Site icon Vistara News

Dina Bhavishya : ಈ ರಾಶಿಯವರ ಬಹು ದಿನದ ಕನಸು ಇಂದು ನನಸು

Dina bhavishya

ಚಂದ್ರನು ಮಕರ ರಾಶಿಯಿಂದ ಸೋಮವಾರ ರಾತ್ರಿ 11:57 ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮಿಥುನ, ಕಟಕ, ತುಲಾ, ಧನಸ್ಸು, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ವೃಶ್ಚಿಕ ರಾಶಿಯವರಿಗೆ ಈ ದಿನ ಪ್ರೇಮಿಗಳಿಗೆ ಶುಭ ಸೂಚನೆ ಸಿಗಲಿದೆ. ಆದರೆ ಸಹದ್ಯೋಗಿಗಳು ನಿಮ್ಮ ಹಿಂದೆ ಪಿತೂರಿ ನಡೆಸುವ ಸಾಧ್ಯತೆ ಇದೆ. ಆದಷ್ಟು ಎಚ್ಚರಿಕೆ ಇರಲಿ. ಸಿಂಹ ರಾಶಿಯ ಅಧಿಕ ರಕ್ತ ಒತ್ತಡದ ರೋಗಿಗಳು ಆಲಸ್ಯವನ್ನು ಮಾಡಲೇಬೇಡಿ. ಮಿಥುನ ರಾಶಿಯವರಿಗೆ ಕೆಲಸದಲ್ಲಿ ಕೊಂಚ ಮಟ್ಟಿನ ಕಿರಿಕಿರಿ ಸಾಧ್ಯತೆ ಇದೆ. ಕನ್ಯಾ ರಾಶಿಯವರು ಯಾವುದೇ ವ್ಯವಹಾರಗಳಲ್ಲಿ ದಿನದ ಮಟ್ಟಿಗೆ ಹೂಡಿಕೆ ಮಾಡುವುದು ಬೇಡ, ನಷ್ಟವಾಗುವ ಸಾಧ್ಯತೆ ಇದೆ, ಎಚ್ಚರಿಕೆ ಇರಲಿ. ಕುಂಭ ರಾಶಿಯ ಉದ್ಯೋಗಿಗಳಿಗೆ ಭಯದ ವಾತಾವರಣ ನಿರ್ಮಾಣವಾಗಲಿದೆ. ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (31-07-2023)

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ.
ತಿಥಿ: ತ್ರಯೋದಶಿ 07:26/ ಚತುರ್ದಶಿ 27:51 ವಾರ: ಸೋಮವಾರ
ನಕ್ಷತ್ರ: ಪೂರ್ವಷಾಢ 18:57 ಯೋಗ: ವಿಷ್ಕುಂಭ 23:03
ಕರಣ: ತೈತುಲ 07:26 ಅಮೃತ ಕಾಲ: ಮಧ್ಯಾಹ್ನ 02:41 ರಿಂದ ಸಂಜೆ 04:07ರ ವರೆಗೆ

ಸೂರ್ಯೋದಯ : 05:55 ಸೂರ್ಯಾಸ್ತ : 07:10

ರಾಹುಕಾಲ : ಬೆಳಗ್ಗೆ 7.30 ರಿಂದ 9.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಬೆಳಗ್ಗೆ 10.30 ರಿಂದ 12.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ಮಕ್ಕಳ ಆರೋಗ್ಯದ ಕುರಿತು ಕಾಳಜಿ ವಹಿಸಿ. ಈ ದಿನ ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭವಾಗಲಿದೆ. ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ಕಲೆ ಮತ್ತು ರಂಗಭೂಮಿಯ ಜತೆ ಸಂಪರ್ಕ ಹೊಂದಿರುವವರು ಸೃಜನಶೀಲವಾಗಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಪ್ರಯಾಣ ಸಾಧ್ಯತೆ. ಕುಟುಂಬದಲ್ಲಿ ಮಧುರತೆ ಇರಲಿದೆ.
ಅದೃಷ್ಟ ಸಂಖ್ಯೆ: 7

ವೃಷಭ: ದೀರ್ಘಕಾಲೀನ ಅನಾರೋಗ್ಯದಿಂದ ಬಳಲುವ ಸಾಧ್ಯತೆ. ಆರ್ಥಿಕ ಸ್ಥಿತಿ ಸುಧಾರಿಸಿದರೂ ಹಣದ ಹೊರ ಹರಿವು ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಂದರೆಯುಂಟು ಮಾಡುತ್ತದೆ. ಅನಗತ್ಯ ವಿಷಯಗಳ ಬಗ್ಗೆ ಸಮಯ ಕೊಡಬೇಡಿ. ಸಂಗಾತಿಯ ಸಲಹೆ ಹಿತಕರವೆನಿಸಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

ಮಿಥುನ: ಭೂ ಸಂಬಂಧಿ ವ್ಯವಹಾರಗಳಲ್ಲಿ ಲಾಭವಾಗಲಿದೆ. ಉತ್ಸಾಹದ ಜತೆಗೆ ನಿಮ್ಮ ಕನಸು ನನಸಾಗುವ ಕಾಲ ಕೂಡಿ ಬರಲಿದೆ. ವ್ಯಾಪಾರದಲ್ಲಿ ಅಧಿಕ ಲಾಭ ಸಿಗಲಿದೆ. ಜೀವನ ಸಂಗಾತಿಯ ಮಹತ್ವ ಮನವರಿಕೆ ಆಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಕೊಂಚ ಮಟ್ಟಿನ ಕಿರಿಕಿರಿ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಕಟಕ: ದೈಹಿಕ ಆಯಾಸ ಹೆಚ್ಚಾಗುವ ಸಾಧ್ಯತೆ. ನಿಮ್ಮ ದೇಹದ ಮೇಲೆ ಹೆಚ್ಚು ಒತ್ತಡ ಹಾಕುವ ಯಾವುದೇ ದೈಹಿಕ ಪರಿಶ್ರಮವನ್ನು ತಪ್ಪಿಸಲು ಪ್ರಯತ್ನಿಸಿ. ವಿಶ್ರಾಂತಿ ತೆಗೆದುಕೊಳ್ಳಿ. ಹಳೆಯ ನೆನಪುಗಳು ತಮಗೆ ಸಂತಸ ತರಲಿದೆ. ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ, ಸಂಯಮ ಕಳೆದುಕೊಳ್ಳುವುದು ಬೇಡ. ಉದ್ಯೋಗಿಗಳಿಗೆ ಕಿರಿಕಿರಿ. ಆರ್ಥಿಕ ವ್ಯವಹಾರಗಳಲ್ಲಿ ಅಧಿಕ ಲಾಭ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

ಸಿಂಹ: ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದರೂ ಹಣದ ಹೊರಹರಿವು ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಂದರೆಯುಂಟು ಮಾಡುತ್ತದೆ. ಆರೋಗ್ಯದ ಕಡೆ ವಿಶೇಷ ಗಮನ ಹರಿಸಿ. ಅಧಿಕ ರಕ್ತ ಒತ್ತಡದ ರೋಗಿಗಳು ಆಲಸ್ಯವನ್ನು ಮಾಡಲೇಬೇಡಿ. ಉದ್ಯೋಗಿಗಳಿಗೆ ಪ್ರಶಂಸೆ, ಪ್ರೋತ್ಸಾಹ ಸಿಗಲಿದೆ. ಆರ್ಥಿಕವಾಗಿ ಸಾಧಾರಣ ಪ್ರಗತಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

ಕನ್ಯಾ: ಕೆಲವು ಮಾನಸಿಕ ಒತ್ತಡಗಳ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ಯಾವುದೇ ವ್ಯವಹಾರಗಳಲ್ಲಿ ದಿನದ ಮಟ್ಟಿಗೆ ಹೂಡಿಕೆ ಮಾಡುವುದು ಬೇಡ, ನಷ್ಟ ಸಾಧ್ಯತೆ, ಎಚ್ಚರಿಕೆ ಇರಲಿ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸ ವಾತಾವರಣ ಇರಲಿದೆ. ಸೃಜನಶೀಲತೆಯಿಂದ ಕೆಲಸ ಮಾಡುವವರಿಗೆ ಪ್ರೋತ್ಸಾಹ ಸಿಗಲಿದೆ. ಅನಿರೀಕ್ಷಿತ ಪ್ರತಿಫಲಗಳನ್ನು ತರುತ್ತದೆ. ಆರೋಗ್ಯ ಪರಿಪೂರ್ಣ. ಆರ್ಥಿಕವಾಗಿ ಸಾಧಾರಣ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಆರೋಗ್ಯ ಚೆನ್ನಾಗಿರುತ್ತದೆ. ಒಡಹುಟ್ಟಿದವರು ನಿಮ್ಮ ಸಹಾಯಯಾಚಿಸಬಹುದು. ಆರ್ಥಿಕವಾಗಿ ನಿಮಗೆ ಮಧ್ಯಮ ಫಲ ಇರಲಿದೆ. ಸ್ನೇಹಿತರ ವರ್ಗದಿಂದ ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಬೆಂಬಲ ನೀಡಬಹುದು. ಉದ್ಯೋಗಿಗಳಿಗೆ ಕೆಲಸದ ಒತ್ತಡ ಇದ್ದರೂ ದೈಹಿಕವಾಗಿ ನೀವು ಸದೃಢವಾಗಿ ಕೆಲಸ ನಿಭಾಯಿಸುವಲ್ಲಿ ಯಶಸ್ಸು ಪಡೆಯುವಿರಿ. ಕೌಟುಂಬಿಕವಾಗಿ ಶುಭ ಫಲವಿದೆ.
ಅದೃಷ್ಟ ಸಂಖ್ಯೆ: 7

ವೃಶ್ಚಿಕ: ದೈಹಿಕವಾಗಿ ಮಾನಸಿಕವಾಗಿ ಬಳಲುವ ಸಾಧ್ಯತೆ. ನಿಮ್ಮ ಪ್ರೀತಿ ಪಾತ್ರರೊಡನೆ ಸಮಯವನ್ನು ಕಳೆಯಿರಿ. ಆಧ್ಯಾತ್ಮ ಮತ್ತು ಯೋಗ ಹೆಚ್ಚಿನ ನೆಮ್ಮದಿ ತರಲಿದೆ. ಹೂಡಿಕೆ ವ್ಯವಹಾರಗಳಲ್ಲಿ ಲಾಭ ಸಿಗಲಿದೆ. ಪ್ರೇಮಿಗಳಿಗೆ ಶುಭ ಸೂಚನೆ ಸಿಗಲಿದೆ. ಸಹದ್ಯೋಗಿಗಳು ನಿಮ್ಮ ಹಿಂದೆ ಪಿತೂರಿ ನಡೆಸುವ ಸಾಧ್ಯತೆ ಆದಷ್ಟು ಎಚ್ಚರಿಕೆ ಇರಲಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9

ಧನಸ್ಸು: ಆರ್ಥಿಕವಾಗಿ ಸುಧಾರಣೆ ಆಗುವುದರಿಂದ ಇಂದು ಕೊಂಚ ನೆಮ್ಮದಿಯಿಂದ ಇರುವಿರಿ. ದೀರ್ಘಕಾಲದ ಕನಸು ನನಸಾಗುವ ಕಾಲ ಕೂಡಿ ಬರಲಿದೆ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಅದೃಷ್ಟದ ಬಾಗಿಲು ತೆರೆದು ಹೊಸ ಅವಕಾಶಗಳು ಸಿಗಲಿವೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

ಕುಂಭ ರಾಶಿ ಆಗಸ್ಟ್ 2023 ದಿನ ಭವಿಷ್ಯ ಹೇಗಿದೆ? ಈ ವಿಡಿಯೊ ಕ್ಲಿಕ್‌ ಮಾಡಿ…

ಮಕರ: ಸಾಲದ ಮರುಪಾವತಿ ಆಗಲಿದೆ ಹೀಗಾಗಿ ಆರ್ಥಿಕವಾಗಿ ಸದೃಢ. ದೈಹಿಕ ಆರೋಗ್ಯದ ಕಡೆ ಕೊಂಚ ಗಮನ ಹರಿಸಿ. ಅನಗತ್ಯ ಅನುಮಾನ ದಿನದ ಕೊನೆಯಲ್ಲಿ ನೆಮ್ಮದಿ ಹಾಳು ಮಾಡುವ ಸಾಧ್ಯತೆ, ಅದರ ಕಡೆಗೆ ಗಮನ ಹರಿಸದಿರಿ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಪಟ್ಟರೆ ಭರವಸೆಯ ಹೊಸ ಅವಕಾಶಗಳು ಸಿಕ್ಕಾವು ಸಮಯ ವ್ಯರ್ಥ ಮಾಡದೆ ಕಾರ್ಯದಲ್ಲಿ ತೊಡಗಿ. ಉದ್ಯೋಗಿಗಳಿಗೆ ಒತ್ತಡ ಇದ್ದರೂ ಯಾವುದೇ ತೊಂದರೆ ಇಲ್ಲ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

ಕುಂಭ: ಸರಿಯಾದ ಆಲೋಚನೆಗಳು ಹಾಗೂ ಕಾರ್ಯಗಳು ನಿಮಗೆ ಅಗತ್ಯವಿರುವ ಸಮಾಧಾನವನ್ನು ತರುತ್ತವೆ. ಅಮೂಲ್ಯ ವಸ್ತುಗಳ ಬಗೆಗೆ ಜಾಗೃತಿ ಇರಲಿ, ತಾತ್ಸಾರ ಮನೋಭಾವ ಬೇಡ. ಸಂಗಾತಿಯೊಂದಿಗೆ ವಿನಾ ಕಾರಣ ವಾದಕ್ಕೆ ಇಳಿಯಬೇಡಿ. ಮನೆಯಲ್ಲಿ ನೆಮ್ಮದಿ ವಾತಾವರಣ ಹಾಳು ಮಾಡುವುದು ಬೇಡ. ಉದ್ಯೋಗಿಗಳಿಗೆ ಭಯದ ವಾತಾವರಣ ನಿರ್ಮಾಣವಾಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

ಇದನ್ನೂ ಓದಿ : Prerane column : ನಿಮ್ಮ ನಿಮ್ಮ ಬದುಕಿಗೆ ನೀವೇ ಜವಾಬ್ದಾರಿ; ಅದನ್ನು ಬೇರೆಯವರ ಮೇಲೆ ಹೊರಿಸಿದರೆ ನೀವು Waste Body!

ಮೀನ: ಉದ್ಯೋಗದ ಸ್ಥಳದಲ್ಲಿ ನೀವು ಯಾವುದೇ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅದರಿಂದ ಹೊರಬರಬಹುದು. ಕುಟುಂಬದಲ್ಲಿ ಸ್ತ್ರೀ ಸದಸ್ಯರ ಆರೋಗ್ಯ ಚಿಂತೆಗೆ ಕಾರಣವಾಗಬಹುದು. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ.
ಆರ್ಥಿಕವಾಗಿ ಬಲ ಹೆಚ್ಚಲಿದೆ. ಉದ್ಯೋಗಿಗಳಿಗೆ ಶುಭ ಫಲ. ದಾಂಪತ್ಯದಲ್ಲಿ ಮಧುರತೆ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version