Site icon Vistara News

Dina Bhavishya: ಇಂದು ಈ ರಾಶಿಯವರು ಹೊರಗಿನ ತಿಂಡಿ ತಿನ್ನುವ ಮುಂಚೆ ಕೊಂಚ ಯೋಚಿಸಿ!

daily horoscope predictions for February 22 2024

ಚಂದ್ರನು ಗುರವಾರವೂ ಸಿಂಹ ರಾಶಿಯಲ್ಲಿಯೇ ನೆಲಸಿರಲಿದ್ದಾನೆ. ಇದರಿಂದಾಗಿ ವೃಷಭ, ಕಟಕ, ಕನ್ಯಾ, ತುಲಾ, ಮಕರ ಹಾಗೂ ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದು ಮಿಥುನ ರಾಶಿಯವರ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಇದರಿಂದ ಆತುರದಲ್ಲಿ ಮಾತನಾಡಿ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಅನಿರೀಕ್ಷಿತವಾಗಿ ಖರ್ಚು ಹೆಚ್ಚಾಗಲಿದೆ. ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಉತ್ತಮ. ಕೌಟುಂಬಿಕವಾಗಿ ಸಾಧಾರಣ ಫಲ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (22-02-2024)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ
ತಿಥಿ: ತ್ರಯೋದಶಿ 13:21 ವಾರ: ಗುರುವಾರ
ನಕ್ಷತ್ರ: ಪುಷ್ಯ 16:42 ಯೋಗ: ಸೌಭಾಗ್ಯ 12:11
ಕರಣ: ತೈತುಲ 13:21 ಅಮೃತ ಕಾಲ: ಬೆಳಗ್ಗೆ 09:40 ರಿಂದ 11:26
ದಿನದ ವಿಶೇಷ: ಗುರುಪುಷ್ಯಯೋಗ

ಸೂರ್ಯೋದಯ : 6:39  ಸೂರ್ಯಾಸ್ತ : 06:27

ರಾಹುಕಾಲ : ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ: ಬೆಳಗ್ಗೆ 9.00 ರಿಂದ 10.30
ಯಮಗಂಡಕಾಲ: ಬೆಳಗ್ಗೆ 6.00 ರಿಂದ 7.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ಸ್ನೇಹಿತರು ಅಥವಾ ಕುಟುಂಬದ ಸದಸ್ಯರೊಂದಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸವಾಗಲಿದೆ. ಹಿರಿಯರ ಮಾರ್ಗದರ್ಶನ ಸಿಗಲಿದೆ. ಅತಿಥಿಗಳ ಆಗಮನ ನಿಮ್ಮ ಯೋಜಿತ ಕಾರ್ಯ ವಿಳಂಬವಾಗುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ವಿರಸ ಉಂಟಾಗುವ ಸಾಧ್ಯತೆ ಇದೆ. ಮಾತಿನಲ್ಲಿ ಹಿಡಿತವಿರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

ವೃಷಭ: ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಪ್ರಶಂಸೆ ಸಿಗುವುದು. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಸಂಬಂಧವಿರದ ವಿಷಯಗಳಿಗೆ ಕಿವಿಗೊಡುವುದು ಬೇಡ. ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಹಳೆಯ ವಿಚಾರಗಳನ್ನು ಕೆರಳಿಸಿ ಗಾಯ ಮಾಡಿಕೊಳ್ಳುವುದು ಬೇಡ. ಆರೋಗ್ಯ ಮಧ್ಯಮವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ ಇರಲಿದೆ.
ಅದೃಷ್ಟ ಸಂಖ್ಯೆ: 3

ಮಿಥುನ: ನಿಮ್ಮ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಇದರಿಂದ ಆತುರದಲ್ಲಿ ಮಾತನಾಡಿ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಅನಿರೀಕ್ಷಿತವಾಗಿ ಖರ್ಚು ಹೆಚ್ಚಾಗಲಿದೆ. ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಉತ್ತಮ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

ಕಟಕ: ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಗೃಹ ಬಳಕೆ ಸಾಧನಗಳ ಖರೀದಿ ಸಾಧ್ಯತೆಯಿಂದ ಖರ್ಚು ಮಾಡುವಿರಿ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಅತಿಥಿಗಳ ಆಗಮನ ಹರ್ಷ ತರಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಸಿಂಹ: ನಾಲಿಗೆಯ ರುಚಿಗೆ ಮಾರು ಹೋಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದು ಬೇಡ. ಹೀಗಾಗಿ ಮಿತಿಯಲ್ಲಿ ಸೇವನೆ ಮಾಡಿ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಸಾಧಿಸುವಿರಿ. ಸಂಗಾತಿಯ ಮಾತುಗಳು ಮಧುರವೆನಿಸಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ಕನ್ಯಾ: ನಿಮ್ಮ ತ್ಯಾಗದ ಮನೋಭಾವ ನಿಮಗೆ ಸಂತಸ ತರುವುದು. ಯಾರೊಂದಿಗೂ ದಿನದ ಮಟ್ಟಿಗೆ ಹಣಕಾಸಿನ ವ್ಯವಹಾರ ಮಾಡಬೇಡಿ. ವಿನಾಕಾರಣ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಕುಟುಂಬದಲ್ಲಿ ಅನಾವಶ್ಯಕ ಮಾತುಗಳಿಂದ ಜಗಳವಾಗಬಹುದು. ಹೀಗಾಗಿ ಮೌನದಿಂದ ವರ್ತಿಸಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಇತರರು ನಿಮ್ಮ ಕಾರ್ಯಗಳಿಗೆ ಮೆಚ್ಚುಗೆ ಸೂಚಿಸುವರು. ಹಣಕಾಸಿನ ಹರಿವು ಹೆಚ್ಚಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರಿಕೆ ಇರಲಿ. ವಿನಾಕಾರಣ ಜಗಳ ಮಾಡಿ ಮನಸ್ಸನ್ನು ಕೆಡಿಸಿಕೊಳ್ಳುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

ವೃಶ್ಚಿಕ: ಇತರರನ್ನು ಟೀಕಿಸಲು ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವುದು ಬೇಡ. ಅನಾವಶ್ಯಕವಾಗಿ ವಿಚಾರ ಮಾಡಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದು ಬೇಡ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಉದ್ಯೋಗಿಗಳಿಗೆ ಶುಭವಾಗಲಿದೆ. ಕುಟುಂಬದಲ್ಲಿ ಹಳೆಯ ವಿಚಾರಗಳು ಕಲಹವನ್ನು ಸೃಷ್ಟಿಸಬಹುದು. ನಿಮ್ಮ ಮಾತು ಮಿತವಾಗಿರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

ಧನಸ್ಸು: ಕುಟುಂಬದ ಸದಸ್ಯರೊಂದಿಗೆ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಅಮೂಲ್ಯ ವಸ್ತುಗಳ ಮೇಲೆ ಗಮನವಿರಲಿ. ದಿನದ ಮಟ್ಟಿಗೆ ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ವಿನಾಕಾರಣ ನಿಮ್ಮ ಸಿಟ್ಟನ್ನು ಸಂಗಾತಿಯ ಮೇಲೆ ಹಾಕಬೇಡಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2

ಮಕರ: ನಿಮ್ಮ ಕೋಪದ ಸ್ವಭಾವದಿಂದ ಇತರರೊಂದಿಗೆ ವಾದಕ್ಕಿಳಿಯಬೇಡಿ. ಆತುರದಲ್ಲಿ ಅತಿರೇಕದ ಮಾತುಗಳು ಜಗಳ ತಂದೀತು. ಆರೋಗ್ಯದ ಕಡೆಗೆ ಗಮನವಿರಲಿ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಆತ್ಮೀಯರೊಂದಿಗೆ ಪ್ರಯಾಣಿಸುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಕುಂಭ: ಕೆಲಸಕ್ಕೆ ಹಾಕಿದ ಶ್ರಮ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಿ. ಆತುರದಲ್ಲಿ ಅತಿರೇಕದ ಮಾತುಗಳನ್ನು ಆಡುವುದು ಸರಿಯಲ್ಲ. ತಾಳ್ಮೆಯಿಂದ ಮಾತನಾಡಿ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಮೀನ: ರಹಸ್ಯ ಕಾರ್ಯಗಳು ಯಶಸ್ಸು ತಂದು ಕೊಡಲಿವೆ. ಕುಟುಂಬಕ್ಕೆ ಸಮಯವನ್ನು ನೀಡುವಿರಿ. ವಿನಾಕಾರಣ ಕೋಪಗೊಂಡು ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಖರ್ಚು ಹೆಚ್ಚಾಗಲಿದೆ. ಸಂಗಾತಿಯಾದವರು ನಿಮ್ಮ ಮನಸ್ಸಿನ ಭಾವನೆಗಳಿಗೆ ಸ್ಪಂದಿಸಲಿದ್ದಾರೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version