ಚಂದ್ರನು ಗುರುವಾರವೂ ಮೀನ ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ಕನ್ಯಾ, ಧನಸ್ಸು ಹಾಗೂ ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರು ವೈಯಕ್ತಿಕ ಜೀವನದಲ್ಲಿ ಇತರರು ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ವಹಿಸಿ. ವೃಷಭ ಹಾಗೂ ಕುಂಭ ರಾಶಿಯವರಿಗೆ ಬಹು ದಿನಗಳ ಕನಸು ನನಸಾಗಲಿದೆ. ಭೂ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಕಟಕ ರಾಶಿಯವರು ಮನೆಯಲ್ಲಿನ ಕಲಹಗಳಿಗೆ ಧ್ವನಿಯಾಗುವುದು ಬೇಡ. ಧನಸ್ಸು ರಾಶಿಯವರಿಗೆ ದೀರ್ಘಕಾಲದ ಅನಾರೋಗ್ಯ ನಿಮ್ಮನ್ನು ಹಿಂಸೆಗೆ ಗುರಿ ಮಾಡಬಹುದು. ಇತರೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.
ಇಂದಿನ ಪಂಚಾಂಗ (kannada panchanga) (31-08-2023)
ಮೇಷ: ನಿಮ್ಮ ವೈಯಕ್ತಿಕ ಜೀವನದಲ್ಲಿ ಇತರರು ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ವಹಿಸಿ. ಅನೇಕ ವಿಚಾರಗಳು ಮಾನಸಿಕ ಒತ್ತಡ ತರುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಹಣಕಾಸು ವ್ಯವಹಾರದಲ್ಲಿ ಸಾಧರಣವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7
ವೃಷಭ: ಬಹು ದಿನಗಳ ಕನಸು, ಭೂ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಇಂದು ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ, ಪ್ರೋತ್ಸಾಹ ಸಿಗಲಿದೆ. ಆರೋಗ್ಯದ ಬಗೆಗೆ ಕಾಳಜಿ ಇರಲಿ. ಕುಟುಂಬದಲ್ಲಿ ವಿನಾಕಾರಣ ಕಲಹಗಳು ನಡೆಯದಂತೆ ಎಚ್ಚರಿಕೆ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6
ಮಿಥುನ: ಅತ್ಯಂತ ಉತ್ಸಾಹದ ದಿನ. ಆತುರದಲ್ಲಿ ಹಣ ಹೂಡಿಕೆ ಮಾಡುವುದು ಬೇಡ. ಆರೋಗ್ಯದಲ್ಲಿ ಉತ್ತಮವಾಗಿರಲಿದೆ. ಮಕ್ಕಳ ಕುರಿತಾಗಿ ಚಿಂತಿಸಿ ಉತ್ಸಾಹ ಕಳೆದುಕೊಳ್ಳುವುದು ಬೇಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4
ಕಟಕ: ಅನಾವಶ್ಯಕ ಒತ್ತಡ ತೆಗೆದುಕೊಳ್ಳುವುದು ಬೇಡ. ಮನೆಯಲ್ಲಿನ ಕಲಹಗಳಿಗೆ ನೀವು ಧ್ವನಿಯಾಗುವುದು ಬೇಡ. ಪ್ರತಿಭೆಗೆ ತಕ್ಕ ಪ್ರೋತ್ಸಾಹ ಸಿಗುವುದು. ಆರ್ಥಿಕ ಪ್ರಗತಿ ಸಾಧಾರಣ. ಸಂಗಾತಿಯ ಬೆಂಬಲ ಸಿಗಲಿದೆ.
ಅದೃಷ್ಟ ಸಂಖ್ಯೆ: 8
ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಆಗುವ ಸಾಧ್ಯತೆ ಇದೆ. ಎಚ್ಚರವಹಿಸಿ. ಹಿರಿಯರ ಮಾರ್ಗದರ್ಶನ ಪಡೆಯಿರಿ. ಅತಿಯಾದ ಆತ್ಮವಿಶ್ವಾಸದ ಭರದಲ್ಲಿ ತುಡುಕುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6
ಕನ್ಯಾ: ವ್ಯಾಪಾರ ವ್ಯವಹಾರಗಳಲ್ಲಿ ಕಾರ್ಯ ಸಿದ್ಧಿ. ಪ್ರಯಾಣದಿಂದ ಲಾಭ. ತಾಳ್ಮೆಯಿಂದ ಕಾಯ್ದು ಕೊಂಡಿರುವ ಕೆಲಸವು ಫಲ ನೀಡುವುದು. ಆರೋಗ್ಯದಲ್ಲಿ ಉತ್ತಮ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಪ್ರಸಂಶೆ ಪ್ರೋತ್ಸಾಹ ಸಿಗುವುದು. ನಿಮ್ಮ ಸಭ್ಯ ನಡವಳಿಕೆ ಮೆಚ್ಚುಗೆ ಪಡೆಯುತ್ತದೆ. ಆರ್ಥಿಕ ಸಮಸ್ಯೆಗಳು ಪರಿಹಾರವಾಗಲಿದೆ. ಆದರೂ ಯಾವುದಾದರೂ ಒಂದು ಕೊರತೆ ಕಾಡುವುದು. ಆಧ್ಯಾತ್ಮದ ಹಾದಿಯಲ್ಲಿ ಹೆಜ್ಜೆ ಹಾಕಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7
ವೃಶ್ಚಿಕ: ಅತಿಯಾದ ಮಾನಸಿಕ ಒತ್ತಡ ನಿಮ್ಮನ್ನು ಜರ್ಜರಿತರನ್ನಾಗಿ ಮಾಡಬಹುದು, ಅದರಿಂದ ಹೊರ ಬನ್ನಿ. ಮನೆಯಲ್ಲಿ ಮಾತಿಗೆ ಮಾತು ಬೆಳೆದು ಕಲಹವಾಗುವ ಸಾಧ್ಯತೆ ಇದೆ. ಮೌನದಿಂದ ಕಾರ್ಯ ಸಾಧಿಸಿ.
ಅದೃಷ್ಟ ಸಂಖ್ಯೆ: 9
ಧನಸ್ಸು: ದೀರ್ಘಕಾಲದ ಅನಾರೋಗ್ಯ ನಿಮ್ಮನ್ನು ಹಿಂಸೆಗೆ ಗುರಿ ಮಾಡಬಹುದು. ವಿಶ್ವಾಸದಿಂದ ಕಾರ್ಯ ಸಾಧನೆ ಮಾಡಿ ಶುಭವಾಗುವುದು. ಆರ್ಥಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6
ಕುಜ ಮತ್ತು ಶುಕ್ರನಿಂದ ನಿಜವಾಗಿಯೂ ತೊಂದರೆಯಾಗುತ್ತಾ?
ಮಕರ: ಅತಿಯಾದ ಭರವಸೆಯಿಂದ ದುಡುಕುವುದು ಬೇಡ. ಆರ್ಥಿಕ ಪ್ರಗತಿ ಉತ್ತಮ. ನಿಮ್ಮ ಪ್ರತಿ ಸ್ಪರ್ಧಿಗಳು ಕೆಟ್ಟದನ್ನು ಮಾಡಬಹುದು. ಆರೋಗ್ಯವು ಉತ್ತಮ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:6
ಕುಂಭ: ಭೂ ವ್ಯವಹಾರದಲ್ಲಿ ಅನುಕೂಲತೆ ಇದೆ. ಸಂಬಂಧಿಕರು ಮತ್ತು ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳು ದೊರೆಯುವುದು, ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4
ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?
ಮೀನ: ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಸಿಗುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com