Site icon Vistara News

Dina Bhavishya : ಹಳೆಯ ವಿಚಾರಗಳು ಈ ರಾಶಿಯವರ ಮನಸ್ಸಿಗೆ ಘಾಸಿ ಮಾಡುತ್ತೆ!

Dina Bhavishya

ಚಂದ್ರನು ಶುಕ್ರವಾರದವರೆಗೆ ಸಿಂಹ ರಾಶಿಯಲ್ಲಿಯೇ ನೆಲೆಸಿರುತ್ತಾನೆ. ಇದರಿಂದಾಗಿ ವೃಷಭ, ಕಟಕ, ಕನ್ಯಾ, ತುಲಾ, ಮಕರ ಹಾಗೂ ಕುಂಭ ರಾಶಿಯವರಿಗೆ ಚಂದ್ರನ ಬಲ ಸಿಗಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಮಿಥುನ ರಾಶಿಯವರು ದಿನದ ಮಟ್ಟಿಗೆ ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಅನೇಕ ವಿಚಾರಗಳಿಂದ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಕೋಪದಿಂದ ಏನನ್ನು ಸಾಧಿಸಲಾಗದು. ಕನ್ಯಾ ರಾಶಿಯವರು ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ. ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕುಟುಂಬದ ಅಸಹಕಾರದಿಂದ ಕಿರಿಕಿರಿ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (21-03-2024)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ.
ತಿಥಿ: ದ್ವಾದಶಿ 28:43 ವಾರ: ಗುರುವಾರ
ನಕ್ಷತ್ರ: ಆಶ್ಲೇಷಾ 25:25 ಯೋಗ: ಸುಕರ್ಮ 17:40
ಕರಣ: ಭವ 15:31 ಅಮೃತ ಕಾಲ: ರಾತ್ರಿ 11:40 ರಿಂದ ಮರುದಿನ ಬೆಳಗಿನ ಜಾವ 01:27ರವರೆಗೆ
ದಿನದ ವಿಶೇಷ: ಮೇಲುಕೋಟೆ ಶ್ರೀ ವೈರಮುಡಿ ಉತ್ಸವ, ಶಿವನ ಸಮುದ್ರ ರಥ

ಸೂರ್ಯೋದಯ : 6:23   ಸೂರ್ಯಾಸ್ತ : 06:30

ರಾಹುಕಾಲ : ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ: ಬೆಳಗ್ಗೆ 9.00 ರಿಂದ 10.30
ಯಮಗಂಡಕಾಲ: ಬೆಳಗ್ಗೆ 6.00 ರಿಂದ 7.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ಹಾಸ್ಯದ ಮನೋಭಾವನೆ ಇತರರನ್ನು ಆಕರ್ಷಿಸುವುದು. ಹಣಕಾಸು ಪ್ರಗತಿ ಉತ್ತಮವಾಗಿರಲಿದೆ. ಅಧ್ಯಾತ್ಮ ವ್ಯಕ್ತಿಗಳ ಮಾರ್ಗದರ್ಶನ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.

ವೃಷಭ: ವ್ಯವಹಾರದಲ್ಲಿ ಸಂಗಾತಿಯ ಹಸ್ತಕ್ಷೇಪ ನಿಮಗೆ ಕೋಪ ತರಿಸಬಹುದು, ಆದರೆ ತಾಳ್ಮೆಯಿಂದ ವರ್ತಿಸಿ. ಈ ಹಿಂದೆ ಕಾಡಿದ ವ್ಯಾಧಿ ಮರುಕಳಿಸುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಮಿಥುನ: ದಿನದ ಮಟ್ಟಿಗೆ ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಅನೇಕ ವಿಚಾರಗಳಿಂದ ಒತ್ತಡಕ್ಕೆ ಒಳಾಗಾಗುವ ಸಾಧ್ಯತೆ ಇದೆ. ಕೋಪದಿಂದ ಏನನ್ನು ಸಾಧಿಸಲಾಗದು. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

ಕಟಕ: ಮಾನಸಿಕ ನೆಮ್ಮದಿ ಸಿಗುವುದು. ಹೊಸ ಭರವಸೆಯ ಅವಕಾಶಗಳು ಹುಡುಕಿಕೊಂಡು ಬರಲಿದೆ. ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಫಲ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಸಿಂಹ: ಕುಟುಂಬದ ಆಪ್ತರ ಹಾಗೂ ಸ್ನೇಹಿತರ ಸೂಕ್ತ ಸಲಹೆ ಸಹಕಾರ ಸಿಗುವುದು. ಒತ್ತಡದ ಜೀವನಕ್ಕೆ ಕೊಂಚ ಮಟ್ಟಿಗೆ ವಿಶ್ರಾಂತಿ ಸಿಗಲಿದೆ. ಹಣಕಾಸು ಪ್ರಗತಿ ಉತ್ತಮವಾಗಿರಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ, ಅಗತ್ಯವಿದ್ದಷ್ಟೆ ಮಾತನಾಡಿ, ಸಮಾಧಾನದಿಂದ ವರ್ತಿಸಿ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಕನ್ಯಾ: ಅನೇಕ ವಿಷಯಗಳು ನಿಮಗೆ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ.ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕುಟುಂಬದ ಅಸಹಕಾರದಿಂದ ಕಿರಿಕಿರಿ .ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಆಪ್ತ ಸಂಬಂಧಿಕರಿಂದ ಸಹಾಯ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಹಣಕಾಸು ಪ್ರಗತಿ ಇರಲಿದೆ. ಹಳೆಯ ವಿಚಾರಗಳು ನಿಮ್ಮ ಮನಸ್ಸಿಗೆ ಘಾಸಿ ಮಾಡುವ ಸಾಧ್ಯತೆ, ಎಚ್ಚರಿಕೆ ಇರಲಿ. ಉತ್ತಮ ಆರೋಗ್ಯ, ಉದ್ಯೋಗದಲ್ಲಿ ಸಾಧಾರಣ.ಕುಟುಂಬದ ಸಹಕಾರ ಸಿಗಲಿದೆ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ವೃಶ್ಚಿಕ: ವಾಹನ ಚಾಲನೆ ಮಾಡುವಾಗ ಆದಷ್ಟು ಎಚ್ಚರಿಕೆ ವಹಿಸಿ. ಅನಗತ್ಯ ಖರ್ಚು ಬೇಡ. ಆರೋಗ್ಯ ಸಾಧಾರಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

ಧನಸ್ಸು: ಆತುರದ ಭರದಲ್ಲಿ ಅತಿರೇಕದ ಮಾತುಗಳು ಜಗಳ ತರಬಹುದು, ಸಮಾಧಾನದಿಂದ ವರ್ತಿಸಿ. ಕುಟುಂಬ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡದಂತೆ ವರ್ತಿಸಿ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

ಮಕರ: ಮನೆಯಲ್ಲಿ ಜಗಳ ತರುವಂತಹ ವಿಷಯಗಳಿಂದ ದೂರವಿರಿ. ಕೌಟುಂಬಿಕವಾಗಿ ಸಾಧಾರಣ ಫಲ ಇರಲಿದೆ. ಈ ದಿನ ಹೂಡಿಕೆ ವಿಷಯದಿಂದ ದೂರವಿರಿ.
ಅದೃಷ್ಟ ಸಂಖ್ಯೆ: 7

ಕುಂಭ: ಆಹಾರದ ಕ್ರಮ ಆರೋಗ್ಯದಲ್ಲಿ ವ್ಯತ್ಯಾಸ ಮೂಡಿಸಬಹುದು.ಅಮೂಲ್ಯ ವಸ್ತುಗಳ ಬಗ್ಗೆ ಕಾಳಜಿ ವಹಿಸಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಉದ್ಯೋಗದಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

ಮೀನ: ಸಂಗಾತಿಯ ಹಸ್ತಕ್ಷೇಪ ನಿಮಗೆ ಮುಜುಗರ ಉಂಟು ಮಾಡುವ ಸಾಧ್ಯತೆ.ಉದ್ಯೋಗದಲ್ಲಿ ಭರವಸೆ ಮೂಡಲಿದೆ.ಆರೋಗ್ಯ ಉತ್ತಮ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version