Site icon Vistara News

ಭವಿಷ್ಯ ಪ್ರಶ್ನೋತ್ತರ | ಖರ್ಚು ಜಾಸ್ತಿಯಾಗುತ್ತಲೇ ಇದೆ, ಸಾಲ ತುಂಬಾ ಆಗಿದೆ, ಏನು ಮಾಡೋದು ಗುರೂಜಿ?

ಭವಿಷ್ಯ ಪ್ರಶ್ನೋತ್ತರ

ಪ್ರಶ್ನೆ: ಎಷ್ಟೇ ಕೆಲ್ಸ ಮಾಡಿದ್ರೂ ನನ್ನ ಕೈಯಲ್ಲಿ ದುಡ್ಡು ನಿಲ್ಲೋಲ್ಲ. ಖರ್ಚು ಜಾಸ್ತಿಯಾಗುತ್ತಲೇ ಇದೆ. ಸಾಲ ತುಂಬಾ ಆಗಿದೆ. ಏನು ಮಾಡಬೇಕು ಗುರೂಜಿ?
ಜನ್ಮದಿನಾಂಕ : 29-08-1993 ನಕ್ಷತ್ರ: ಉತ್ತರಷಾಢ

ಪರಿಹಾರ: ಉತ್ತರಷಾಢ ನಕ್ಷತ್ರದವರಿಗೆ ಈಗ ಏಳನೇ ಶನಿ ನಡೆಯುತ್ತಿದೆ. ಜನವರಿ 17 ತಾರೀಖಿನಂದು ಮುಕ್ತಾಯವಾಗುತ್ತದೆ. ಅಂದರೆ ಅಂದು ಶನಿ ಮಕರವನ್ನು ಬಿಟ್ಟು ಕುಂಭಕ್ಕೆ ಬರುತ್ತಾನೆ. ಆಗ ನಿಮ್ಮ ಸಮಯ ಉತ್ತಮವಾಗುತ್ತದೆ. ಅಂದರೆ ಅತ್ಯುತ್ತಮವಾಗೇನೂ ಇರುವುದಿಲ್ಲ, ಸ್ವಲ್ಪ ಉತ್ತಮವಾಗಿರುತ್ತದೆ ಅಷ್ಟೇ. ಮಾಡಿರುವ ಸಾಲ-ಸೋಲ ಎಲ್ಲ ಒಂದು ಹಂತಕ್ಕೆ ಬಂದು ನಿಲ್ಲುತ್ತದೆ. ಶನಿ ಲಗ್ನದಲ್ಲಿರುವಾಗ ಅಧಿಕವಾದ ಖರ್ಚು, ಸಂಪಾದನೆ ಕಡಿಮೆಯಾಗಿ, ಮನೋವ್ಯಥೆಯೂ ಬರುತ್ತದೆ. ಮನಃ ಶಾಂತಿಯೂ ಕದಡುತ್ತದೆ. ಮೀನದಲ್ಲಿ ಅಂದರೆ ಸ್ವಕ್ಷೇತ್ರದಲ್ಲಿ ಗುರು ಇರುವುದರಿಂದ ಆತನೇ ನಿಮಗೆ ದಾರಿ ತೋರಿಸುತ್ತಾನೆ. ಈ ಸಂದರ್ಭದಲ್ಲಿ ಸಾಲವೆಲ್ಲಾ ತೀರಿ, ಮನಃಶ್ಯಾಂತಿಯನ್ನು ಪಡೆಯಬೇಕಾದರೆ ಗಣಪತಿ ಮತ್ತು ನರಸಿಂಹನನ್ನು ಪ್ರಾರ್ಥನೆ ಮಾಡಿ. ಶುಭವಾಗಲಿ.

ನೀವೂ ಪ್ರಶ್ನೆ ಕೇಳಬಹುದು….…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಇದನ್ನೂ ಓದಿ | Horoscope Today | ಬುಧನ ವಕ್ರಿ ಸಂಚಾರ; ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

Exit mobile version