Site icon Vistara News

Dina Bhavishya : ಈ ಎಲ್ಲ ರಾಶಿಯ ವೃತ್ತಿಪರರರಿಗೆ ಇಂದು ಶುಭ ಫಲ!

horoscope today

ಶನಿವಾರವಾದ ಇಂದು ಚಂದ್ರನು ಮೇಷ ರಾಶಿಯನ್ನು ಮಧ್ಯಾಹ್ನ 03:19 ಕ್ಕೆ ಪ್ರವೇಶಿಸುತ್ತಾನೆ. ಈ ಸಂಚಾರದಿಂದ ವೃಷಭ, ಮಿಥುನ, ಕನ್ಯಾ, ತುಲಾ, ಮಕರ ಮತ್ತು ಮೀನಾ ರಾಶಿಯವರು ಚಂದ್ರನ ಬಲ ಪಡೆಯಲಿದ್ದಾರೆ. ಇಂದು ಮಿಥನ ರಾಶಿಯ ಅರ್ಹ ನೌಕರರಿಗೆ ಉದ್ಯೋಗದಲ್ಲಿ ಬಡ್ತಿ ಹೊಂದುವ ಅವಕಾಶ ಕೂಡಿಬರಲಿದೆ. ಮೀನ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ನಿಮ್ಮ ಇಂದಿನ ದಿನ ಹೇಗಿದೆ, ಭವಿಷ್ಯ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (08-07-2023)

ಶ್ರೀ ಶಕೇ 1945, ಶೋಭಕೃತ್‌ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ

ತಿಥಿ: ಷಷ್ಠಿ 21:50 ವಾರ: ಶನಿವಾರ
ನಕ್ಷತ್ರ: ಪೂರ್ವಭಾದ್ರ 20:34 ಯೋಗ: ಸೌಭಾಗ್ಯ 17:21
ಕರಣ: ಗರಜ 10:59
ಅಮೃತಕಾಲ: ಮಧ್ಯಾಹ್ನ 01 ಗಂಟೆ 09 ನಿಮಿಷದಿಂದ 02 ಗಂಟೆ 38 ನಿಮಿಷದವರೆಗೆ.

ಸೂರ್ಯೋದಯ : 05:59 ಸೂರ್ಯಾಸ್ತ : 06:50

ರಾಹುಕಾಲ : ಬೆಳಗ್ಗೆ 9.00 ರಿಂದ 10.30
ಗುಳಿಕಕಾಲ: ಬೆಳಗ್ಗೆ 6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ಭರವಸೆಯ ಹೊಸ ಅವಕಾಶಗಳು ಸಿಗುವ ಸಾಧ್ಯತೆ. ಹಣಗಳಿಸುವ ವಿವಿಧ ಮಾರ್ಗಗಳು ಪುಷ್ಟಿ ನೀಡಲಿವೆ. ಅನಗತ್ಯವಾಗಿ ಇತರರ ಬಗ್ಗೆ ಮನೆಯಲ್ಲಿ ಚರ್ಚಿಸುವುದು ಬೇಡ, ಮನೆಯ ವಾತಾವರಣ ಕೆಡುವ ಸಾಧ್ಯತೆ. ಉದ್ಯೋಗ ಹಾಗೂ ಆರೋಗ್ಯದಲ್ಲಿ ಸಾಧಾರಣ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9

ವೃಷಭ: ನಡೆದು ಹೋದ ಘಟನೆಗಳ ಬಗ್ಗೆ ಚಿಂತಿಸಿ, ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಸಾಧ್ಯವಾದಷ್ಟು ತಾಳ್ಮೆಯಿಂದ ಇರಿ. ಭೂಮಿ, ಆಸ್ತಿ ಖರೀದಿ ವ್ಯವಹಾರದಲ್ಲಿ ದಿನದ ಮಟ್ಟಿಗೆ ತೊಡಗುವುದು ಬೇಡ. ಖರ್ಚು ಹೆಚ್ಚಾಗಲಿದೆ. ಆರೋಗ್ಯ ಹಾಗೂ ಉದ್ಯೋಗದಲ್ಲಿ ಸಾಧಾರಣ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

ಮಿಥುನ: ಅನಿವಾರ್ಯವಾಗಿ ಖರ್ಚು. ಪ್ರಯಾಣ ಮಾಡುವ ಸಾಧ್ಯತೆ. ಕುಟುಂಬದಲ್ಲಿ ಯಾವುದೋ ವಿಷಯಕ್ಕೆ ಪರಸ್ಪರರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ. ತಾಳ್ಮೆಯಿಂದ ವರ್ತಿಸಿ. ಅರ್ಹ ನೌಕರರಿಗೆ ಇಂದು ಉದ್ಯೋಗದಲ್ಲಿ ಬಡ್ತಿ ಹೊಂದುವ ಅವಕಾಶ ಕೂಡಿಬರಲಿದೆ. ಆರೋಗ್ಯ ಉತ್ತಮ, ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 6

ಕಟಕ: ಹಳೆಯ ವಿಚಾರಗಳನ್ನು ಕೆದಕಿ ಮನಸ್ಸಿಗೆ ಘಾಸಿ ಮಾಡಿಕೊಳ್ಳುವುದು ಬೇಡ. ಮನರಂಜನೆಗಾಗಿ ಖರ್ಚು ಮಾಡುವ ಸಾಧ್ಯತೆ. ಸಭೆ ಸಮಾರಂಭದ ಆಮಂತ್ರಣ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗ ಹಾಗೂ ಕೌಟುಂಬಿಕ ಶುಭ ಫಲ.
ಅದೃಷ್ಟ ಸಂಖ್ಯೆ: 1

ಸಿಂಹ: ನಿಮ್ಮ ನಡೆಗೆ ಇತರರಿಂದ ಪ್ರಶಂಸೆ ವ್ಯಕ್ತವಾಗಲಿದೆ. ಬಾಕಿ ಇರುವ ಸಾಲ ಮರುಪಾವತಿ ಆಗಲಿದೆ. ಆರ್ಥಿಕವಾಗಿ ಲಾಭ. ಹೊಸ ಹೂಡಿಕೆ ವ್ಯವಹಾರಗಳು ಗರಿಗೆದರಲಿವೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ಕನ್ಯಾ: ಹಳೆಯ ವಿಚಾರಗಳು ನಿಮ್ಮನ್ನು ಮಾನಸಿಕವಾಗಿ ಕುಂದಿಸುವ ಸಾಧ್ಯತೆ. ವ್ಯರ್ಥ ಯೋಚನೆಗಳು ಬೇಡ. ಆರೋಗ್ಯದಲ್ಲಿ ವ್ಯತ್ಯಾಸ. ಹಣಕಾಸು ವ್ಯವಹಾರ ಉತ್ತಮ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ಸಮಯದ ಅಭಾವ ಕಾಡಲಿದೆ. ವ್ಯಪಾರ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿವೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ. ಆರೋಗ್ಯ ಸಾಧಾರಣ. ಉದ್ಯೋಗಿಗಳಿಗೆ ಒತ್ತಡ, ತಾಳ್ಮೆ ಅತ್ಯವಶ್ಯ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ವೃಶ್ಚಿಕ: ನಕಾರಾತ್ಮಕ ಆಲೋಚನೆಗಳು ಬರದಂತೆ ಸೃಜನಾತ್ಮಕ ಕಾರ್ಯಗಳಲ್ಲಿ ತೊಡಗಿ. ಕುಲ ದೇವತಾ ದರ್ಶನ, ಅಧ್ಯಾತ್ಮ ಗುರುಗಳ ಮಾರ್ಗದರ್ಶನ ಪಡೆಯಿರಿ. ದಿನದ ಮಟ್ಟಿಗೆ ಖರ್ಚು. ಅತಿಥಿಗಳಿಗಳ ಆಗಮನದಿಂದ ಸಂತಸ. ಉದ್ಯೋಗಿಗಳಿಗೆ ಶುಭ ಫಲ.
ಅದೃಷ್ಟ ಸಂಖ್ಯೆ: 2

ಶನಿವಾರ ಉಪವಾಸ ಏಕೆ ಮಾಡಬೇಕೆಂದು ತಿಳಿಯಲು ಈ ವಿಡಿಯೋ ನೋಡಿ.

ಧನಸ್ಸು: ಸಾಮಾಜಿಕ ಜವಾಬ್ದಾರಿಗಳು ಹೆಚ್ಚಾಗಲಿವೆ. ಅದರ ಮಧ್ಯೆಯೂ ಆರೋಗ್ಯದ ಕುರಿತು ಕಾಳಜಿ ವಹಿಸಿ. ಸೌಂದರ್ಯ ಪ್ರಜ್ಞೆ ಮೂಡಲಿದೆ. ಭವಿಷ್ಯದ ಹೂಡಿಕೆಗಗಳ ಬಗ್ಗೆ ಆಲೋಚನೆ ಮಾಡುವಿರಿ. ಉದ್ಯೋಗಿಗಳಿಗೆ ಯಶಸ್ಸು. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ಮಕರ: ಮಾನಸಿಕ ಉದ್ವೇಗ ಹೆಚ್ಚಾಗಲಿದೆ. ಆತುರದಲ್ಲಿ ತೆಗೆದುಕೊಂಡ ನಿರ್ಧಾರ ಅಪಾಯ ತರುವುದು. ಕುಟುಂಬದಲ್ಲಿ ಪರಸ್ಪರರ ಮಧ್ಯೆ ಭಿನ್ನಾಭಿಪ್ರಾಯ. ತಂದೆ-ತಾಯಿಯರ ಆರೋಗ್ಯದಲ್ಲಿ ವ್ಯತ್ಯಾಸ. ದಿನದ ಮಟ್ಟಿಗೆ ಖರ್ಚು. ಮಾತಿನಲ್ಲಿ ಹಿಡಿತವಿರಲಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

ಕುಂಭ: ಆರೋಗ್ಯ ಉತ್ತಮ. ಆರ್ಥಿಕ ಹೂಡಿಕೆ ವ್ಯವಹಾರದಲ್ಲಿ ಪ್ರಗತಿ, ಲಾಭ. ವೃತ್ತಿಪರರಿಗೆ ಶುಭ ಫಲ. ಕಾರ್ಯದ ಒತ್ತಡದಿಂದ ಕುಟುಂಬದವರೊಂದಿಗೆ ಕಾಲ ಕಳೆಯಲು ಸಮಯದ ಅಭಾವ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

ಇದನ್ನೂ ಓದಿ : Shukra Gochar 2023 : ಜು.7 ರಂದು ಸಿಂಹ ರಾಶಿಗೆ ಶುಕ್ರನ ಸಂಚಾರ; ಈ ಮೂರು ರಾಶಿಯವರಿಗೆ ಶುಭ ಫಲ

ಮೀನ: ಮಾನಸಿಕ ಆರೋಗ್ಯ ಹದಗೆಡಲಿದೆ. ತಾಳ್ಮೆಯಿಂದ ಇರಿ. ಯಾರದರೂ ಪರ ವಹಿಸಿ ಮಾತನಾಡುವುದು ಬೇಡ, ಇದು ನಿಮಗೆ ಅಪಾಯ ತರುವುದು. ಹಣಕಾಸು ಪ್ರಗತಿ ಸಾಧಾರಣ. ಸಂಗಾತಿಯ ವರ್ತನೆ ಮುಜುಗರ ಉಂಟು ಮಾಡುತ್ತದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version