Site icon Vistara News

Dina Bhavishya : ಇಂದು ಈ ರಾಶಿಯವರು ವಾಹನ ಚಲಾಯಿಸುವಾಗ ಇರಲಿ ಜಾಗ್ರತೆ; ಇಲ್ಲದಿದ್ದರೆ ಅಪಘಾತ!

dina bhavishya read your daily horoscope predictions for February 8 2024

ಚಂದ್ರನು ಗುರುವಾರ ಕುಂಭ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಇದರಿಂದಾಗಿ ಮೇಷ, ಕಟಕ, ಸಿಂಹ, ವೃಶ್ಚಿಕ, ಮಕರ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಧನಸ್ಸು ರಾಶಿಯವರಿಗೆ ಅತಿಯಾದ ಚಿಂತೆ, ಒತ್ತಡವು ಆರೋಗ್ಯದ ಮೇಲೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಪರಿಣಾಮವನ್ನು ಬೀರಬಹುದು. ಆದಷ್ಟು ವಿಶ್ರಾಂತಿ ಪಡೆಯಿರಿ, ತಾಳ್ಮೆ ಇರಲಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (08-02-2024)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ
ತಿಥಿ: ತ್ರಯೋದಶಿ 11:16 ವಾರ: ಗುರುವಾರ
ನಕ್ಷತ್ರ: ಉತ್ತರಾಷಾಢ 26:13 ಯೋಗ: ಸಿದ್ಧಿ 23:08
ಕರಣ: ವಣಿಜ 11:16 ಅಮೃತ ಕಾಲ: ರಾತ್ರಿ 08:28 ರಿಂದ 09:55ರ ವರೆಗೆ

ಸೂರ್ಯೋದಯ : 6:45  ಸೂರ್ಯಾಸ್ತ : 06:23

ರಾಹುಕಾಲ : ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ: ಬೆಳಗ್ಗೆ
9.00 ರಿಂದ 10.30
ಯಮಗಂಡಕಾಲ: ಬೆಳಗ್ಗೆ 6.00 ರಿಂದ 7.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ಭರವಸೆಯ ಹೊಸ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಹಣ ಗಳಿಸುವ ವಿವಿಧ ಮಾರ್ಗಗಳು ಪುಷ್ಟಿ ನೀಡಲಿವೆ. ಅನಗತ್ಯವಾಗಿ ಇತರರ ಬಗ್ಗೆ ಮನೆಯಲ್ಲಿ ಚರ್ಚಿಸುವುದು ಬೇಡ. ಮನೆಯ ವಾತಾವರಣ ಕೆಡುವ ಸಾಧ್ಯತೆ ಇದೆ. ಉದ್ಯೋಗ ಹಾಗೂ ಆರೋಗ್ಯದಲ್ಲಿ ಸಾಧಾರಣ ಫಲ ಇರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9

ವೃಷಭ: ಗತಿಸಿದ ಘಟನೆಗಳ ಬಗ್ಗೆ ಚಿಂತಿಸಿ, ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಸಾಧ್ಯವಾದಷ್ಟು ತಾಳ್ಮೆಯಿಂದ ಇರಿ. ಭೂಮಿ, ಆಸ್ತಿ ಖರೀದಿ ವ್ಯವಹಾರದಲ್ಲಿ ದಿನದ ಮಟ್ಟಿಗೆ ತೊಡಗುವುದು ಬೇಡ. ಕಾರಣ ಖರ್ಚು ಹೆಚ್ಚಾಗಲಿದೆ. ಆರೋಗ್ಯ ಹಾಗೂ ಉದ್ಯೋಗದಲ್ಲಿ ಸಾಧಾರಣ ಫಲ ಇರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

ಮಿಥುನ: ಅನಿವಾರ್ಯವಾಗಿ ಖರ್ಚು ಹೆಚ್ಚಾಗಲಿದೆ. ಜತೆಗೆ ಪ್ರಯಾಣ ಮಾಡುವ ಸಾಧ್ಯತೆಯೂ ಇದೆ. ಕುಟುಂಬದಲ್ಲಿ ಯಾವುದೋ ವಿಷಯಕ್ಕೆ ಪರಸ್ಪರರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ತಾಳ್ಮೆಯಿಂದ ವರ್ತಿಸಿ. ಅರ್ಹ ನೌಕರರಿಗೆ ಇಂದು ಉದ್ಯೋಗದಲ್ಲಿ ಬಡ್ತಿ ಹೊಂದುವ ಅವಕಾಶ ಕೂಡಿಬರಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 6

ಕಟಕ: ಅತಿಯಾದ ಉತ್ಸಾಹದಲ್ಲಿ ಅತಿರೇಕದ ಮಾತುಗಳು ಬೇಡ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಉತ್ತಮ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಗೊತ್ತಿಲ್ಲದಂತೆ ಸಮಯ ವ್ಯರ್ಥವಾಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭಫಲ ಇರಲಿದೆ. ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 6

ಸಿಂಹ: ಆರ್ಥಿಕ ಸಮಸ್ಯೆಯಿಂದಾಗಿ ಒತ್ತಡ ಹೆಚ್ಚಾಗಲಿದೆ. ಹಿರಿಯರ ಮಾರ್ಗದರ್ಶನ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಬೆಂಬಲ, ಸ್ನೇಹ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ವ್ಯಾಪಾರ-ವ್ಯವಹಾರದಲ್ಲಿ ಸಾಧಾರಣ ಪ್ರಗತಿ ಕಾಣುವಿರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 4

ಕನ್ಯಾ: ಸಕಾರಾತ್ಮಕ ಆಲೋಚನೆಗಳಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಮನೆಯ ಸದಸ್ಯರ ವರ್ತನೆ ನಿಮ್ಮನ್ನು ಮಾನಸಿಕವಾಗಿ ತೊಂದರೆಗಳಾಗುವಂತೆ ಮಾಡುವ ಸಾಧ್ಯತೆ ಇದೆ. ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭಫಲ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಆರ್ಥಿಕವಾಗಿ ಬಳಲುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳು ನಿಧಾನವಾಗಲಿದೆ. ತಾಳ್ಮೆಯಿಂದ ವರ್ತಿಸಿ. ನೆರೆಹೊರೆಯವರೊಂದಿಗೆ ವಿನಾಕಾರಣ ಜಗಳ ಬೇಡ. ಉದ್ಯೋಗಿಗಳಿಗೆ ಶುಭಫಲ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

ವೃಶ್ಚಿಕ: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಲಾಭವಾಗಲಿದೆ. ಸಮಾರಂಭಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಜನಪ್ರಿಯತೆ ಹೆಚ್ಚಾಗಲಿದೆ. ಪ್ರವಾಸದ ಕುರಿತು ಚರ್ಚೆ ನಡೆಸಲಿದ್ದೀರಿ. ಕುಟುಂಬದವರ ಸಹಕಾರ ಸಿಗಲಿದೆ. ಕೊಂಚ ಆರೋಗ್ಯದ ಕಡೆಗೆ ಗಮನ ಇರಲಿ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 7

ಧನಸ್ಸು: ಅತಿಯಾದ ಚಿಂತೆ, ಒತ್ತಡ ನಿಮ್ಮ ಆರೋಗ್ಯದ ಮೇಲೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಪರಿಣಾಮವನ್ನು ಬೀರಬಹುದು. ಆದಷ್ಟು ವಿಶ್ರಾಂತಿ ಪಡೆಯಿರಿ, ತಾಳ್ಮೆ ಇರಲಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ ಸಿಗಲಿದೆ. ಕುಟುಂಬದ ಆಪ್ತರಿಂದ ಸಮಾಧಾನದ ಮಾತುಗಳು ಕೇಳಿಬರುತ್ತದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 4

ಮಕರ: ಅನಿವಾರ್ಯ ಪ್ರಸಂಗಗಳು ನಿಮ್ಮನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಬಹುದು. ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕವಾಗಿ ಪ್ರಗತಿ, ಹೂಡಿಕೆಯ ಕುರಿತು ಆಲೋಚನೆ. ಹೊಸ ಸ್ನೇಹಿತರ ಪರಿಚಯವಾಗಲಿದೆ. ಉದ್ಯೋಗದ ಕುರಿತು ಆಲೋಚನೆ ನಿಮ್ಮದಾಗಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 4

ಕುಂಭ: ದಿಢೀರ್ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ವಾಹನ ಚಾಲನೆ ಮಾಡುವಾಗ ಜಾಗರೂಕತೆಯಿಂದ ಇರಿ. ಅಪಘಾತವಾಗುವ ಸಂಭವ ಇದೆ. ಅವಸರದಲ್ಲಿ ಕೆಲಸ ಮಾಡುವುದು ಬೇಡ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಕಾಣುವಿರಿ.
ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಕನಿಷ್ಠ ಫಲ.
ಅದೃಷ್ಟ ಸಂಖ್ಯೆ: 2

ಮೀನ: ದಿನದ ಮಟ್ಟಿಗೆ ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಆರೋಗ್ಯ ಮಧ್ಯಮವಾಗಿರಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಮಾತಿನ ಭರದಲ್ಲಿ ಅತಿರೇಕದ ಮಾತುಗಳು ಬೇಡ. ಸಾಧ್ಯವಾದಷ್ಟು ತಾಳ್ಮೆಯಿಂದ ವರ್ತಿಸಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version