Site icon Vistara News

Dina Bhavishya : ಬಣ್ಣದ ಮಾತುಗಳನ್ನು ನಂಬಿ ಇಂದು ಯಾವುದೇ ಹೂಡಿಕೆ ವ್ಯವಹಾರಗಳಲ್ಲಿ ತೊಡಗುವುದು ಬೇಡ

Dina Bhavishya

ಚಂದ್ರನು ಕಟಕ ರಾಶಿಯಿಂದ ಶುಕ್ರವಾರ ಮಧ್ಯಾಹ್ನ 01:09 ಕ್ಕೆ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ವೃಷಭ, ಕಟಕ, ಕನ್ಯಾ, ತುಲಾ, ಮಕರ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಬಣ್ಣದ ಮಾತುಗಳನ್ನು ನಂಬಿ ಇಂದು ಯಾವುದೇ ಹೂಡಿಕೆ ವ್ಯವಹಾರಗಳಲ್ಲಿ ತೊಡಗುವುದು ಬೇಡ. ಒತ್ತಡದ ದಿನದ ಹೊರತಾಗಿಯೂ ಆರೋಗ್ಯ ಪರಿಪೂರ್ಣವಾಗಿರುತ್ತದೆ. ನಿಮ್ಮ ಆಪ್ತರಿಗೆ ನಿಮ್ಮ ಮಾತುಗಳು ಬೇಸರ ತರಿಸಬಹುದು. ಅನಾವಶ್ಯಕ ವಾದದಲ್ಲಿ ಸಿಲಿಕಿಕೊಳ್ಳುವ ಸಾಧ್ಯತೆ ಎಚ್ಚರಿಕೆ ಇರಲಿ. ಮಿಥುನ ರಾಶಿಯವರು ಉತ್ಸಾಹ ತುಂಬಿದ ವಾತಾವರಣವಿದು. ಇಂದು ನೀವು ಚೈತನ್ಯಯುಕ್ತವಾಗಿರುತ್ತೀರಿ. ಅನಾವಶ್ಯಕ ಖರ್ಚು ಮಾಡಿ ಆಮೇಲೆ ಪರಿತಪಿಸುವುದು ಬೇಡ. ಕುಟುಂಬದ ಯಜಮಾನನ ಬೆಂಬಲ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (30-08-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ.
ತಿಥಿ: ದ್ವಾದಶಿ 26:24 ವಾರ: ಶುಕ್ರವಾರ
ನಕ್ಷತ್ರ: ಪುನರ್ವಸು 17:54 ಯೋಗ: ವ್ಯತಿಪಾತ 17:45
ಕರಣ: ಕೌಲವ 13:57 ಅಮೃತಕಾಲ: ಮಧ್ಯಾಹ್ನ 03:24 ರಿಂದ 05:05
ದಿನದ ವಿಶೇಷ: ವೈಷ್ಣ ವೈಕಾದಶೀ, ವಾಘೇ ಶ್ರೀವೈಷ್ಣವ ಆರತ್ಯಮಾನ

ಸೂರ್ಯೋದಯ : 06:08   ಸೂರ್ಯಾಸ್ತ : 06:32

ರಾಹುಕಾಲ:ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ಬಣ್ಣದ ಮಾತುಗಳನ್ನು ನಂಬಿ ಇಂದು ಯಾವುದೇ ಹೂಡಿಕೆ ವ್ಯವಹಾರಗಳಲ್ಲಿ ತೊಡಗುವುದು ಬೇಡ. ಒತ್ತಡದ ದಿನದ ಹೊರತಾಗಿಯೂ ಆರೋಗ್ಯ ಪರಿಪೂರ್ಣವಾಗಿರುತ್ತದೆ. ನಿಮ್ಮ ಆಪ್ತರಿಗೆ ನಿಮ್ಮ ಮಾತುಗಳು ಬೇಸರ ತರಿಸಬಹುದು. ಅನಾವಶ್ಯಕ ವಾದದಲ್ಲಿ ಸಿಲಿಕಿಕೊಳ್ಳುವ ಸಾಧ್ಯತೆ ಎಚ್ಚರಿಕೆ ಇರಲಿ. ದಿಢೀರ್ ಪ್ರಯಾಣ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

ವೃಷಭ: ಹಾಸ್ಯಪ್ರಜ್ಞೆಯ ನಡವಳಿಕೆಯಿಂದಾಗಿ ಇತತರನ್ನು ಚುಂಬಕದಂತೆ ಆಕರ್ಷಿಸಿ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸಿಕೊಳ್ಳುವಿರಿ. ಭೂ ಹಾಗೂ ಹೂಡಿಕೆ ವ್ಯವಹಾರಗಳಲ್ಲಿ ದಿನದ ಮಟ್ಟಿಗೆ ತೊಡುಗುವುದು ಬೇಡ, ಇದರಿಂದ ಆರ್ಥಿಕವಾಗಿ ಬಳಲುವ ಸಾಧ್ಯತೆ ಇದೆ.
ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಮಿಶ್ರ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

ಮಿಥುನ: ಉತ್ಸಾಹ ತುಂಬಿದ ವಾತಾವರಣವಿದು. ಇಂದು ನೀವು ಚೈತನ್ಯಯುಕ್ತವಾಗಿರುತ್ತೀರಿ. ಅನಾವಶ್ಯಕ ಖರ್ಚು ಮಾಡಿ ಆಮೇಲೆ ಪರಿತಪಿಸುವುದು ಬೇಡ. ಕುಟುಂಬದ ಯಜಮಾನನ ಬೆಂಬಲ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

ಕಟಕ: ನೀವು ಇತರರನ್ನು ಶ್ಲಾಘಿಸುವ ಮೂಲಕ ಯಶಸ್ಸನ್ನು ಆನಂದಿಸುವ ಸಾಧ್ಯತೆ ಇದೆ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಗೌಪ್ಯ ವಿಷಯಗಳನ್ನು ಇತತರೊಂದಿಗೆ ಹಂಚಿಕೊಳ್ಳುವ ಮುನ್ನ ಎಚ್ಚರವಿರಲಿ. ಆರ್ಥಿಕವಾಗಿ ಪ್ರಗತಿ ಇರಲಿದೆ. ಪ್ರೇಮಿಗಳಿಗೆ ಶುಭ ಸುದ್ದಿ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 6

ಸಿಂಹ: ಆತ್ಮವಿಶ್ವಾಸತೆಯಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ ಇರಲಿದೆ. ಆಪ್ತರೊಂದಿಗೆ ವಾದಕ್ಕಿಳಿಯುವ ಸಾಧ್ಯತೆ, ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ವಿದ್ಯಾರ್ಥಿಗಳು ಉಜ್ವಲ ಭವಿಷ್ಯಕ್ಕಾಗಿ ಮನೋರಂಜನೆಗೆ ಕಡಿವಾಣ ಹಾಕುವುದು ಉತ್ತಮ. ಆರೋಗ್ಯ ಪರಿಪೂರ್ಣ. ಅನಿವಾರ್ಯ ಕಾರಣಗಳಿಂದ ಖರ್ಚು. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 4

ಕನ್ಯಾ: ಸಕಾರಾತ್ಮಕ ಆಲೋಚನೆಗಳು ನಿಮಗೆ ಪುಷ್ಟಿ ನೀಡಲಿವೆ. ಸೃಜನಶೀಲ ಕ್ಷೇತ್ರಗಳಲ್ಲಿರುವವರು ಬಹಳ ದಿನಗಳಿಂದ ಕಾಯುತ್ತಿದ್ದ ಪ್ರಸಿದ್ಧಿ ಮತ್ತು ಗುರುತಿಸುವಿಕೆಯನ್ನು ಪಡೆಯುವ ಒಂದು ಯಶಸ್ವಿ ದಿನ. ವಿವಾಹ ಅಪೇಕ್ಷಿತರಿಗೆ ಶುಭ ಸೂಚನೆ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕವಾಗಿ ಸದೃಢ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 2

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಅತಿಯಾದ ಒತ್ತಡದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುವ ಸಾಧ್ಯತೆ ಇದೆ. ಜೀವನದ ಪ್ರಮುಖ ನಿರ್ಧಾರಗಳ ಕುರಿತು ನೀವು ಕುಟುಂಬದೊಂದಿಗೆ ಚರ್ಚಿಸುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 5

ವೃಶ್ಚಿಕ: ಹಳೆಯ ಸ್ನೇಹಿತರೊಂದಿಗೆ ಆತ್ಮೀಯ ಮಾತುಕತೆಯಲ್ಲಿ ತೊಡಗುವಿರಿ. ಭವಿಷ್ಯದ ಜೀವನಕ್ಕಾಗಿ ಹೂಡಿಕೆ ಕುರಿತು ಆಲೋಚನೆ ಮಾಡುವಿರಿ. ಸಂಗಾತಿಯಿಂದ ಸಲಹೆ ಪಡೆಯುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕವಾಗಿ ಸಾಧಾರಣ ಪ್ರಗತಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

ಧನಸ್ಸು: ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಕೋರ್ಟ್ ಕಚೇರಿ ವ್ಯಾಜ್ಯಗಳು ವಿಜಯವನ್ನು ತಂದು ಕೊಡಲಿವೆ. ದಿನದ ಕೊನೆಯಲ್ಲಿ ಯಾವುದಾದರೂ ಕಾರಣದಿಂದ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಮಿಶ್ರಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

ಮಕರ: ಆರೋಗ್ಯ ಪರಿಪೂರ್ಣವಾಗಿರುತ್ತದೆ. ಯಾವುದೋ ಮೂಲದಿಂದ ಆರ್ಥಿಕವಾಗಿ ಬಲಗೊಳ್ಳಲಿದ್ದೀರಿ. ಕುಟುಂಬದ ಸದಸ್ಯರ ಅಪಸ್ವರದಿಂದಾಗಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಮಾತಿಗೆ ವಿರಾಮ ನೀಡಿ. ಉದ್ಯೋಗಿಗಳಿಗೆ ಪ್ರೋತ್ಸಾಹ ಸಿಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 4

ಕುಂಭ: ನಿಮ್ಮ ಕೋಪದ ಮನಸ್ಥಿತಿ ಇತರರ ಮೇಲೆ ಪ್ರಭಾವ ಬೀರಬಹುದು.ಅನಿವಾರ್ಯ ಕಾರಣಗಳಿಂದ ಸ್ನೇಹಿತರ ಸಹಾಯ ಬೇಡವ ಸಾಧ್ಯತೆ ಇದೆ. ನಿಮ್ಮ ಕೆಲಸದ ಮೇಲೆ ಗಮನ ಹರಿಸಿದಲ್ಲಿ ಯಶಸ್ಸು ಮತ್ತು ಮನ್ನಣೆ ನಿಮ್ಮದಾಗುತ್ತದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಪ್ರಗತಿ ಹೊಂದಲಿದ್ದೀರಿ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಶುಭ ಫಲ.ಅದೃಷ್ಟ ಸಂಖ್ಯೆ: 1

ಮೀನ: ಅನಿವಾರ್ಯ ಕಾರಣಗಳಿಂದ ಕುಟುಂಬದ ಸದಸ್ಯರೊಂದಿಗೆ ಮನಸ್ತಾಪ ,ಆದಾಗ್ಯೂ ನೀವು ನಿಮ್ಮ ಶಾಂತ ಸ್ವಭಾವದಿಂದ ಎಲ್ಲವನ್ನು ಸರಿಗೊಳಿಸಬಹುದು. ಆರೋಗ್ಯ ಪರಿಪೂರ್ಣ. ಆರ್ಥಿಕ ಪ್ರಗತಿ ಸಾಧಾರಣ. ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 8

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version