ಕ್ಯಾಲೆಂಡರ್ ವರ್ಷ ಆರಂಭವಾಗುತ್ತಿದ್ದಂತೆಯೇ ಎಲ್ಲರಿಗೂ ವಾರ್ಷಿಕ ಭವಿಷ್ಯವನ್ನು ತಿಳಿದುಕೊಳ್ಳುವ ಕುತೂಹಲ. ಎಲ್ಲ ವಿಷಯಗಳಿಗಿಂತ ಮುಖ್ಯವಾಗಿ ನಮ್ಮ ಆರ್ಥಿಕ ಸ್ಥಿತಿ ಹೊಸ ವರ್ಷದಲ್ಲಿ (Finance Horoscope 2023) ಹೇಗಿರುತ್ತದೆ ಎಂದು ತಿಳಿಯಲು ಎಲ್ಲರೂ ಉತ್ಸುಕರಾಗಿರುತ್ತಾರೆ. 2023ರ ಜನವರಿಯಲ್ಲಿ ದ್ವಾದಶ ರಾಶಿಗಳ ಆರ್ಥಿಕ ಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿಯೋಣ.
ಈ ವರ್ಷದ ಮೊದಲ ತಿಂಗಳು ಹಲವು ರಾಶಿಯವರಿಗೆ ಅರ್ಥಿಕವಾಗಿ ಅತ್ಯಂತ ಶುಭದ ಸಮಯವಾಗಿದೆ. ಹಾಗಾದರೆ ಜನವರಿಯಲ್ಲಿ ಯಾವೆಲ್ಲ ರಾಶಿಗಳಿಗೆ ಧನಲಕ್ಷ್ಮೀ ಕೃಪೆ ಹೆಚ್ಚಾಗಿರಲಿದೆ ಎಂಬುದನ್ನು ಕೂಡ ಇಲ್ಲಿ ನೀಡಲಾಗಿದೆ.
ಮೇಷ: ಜನವರಿ 2023ರಲ್ಲಿ ಮೇಷ ರಾಶಿಯವರ ಖರ್ಚು ಅಧಿಕವಾಗಿರಲಿದೆ. ಆದರೆ ಹಲವು ಆದಾಯದ ಮೂಲಗಳಿಂದ ಹಣ ಬರುತ್ತಲೇ ಇರುತ್ತದೆ. ಈ ತಿಂಗಳು ಹಣ ಹೂಡಿಕೆ ಮಾಡಿ ಉತ್ತಮ ಲಾಭವನ್ನು ಪಡೆಯಬಹುದಾಗಿದೆ. ಖರ್ಚಿನ ಜೊತೆ ಜೊತೆಗೆ ಹಣ ಉಳಿಕೆಯ ಬಗ್ಗೆಯೂ ಯೋಚಿಸುವುದು ಉತ್ತಮ. ಒಟ್ಟಾರೆ ಜನವರಿಯಲ್ಲಿ ಆರ್ಥಿಕ ಸ್ಥಿತಿ ಅತ್ಯಂತ ಉತ್ತಮವಾಗಿರಲಿದೆ.
ವೃಷಭ: ಹಣದ ವಿಷಯದಲ್ಲಿ ಈ ರಾಶಿಯವರು ಸಕಾರಾತ್ಮಕ ಪರಿಣಾಮವನ್ನು ನಿರೀಕ್ಷಿಸಬಹುದು. ವರ್ಷದ ಮೊದಲ ತಿಂಗಳ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರಲಿದೆ. ಈ ತಿಂಗಳು ಹಣದ ಹರಿವು ಚೆನ್ನಾಗಿಯೇ ಇರಲಿದೆ. ಈ ತಿಂಗಳು ಮಾಡಿದ ಹೂಡಿಕೆ ಮುಂದೊಂದು ದಿನ ಲಾಭ ನೀಡಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಲಾಭ ಸಿಗುವ ಸಂಭವ ಹೆಚ್ಚಿದೆ. ಒಟ್ಟಾರೆಯಾಗಿ ಹೇಳಬೇಕಂದರೆ ಜನವರಿಯಲ್ಲಿ ಆದಾಯ ಹೆಚ್ಚಲಿದೆ.
ಮಿಥುನ: ಮಿಥುನ ರಾಶಿಯವರಿಗೆ ಸಾಧಾರಣವಾಗಿರಲಿದೆ. ಅಡ್ಡದಾರಿಯಿಂದ ಹಣ ಗಳಿಸುವುದರಿಂದ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈ ರಾಶಿಯವರು ಲಾಟರಿ, ಜೂಜು ಮತ್ತು ಶೇರ್ ಮಾರ್ಕೆಟ್‌ಗಳಲ್ಲಿ ಹೂಡಿಕೆ ಮಾಡಲು ಜನವರಿ ತಿಂಗಳು ಅನುಕೂಲಕರವಾಗಿಲ್ಲ. ಹಾಗಾಗಿ 2023ರ ಜನವರಿಯಲ್ಲಿ ಯಾವುದೇ ಹೂಡಿಕೆ ಮಾಡದಿರುವುದು ಉತ್ತಮ.
ಕಟಕ: ಜನವರಿ 2023ರಲ್ಲಿ ಕಟಕ ರಾಶಿಯವರ ಆರ್ಥಿಕ ಸ್ಥಿತಿಯು ಶುಭವಾಗಿರಲಿದೆ. ಲೇಖನ, ಕವಿತೆ ಅಥವಾ ಇನ್ನಿತರ ರಚನಾತ್ಮಕ ಕ್ಷೇತ್ರದಲ್ಲಿ ಇರುವವರಿಗೆ ಜನವರಿ ತಿಂಗಳು ಅತ್ಯಂತ ಉತ್ತಮವಾಗಿರಲಿದೆ. ವೃತ್ತಿ ಬದಲಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ತಿಂಗಳು ಉತ್ತಮವಾಗಿದೆ. ಜೊತೆಗೆ ಆದಾಯ ಹೆಚ್ಚುವ ಯೋಗವಿದೆ.
ಸಿಂಹ : ಸಿಂಹರಾಶಿಯವರ ಆರ್ಥಿಕ ಸ್ಥಿತಿ ಈ ತಿಂಗಳು ಸಾಧಾರಣವಾಗಿರಲಿದೆ. ಈ ತಿಂಗಳು ಹೂಡಿಕೆಗಳಲ್ಲಿ ನಷ್ಟವಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಈ ತಿಂಗಳು ಜೂಜು, ಶೇರ್ ಮಾರ್ಕೆಟ್‌ಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಆಲೋಚನೆ ಮಾಡದಿರುವುದು ಉತ್ತಮ. ಹಣ ಉಳಿಸಲು ಖರ್ಚಿನ ಬಗ್ಗೆ ನಿಗಾ ವಹಿಸುವುದೊಂದೇ ದಾರಿಯಾಗಿದೆ.
ಕನ್ಯಾ : ಕನ್ಯಾ ರಾಶಿಯವರ ಆರ್ಥಿಕ ಸ್ಥಿತಿ ಜನವರಿಯ ಮೂರನೇ ವಾರದಲ್ಲಿ ಉತ್ತಮವಾಗುತ್ತದೆ. ಅಲ್ಲಿಯ ತನಕ ಕಂಪನಿ ನಡೆಸುವವರಾಗಿದ್ದರೆ, ಅಂಥವರಿಗೆ ಅಧಿಕ ಲಾಭ ಸಿಗುವ ಸಂಭವ ಕಡಿಮೆ ಇದೆ. ಅದೇ ಜನವರಿ ಮೂರನೇ ವಾರದ ನಂತರ ಆರ್ಥಿಯ ಸ್ಥಿತಿ ಗಟ್ಟಿಯಾಗುವುದರ ಜೊತೆಗೆ ಪಿತ್ರಾರ್ಜಿತ ಸಂಪತ್ತಿಗೆ ಸಂಬಂಧಿಸಿದ ವ್ಯಾಪಾರವನ್ನು ಮಾಡಿದಲ್ಲಿ ಲಾಭ ದೊರಕಲಿದೆ. ಉದ್ಯೋಗ ಮಾಡುತ್ತಿರುವವರಿಗೆ ಸಹ ಈ ಸಮಯ ಉತ್ತಮವಾಗಿದೆ.
ತುಲಾ: ತುಲಾ ರಾಶಿಯವರ ಆರ್ಥಿಕ ಸ್ಥಿತಿ ಜನವರಿಯಲ್ಲಿ ಅತ್ಯಂತ ಉತ್ತಮವಾಗಿರಲಿದೆ. ಸರಿಯಾಗಿ ಯೋಚಿಸಿ ಖರ್ಚಿನ ಬಗ್ಗೆ ನಿಗಾ ವಹಿಸಿದರೆ ಆರ್ಥಿಕ ಸ್ಥಿತಿಯಲ್ಲಿ ಸಕಾರಾತ್ಮಕ ಪರಿಣಾಮ ಕಾಣ ಸಿಗುತ್ತದೆ. ಆದಾಯಕ್ಕೆ ಅನೇಕ ಮೂಲಗಳಿರುತ್ತದೆ. ಈ ತಿಂಗಳ ಕೊನೆಯ ಎರಡು ವಾರಗಳು ಆರ್ಥಿಕವಾಗಿ ಶುಭವಾಗಿರಲಿವೆ.
ವೃಶ್ಚಿಕ : ಈ ತಿಂಗಳು ಹನ್ನೆರಡನೇ ಮನೆಯಲ್ಲಿ ಕೇತು ಗ್ರಹ ಸ್ಥಿತವಾಗಿರುವುದಲ್ಲದೇ, ಅದೇ ಮನೆಯ ಮೇಲೆ ರಾಹು ಗ್ರಹದ ದೃಷ್ಟಿ ಬೀಳುತ್ತದೆ. ಆದ ಕಾರಣ ಖರ್ಚು ಅತ್ಯಂತ ಹೆಚ್ಚಾಗುವ ಸಂಭವವಿದೆ. ಹಾಗಾಗಿ ಅನಗತ್ಯ ವಸ್ತುಗಳಿಗೆ ಖರ್ಚು ಮಾಡದಿರುವುದು ಉತ್ತಮ. ಹಣವನ್ನು ಖರ್ಚು ಮಾಡುವ ಮೊದಲು ಸರಿಯಾಗಿ ಯೋಚಿಸುವುದು ಅಗತ್ಯವಾಗಿದೆ. ಹೀಗೆ ಮಾಡುವುದರಿಂದ ಮುಂದೆ ಉತ್ತಮ ಪರಿಣಾಮಗಳನ್ನು ಕಾಣ ಬಹುದಾಗಿದೆ.
ಧನು : ಧನು ರಾಶಿಯ ವ್ಯಕ್ತಿಗಳಿಗೆ ವರ್ಷದ ಮೊದಲ ತಿಂಗಳು ಸಾಧಾರಣವಾಗಿರಲಿದೆ. ಉಳಿದೆಲ್ಲ ತಿಂಗಳುಗಳು ಈ ರಾಶಿಯವರಿಗೆ ಉತ್ತಮವಾಗಿರಲಿದೆ. ಹಾಗಾಗಿ ಜನವರಿ ತಿಂಗಳಿನಲ್ಲಿ ಆದಾಯಕ್ಕೆ ತಕ್ಕಂತೆ ಖರ್ಚನ್ನು ಸರಿದೂಗಿಸಿಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆಗಳು ಎದುರಾಗುವ ಸಂಭವವಿರುತ್ತದೆ. ಈ ರಾಶಿಯ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಸಾಲ ಮಾಡುವುದು ಒಳ್ಳೆಯದಲ್ಲ.
ಮಕರ: ಈ ರಾಶಿಯವರ ಜಾತಕದ ಹನ್ನೊಂದನೇ ಮನೆಗೆ ಮಂಗಳನ ದೃಷ್ಟಿ ಬೀಳುತ್ತಿರುವುದರಿಂದ ಜನವರಿಯಲ್ಲಿ ಈ ವ್ಯಕ್ತಿಗಳ ಆರ್ಥಿಕ ಸ್ಥಿತಿ ಅತ್ಯಂತ ಉತ್ತಮವಾಗಿರಲಿದೆ. ಈ ತಿಂಗಳು ಆದಾಯ ಹೆಚ್ಚುವ ಸಾಧ್ಯತೆ ಸಹ ಇದೆ. ಗ್ರಹಗಳ ಸ್ಥಿತಿ ಉತ್ತಮವಾಗಿರುವುದರಿಂದ ಈ ರಾಶಿಯವರು ಉತ್ತಮ ಆಯವ್ಯಯವನ್ನು ಹಾಕಿಕೊಳ್ಳುವುದರಲ್ಲಿ ಸಮರ್ಥರಾಗುತ್ತಾರೆ. ಅದರಂತೆಯೇ ಖರ್ಚು ಸಹ ಮಾಡುತ್ತಾರೆ.
ಕುಂಭ: ಈ ರಾಶಿಯವರಿಗೆ ಹಿಂದೆ ಮಾಡಿದ ಹೂಡಿಕೆಗಳಿಗೆ ಈ ಬಾರಿ ಉತ್ತಮ ರಿಟರ್ನ್ಸ್ ಬರುವ ಸಾಧ್ಯತೆ ಇದೆ. ಕುಂಭ ರಾಶಿಯವರಿಗೆ ಆದಾಯದ ಜೊತೆಗೆ ಖರ್ಚು ಅಧಿಕವಾಗುವ ಸಂಭವವಿದೆ. ಆದಾಯ ಮತ್ತು ಖರ್ಚನ್ನು ಸರಿದೂಗಿಸುವುದು ಕಷ್ಟವಾಗಬಹುದು. ಹಾಗಾಗಿ ಖರ್ಚಿನ ಬಗ್ಗೆ ನಿಗಾ ವಹಿಸುವುದು ಉತ್ತಮ.
ಮೀನ: ಈ ರಾಶಿಯ ವ್ಯಕ್ತಿಗಳಿಗೆ ಬೇರೊಂದು ಆದಾಯದ ಮೂಲ ಸಿಗುವ ಸಾಧ್ಯತೆ ಇದೆ. ಇದು ಮೀನ ರಾಶಿಯವರಿಗೆ ಲಾಭದಾಯಕವೆಂದು ಸಾಬೀತಾಗುತ್ತದೆ. ಆದರೆ ಕೆಲಸದಲ್ಲಿ ಒತ್ತಡ ಹೆಚ್ಚಾಗಿರುವಂತೆ ಭಾಸವಾಗುತ್ತದೆ. ಹಾಗಾಗಿ ಸರಿಯಾದ ಸಮಯದಲ್ಲಿ ಕೆಲಸ ಮಾಡಿಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ನಿರೀಕ್ಷಿಸಿದಷ್ಟು ಲಾಭ ಸಿಗುವುದಿಲ್ಲ.
ಇದನ್ನೂ ಓದಿ | Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿರಲಿದೆ? ದ್ವಾದಶ ರಾಶಿಗಳ ಮೇಲೆ ಪರಿಣಾಮವೇನು?