ಚಂದ್ರನು ಶುಕ್ರವಾರ ರಾತ್ರಿವರೆಗೂ ಧನಸ್ಸು ರಾಶಿಯಲ್ಲೇ ಇರಲಿದ್ದು, ರಾತ್ರಿ 11:44ಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ವೃಷಭ, ಮಿಥುನ, ಕನ್ಯಾ, ವೃಶ್ಚಿಕ, ಮಕರ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ತುಲಾ ರಾಶಿಯವರು ತಮ್ಮ ಗೌಪ್ಯ ವಿಷಯಗಳನ್ನು ಬಹಿರಂಗವಾಗದಂತೆ ನೋಡಿಕೊಳ್ಳುವುದು ಒಳಿತು. ಕನ್ಯಾ ರಾಶಿಯವರಿಗೆ ಆಪ್ತರು ನಿಮ್ಮ ಸಹನೆಯನ್ನು ಪರೀಕ್ಷಿಸುವ ಸಾಧ್ಯತೆ ಇದೆ. ವೃಶ್ಚಿಕ ರಾಶಿಯವರಿಗೆ ಬಿಡುವಿಲ್ಲದ ಕಾರ್ಯದಿಂದ ಆಯಾಸವಾಗಿ ಮಾನಸಿಕ ಒತ್ತಡಕ್ಕೆ ತರಬಹುದು. ಹೀಗಾಗಿ ಆದಷ್ಟು ವಿಶ್ರಾಂತಿ ಪಡೆದರೆ ಒಳಿತು. ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.
ಇಂದಿನ ಪಂಚಾಂಗ (kannada panchanga) (29-07-2023)
ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ.
ತಿಥಿ: ಏಕಾದಶಿ 13:04 ವಾರ: ಶನಿವಾರ
ನಕ್ಷತ್ರ: ಜೇಷ್ಠಾ 23:33 ಯೋಗ: ಬ್ರಹ್ಮ 09:32
ಕರಣ: ವಿಷ್ಟಿ (ಭದ್ರ) 13:04 ಅಮೃತ ಕಾಲ: ಮಧ್ಯಾಹ್ನ 03:16 ರಿಂದ ಸಂಜೆ 04:47ರ ವರೆಗೆ
ದಿನದ ವಿಶೇಷ: ಪದ್ಮಿನಿ ಏಕಾದಶಿ
ಸೂರ್ಯೋದಯ : 06:04 ಸೂರ್ಯಾಸ್ತ : 06:48
ರಾಹುಕಾಲ : ಬೆಳಗ್ಗೆ 9.00 ರಿಂದ 10.30
ಗುಳಿಕಕಾಲ: ಬೆಳಗ್ಗೆ 6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00
ಮೇಷ: ನಿಮ್ಮ ಸತತ ಪ್ರಯತ್ನ ಹಾಗೂ ಕುಟುಂಬ ಸದಸ್ಯರ ಸಕಾಲಿಕ ಬೆಂಬಲದಿಂದ ಬಯಸಿದ ಫಲಿತಾಂಶಗಳು ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದ್ದು, ಅನಿವಾರ್ಯ ಕಾರಣಗಳಿಂದ ಖರ್ಚು ಬರಬಹುದು. ಉದ್ಯೋಗಿಗಳಿಗೆ ಕೊಂಚ ಕೆಲಸದ ನಿರಾಳತೆ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2
ವೃಷಭ: ಕುಟುಂಬ ಸದಸ್ಯರೊಂದಿಗೆ ತಾಳ್ಮೆಯಿಂದ ವರ್ತಿಸಿ, ಅಚಾತುರ್ಯದಿಂದ ಆಡಿದ ಮಾತುಗಳು ಅಪಾಯ ತರುವ ಸಾಧ್ಯತೆ ಇದ್ದು, ಎಚ್ಚರಿಕೆ ಇರಲಿ. ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿ ಸಿಗಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2
ಮಿಥುನ: ಹೂಡಿಕೆ ವ್ಯವಹಾರಗಳ ಕುರಿತು ಆಲೋಚನೆ ಮಾಡಿ. ಆರ್ಥಿಕವಾಗಿ ಪ್ರಗತಿಯಾಗಲಿದೆ. ಅತಿಥಿಗಳ ಆಗಮನದಿಂದ ಅವರೊಂದಿಗೆ ಸಮಯ ಕಳೆಯುವ ಸಾಧ್ಯತೆ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9
ಕಟಕ: ಸಂಗಾತಿಯೊಂದಿಗೆ ಮುಖ್ಯ ವಿಷಯಗಳ ಕುರಿತು ಚರ್ಚೆ ಮಾಡುವಿರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅನಿವಾರ್ಯ ಕಾರಣಗಳಿಂದ ಖರ್ಚು ಬರಬಹುದು. ಅತಿಯಾದ ಕೆಲಸದ ಒತ್ತಡದಿಂದ ದೈಹಿಕವಾಗಿ ಬಳಲುವ ಸಾಧ್ಯತೆ ಇದೆ. ಅಮೂಲ್ಯ ವಸ್ತುಗಳ ಬಗ್ಗೆ ಜಾಗೃತಿ ಇರಲಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3
ಸಿಂಹ: ದಿನದ ಮಟ್ಟಿಗೆ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದ್ದು, ಎಚ್ಚರಿಕೆ ಇರಲಿ. ವಿಶ್ವಾಸದಿಂದ ಕಾರ್ಯ ಸಿದ್ಧಿಸಲಿದೆ. ಲಾಭದ ಹೊಡಿಕೆ ಕುರಿತಾಗಿ ಆಲೋಚನೆ ಮಾಡಿ. ಕುಟುಂಬದ ಜತೆಗೆ ಕಾಲ ಕಳೆಯಲು ಹೆಚ್ಚು ಸಮಯ ವಿನಿಯೋಗಿಸುವ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9
ಕನ್ಯಾ: ನಿಮ್ಮ ಕ್ರಿಯಾಶೀಲ ಕಾರ್ಯ ಯೋಜನೆ ಸಫಲತೆಯನ್ನು ತಂದು ಕೊಡಲಿದೆ. ಆಪ್ತರು ನಿಮ್ಮ ಸಹನೆಯನ್ನು ಪರೀಕ್ಷಿಸುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಪ್ರಗತಿ ಸಾಧಿಸುವಿರಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಆರೋಗ್ಯ ಪರಿಪೂರ್ಣವಾಗಿರಲಿದ್ದರೂ ಅನೇಕ ವಿಷಯಗಳು ನಿಮಗೆ ಒತ್ತಡ ಉಂಟು ಮಾಡುವ ಸಾಧ್ಯತೆ ಇದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ. ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕುಟುಂಬದ ಅಸಹಕಾರದಿಂದ ಕಿರಿಕಿರಿ ಉಂಟಾಗಬಹುದು. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2
ವೃಶ್ಚಿಕ: ಬಿಡುವಿಲ್ಲದ ಕಾರ್ಯದಿಂದ ಆಯಾಸವಾಗಿ ಮಾನಸಿಕ ಒತ್ತಡಕ್ಕೆ ತರಬಹುದು. ಆದಷ್ಟು ವಿಶ್ರಾಂತಿ ಪಡೆಯಿರಿ. ಅನಗತ್ಯ ಖರ್ಚು ಇರಲಿದೆ. ಹಿರಿಯರಿಂದ ಮಾರ್ಗದರ್ಶನ ಪಡೆದುಕೊಳ್ಳಿ. ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 4
ಧನಸ್ಸು: ಸಂತೋಷ ತುಂಬಿದ ವಾತಾವರಣ ಇರಲಿದೆ. ಮಕ್ಕಳಿಗಾಗಿ ಖರ್ಚು ಮಾಡುವ ಸಾಧ್ಯತೆ ಇದೆ. ಸಂಗಾತಿಯ ಆರೋಗ್ಯದ ಕುರಿತು ಕಾಳಜಿ ಇರಲಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1
ಮೇಷ ರಾಶಿಯವರಿಗೆ ಯಾವ ಸಮಸ್ಯೆ ಇದೆ; ಇಲ್ಲಿದೆ ವಿಡಿಯೊ!
ಮಕರ: ಆತ್ಮವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಈ ದಿನ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ನಿಮ್ಮಲ್ಲಿರುವ ನಾಯಕತ್ವ ಗುಣವನ್ನು ಗುರುತಿಸುವ ಸಾಧ್ಯತೆ ಇದೆ. ಉದ್ಯೋಗದ ಸ್ಥಳದಲ್ಲಿ ಪ್ರಸಂಶೆ ದೊರೆಯಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 1
ಕುಂಭ: ಇಂದು ಕೈಗೊಂಡ ಧರ್ಮಾರ್ಥ ಕಾರ್ಯವು ಮಾನಸಿಕ ಶಾಂತಿ ಮತ್ತು ಆರಾಮವನ್ನು ತಂದುಕೊಡುತ್ತದೆ. ಹಣಕಾಸು ವ್ಯವಹಾರ ಖಂಡಿತವಾಗಿಯೂ ವೃದ್ಧಿಯಾಗುತ್ತದೆ. ಆದರೆ, ಅದೇ ಸಮಯದಲ್ಲಿ ಖರ್ಚು ಸಹ ತುಂಬಾ ಹೆಚ್ಚಾಗುತ್ತದೆ. ನಿಮ್ಮ ಬಗ್ಗೆ ಕಾಳಜಿ ಮಾಡುವವರ ಬಗ್ಗೆ ಉದಾಸೀನತೆ ಬೇಡ. ದೀರ್ಘಕಾಲದ ಪ್ರಯತ್ನಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 8
ಇದನ್ನೂ ಓದಿ : Adhika Masa 2023 : ಅಧಿಕಮಾಸದಲ್ಲಿ ಈ ಕೆಲಸಗಳನ್ನು ಮಾಡಲೇಬೇಡಿ!
ಮೀನ:
ವಿನಾಕಾರಣ ವಿಚಾರ ಮಾಡಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದು ಬೇಡ. ಅನಗತ್ಯವಾಗಿ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ. ಸಂಗಾತಿಯ ಸಲಹೆ ಹಿತಕರವೆನಿಸುವುದು. ಆತ್ಮೀಯರೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 6
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com