Site icon Vistara News

Kuja in Astrology: ಕುಜನು ಯಾವ ಸ್ಥಾನದಲ್ಲಿದ್ದರೆ ಪ್ರಬಲ? ಭಾವಫಲಗಳೇನು?

ಪ್ರಮೋದ ಹೆಗಡೆ

ಜ್ಯೋತಿಷ ಶಾಸ್ತ್ರದಲ್ಲಿ ಮಂಗಳ ಗ್ರಹ ಮೂರನೇಯದ್ದು. ಮಂಗಳ ಗ್ರಹವನ್ನು ಕುಜ ಎಂದೂ ಕರೆಯಲಾಗುತ್ತದೆ. ಈ ಕುಜ (Kuja in Astrology) ದಶಮದಲ್ಲಿದ್ದರೆ ಪ್ರಬಲ. ವಿವಿಧ ಸ್ಥಾನಗಳಲ್ಲಿ ವಿವಿಧ ಫಲಗಳನ್ನು ನೀಡುತ್ತಾನೆ. ಕುಜನ ಭಾವಫಲದ ಬಗ್ಗೆ ಮಾಹಿತಿ ಇಲ್ಲದೆ.

ಲಗ್ನದಲ್ಲಿ ಕುಜನಿರುವ ಜಾತಕದವರು ಸಾಮಾನ್ಯವಾಗಿ ಸಾಹಸ ಪ್ರವೃತ್ತಿಯವರಾಗಿರುತ್ತಾರೆ. ಅವರ ಶರೀರವು ಕೃಶ, ವೃಣಾದಿಗಳಿಂದ ಪೀಡಿತವಾಗಿರುತ್ತದೆ. ಅವರ ಸ್ವಭಾವ ಕಠಿಣ ಹಾಗೂ ಕ್ರೂರವಾಗಿರುತ್ತದೆ.

ದ್ವಿತೀಯದಲ್ಲಿ ಕುಜನಿದ್ದರೆ ಅವರ ಸಂಗ ದುರ್ಜನಿರಿಂದ ತುಂಬಿರುತ್ತದೆ. ಅವರು ಸಾಮಾನ್ಯವಾಗಿ ಕುರೂಪಿಯೂ, ವಿದ್ಯೆ ಮತ್ತು ಧನಹೀನರಾಗಿರುತ್ತಾರೆ.

ಕುಜನು ತೃತೀಯದಲ್ಲಿರುವ ಜಾತಕದವರು ಗುಣವಂತರು, ಧನವಂತರು ಆಗಿರುತ್ತಾರೆ. ಪರಾಕ್ರಮಿ, ಉದ್ಘಟರಾಗಿರುತ್ತಾರೆ. ಆದರೆ, ಅವರು ಸುಖಿಯಾಗಿರುತ್ತಾರೆ.

ಚತುರ್ಥದಲ್ಲಿ ಕುಜನು, ಅಶುಭ ಫಲವನ್ನು ನೀಡುತ್ತಾನೆ. ಈ ಜಾತಕದವರು ತಾಯಿ, ಬಂಧು ಬಾಂಧವರನ್ನು ಕಳೆದುಕೊಳ್ಳುತ್ತಾರೆ. ಅಲ್ಲದೆ, ಭೂಮಿ, ಗೃಹ, ವಾಹನಾದಿ ಸುಖಗಳಿಂದ ವಂಚಿತನಾಗುತ್ತಾರೆ.

ಪಂಚಮ ಭಾವದಲ್ಲಿ ಕುಜನಿದ್ದರೆ, ಅವರು ಶಾರೀರಿಕ ಸುಖದಿಂದ ವಂಚಿತರಾಗುತ್ತಾರೆ. ನಿರ್ಧನ, ಚಾಡಿಕೋರರಾಗಿರುತ್ತಾರೆ. ಅಲ್ಲದೆ, ಬುದ್ಧಿಮಾಂದ್ಯ ಸಮಸ್ಯೆಯಿಂದ ಬಲಳುತ್ತಾರೆ.

ಷಷ್ಟಮದಲ್ಲಿ ಕುಜನಿದ್ದರೆ, ಅಧಿಕಾಮಿಯು, ಧನಸಂಪತ್ತನ್ನು ಹೊಂದಿ ಖ್ಯಾತಿ ಪಡೆಯುತ್ತಾರೆ. ಈ ಜಾತಕದವರು ಜಯಶಾಲಿಯಾದ ರಾಜನಾಗುತ್ತಾರೆ.

ಕುಜನು ಸಪ್ತಮದಲ್ಲಿದ್ದರೆ, ಅನುಚಿತ ಕಾರ್ಯಗಳಲ್ಲಿ ನಿರತರಾಗುತ್ತಾರೆ. ಇವರು ಸಾಮಾನ್ಯವಾಗಿ ಇವರು ಸದಾ ತಿರುಗಾಟದಲ್ಲಿರುತ್ತಾರೆ. ಪತ್ನಿಯನ್ನು ಕಳೆದುಕೊಂಡು ದುಃಖಪಡುವಂತಾಗುತ್ತದೆ ಹಾಗೂ ಇವರಿಗೆ ಅನಾರೋಗ್ಯ ಕಾಡುತ್ತದೆ.

ಅಷ್ಟಮದಲ್ಲಿಯೂ ಕುಜನ ಫಲಗಳು ಅಶುಭವಾಗಿರುತ್ತದೆ. ಈ ಜಾತಕದವರು ಅಂಗವಿಕಲತೆಯ ದೋಷಕ್ಕೆ ಒಳಗಾಗುತ್ತಾರೆ. ಇವರು ನಿರ್ಧನ ಹಾಗೂ ಅಲ್ಪಾಯುವಾಗಿರುತ್ತಾರೆ. ಇವರಿಗೆ ಅಪನಿಂದೆಗೆ ಒಳಗಾಗುವ ಸಂದರ್ಭಗಳು ಎದುರಾಗುತ್ತವೆ.

ಕುಜನು ನಮಮದಲ್ಲಿದ್ದಾಗ ಜನಿಸಿದವರು ರಾಜನ ಮಿತ್ರರಾಗಿರುತ್ತಾರೆ. ಆದರೆ, ಅಪರಾಧಿ ಪ್ರವೃತ್ತಿಯಿಂದಾಗಿ ನಿಂದೆಗೆ ಒಳಗಾಗುತ್ತಾರೆ. ಅಲ್ಲದೆ, ಇವರು ಪಿತೃಸುಖದಿಂದ ವಂಚಿತನಾಗುತ್ತಾರೆ.

ದಶಮದಲ್ಲಿ ಕುಜನು ಪ್ರಬಲವಾಗಿರುತ್ತಾನೆ. ಈ ಜಾತಕದವರು ರಾಜರಂತೆ ಬದುಕುತ್ತಾರೆ. ಇವರು ದಾನಿಗಳಾಗಿರುತ್ತಾರೆ. ಮುಖ್ಯವಾಗಿ ಇವರು ಲೋಕಪ್ರಶಂಸೆಗೆ ಪಾತ್ರರಾಗುತ್ತಾರೆ.

ಏಕಾದಶ ಭಾವದಲ್ಲಿ ಕುಜನಿದ್ದರೆ, ಅವರು ಶೂರರು, ಗುಣವಂತರು, ಧನಸಂಪನ್ನರಾಗಿರುತ್ತಾರೆ. ಅವರ ಜೀವನದಲ್ಲಿ ಸುಖವೇ ಇರುತ್ತದೆ ಮತ್ತು ಶೋಕರಹಿತ ಜೀವನ ಸಾಗಿಸುತ್ತಾರೆ.

ದ್ವಾದಶ ಭಾವದಲ್ಲಿ ಕುಜನಿರುವಾಗ, ಜಾತಕದವರಲ್ಲಿ ದೃಷ್ಟಿದೋಷ ಕಾಣಿಸಿಕೊಳ್ಳುತ್ತದೆ. ಇವರು ಪತ್ನಿಯನ್ನು ಕಳೆದುಕೊಳ್ಳುತ್ತಾರೆ ಮತ್ತು ಇವರು ಸಾಮಾನ್ಯವಾಗಿ ಚಾಡಿ ಹೇಳುವ ಸ್ವಭಾವದವರಾಗಿರುತ್ತಾರೆ.

ಇದನ್ನೂ ಓದಿ: ಭಾವಾಶ್ರಿತ ಗ್ರಹಫಲ | ಚಂದ್ರನು ನೀಡುವ ಫಲಗಳೇನು?

Exit mobile version