Site icon Vistara News

Horoscope Today | ಆಷಾಢ ಮಾಸದ ಮೊದಲ ದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ

nava pancham yoga

nava pancham yoga

ಇಂದಿನ ಪಂಚಾಂಗ

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ.

ತಿಥಿ: ಪಾಡ್ಯ 10:48 ವಾರ: ಗುರುವಾರ
ನಕ್ಷತ್ರ: ಪುನರ್ವಸು 25:05 ಯೋಗ: ಧ್ರುವ 09:49
ಕರಣ: ಬವ 10:48 ದಿನ ವಿಶೇಷ: ಆಷಾಢ ಮಾಸ ಆರಂಭ, ವಿಶ್ವ ಸೋಷಿಯಲ್‌ ಮೀಡಿಯಾ ದಿನ

ಸೂರ್ಯೋದಯ: 0೬.೦೩  ಸೂರ್ಯಾಸ್ತ: 07.೦೦

ರಾಹು ಕಾಲ : ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ:  ಪ್ರಾತಃ ಕಾಲ 9.00 ರಿಂದ 10.30
ಯಮಗಂಡಕಾಲ: ಪ್ರಾತಃ ಕಾಲ 6.00 ರಿಂದ 7.30

ದ್ವಾದಶ ರಾಶಿ ಭವಿಷ್ಯ (Horoscope Today)

ಮೇಷ: ಒತ್ತಡದ ದಿನದ ಹೊರತಾಗಿಯೂ ಆರೋಗ್ಯ ಪರಿಪೂರ್ಣವಾಗಿರುತ್ತದೆ. ಹಣಕಾಸಿನ ಹರಿವು ಇದ್ದರೂ ಖರ್ಚು ಹೆಚ್ಚು. ನಿಮ್ಮ ಆಪ್ತರಿಗೆ ನಿಮ್ಮ ಮಾತುಗಳು ಬೇಸರ ತರಿಸಬಹುದು. ಅನಾವಶ್ಯಕ ವಾದಗಳಲ್ಲಿ ಸಿಲಿಕಿಕೊಳ್ಳುವ ಸಾಧ್ಯತೆ, ಎಚ್ಚರಿಕೆ ಇರಲಿ. ದಿಢೀರ್ ಪ್ರಯಾಣ ಸಾಧ್ಯತೆ. ಉದ್ಯೋಗಿಗಳಿಗೆ ಸ್ವಲ್ಪ ಕಿರಿಕಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ವೃಷಭ: ನಕಾರಾತ್ಮಕ ಆಲೋಚನೆಗಳು ಹೆಚ್ಚು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ, ಅವುಗಳಿಂದ ದೂರವಿರಿ. ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಆಪ್ತರಿಂದ ಉಡುಗೊರೆ. ಅನೇಕ ಸಮಸ್ಯೆಗಳು ಪರಿಹಾರವಾಗಲಿವೆ. ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ಮಿಥುನ: ಅನಾವಶ್ಯಕವಾಗಿ ಒತ್ತಡಕ್ಕಳಗಾಗುವಿರಿ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಆರ್ಥಿಕ ಪ್ರಗತಿ ಸಾಧಾರಣ. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವ ಅವಕಾಶ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆಯಲು ಆಲಸ್ಯವನ್ನು ಬಿಡಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ಕಟಕ: ನಿಮ್ಮ ವರ್ತನೆ ಇತರರಿಗೆ ಮುಜುಗರ ಉಂಟುಮಾಡುವ ಸಾಧ್ಯತೆ. ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಆಪ್ತರ ಬೆಂಬಲ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ .ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ಸಿಂಹ: ಆರ್ಥಿಕವಾಗಿ ಹೂಡಿಕೆ ಮಾಡುವವರು ದಿನದ ಮಟ್ಟಿಗೆ ಹೂಡಿಕೆ ಮುಂದೂಡಿ. ವ್ಯಾಪರ ವ್ಯವಹಾರ ಸಾಧಾರಣ. ಮಕ್ಕಳಿಂದ ನಿರಾಸೆ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ. ಆರೋಗ್ಯ ಹಾಗೂ ಉದ್ಯೋಗ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ಕನ್ಯಾ: ಇತರರನ್ನು ಟೀಕಿಸಲು ಹೋಗಿ ನೀವು ಟೀಕೆಗೆ ಒಳಗಾಗುವುದು ಬೇಡ. ಹಣ ಮರಪಾವತಿಯಾಗಲಿದೆ‌. ಆರ್ಥಿಕ ಪ್ರಗತಿ. ಆರೋಗ್ಯದಲ್ಲಿ ಕೊಂಚ ಮಟ್ಟಿಗೆ ವ್ಯತ್ಯಾಸ. ಉದ್ಯೋಗಿಗಳಿಗೆ ಯಶಸ್ಸು. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ:

ತುಲಾ: ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸುವುದು ಉತ್ತಮ. ಯಾವುದೇ ಆತುರದಲ್ಲಿ ಹೂಡಿಕೆ ಮಾಡುವುದು ಬೇಡ. ಕುಟುಂಬದವರೊಂದಿಗೆ ಚರ್ಚಿಸಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ವ್ಯಾಪರ ವ್ಯವಹಾರದಲ್ಲಿ ಸಾಧಾರಣ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ವೃಶ್ಚಿಕ: ದಿನದ ಮಟ್ಟಿಗೆ ಒತ್ತಡ. ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ. ದಿನದ ಮಟ್ಟಿಗೆ ಖರ್ಚು ಹೆಚ್ಚು. ಆರೋಗ್ಯ ಸಾಧಾರಣ. ವ್ಯಾಪರ ವ್ಯವಹಾರದಲ್ಲಿ ಮಧ್ಯಮ ಫಲ. ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:

ಧನಸ್ಸು: ಆಪ್ತರ ಸಲಹೆ ಸಹಕಾರ ಸಿಗಲಿದೆ. ಆರ್ಥಿಕವಾಗಿ ಪ್ರಗತಿ. ದೀರ್ಘಕಾಲದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಪ್ರಯಾಣದ ಕುರಿತು ಆಲೋಚನೆ. ಆರೋಗ್ಯ ಉತ್ತಮ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರಿಕೆ ವಹಿಸಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:

ಮಕರ: ಆರೋಗ್ಯ ಉತ್ತಮ. ಬಾಕಿ ಇರುವ ವ್ಯವಹಾರಗಳು ಯಶಸ್ಸು ನೀಡಲಿವೆ. ದುರಸ್ತಿ ಕಾರ್ಯಗಳಿಗಾಗಿ ಖರ್ಚು ಮಾಡುವ ಸಾಧ್ಯತೆ. ವಿವಾಹ ಆಕಾಂಕ್ಷಿಗಳಿಗೆ ಸಂದೇಶ ಸಿಗಲಿದೆ. ಹಳೆಯ ಪ್ರೇಮ ಪ್ರಕರಣಗಳ ನೆನಪು ಮರಕಳಿಸುವ ಸಾಧ್ಯತೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:

ಕುಂಭ: ಆರ್ಥಿಕವಾಗಿ ಲಾಭ ಪಡೆಯುವಿರಿ. ಪರಸ್ಪರರ ಮಧ್ಯೆ ಅರ್ಥ ಮಾಡಿಕೊಳ್ಳವ ಮನಸ್ಥಿತಿ. ಕುಟುಂಬದಲ್ಲಿ ಸಾಮರಸ್ಯ ಮೂಡಲಿದೆ. ಗೌಪ್ಯ ವಿಷಯಗಳು ಯಾರೊಂದಿಗೂ ಚರ್ಚಿಸುವುದು ಸರಿಯಲ್ಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:

ಮೀನ: ಆರೋಗ್ಯ ಉತ್ತಮ. ಹಣಕಾಸು ವ್ಯವಹಾರದಲ್ಲಿ ಪ್ರಗತಿ.
ಅಪೇಕ್ಷಿತರಿಂದ ಆಮಂತ್ರಣ ಸಿಗಬಹುದು. ತಾಳ್ಮೆ ಮಿತಿ ಮೀರುವ ಸಾಧ್ಯತೆ. ಉದ್ಯೋಗಿಗಳಿಗೆ ಯಶಸ್ಸು. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

Exit mobile version