Site icon Vistara News

Dina Bhavishya : ಈ ರಾಶಿಯವರಿಗೆ ಮನೆಯಲ್ಲೂ ಕಿರಿಕಿರಿ, ಆಫೀಸ್‌ನಲ್ಲೂ ಕಿರಿಕ್‌!

Dina Bhavishya

ಚಂದ್ರನು ಶುಕ್ರವಾರ ಮೇಷ ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ವೃಷಭ, ಮಿಥುನ, ಕನ್ಯಾ, ತುಲಾ, ಮಕರ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರ ಸತತ ಪ್ರಯತ್ನ ಹಾಗೂ ಕುಟುಂಬದ ಸದಸ್ಯರ ಸಕಾಲಿಕ ಬೆಂಬಲ ಬಯಸಿದ ಫಲಿತಾಂಶಗಳು ತರುತ್ತದೆ. ಮಿಥುನ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ. ಮೀನ ರಾಶಿಯವರಿಗೆ ವಿನಾಕಾರಣ ವಿಚಾರ ಮಾಡಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದು ಬೇಡ. ಅನಗತ್ಯವಾಗಿ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (2‌9-09-2023)

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ
ತಿಥಿ:
ಹುಣ್ಣಿಮೆ 15:26 ವಾರ: ಶುಕ್ರವಾರ
ನಕ್ಷತ್ರ: ಉತ್ತರ ಭಾದ್ರಪದ 23:17 ಯೋಗ: ವೃದ್ಧಿ 20:01
ಕರಣ: ಭವ 15:26 ಅಮೃತಕಾಲ : ಸಾಯಂಕಾಲ 7:00 ರಿಂದ ರಾತ್ರಿ 08:26 ರವರೆಗೆ
ದಿನದ ವಿಶೇಷ : ಅನಂತನ ಹುಣ್ಣಿಮೆ, ಉಮಾಮಹೇಶ್ವರಿ ವ್ರತ, ವಿಶ್ವ ಹೃದಯ ದಿನ

ಸೂರ್ಯೋದಯ : 06:18  ಸೂರ್ಯಾಸ್ತ : 07:17

ರಾಹುಕಾಲ: ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ
: ಮಧ್ಯಾಹ್ನ 3.00 ರಿಂದ 4.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ನಿಮ್ಮ ಸತತ ಪ್ರಯತ್ನ ಹಾಗೂ ಕುಟುಂಬದ ಸದಸ್ಯರ ಸಕಾಲಿಕ ಬೆಂಬಲ ಬಯಸಿದ ಫಲಿತಾಂಶಗಳು ತರುತ್ತದೆ. ಆರೋಗ್ಯ ಪರಿಪೂರ್ಣವಾಗಿ ಇರಲಿದೆ. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಉದ್ಯೋಗದ ಸ್ಥಳದಲ್ಲಿ ಒತ್ತಡ ಹೆಚ್ಚಾಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ವೃಷಭ: ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿ ಪಡೆಯುವಿರಿ. ಆರ್ಥಿಕವಾಗಿ ಸುಧಾರಣೆ ಆಗಲಿದೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಕುಟುಂಬ ಸದಸ್ಯರೊಂದಿಗೆ ತಾಳ್ಮೆಯಿಂದ ವರ್ತಿಸಿ, ಅಚಾತುರ್ಯದಿಂದ ಆಡಿದ ಮಾತುಗಳು ಅಪಾಯ ತರುವ ಸಾಧ್ಯತೆ ಇದೆ, ಎಚ್ಚರಿಕೆ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

ಮಿಥುನ: ಹೂಡಿಕೆ ವ್ಯವಹಾರಗಳ ಕುರಿತು ಆಲೋಚನೆ ಮಾಡುವಿರಿ. ಆರ್ಥಿಕವಾಗಿ ಪ್ರಗತಿ ಇರಲಿದೆ. ಅತಿಥಿಗಳ ಆಗಮನದಿಂದ ಅವರೊಂದಿಗೆ ಸಮಯ ಕಳೆಯುವ ಸಾಧ್ಯತೆ ಇದೆ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಕಟಕ: ಅತಿಯಾದ ಕೆಲಸದ ಒತ್ತಡದಿಂದ ದೈಹಿಕವಾಗಿ ಬಳಲುವ ಸಾಧ್ಯತೆ ಇದೆ. ಅಮೂಲ್ಯ ವಸ್ತುಗಳ ಬಗೆಗೆ ಜಾಗೃತಿ ಇರಲಿ. ಸಂಗಾತಿಯೊಂದಿಗೆ ಮುಖ್ಯ ವಿಷಯಗಳ ಕುರಿತು ಚರ್ಚೆ ಮಾಡುವಿರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3

ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಆಗುವ ಸಾಧ್ಯತೆ ಇದೆ, ಎಚ್ಚರವಹಿಸಿ. ಹಿರಿಯರ ಮಾರ್ಗದರ್ಶನ ಪಡೆಯಿರಿ.ಅತಿಯಾದ ಆತ್ಮವಿಶ್ವಾಸದ ಭರದಲ್ಲಿ ದುಡುಕುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

ಕನ್ಯಾ: ನಿಮ್ಮ ಕ್ರಿಯಾಶೀಲ ಕಾರ್ಯ ಯೋಜನೆ ಸಫಲತೆಯನ್ನು ತಂದು ಕೊಡಲಿದೆ. ಆಪ್ತರು ನಿಮ್ಮ ಸಹನೆಯನ್ನು ಪರೀಕ್ಷಿಸುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಕಿರಿಕಿರಿ ಆಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಆರೋಗ್ಯ ಪರಿಪೂರ್ಣವಾಗಿರಲಿದೆ. ಅದರ ಹೊರತಾಗಿಯೂ ಅನೇಕ ವಿಷಯಗಳು ನಿಮಗೆ ಒತ್ತಡವನ್ನುಂಟು ಮಾಡುವ ಸಾಧ್ಯತೆ ಇದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ. ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕುಟುಂಬದ ಅಸಹಕಾರದಿಂದ ಕಿರಿಕಿರಿ ಉಂಟಾಗಲಿದೆ. ಉದ್ಯೋಗದ ಸ್ಥಳದಲ್ಲೂ ಕಿರಿಕಿರಿ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

ವೃಶ್ಚಿಕ: ಬಿಡುವಿಲ್ಲದ ಕಾರ್ಯದಿಂದ ಆಯಾಸವಾಗಲಿದೆ. ಇದರಿಂದಾಗಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ, ಆದಷ್ಟು ವಿಶ್ರಾಂತಿ ಪಡೆಯಿರಿ. ಅನಗತ್ಯವಾಗಿ ಖರ್ಚು ಹೆಚ್ಚಾಗಲಿದೆ. ಹಿರಿಯರಿಂದ ಮಾರ್ಗದರ್ಶನ ಪಡೆಯುವಿರಿ. ಉದ್ಯೋಗಿಗಳಿಗೆ ಮಿಶ್ರ ಫಲ. ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 4

ಧನಸ್ಸು: ಸಂತೋಷ ತುಂಬಿದ ವಾತಾವರಣ ಇರಲಿದೆ. ಮಕ್ಕಳಿಗಾಗಿ ಖರ್ಚು ಮಾಡುವ ಸಾಧ್ಯತೆ ಇದೆ. ಸಂಗಾತಿಯ ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

ಕಾವೇರಿ ವಿವಾದದ ಭವಿಷ್ಯ ಮೊದಲೇ ಹೇಳಿದ್ದೆ

ಮಕರ: ಆತ್ಮವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಈ ದಿನ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ನಿಮ್ಮಲ್ಲಿರುವ ನಾಯಕತ್ವ ಗುಣವನ್ನು ಗುರುತಿಸುವ ಸಾಧ್ಯತೆ ಇದೆ. ಉದ್ಯೋಗದ ಸ್ಥಳದಲ್ಲಿ ಪ್ರಸಂಶೆ ಸಿಗಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 1

ಕುಂಭ: ಇಂದು ಕೈಗೊಂಡ ಧರ್ಮಾರ್ಥ ಕಾರ್ಯವು ಮಾನಸಿಕ ಶಾಂತಿ ಇರುತ್ತದೆ. ಹಣಕಾಸು ವ್ಯವಹಾರ ಖಂಡಿತವಾಗಿಯೂ ವೃದ್ಧಿಯಾಗುತ್ತದೆ. ಆದರೆ ಅದೇ ಸಮಯದಲ್ಲಿ ಖರ್ಚೂ ತುಂಬಾ ಹೆಚ್ಚಾಗುತ್ತದೆ. ನಿಮ್ಮ ಬಗೆಗೆ ಕಾಳಜಿ ಮಾಡುವವರ ಬಗ್ಗೆ ಉದಾಸೀನತೆ ಬೇಡ. ದೀರ್ಘಕಾಲದ ಪ್ರಯತ್ನಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ. ಆರೋಗ್ಯ ಪರಿಪೂರ್ಣ ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 8

ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?

ಮೀನ: ವಿನಾಕಾರಣ ವಿಚಾರ ಮಾಡಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದು ಬೇಡ. ಅನಗತ್ಯವಾಗಿ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ. ಸಂಗಾತಿಯ ಸಲಹೆ ಹಿತಕರವೆನಿಸುವುದು. ಆತ್ಮೀಯರೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 6

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version