Site icon Vistara News

Dina Bhavishya : ಈ ದಿನ ಅನೇಕ ಒತ್ತಡಗಳು ದೂರವಾಗಿ ಉತ್ಸಾಹದಿಂದ ಕಾಲ ಕಳೆಯುವಿರಿ

Dina Bhavishya

ಚಂದ್ರನು ಗುರುವಾರವೂ ತುಲಾ ರಾಶಿಯಲ್ಲೇ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ಕರ್ಕ, ಕನ್ಯಾ, ವೃಶ್ಚಿಕ, ಧನಸ್ಸು, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ನಿಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುವಿರಿ. ಅನಗತ್ಯ ಮಾನಸಿಕ ಒತ್ತಡ ತಂದುಕೊಳ್ಳುವುದು ಬೇಡ. ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯ ನ್ಯಾಯಾಲಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ, ಇಂದು ನೀವು ಅದರಲ್ಲಿ ವಿಜಯವನ್ನು ಪಡೆಯಬಹುದು. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (3-10-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಿನ ಮಾಸ, ಶುಕ್ಲ ಪಕ್ಷ.
ತಿಥಿ: ಪಾಡ್ಯ 26:57 ವಾರ: ಗುರುವಾರ
ನಕ್ಷತ್ರ: ಹಸ್ತಾ 15:31 ಯೋಗ: ಇಂದ್ರ 28:22
ಕರಣ: ಕಿಂಸ್ತುಘ್ನ 13:38 ಅಮೃತಕಾಲ: ಬೆಳಗ್ಗೆ 08:45 ರಿಂದ 10:33
ದಿನದ ವಿಶೇಷ: ಶರನ್ನವರಾತ್ರಿ ಪ್ರಾರಂಭ,ಘಟ ಸ್ಥಾಪನೆ. ಪ್ರಥಮ ದಿವಸ ಶೈಲಪುತ್ರಿ ಅವತಾರ.

ಸೂರ್ಯೋದಯ : 06:09   ಸೂರ್ಯಾಸ್ತ : 06:08

ರಾಹುಕಾಲ: ಮಧ್ಯಾಹ್ನ 01:38 ರಿಂದ 03:08
ಗುಳಿಕಕಾಲ: ಬೆಳಗ್ಗೆ 09:09 ರಿಂದ
10:39
ಯಮಗಂಡಕಾಲ: ಬೆಳಗ್ಗೆ
06:09 ರಿಂದ 07:39

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ನಿಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುವಿರಿ. ಅನಗತ್ಯ ಮಾನಸಿಕ ಒತ್ತಡ ತಂದುಕೊಳ್ಳುವುದು ಬೇಡ. ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯ ನ್ಯಾಯಾಲಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ, ಇಂದು ನೀವು ಅದರಲ್ಲಿ ವಿಜಯವನ್ನು ಪಡೆಯಬಹುದು. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 2

ವೃಷಭ: ಉತ್ಸಾಹದಿಂದ ಕಾಲ ಕಳೆಯುವಿರಿ. ಯಾರಾದರೂ ಆರ್ಥಿಕ ಸಹಾಯವನ್ನು ಕೇಳಬಹುದು. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಉದ್ಯೋಗಿಗಳಿಗೆ ಮಿಶ್ರ ಫಲ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ದಿನದ ಮಟ್ಟಿಗೆ ಖರ್ಚು ಇರಲಿದೆ. ‌ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 1

ಮಿಥುನ: ಅನಾವಶ್ಯಕ ವಿಚಾರಗಳಿಂದ ಮಾನಸಿಕವಾಗಿ ವಿಚಲಿತರಾಗುವುದು ಬೇಡ. ಸಕಾರಾತ್ಮಕವಾಗಿ ಆಲೋಚಿಸಿ ಮತ್ತು ನಿಮ್ಮ ವಿವೇಚನೆಯಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತದೆ. ಆರೋಗ್ಯ ಮಧ್ಯಮವಾಗಿರಲಿದೆ. ಹಣಕಾಸು ಪ್ರಗತಿ ಉತ್ತಮವಾಗಿರಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಉತ್ತಮ ಫಲ. ಅದೃಷ್ಟ ಸಂಖ್ಯೆ: 8

ಕಟಕ: ಅನೇಕ ಒತ್ತಡಗಳು ದೂರವಾಗಿ ಹರ್ಷದಿಂದ ಕಾಲ ಕಳೆಯುರಿ. ಸಂಗಾತಿಯೊಂದಿಗೆ ಪ್ರಮುಖ ಯೋಜನೆಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿ ಹಾಗೂ ಆರೋಗ್ಯ ಉತ್ತಮವಾಗಿರಲದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3

ಸಿಂಹ: ನಕಾರಾತ್ಮಕ ಆಲೋಚನೆಗಳು ಮಾನಸಿಕವಾಗಿ ವಿಚಲಿತರಾಗುವಂತೆ ಮಾಡಬಹುದು. ಕುಲ ದೇವರ ಆರಾಧನೆ, ಕ್ಷೇತ್ರ ದರ್ಶನದಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 1

ಕನ್ಯಾ:ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕೀರ್ತಿ ಸಿಗುವುದು. ದಿನದ ಮಟ್ಟಿಗೆ ಖರ್ಚು ಇರಲಿದೆ. ಜವಾಬ್ದಾರಿ ಹೆಚ್ಚಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕುಟುಂಬ ಸದಸ್ಯರ ಬೆಂಬಲ ದೊರೆಯಲಿದೆ. ವಿವಾಹ ಅಪೇಕ್ಷಿತರಿಗೆ ಸುದ್ಧಿ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸಿ. ಮಾನಸಿಕ ಒತ್ತಡದಿಂದ ದೂರವಿರಲು ಯೋಗ, ಪ್ರಾಣಾಯಾಮ, ಧ್ಯಾನ ಮಾಡಿ. ಆರ್ಥಿಕ ಸಹಾಯದ ಬೇಡಿಕೆ.ಆಪ್ತರೊಂದಿಗೆ ಸಮಯ ಕಳೆಯಲು ಅವಕಾಶ ಇರಲಿದೆ. ಕುಟುಂಬದವರ ಸಹಕಾರ ಸಿಗಲಿದೆ. ಆರೋಗ್ಯ ಮಧ್ಯಮವಾಗಿರಲಿದೆ. ವ್ಯಾಪಾರ ವ್ಯವಹಾರ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

ವೃಶ್ಚಿಕ: ಅನಿರೀಕ್ಷಿತ ಪ್ರಯಾಣ ಮಾಡಬೇಕಾಗಬಹುದು. ದೇಹದ ಆಯಾಸ ಹೆಚ್ಚಾಗುವ ಸಾಧ್ಯತೆ ಇದೆ. ಒತ್ತಡದಿಂದ ಮನಸ್ಸಿನ ಹತೋಟಿ ತಪ್ಪುವ ಸಾಧ್ಯತೆ ಇದೆ. ತಾಳ್ಮೆ ಅವಶ್ಯಕ. ವ್ಯಾಪಾರ ವ್ಯವಹಾರದಲ್ಲಿ ಇಮ್ಮಡಿ ಲಾಭ ಇರಲಿದೆ. ಆರ್ಥಿಕವಾಗಿ ಬಲಿಷ್ಠವಾಗಿರಲಿದೆ. ಆದಾಯದ ಮೂಲಗಳು ಹೆಚ್ಚಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

ಧನಸ್ಸು: ಆರೋಗ್ಯದ ಕಡೆಗೆ ಹೆಚ್ಚು ಗಮನ ಇರಲಿ. ಅನಿವಾರ್ಯ ಕಾರಣಗಳಿಂದ ಖರ್ಚು ಇರಲಿದೆ. ಕುಟುಂಬದ ಆಪ್ತರೊಂದಿಗೆ ಸಮಯ ಹಂಚಿಕೊಳ್ಳುವಿರಿ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 1

ಮಕರ: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಅನಿವಾರ್ಯ ಕಾರಣಗಳಿಂದ ಖರ್ಚು ಇರಲಿದೆ. ಆಪ್ತರೊಂದಿಗೆ ಸಮಯ ಕಳೆಯವಿರಿ. ಅನೇಕ ಭಿನ್ನಾಭಿಪ್ರಾಯಗಳು ಮಾನಸಿಕ ನೆಮ್ಮದಿಯನ್ನು ಹಾಳು ಮಾಡಬಹುದು, ಮಾನಸಿಕ ಆರೋಗ್ಯಕ್ಕಾಗಿ ದತ್ತಾತ್ರೇಯ ಗುರುಗಳ ಆರಾಧನೆ ಮಾಡಿ. ಆರೋಗ್ಯ ಮಾಧ್ಯಮವಾಗಿರಲಿದೆ. ಕೌಟುಂಬಿಕವಾಗಿ ಉತ್ತಮ ಫಲ. ಅದೃಷ್ಟ ಸಂಖ್ಯೆ: 9

ಕುಂಭ: ಆತ್ಮವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು ಕೀರ್ತಿ ಸಿಗಲಿದೆ. ಅನಾವಶ್ಯಕವಾಗಿ ಒತ್ತಡಕ್ಕೆ ಒಳಗಾಗುವುದು ಬೇಡ. ಆರ್ಥಿಕ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆಪ್ತರಿಂದ ಉಡುಗೊರೆ ಸಿಗುವುದು. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಬುದ್ಧಿ.ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

ಮೀನ: ದೈಹಿಕ ಆರೋಗ್ಯ ಉತ್ತಮ, ಮಾನಸಿಕ ಆರೋಗ್ಯವಾಗಿ ಇರಲು ನೀವು ನಡೆದಿರುವ ಘಟನೆ ನೆನಪಿಸಿ ಕೊರಗುವುದು ಬೇಡ. ಸಂಗಾತಿಯ ಮಾತುಗಳು ಅಹಿತಕರ ಎನಿಸಬಹುದು. ಕುಟುಂಬದ ಸದಸ್ಯರ ಅಡ್ಡಿಯ ಕಾರಣದಿಂದ ನಿಮ್ಮ ದಿನ ಸ್ವಲ್ಪ ಏರುಪೇರಾಗಬಹುದು. ಆಪ್ತರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 5

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version