Site icon Vistara News

Dina Bhavishya : ಈ ಹಿಂದೆ ಹಣ ಹೂಡಿಕೆ ಮಾಡಿದ್ದರೆ ಇಂದು ಈ ರಾಶಿಯವರಿಗೆ ಡಬಲ್‌ ಲಾಭ

read your daily horoscope predictions for february 16 2024

ಚಂದ್ರನು ವೃಷಭ ರಾಶಿಯಿಂದ ಶುಕ್ರವಾರ ಮಧ್ಯಾಹ್ನ 02:39 ಕ್ಕೆ ಮಿಥುನ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದಾಗಿ ವೃಷಭ, ಕಟಕ, ಸಿಂಹ, ವೃಶ್ಚಿಕ, ಧನಸ್ಸು, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ವೃಷಭ ರಾಶಿಯವರು ಸಂಗಾತಿಯೊಂದಿಗೆ ವಿನಾ ಕಾರಣ ವಾದಕ್ಕೆ ಇಳಿಯುವುದು ಬೇಡ. ಕಟಕ ರಾಶಿಯವರಿಗೆ ಉದ್ಯೋಗದ ಸ್ಥಳದಲ್ಲಿ ಕಿರಿಕಿರಿಯಾಗಲಿದ್ದು, ಮನಸ್ಸಿಗೆ ನೋವುಂಟು ಮಾಡಬಹುದು. ಆಪ್ತರೊಂದಿಗೆ ಭಾವನೆ ಹಂಚಿಕೊಳ್ಳುವಿರಿ. ತುಲಾ ರಾಶಿಯವರು ನಿಮ್ಮ ಹರಿತವಾದ ಮಾತುಗಳಿಂದ ಇತರರ ಮನಸ್ಸು ನೋವು ಆಗಬಹುದು ಆಲೋಚಿಸಿ ಮಾತನಾಡಿ.ಕುಟುಂಬದ ಪ್ರತಿಯೊಂದು ವಿಷಯದಲ್ಲೂ ತಪ್ಪು ಹುಡುಕುವುದು ಬೇಡ, ಇದರಿಂದ ಮನಸ್ಸು ಘಾಸಿಯಾಗುವುದು. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (16-02-2024)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ
ತಿಥಿ: ಸಪ್ತಮಿ 08:54 ವಾರ: ಶುಕ್ರವಾರ
ನಕ್ಷತ್ರ: ಭರಣಿ 08:45 ಯೋಗ: ಬ್ರಹ್ಮ 15:16
ಕರಣ: ವಣಿಜ 08:54 ಅಮೃತ ಕಾಲ: ಬೆಳಗ್ಗೆ 06:22 ರಿಂದ 07:58ರವರೆಗೆ
ದಿನದ ವಿಶೇಷ: ರಥಸಪ್ತಮಿ, ಶ್ರೀರಂಗನಾಥ ಸ್ವಾಮಿ ರಥ

ಸೂರ್ಯೋದಯ : 6:42  ಸೂರ್ಯಾಸ್ತ : 06:26

ರಾಹುಕಾಲ : ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ಈ ದಿನ ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ. ವಯಕ್ತಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು. ಆರೋಗ್ಯ ಮಧ್ಯಮವಾಗಿರಲಿದೆ. ಆರ್ಥಿಕ ಸಮಸ್ಯೆಗಳಿಗೆ ತಕ್ಕ ಪರಿಹಾರವೂ ಇಂದು ಸಿಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಮಿಶ್ರ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

ವೃಷಭ: ಉದ್ಯೋಗಿಗಳಿಗೆ ಪ್ರೋತ್ಸಾಹವೂ ಸೇರಿದಂತೆ ಅನೇಕ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ವಿವಿಧ ಮೂಲಗಳಿಂದ ಆರ್ಥಿಕವಾಗಿ ಲಾಭ ಸಿಗಲಿದೆ. ಸಂಗಾತಿಯೊಂದಿಗೆ ವಿನಾ ಕಾರಣ ವಾದಕ್ಕೆ ಇಳಿಯುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7

ಮಿಥುನ: ಸ್ನೇಹಿತರ ಮೂಲಕ ದೊರಕುವ ಮಾರ್ಗದರ್ಶನ ನಿಮ್ಮ ಆರೋಗ್ಯವನ್ನು ಸುಧಾರಿಸಲು ಉತ್ತೇಜಿಸುತ್ತದೆ. ಹಣವನ್ನು ಹೂಡಿಕೆ ಮಾಡಿದ್ದರೆ, ಅದರ ಪ್ರಯೋಜನವನ್ನು ಇಂದು ನೀವು ಪಡೆಯಬಹುದು. ನಿಮ್ಮ ಜೊತೆಗಿರುವ ಯಾರಾದರೂ ನಿಮ್ಮ ಇತ್ತೀಚಿನ ಕ್ರಮಗಳಿಂದ ಕಿರಿಕಿರಿಗಳ್ಳಬಹುದು. ಉದ್ಯೋಗಿಗಳಿಗೆ ಶುಭ ಫಲ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಕಟಕ: ಬಿಡುವಿಲ್ಲದ ಕೆಲಸದಿಂದ ಒತ್ತಡ, ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಆರ್ಥಿಕ ಪ್ರಗತಿ ಇರಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿಯಾಗಲಿದ್ದು, ಮನಸ್ಸಿಗೆ ನೋವುಂಟು ಮಾಡಬಹುದು. ಆಪ್ತರೊಂದಿಗೆ ಭಾವನೆ ಹಂಚಿಕೊಳ್ಳುವಿರಿ. ಕುಟುಂಬದ ಸದಸ್ಯರಿಂದ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ಸಿಂಹ: ಸಾಮಾಜಿಕವಾಗಿ ಮನ್ನಣೆ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಬೆಂಬಲ ಪಡೆದು ಕಾರ್ಯದಲ್ಲಿ ಯಶಸ್ಸು ಪಡೆಯುವಿರಿ. ಬಹುದಿನಗಳ ಕನಸು ನನಸಾಗುವ ಸಮಯವಿದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಕನ್ಯಾ: ಸಂತೋಷದಿಂದ ಇದ್ದು, ಇತರರಿಗೆ ಸಂತಸ ಹಂಚಿಕೊಳ್ಳಲು ಹವಣಿಸುವಿರಿ. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆತುರದ ಭರದಲ್ಲಿ ಇತರರನ್ನು ಟೀಕೆ ಮಾಡುವುದು ಬೇಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ನಿಮ್ಮ ಹರಿತವಾದ ಮಾತುಗಳಿಂದ ಇತರರ ಮನಸ್ಸು ನೋವು ಆಗಬಹುದು ಆಲೋಚಿಸಿ ಮಾತನಾಡಿ.ಕುಟುಂಬದ ಪ್ರತಿಯೊಂದು ವಿಷಯದಲ್ಲೂ ತಪ್ಪು ಹುಡುಕುವುದು ಬೇಡ, ಇದರಿಂದ ಮನಸ್ಸು ಘಾಸಿಯಾಗುವುದು. ಆಧ್ಯಾತ್ಮದ ಹಾದಿ ದಾರಿ ತೋರಿತು. ಗುರು ದತ್ತಾತ್ರೇಯನನ್ನು ಆರಾಧಿಸಿ.
ಅದೃಷ್ಟ ಸಂಖ್ಯೆ: 7

ವೃಶ್ಚಿಕ: ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುಲು ಸಮಯ ನೀಡುವಿರಿ. ಆಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ ಪಡೆಯುವಿರಿ. ಭೂಮಿ, ಆಸ್ತಿ ಖರೀದಿ ಗಾಗಿ ಆಲೋಚನೆ ಮಾಡುವಿರಿ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಧನಸ್ಸು: ದೀರ್ಘಕಾಲದ ಪ್ರಯಾಣ ಇರಲಿದೆ. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಹೊಸ ಕೆಲಸಗಳಲ್ಲಿ ದಿನದ ಮಟ್ಟಿಗೆ ತೊಡಗುವುದು ಬೇಡ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ಮಕರ: ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಹಿಂದೆ ಮಾಡಿದ ಹೂಡಿಕೆ ವ್ಯವಹಾರವು ಇಮ್ಮಡಿ ಲಾಭ ತರುವುದು. ಮುಂಗೋಪದಿಂದ ನಷ್ಟ ಸಾಧ್ಯತೆ ಇದೆ. ಸ್ನೇಹಿತರ ಸಲಹೆ ಸಹಕಾರ ಸಿಗುವುದು.
ಅದೃಷ್ಟ ಸಂಖ್ಯೆ: 6

ಕುಂಭ: ಆಲಸ್ಯದಿಂದ ಕಾರ್ಯ ಹಾನಿ. ಆರೋಗ್ಯದ ಕಡೆಗೆ ಗಮನ ಹರಿಸಬೇಕು.ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಸೃಜನಾತ್ಮಕವಾಗಿ ಕೆಲಸ ಮಾಡಿ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಮೀನ: ಹೊಸ ಅವಕಾಶಗಳು ಗರಿಗೆದರಲಿವೆ.ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ.ನಿಮ್ಮ ಹಿಂದೆ ಟೀಕೆಗಳನ್ನು ಮಾಡುವ ಜನರಿಂದ ದೂರ ಇರಿ.ದಿನ ಮಟ್ಟಿಗೆ ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಆಗುವ ಸಾಧ್ಯತೆ ಇದೆ. ಸಂಗಾತಿಯ ಸ್ವಾರ್ಥದಿಂದ ಕುಟುಂಬದ ವಾತಾವರಣದಲ್ಲಿ ವ್ಯತ್ಯಾಸವಾಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version