ಚಂದ್ರನು ಗುರವಾರ ರಾತ್ರಿ 8.22ಕ್ಕೆ ತುಲಾ ರಾಶಿಯನ್ನು ಪ್ರವೇಶ ಮಾಡಲಿದ್ದು, ಅಕ್ಟೋಬರ್ 15ರ ಭಾನುವಾರದವರೆಗೆ ಅಲ್ಲಿಯೇ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ಕಟಕ, ಕನ್ಯಾ, ವೃಶ್ಚಿಕ, ಧನು, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಸಿಂಹ ರಾಶಿಯವರು ಇಂದು ಆತುರದ ತೀರ್ಮಾನ ಕೈಗೊಳ್ಳುವುದು ಬೇಡ. ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಕುಂಭ ರಾಶಿಯವರು ಆರ್ಥಿಕ ವ್ಯವಹಾರದಲ್ಲಿ ಪ್ರಗತಿ ಸಾಧಿಸಲಿದ್ದಾರೆ. ಟೀಕಿಸುವವರ ಮಾತುಗಳಿಗೆ ಕಿವಿ ಕೊಡದೆ ಕಾರ್ಯದಲ್ಲಿ ಮುನ್ನುಗ್ಗಿದರೆ ಗುರಿ ಸಾಧಿಸಬಹುದು. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.
ಇಂದಿನ ಪಂಚಾಂಗ (kannada panchanga) (12-10-2023)
ಮೇಷ: ಅನಿವಾರ್ಯ ಕಾರಣದಿಂದ ಸಮಯ ವ್ಯರ್ಥವಾಗುತ್ತದೆ. ಸಂಬಂಧಿಗಳು ಇಂದು ನಿಮ್ಮ ಸಂಗಾತಿಯ ಜತೆಗೆ ವಾದ ಮಾಡಬಹುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲವಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6
ವೃಷಭ: ನಕಾರಾತ್ಮಕ ಭಾವನೆಗಳನ್ನು ಬಿಡಲು ಸಿದ್ಧರಾಗಿರಿ. ಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ವ್ಯಾಪಾರವನ್ನು ಬಲಪಡಿಸಲು ಇಂದು ನೀವು ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ನಿಮ್ಮ ಆಪ್ತರು ಆರ್ಥಿಕ ಸಹಾಯ ಮಾಡಬಹುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ ದೊರೆಯಲಿದೆ.
ಅದೃಷ್ಟ ಸಂಖ್ಯೆ: 5
ಮಿಥುನ: ಇಂದು ನಿಮಗೆ ಅನೇಕ ಹೊಸ ಆರ್ಥಿಕ ಯೋಜನೆಗಳು ದೊರಕುತ್ತವೆ. ಯಾವುದೇ ಬದ್ಧತೆಗೊಳಗಾಗುವ ಮುನ್ನ ಸಾಧಕ – ಬಾಧಕಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಮಕ್ಕಳು ಅವರ ಸಾಧನೆಗಳಿಂದ ನೀವು ಹೆಮ್ಮೆ ಪಡುವಂತೆ ಆಗಬಹುದು. ಜನರ ಸಹಕಾರ ಸಿಗಲಿದೆ. ಯಾವುದೇ ಕಾರಣಕ್ಕೂ ಇತರರ ಮೇಲೆ ಒತ್ತಡ ಹೇರುವುದು ಬೇಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4
ಕಟಕ: ಹಣದ ಅಗತ್ಯವಿರುವುದರಿಂದ ಸಾಧ್ಯವಾದಷ್ಟು ಹಣ ಸಂಗ್ರಹಿಸುವ ಬಗ್ಗೆ ಆಲೋಚಿಸಿ. ಯಾರಾದರೂ ನಿಮ್ಮನ್ನು ಶ್ಲಾಘಿಸುವ ಸಂದರ್ಭ ಬಂದೊದಗಬಹುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಒತ್ತಡ ಇರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7
ಸಿಂಹ: ಅನಿರೀಕ್ಷಿತ ಮೂಲಗಳಿಂದ ಹಣ ಗಳಿಕೆಯ ಸಾಧ್ಯತೆಯನ್ನು ಹೊಂದಬಹುದು. ಕುಟುಂಬದ ಬೆಂಬಲ ಸಿಗಲಿದೆ. ಆತುರದ ತೀರ್ಮಾನ ಕೈಗೊಳ್ಳುವುದು ಬೇಡ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5
ಕನ್ಯಾ: ಹತಾಶೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವುದು ಬೇಡ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಭರವಸೆಯ ಅವಕಾಶ ಇರಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಅನಿವಾರ್ಯ ಕಾರಣದಿಂದ ಖರ್ಚು ಹೆಚ್ಚಾಗಲಿದೆ. ನಿಮ್ಮ ಜ್ಞಾನದಾಹ ನಿಮಗೆ ಹೊಸ ಸ್ನೇಹಿತರನ್ನು ಪಡೆಯಲು ಸಹಾಯ ಮಾಡುತ್ತದೆ. ನಿಮ್ಮ ಸಂಗಾತಿಯ ವರ್ತನೆ ಇಂದು ನಿಮ್ಮ ವೃತ್ತಿಪರ ಸಂಬಂಧಗಳಿಗೆ ತೊಂದರೆಯನ್ನುಂಟು ಮಾಡಬಹುದು. ಉದ್ಯೋಗಿಗಳಿಗೆ ಒತ್ತಡದ ವಾತಾವರಣ ನಿರ್ಮಾಣವಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 6
ವೃಶ್ಚಿಕ: ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುವುದರಿಂದ ತಾಳ್ಮೆಯಿಂದಿರಿ. ವ್ಯಾಪಾರ ಅಥವಾ ಉದ್ಯೋಗದಲ್ಲಿ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ನಿಜವಾಗಿಯೂ ಸೃಜನಶೀಲ ಆಲೋಚನೆಗಳು ಬರಬಹುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8
ಧನಸ್ಸು: ಒತ್ತಡದ ವಾತಾವರಣದಿಂದ ಹೊರ ಬರಲು ಧ್ಯಾನ, ಯೋಗ ಮಾಡಿ. ಇಂದು ವ್ಯಾಪಾರದಲ್ಲಿ ಲಾಭ ಗಳಿಸಲು ನಿಮಗೆ ಯಾರಿಂದಾದರೂ ಸಲಹೆ ಲಭ್ಯವಾಗಬಹುದು. ನೀವು ಆ ಸಲಹೆಯನ್ನು ಅನುಸರಿಸಿದರೆ ಖಂಡಿತವಾಗಿಯೂ ಹಣವನ್ನು ಗಳಿಸುವಿರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ವಿರಾಮದ ವಾತಾವರಣ ಇರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5
ಈ ಕೆಲಸಗಳನ್ನು ಮಾಡಿದರೆ ಪುಣ್ಯ ಜಾಸ್ತಿ ಸಿಗುತ್ತಾ?
ಮಕರ: ದೈವಿಕ ಜ್ಞಾನವನ್ನು ಪಡೆಯಲು ನೀವು ಒಂದು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವಂತೆ ಆಗಬಹುದು. ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಇಂದು ಪರಿಹರಿಸಬಹುದು ಮತ್ತು ನೀವು ಹಣದಿಂದ ಲಾಭ ಪಡೆಯಬಹುದು. ಉದ್ಯೋಗಿಗಳಿಗೆ ಹೊಸ ಉತ್ಸಾಹ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5
ಕುಂಭ: ಅನೇಕ ವಿಷಯಗಳು ನಿಮಗೆ ಸಂತಸ ತರುವುದು. ದೀರ್ಘಕಾಲದ ಕೆಲಸ ಇಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆರ್ಥಿಕ ವ್ಯವಹಾರದಲ್ಲಿ ಪ್ರಗತಿ ಸಾಧಿಸುವಿರಿ. ಟೀಕಿಸುವವರ ಮಾತುಗಳಿಗೆ ಕಿವಿ ಕೊಡದೆ ಕಾರ್ಯದಲ್ಲಿ ಮುನ್ನುಗ್ಗಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3
ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?
ಮೀನ: ಉದ್ಯೋಗಿಗಳು ಅನುಮಾನದಿಂದ ಯಾವುದೇ ಕಾರ್ಯದಲ್ಲಿ ತೊಡಗುವುದು ಬೇಡ. ಹೊಸ ಅವಕಾಶಗಳು ಒದಗಿ ಬರಬಹುದು. ಮಕ್ಕಳ ಆರೋಗ್ಯದ ಕಡೆಗೆ ಗಮನ ಇರಲಿ. ಕುಟುಂಬದಲ್ಲಿ ವ್ಯತಿರಿಕ್ತವಾದ ವಾತಾವರಣ ಸೃಷ್ಟಿಯಾಗುವ ಮುಂಚೆ ಎಚ್ಚರಿಕೆ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com