Site icon Vistara News

Dina Bhavishya : ಹೂಡಿಕೆ ವ್ಯವಹಾರದಲ್ಲಿ ಡಬಲ್‌ ಲಾಭ; ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Dina Bhavishya

ಚಂದ್ರನು ಮಂಗಳವಾರವೂ ವೃಷಭ ರಾಶಿಯಲ್ಲೆ ಇರಲಿದ್ದಾನೆ. ಇದರಿಂದಾಗಿ ಮೇಷ, ಮಿಥುನ, ಕಟಕ, ತುಲಾ, ವೃಶ್ಚಿಕ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಮೇಷ ರಾಶಿಯವರಿಗೆ ಆರ್ಥಿಕವಾಗಿ ಬಲಿಷ್ಠತೆ ಹೊಂದುವಿರಿ. ಹೂಡಿಕೆ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಸಿಂಹ ರಾಶಿಯವರು ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಮಾನಸಿಕ ಆರೋಗ್ಯ ಸದೃಢವಾಗಿರಲಿದೆ. ಅತಿ ಅವಶ್ಯಕ ಕೆಲಸದ ಕಾರಣ ದೈಹಿಕ ಶ್ರಮ ಇರಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (4-06-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ.
ತಿಥಿ: ತ್ರಯೋದಶಿ 22:00 ವಾರ: ಮಂಗಳವಾರ
ನಕ್ಷತ್ರ: ಭರಣಿ 22:33 ಯೋಗ: ಶೋಭನ 06:10
ಕರಣ: ಗರಜ 11:08 ಅಮೃತ ಕಾಲ: ಸಂಜೆ 06:05 ರಿಂದ 07:35ರವರಗೆ
ದಿನದ ವಿಶೇಷ: ತಾವೂರು ಜಾತ್ರೆ

ಸೂರ್ಯೋದಯ : 05:52   ಸೂರ್ಯಾಸ್ತ : 06:43

ರಾಹುಕಾಲ : ಮಧ್ಯಾಹ್ನ 03:31 ರಿಂದ 05:07
ಗುಳಿಕಕಾಲ: ಮಧ್ಯಾಹ್ನ 12:18 ರಿಂದ 01:55
ಯಮಗಂಡಕಾಲ: ಬೆಳಗ್ಗೆ 09:05
ರಿಂದ 10:42

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ಆರ್ಥಿಕವಾಗಿ ಬಲಿಷ್ಠತೆ ಹೊಂದುವಿರಿ. ಹೂಡಿಕೆ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಒತ್ತಡ ಇರಲಿದೆ. ಹಳೆಯ ಸ್ನೇಹಿತರ ಜತೆ ಕಾಲ ಕಳೆಯುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ವೃಷಭ: ಪ್ರಯಾಣ ಮಾಡುವ ಸಾಧ್ಯತೆ ಇದೆ. ಅನಿರೀಕ್ಷಿತ ಲಾಭಗಳನ್ನು ಪಡೆಯುವಿರಿ. ಕುಟುಂಬದ ಸದಸ್ಯರ ಬೆಂಬಲ ದೊರೆಯಲಿದೆ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ. ಸಾಮಾಜಿಕ ಕಾರ್ಯಗಳಲ್ಲಿ ತೊಡಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಒತ್ತಡ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 2

ಮಿಥುನ:ಬಲವಂತವಾಗಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಪ್ರಸಂಗ ಬರಬಹುದು. ಇಂದಿನ ದಿವಸ ಗಾಬರಿಯಿಂದ ಇರುವ ಸಾಧ್ಯತೆ ಇದೆ. ಅವಘಡ ಸಂಭವ ನಿಧಾನವಾಗಿ ವಾಹನ ಚಾಲನೆ ಮಾಡಿ. ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವಿರಿ. ಉದ್ಯೋಗಿಗಳಿಗೆ ಶುಭ ಫಲ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 8

ಕಟಕ: ಒತ್ತಡದ ಜೀವನಕ್ಕೆ ವಿಶ್ರಾಂತಿ ಸಿಗಲಿದೆ. ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿವೆ. ಅಗತ್ಯ ವಸ್ತುಗಳ ಖರೀದಿ ಮಾಡುವಿರಿ. ಸಹದ್ಯೋಗಿಗಳ ಬೆಂಬಲ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

ಸಿಂಹ: ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಮಾನಸಿಕ ಆರೋಗ್ಯ ಸದೃಢವಾಗಿರಲಿದೆ. ಅತಿ ಅವಶ್ಯಕ ಕೆಲಸದ ಕಾರಣ ದೈಹಿಕ ಶ್ರಮ ಇರಲಿದೆ. ಉದ್ಯೋಗಿಗಳಿಗೆ ಸಹಕಾರ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕ ಕಲಹಗಳಿಗೆ ಧ್ವನಿ ಆಗುವುದು ಬೇಡ. ಸಾಧಾರಣ ಫಲ. ಅದೃಷ್ಟ ಸಂಖ್ಯೆ: 2

ಕನ್ಯಾ: ಅನಿರೀಕ್ಷಿತ ಲಾಭಗಳನ್ನು ನಿರೀಕ್ಷಿಸಬಹುದು. ದೀರ್ಘಕಾಲದ ಪ್ರಯಾಣ ಮಾಡಬೇಕಾಗಬಹುದು. ನಿರೀಕ್ಷೆಗೆ ತಕ್ಕಂತೆ ಫಲ ಸಿಗಲಿದೆ. ಆಪ್ತರೊಂದಿಗೆ ಸಮಯ ಹಂಚಿಕೊಳ್ಳುವ ಅವಕಾಶ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಸಿಗಲಿದೆ. ಕುಟುಂಬದಲ್ಲಿನ ಹಿರಿಯರೊಂದಿಗೆ ವಾದಕ್ಕೆ ಇಳಿಯುವುದು ಬೇಡ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಹರಟೆಯಿಂದ ಕಾಲ ಹರಣ ಮಾಡುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

ವೃಶ್ಚಿಕ: ಬಾಕಿ ಇರುವ ಕೆಲಸ ಕಾರ್ಯಗಳು ಪೂರ್ಣವಾಗಲಿದೆ. ಸಕರಾತ್ಮಕ ಆಲೋಚನೆ ಮಾಡುವಿರಿ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಕಿರಿಕಿರಿಯಾಗುವ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಧನಸ್ಸು: ಉತ್ತಮ ಫಲಿತಾಂಶ ದೊರೆಯಲಿದೆ. ಆತ್ಮವಿಶ್ವಾಸ ಹೆಚ್ಚಲಿದೆ. ಕುಟುಂಬದ ಸದಸ್ಯರ ಮೇಲೆ ಕೋಪಗೊಳ್ಳುವುದು ಬೇಡ. ಆರೋಗ್ಯ ಮಧ್ಯಮವಾಗಿರಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗಿಗಳಿಗೆ ಉತ್ತಮ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಮಕರ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಪ್ರಯಾಣ ಮಾಡುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿ ಉತ್ತಮವಾಗಿರಲಿದೆ. ಪ್ರಮುಖ ಯೋಜನೆ ಕೈಗೊಳ್ಳುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

ಕುಂಭ: ನಿಮ್ಮ ವರ್ತನೆ ಇತರರಿಗೆ ಮುಜುಗರ ಉಂಟು ಮಾಡುವ ಸಾಧ್ಯತೆ ಇದೆ. ಯಾರೊಂದಿಗೂ ಅತಿಯಾದ ಸಲುಗೆ ಬೇಡ. ಆತುರದ ಮಾತುಗಳು ಅಪಾಯ ತರುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 8

ಮೀನ: ಒತ್ತಡದ ಕೆಲಸದಿಂದ ಮುಕ್ತಿ ಸಿಗಲಿದೆ. ದೀರ್ಘಕಾಲದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗುವುದು. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 6

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version