ಚಂದ್ರನು ಬುಧವಾರವು ಧನಸ್ಸು ರಾಶಿಯಲ್ಲೇ ನೆಲಸಲಿದ್ದಾನೆ. ಇದರಿಂದಾಗಿ ವೃಷಭ, ಮಿಥುನ, ಕನ್ಯಾ, ವೃಶ್ಚಿಕ, ಮಕರ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರು ಮೋಸ ಹೋಗುವ ಸಾಧ್ಯತೆ ಇದೆ ಎಚ್ಚರ ಇರಲಿ. ವೃಷಭ ರಾಶಿಯವರಿಗೆ ದಿನದ ಕೊನೆಯಲ್ಲಿ ಯಾವುದಾದರೂ ಸುದ್ದಿ ದುಃಖ ತರುವುದು. ಮಿಥುನ ರಾಶಿಯವರಿಗೆ ಜೀವನದಲ್ಲಿ ಅಭದ್ರತೆ ಮಾನಸಿಕ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ. ಧನಸ್ಸು ರಾಶಿಯವರಿಗೆ ಅತಿಯಾದ ಒತ್ತಡದ ಕಾರ್ಯ ನಿಮ್ಮ ಮನಸ್ಸಿಗೆ ಘಾಸಿ ಮಾಡುವ ಸಾಧ್ಯತೆ ಇದೆ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.
ಇಂದಿನ ಪಂಚಾಂಗ (kannada panchanga) (18-10-2023)
ಮೇಷ: ಮೋಸ ಹೋಗುವ ಸಾಧ್ಯತೆ ಇದೆ ಎಚ್ಚರ ಇರಲಿ. ಹಣಕಾಸು ಪ್ರಗತಿಯಲ್ಲಿ ಸಾಧಾರಣವಾಗಿರಲಿದೆ. ಹೊಸದೊಂದು ವಸ್ತು ಖರೀದಿಯಿಂದ ಸಂತೋಷ ಮೂಡಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3
ವೃಷಭ: ಶಾಂತ ಮನಸ್ಥಿತಿಯು ಉತ್ಸಾಹ ತುಂಬಿ ಕಾರ್ಯದಲ್ಲಿ ಯಶಸ್ಸು ಸಿಗುವುದು. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಪ್ರೀತಿ ಪಾತ್ರರಿಂದ ಕಿರಿಕಿರಿ ಸಾಧ್ಯತೆ ಇದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಕಾಣಲಿದೆ. ದಿನದ ಕೊನೆಯಲ್ಲಿ ಯಾವುದಾದರೂ ಸುದ್ದಿ ದುಃಖ ತರುವುದು. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2
ಮಿಥುನ: ಜೀವನದಲ್ಲಿ ಅಭದ್ರತೆ ಮಾನಸಿಕ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ. ಹೂಡಿಕೆಗೆ ಸಂಬಂಧಿಸಿದ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕಛೇರಿ ಕೆಲಸಗಳು ನಿಧಾನವಾಗಿ ಸಾಗುವುದು. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9
ಕಟಕ: ಬಿಡುವಿಲ್ಲದ ಕೆಲಸದಿಂದ ಆಯಾಸ ಉಂಟಾಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಮೂಡಿಸಲು ಪ್ರಯತ್ನಿಸುವಿರಿ. ಸಭೆ-ಸಮಾರಂಭಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಸ್ವಲ್ಪ ಖರ್ಚಿನ ದಿನವಿದು. ಬಹುದಿನಗಳ ಕನಸು ನನಸಾಗುವ ಸಮಯವಿದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4
ಸಿಂಹ: ಆಪ್ತರು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಾರೆ. ಯಾವುದೇ ವಿಷಯಗಳಲ್ಲಿ ದೃಢ ನಿರ್ಧಾರ, ರಾಜಿಯಾಗದ ಗುಣ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ದಿನದ ಮಧ್ಯಭಾಗದಲ್ಲಿ ಸ್ವಲ್ಪ ಒತ್ತಡ ಇರಲಿದೆ. ಉದ್ಯೋಗ ಹಾಗೂ ಆರೋಗ್ಯದಲ್ಲಿ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2
ಕನ್ಯಾ: ಆಪ್ತರೊಂದಿಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುವಿರಿ. ಅತಿಯಾದ ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಆರೋಗ್ಯ ಉತ್ತಮವಾಗಿರಲಿದೆ. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ನಿಮ್ಮ ಹಿಂದೆ ಪಿತೂರಿ ಮಾಡುವ ಜನರ ಬಗ್ಗೆ ಎಚ್ಚರಿಕೆ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3
ವೃಶ್ಚಿಕ: ಆಹಾರದ ವ್ಯತ್ಯಾಸದಿಂದ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಆಪ್ತರೊಂದಿಗಿನ ಮಾತುಕತೆಯಲ್ಲಿ ವ್ಯತಿರಿಕ್ತವಾದ ಪರಿಣಾಮದಿಂದಾಗಿ ಜಗಳವಾಗುವ ಸಾಧ್ಯತೆ, ಆದಷ್ಟು ಮಾತು ನಿಯಂತ್ರಣದಲ್ಲಿರಲಿ. ಇದರ ಮಧ್ಯೆ ಉದ್ಯೋಗದ ಸ್ಥಳದಲ್ಲಿ ಕೌಶಲ್ಯದ ಕೆಲಸ ನಿಮಗೆ ಯಶಸ್ಸು ತಂದು ಕೊಡುವುದು.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5
ಧನಸ್ಸು: ಅತಿಯಾದ ಒತ್ತಡದ ಕಾರ್ಯ ನಿಮ್ಮ ಮನಸ್ಸಿಗೆ ಘಾಸಿ ಮಾಡುವ ಸಾಧ್ಯತೆ ಇದೆ. ಆಪ್ತರೊಂದಿಗೆ ಪ್ರಯಾಣ ಮಾಡುವಿರಿ . ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2
ಕಾವೇರಿ ತೀರ್ಥೋದ್ಭವದ ವೇಳೆ ಸ್ನಾನ ಮಾಡಿದ್ರೆ ಪುನರ್ಜನ್ಮ ಇರಲ್ವಾ
ಮಕರ: ಈ ಹಿಂದೆ ಮಾಡಿದ ಹೂಡಿಕೆ ವ್ಯವಹಾರವು ಇಮ್ಮಡಿ ಲಾಭ ತರುವ ಸಾಧ್ಯತೆಗಳಿವೆ. ಅನಗತ್ಯವಾಗಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2
ಕುಂಭ: ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಅಗತ್ಯ. ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಇರುವವರು ಹೆಚ್ಚು ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು. ವ್ಯಾಪಾರದಲ್ಲಿ ಪ್ರಗತಿ ಇರಲಿದೆ. ಹೊಸದಾಗಿ ಕಾರ್ಯ ಪ್ರಾರಂಭಿಸುವುದು ದಿನದ ಮಟ್ಟಿಗೆ ಬೇಡ. ಭವಿಷ್ಯದ ಬಗೆಗೆ ಅತಿಯಾಗಿ ಚಿಂತಿಸಿ ಮನಸ್ಥಿತಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9
ಮೀನ: ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯದಿಂದ ಮಾನಸಿಕ ಅಸಮತೋಲನ ನಡೆದು ಹೋದ ಘಟನೆಗಳ ಬಗ್ಗೆ ಚಿಂತಿಸಿ ಫಲವಿಲ್ಲ. ಅತಿಥಿಗಳ ಆಗಮನ ಹರ್ಷ ತರುವುದು. ಉದ್ಯೋಗದ ಬಗ್ಗೆ ಸಾಧಾರಣವಾಗಿರಲಿದೆ. ಕೌಟುಂಬಿಕ ವ್ಯಾಜ್ಯಗಳು ಹುಟ್ಟುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com