್ರಭಾವಿ ಜನರ ಬೆಂಬಲ ಸಿಗಲಿದೆ. ಇದರಿಂದ ನೈತಿಕ ಸ್ಥೈರ್ಯ ಹೆಚ್ಚಾಗಲಿದೆ. ಒಡಹುಟ್ಟಿದವರ ಸಹಕಾರ ಸಿಗಲಿದೆ. ಆತುರದಲ್ಲಿ ಯಾರೊಂದಿಗೂ ಅತಿರೇಕದ ಮಾತುಗಳನ್ನು ಆಡಿ, ಅಪಾಯ ತಂದುಕೊಳ್ಳುವುದು ಬೇಡ. ದಿನದ ಮಟ್ಟಿಗೆ ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

ವೃಶ್ಚಿಕ: ಸಕಾರಾತ್ಮಕ ಆಲೋಚನೆಗಳು ಪುಷ್ಟಿ ನೀಡಿ. ಇದರಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಇಂದು ಹಣಕಾಸಿನ ಹೂಡಿಕೆ ವ್ಯವಹಾರ ಮಾಡುವುದು ಬೇಡ. ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಪ್ರಯಾಣದಿಂದ ಲಾಭವಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

ಧನಸ್ಸು: ಭಾವನಾ ಜೀವಿಗಳಾದ ನೀವು ನಕಾರಾತ್ಮಕ ಆಲೋಚನೆಗಳಿಂದ ದೂರ ಇರಿ. ಅಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ, ಕ್ಷೇತ್ರ ದರ್ಶನ ಪಡೆದು ಮಾನಸಿಕ ನೆಮ್ಮದಿ ತಂದುಕೊಳ್ಳುವುದು ಅವಶ್ಯಕ. ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಿ. ಹಣಕಾಸು, ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ ಫಲವಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ಮನೆಯಲ್ಲಿ ಶಾಂತಿ ನೆಲೆಸಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ

ಮಕರ: ಭರವಸೆಯ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸ್ನೇಹಿತರೊಂದಿಗೆ ಸಮಯ ಕಳೆಯುವ ಸಾಧ್ಯತೆ ಇದೆ. ನಿಮ್ಮ ಶಕ್ತಿ ಸಾಮರ್ಥ್ಯವನ್ನು ಕೆಲಸ ಕಾರ್ಯಗಳಲ್ಲಿ ಬಳಸಿಕೊಂಡರೆ ಇನ್ನೂ ಹೆಚ್ಚು ಆಕರ್ಷಕವಾಗಿ ನಿಮ್ಮ ವ್ಯಕ್ತಿತ್ವ ವಿಕಸನ ಆಗುತ್ತದೆ. ಆರೋಗ್ಯ ಉತ್ತಮವಾಗಿರಲಿದೆ. ದಿನದ ಮಟ್ಟಿಗೆ ಖರ್ಚು ಜಾಸ್ತಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ಕುಂಭ: ಅತಿಥಿಗಳ ಆಗಮನ ಸಂತಸ ತರಲಿದೆ. ಆತ್ಮವಿಶ್ವಾಸವು ನಿಮ್ಮಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತದೆ. ಹೂಡಿಕೆಯ ಲಾಭ ಇಂದು ಉಪಯೋಗಕ್ಕೆ ಬರುವುದು. ದೀರ್ಘಕಾಲದ ಪ್ರಯತ್ನ ಇಂದು ಯಶಸ್ಸು ತಂದು ಕೊಡಲಿದೆ. ಆರೋಗ್ಯ, ಉದ್ಯೋಗದಲ್ಲಿ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?

ಮೀನ: ಅತಿರೇಕವಾಗಿ ಮಾತನಾಡಿ ಅಪಾಯ ತಂದುಕೊಳ್ಳುವುದು ಬೇಡ. ಕೋಪಗೊಳ್ಳುವಂತಹ ವಿಷಯಗಳಿಂದ ದೂರ ಇರಿ. ತಾಳ್ಮೆಯಿಂದ ವರ್ತಿಸಿ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version