Site icon Vistara News

Holi 2023 : ಹೋಳಿ ಹುಣ್ಣಿಮೆಯಲ್ಲಿ ಗುರು ಶುಕ್ರ ಯುತಿ; ಬದಲಾಗಲಿದೆ ಈ ರಾಶಿಗಳ ಅದೃಷ್ಟ!

holi Festive Season Will Bring Joy To these Zodiac Signs

#image_title

ನಮಗೆಲ್ಲರಿಗೂ ತಿಳಿದಿರುವಂತೆ ಗ್ರಹಗಳು ಆಯಾ ಸಮಯಕ್ಕೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತಿರುತ್ತವೆ. ಗ್ರಹಗಳ ಸಂಚಾರದಿಂದ ಅನೇಕ ರಾಶಿಗಳ ಮೇಲೆ ಶುಭ ಮತ್ತು ಅಶುಭ ಪ್ರಭಾವಗಳು ಉಂಟಾಗುತ್ತವೆ. ಕೆಲವರಿಗೆ ಅದೃಷ್ಟ ಒಲಿದು ಬಂದರೆ, ಮತ್ತೆ ಕೆಲವರಿಗೆ ಸಂಕಷ್ಟ ಎದುರಾಗುತ್ತದೆ. ಅದರಲ್ಲೂ ಹೋಳಿ ಹುಣ್ಣಿಮೆಯಂಥ (Holi 2023) ಹಬ್ಬದ ಸಂದರ್ಭದಲ್ಲಿ ಗ್ರಹಗಳ ಯುತಿಯು ಮತ್ತಷ್ಟು ಪ್ರಭಾವವನ್ನು ಬೀರಲಿದೆ.

ಗ್ರಹಗಳ ಯುತಿ ಎಂದರೆ ಒಂದೇ ರಾಶಿಯಲ್ಲಿ ಎರಡು ಅಥವಾ ಅದಕ್ಕೂ ಹೆಚ್ಚು ಗ್ರಹಗಳು ಸ್ಥಿತಿವಾಗಿರುವುದು. ಹೀಗೆ ಆದಾಗ ಅದರ ಪ್ರಭಾವ ವ್ಯಕ್ತಿಗಳ ಮೇಲೆ ಮತ್ತು ದೇಶದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಈ ಬಾರಿ ಮಾರ್ಚ್ 7ರಂದು ಹೋಳಿ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ಈ ವಿಶೇಷ ಸಂದರ್ಭದಲ್ಲಿ ಅಂದರೆ ಮಾರ್ಚ್ 7 ಮತ್ತು 8ರಂದು ಗುರು ಗ್ರಹ ಮತ್ತು ಶುಕ್ರ ಗ್ರಹದ ಯುತಿ ಇರಲಿದೆ. ಇದರಿಂದಾಗಿ ಅನೇಕ ರಾಶಿಗಳ ಮೇಲೆ ಉತ್ತಮ ಪರಿಣಾಮ ಉಂಟಾಗಲಿದೆ. ಫೆಬ್ರವರಿ 15ರಂದು ಮೀನ ರಾಶಿಯಲ್ಲಿ ಗುರು ಮತ್ತು ಶುಕ್ರ ಗ್ರಹದ ಯುತಿ ಉಂಟಾಗಿತ್ತು.

ಈ ಎರಡೂ ಗ್ರಹಗಳು ತಮ್ಮದೇ ಆದ ವಿಶೇಷತೆಯನ್ನು ಹೊಂದಿವೆ. ಗುರು ಗ್ರಹವು ಸಮೃದ್ಧಿ, ಉನ್ನತಿ ಮತ್ತು ಶಿಕ್ಷಣದ ಕಾರಕ ಗ್ರಹವಾಗಿದೆ. ಶುಕ್ರ ಗ್ರಹವು ಧನ, ವೈಭವ, ಐಶ್ವರ್ಯ ಮತ್ತು ಭೌತಿಕ ಸುಖದ ಕಾರಕ ಗ್ರಹವಾಗಿದೆ. ಹಾಗಾಗಿ ಈ ಎರಡು ಗ್ರಹಗಳ ಯುತಿಯಿಂದಾಗಿ ಕೆಲವು ರಾಶಿಗಳ ಮೇಲೆ ಉತ್ತಮ ಪರಿಣಾಮ ಉಂಟಾಗಲಿದೆ. ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಮೇಷ ರಾಶಿಯವರಿಗೆ ಶುಭ ಕಾಲ

ಗುರು – ಶುಕ್ರ ಯುತಿಯಿಂದಾಗಿ ಮೇಷ ರಾಶಿಯ ವ್ಯಕ್ತಿಗಳಿಗೆ ಅತ್ಯಂತ ಶುಭ ಫಲ ಪ್ರಾಪ್ತವಾಗಲಿದೆ. ಈ ರಾಶಿಯ ವ್ಯಕ್ತಿಗಳಿಗೆ ಧನಲಾಭ ಉಂಟಾಗಲಿದೆ. ವೃತ್ತಿ ಕ್ಷೇತ್ರದಲ್ಲಿ ಉನ್ನತಿಯನ್ನು ಕಾಣುವುದಲ್ಲದೇ, ಹೆಚ್ಚಿನ ಯಶಸ್ಸು ಪ್ರಾಪ್ತವಾಗಲಿದೆ. ಈ ಸಮಯದಲ್ಲಿ ಆದಾಯ ಹೆಚ್ಚುವ ಸಾಧ್ಯತೆ ಕೂಡ ಇದೆ. ಆಕಸ್ಮಿಕ ಧನ ಲಾಭವಾಗುವ ಸಂಭವವೂ ಇದೆ. ಒಟ್ಟಾರೆಯಾಗಿ ಈ ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ ಮೇಷ ರಾಶಿಯ ವ್ಯಕ್ತಿಗಳು ಶುಭ ಪರಿಣಾಮವನ್ನು ಕಾಣಲಿದ್ದಾರೆ.

ವೃಷಭ ರಾಶಿಯವರಿಗೆ ಒಳ್ಳೆಯ ದಿನ

ಈ ರಾಶಿಯ ವ್ಯಕ್ತಿಗಳಿಗೆ ಗುರು ಶುಕ್ರ ಯುತಿಯು ಲಾಭವನ್ನು ತರಲಿದೆ. ಹೋಳಿ ಹುಣ್ಣಿಮೆಯ ದಿನದಿಂದ ಒಳ್ಳೆಯ ದಿನಗಳು ಆರಂಭವಾಗಲಿದೆ. ಆದಾಯ ಹೆಚ್ಚುವ ಸಾಧ್ಯತೆ ಕೂಡ ಇದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆ ಹೆಚ್ಚಲಿದೆ. ಹೊಸ ಉದ್ಯೋಗಾವಕಾಶಗಳು ಒದಗಿ ಬರುವ ಸಂಭವವೂ ಇದೆ.

ವೃಶ್ಚಿಕ ರಾಶಿಯವರಿಗೆ ಅದೃಷ್ಟದ ಸಮಯ

ಹೋಳಿ ಹುಣ್ಣಿಮೆಯ ಶುಭ ಸಂದರ್ಭದಲ್ಲಿ ಈ ರಾಶಿಯ ವ್ಯಕ್ತಿಗಳಿಗೆ ಅದೃಷ್ಟ ಒಲಿಯಲಿದೆ. ಅಷ್ಟೇ ಅಲ್ಲದೆ ಈ ಸಮಯದಲ್ಲಿ ವೃಶ್ಚಿಕ ರಾಶಿ ವ್ಯಕ್ತಿಗಳ ಜೀವನದಲ್ಲಿ ಸುಖ ಮತ್ತು ಸಮೃದ್ಧಿ ನೆಲೆಸುವಂತೆ ಈ ಎರಡು ಗ್ರಹಗಳ ಮಾಡಲಿವೆ. ಆದಾಯದಲ್ಲಿ ವೃದ್ಧಿಯನ್ನು ಕಾಣಲಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಮಕ್ಕಳಿಂದ ಶುಭ ಸುದ್ಧಿಯನ್ನು ಕೇಳುವ ಸಂಭವವಿದೆ.

ಕುಂಭ ರಾಶಿಯವರಿಗೆ ಆರ್ಥಿಕ ಲಾಭ

ಕುಂಭ ರಾಶಿಯ ವ್ಯಕ್ತಿಗಳಿಗೆ ಗುರು ಶುಕ್ರ ಯುತಿಯು ಆರ್ಥಿಕ ಲಾಭವನ್ನು ತಂದುಕೊಡಲಿದೆ. ಆಕಸ್ಮಿಕ ಧನ ಲಾಭವಾಗುವ ಸಾಧ್ಯತೆ ಹೆಚ್ಚಿದೆ. ಮುಂದಿನ ಯೋಜನೆಗಳಿಗೆ ಈಗ ಹೂಡಿಕೆ ಮಾಡಲು ಅಥವಾ ನಿವೇಶನಗಳನ್ನು ಖರೀದಿಸಲು ಈ ಸಮಯ ಉತ್ತಮವಾಗಿದೆ. ವ್ಯಾಪಾರದಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳಿಗೆ ಹೊಸ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುವ ಯೋಗವಿದೆ.

ಇದನ್ನೂ ಓದಿ: Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

Exit mobile version