Site icon Vistara News

ಭವಿಷ್ಯ ಪ್ರಶ್ನೋತ್ತರ | ಎಂಜಿನಿಯರಿಂಗ್‌ ಮಾಡಿದ್ದೇನೆ ಆದರೆ ಕೆಲಸ ಸಿಗುತ್ತಿಲ್ಲ, ಯಾವಾಗ ಸಿಗಬಹುದು ಗುರೂಜಿ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನಾನು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ ಮಾಡಿದ್ದೇನೆ. ಎಲ್ಲೂ ಸರಿಯಾಗಿ ಕೆಲಸ ಸಿಗುತ್ತಿಲ್ಲ. ಸರ್ಕಾರಿ ಕೆಲಸಗಳಿಗಾಗಿ ಪ್ರಯತ್ನ ಪಡುತ್ತಲೇ ಇದ್ದೇನೆ. ಆದರೆ ಪ್ರತಿಬಾರಿ ವಿಫಲನಾಗುತ್ತಿದ್ದೇನೆ. ಇದರಿಂದ ಬಹಳ ಬೇಸರವಾಗಿದೆ ಗುರೂಜಿ, ದಯವಿಟ್ಟು ನನಗೆ ಯಾವಾಗ ಕೆಲಸ ಸಿಗುತ್ತದೆ ತಿಳಿಸಿ.
ಜನ್ಮದಿನಾಂಕ : 15-03-1996 ನಕ್ಷತ್ರ: ಉತ್ತರಾಷಾಢ

ಪರಿಹಾರ: “ಉದ್ಯೋಗಂ ಪುರುಷ ಲಕ್ಷಣಂʼʼ ಎಂಬ ಮಾತು ಕೇಳಿರಬಹುದು. ನೀವು ಮಾನವನಾಗಿ ಉದ್ಯೋಗಕ್ಕಾಗಿ ಬೇಸರ ಪಡದೆ ಪ್ರಯತ್ನ ಪಡುತ್ತಲೇ ಇರಬೇಕು. ಬೇಸರ ಮಾಡಿಕೊಂಡರೆ ಜೀವನದಲ್ಲಿ ಭವ ಸಾಗರವನ್ನು ದಾಟುವುದು ಹೇಗೆ? ದಾಟಲಾಗುವುದಿಲ್ಲ. ರಾಮನನ್ನು ನೋಡಿ, ಸೀತೆ ಅಪಹರಣವಾದಾಗ ದಿಕ್ಕುಕಾಣದ ಪರಿಸ್ಥಿತಿ ಇತ್ತು. ಕೊನೆಗೆ ಸಮುದ್ರವನ್ನು ದಾಟಿ, ಲಂಕೆಗೆ ರಾವಣನೊಂದಿಗೆ ಯುದ್ಧ ಮಾಡಿ, ಸೀತೆಯನ್ನು ಕರೆದುಕೊಂಡು ಬರಲಿಲ್ಲವೇ? ಹೀಗೆ ನೀವೂ ಉದ್ಯೋಗ ಪಡೆಯುವ ಸಂಕಲ್ಪ ಮಾಡಿ. ಪ್ರಯತ್ನ ಮಾಡುತ್ತಲೇ ಇರಿ. ರಾಮಾಯಣವನ್ನು ಪಾರಾಯಣ ಮಾಡಿ. ಉತ್ತರಾಷಾಢ ನಕ್ಷತ್ರ ಮಕರ ರಾಶಿಯಲ್ಲಿ ಶನಿ ಸಂಚಾರವಿದೆ. ಶನಿಯು ಮಕರ ಬಿಟ್ಟು ಕುಂಭಕ್ಕೆ ಹೋದಾಗ ನಿಮ್ಮ ಜೀವನದಲ್ಲಿ ಸಾಫಲ್ಯತೆ ಸಿಗುತ್ತದೆ.

ನೀವೂ ಪ್ರಶ್ನೆ ಕೇಳಬಹುದು….…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಇದನ್ನೂ ಓದಿ | Horoscope Today | ಬುಧನ ವಕ್ರಿ ಸಂಚಾರ; ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

Exit mobile version