Site icon Vistara News

Horoscope Today | ಶ್ರೀ ಕೃಷ್ಣ ಜನ್ಮಾಷ್ಟಮಿಯ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೀಗಿದೆ

nava pancham yoga

nava pancham yoga

ಇಂದಿನ ಪಂಚಾಂಗ (19-08-2022)

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ

ತಿಥಿ: ಅಷ್ಟಮಿ 22:58 ವಾರ: ಶುಕ್ರವಾರ
ನಕ್ಷತ್ರ: ಕೃತ್ತಿಕಾ 25:52 ಯೋಗ: ಧ್ರುವ 20:57
ಕರಣ: ಬಾಲವ 10:04 ದಿನ ವಿಶೇಷ: ಶ್ರೀ ಕೃಷ್ಣ ಜನ್ಮಾಷ್ಟಮಿ, ಬಸವೇಶ್ವರ ಜಾತ್ರೆ

ಸೂರ್ಯೋದಯ:  06: ೧2     ಸೂರ್ಯಾಸ್ತ: 06: 54

ರಾಹು ಕಾಲ : ಪ್ರಾತಃ ಕಾಲ 10.30 ರಿಂದ 12.00
ಗುಳಿಕಕಾಲ: ಪ್ರಾತಃ ಕಾಲ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Horoscope Today)

ಮೇಷ: ಶ್ರಮದ ಜೀವಕೆ ವಿಶ್ರಾಂತಿಯು ಸಿಗುವುದು.ಈ ಹಿಂದೆ ಮಾಡಿದ ದೀರ್ಘಕಾಲದ ಹೂಡಿಕೆ ವ್ಯವಹಾರದಲ್ಲಿ ಲಾಭ. ಉದ್ಯೋಗದ ಸ್ಥಳದಲ್ಲಿ ಸಹಕಾರ ಸಿಗಲಿದೆ. ಸಭೆ-ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 6

ವೃಷಭ: ಒತ್ತಡವನ್ನು ನಿವಾರಿಸಲು ವ್ಯಸನಗಳಿಗೆ ಬಲಿಯಾಗುವುದು ಬೇಡ, ಅಧ್ಯಾತ್ಮದ ಹಾದಿ ಸಮಾಧಾನ ನೀಡುವುದು. ಕುಟುಂಬದ ಆಪ್ತರು ಸ್ನೇಹಿತರಿಂದ ಆರ್ಥಿಕ ಸಹಾಯ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಉಂಟು ಮಾಡುವ ಸಾಧ್ಯತೆ. ಆರೋಗ್ಯ ಉತ್ತಮ ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಮಿಥುನ: ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದ ಇತರರನ್ನು ಆಕರ್ಷಿಸುತ್ತೀರಿ. ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಎಂದೂ ಇರದ ಉತ್ಸಾಹ, ನೆಮ್ಮದಿ, ಸಂತೋಷ ಸಿಗುವುದು. ಆರೋಗ್ಯ ಪರಿಪೂರ್ಣ. ಬದುಕಿಗೆ ಹೊಸ ಭರವಸೆ ಮೂಡಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ಕಟಕ: ಅನೇಕ ಒತ್ತಡಗಳಿಂದ ಮುಕ್ತರಾಗುವಿರಿ. ಸಾಲದ ಮರುಪಾವತಿಯಾಗಿ ಆರ್ಥಿಕವಾಗಿ ಬಲಗೊಳ್ಳುವಿರಿ. ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಸಂಗಾತಿಯ ಮಧುರ ಮಾತುಗಳು ಕುಟುಂಬದಲ್ಲಿ ಭರವಸೆಯನ್ನು ಹೆಚ್ಚಿಸಲಿದೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕ ಶುಭ ಫಲ.
ಅದೃಷ್ಟ ಸಂಖ್ಯೆ: 6

ಸಿಂಹ: ಕುಟುಂಬದ ಆಪ್ತರಿಂದ ಸಹಾಯ ಸಹಕಾರ ಸಿಗಲಿದೆ. ವ್ಯಾಪರದಲ್ಲಿ ಪ್ರಗತಿ. ಭರವಸೆಯ ಹೊಸ ಅವಕಾಶಗಳು ಸಿಗಲಿದೆ. ನಿಮ್ಮನ್ನು ದ್ವೇಷಿಸುವ ಜನರೇ ನಿಮ್ಮ ಸ್ನೇಹಿತರಾಗಿ ಪರಿವರ್ತನೆ ಆಗುವರು. ಅಂದುಕೊಂಡ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

ಕನ್ಯಾ: ಉತ್ಸಾಹದಿಂದ ಇರುವಿರಿ. ವ್ಯಾಪಾರದಲ್ಲಿ ಪ್ರಗತಿ. ಹಣಕಾಸು ಪ್ರಗತಿ ಉತ್ತಮ. ಕುಟುಂಬದಲ್ಲಿ ಪರಸ್ಪರರ ಮಧ್ಯೆ ಸಾಮರಸ್ಯ ಮೂಡಲಿದೆ‌. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ತುಲಾ: ಅತಿಯಾದ ಒತ್ತಡದಿಂದ ಮಾನಸಿಕ ಚಿಂತೆ ಕಾಡಲಿದೆ. ಆರ್ಥಿಕ ಪ್ರಗತಿ ಸಾಧಾರಣ. ವಿನಾಕಾರಣ ಅಪರಿಚಿತರೊಂದಿಗೆ ಕಲಹವಾಗುವ ಸಾಧ್ಯತೆ. ಮಾತಿನ ಮೇಲೆ ಹಿಡಿತವಿರಲಿ. ಉದ್ಯೋಗದಲ್ಲಿ ಪ್ರಗತಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

ವೃಶ್ಚಿಕ: ಒತ್ತಡದ ಮಧ್ಯೆಯೂ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ರಹಸ್ಯ ಕಾರ್ಯಗಳು ಸಹ ಯಶಸ್ಸನ್ನು ನೀಡಲಿವೆ. ಮಾತಿನಿಂದಲೇ ಕಲಹ. ಸಂಬಂಧಿಗಳ ಮಧ್ಯೆ ಬಿರುಕು ಮೂಡುವ ಸಾಧ್ಯತೆ. ಕೌಶಲ್ಯಕ್ಕ ತಕ್ಕ ಪ್ರತಿಫಲ ಸಿಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7

ಧನಸ್ಸು: ನಿಮ್ಮ ಮಾತಿಗೆ ಬೆಲೆ ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಕಾಣುವಿರಿ. ಆಪ್ತರ ಬೆಂಬಲ ಸಿಗಲಿದೆ. ಇತರ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುವಿರಿ. ದಿನದ ಕೊನೆಯಲ್ಲಿ ಯಾರೊಂದಿಗೂ ಮಾತಿಗಿಳಿದು ಮನಸ್ಸು ಕೆಡಿಸಿಕೊಳ್ಳುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

ಮಕರ: ಹಿಂದೆ ಮಾಡಿರುವ ಧನ ಸಹಾಯ ಇಂದು ತಮಗೆ ಮರಳುವ ಸಾಧ್ಯತೆ. ಅಲ್ಪಸಮಯದ ಕೋಪ ನಿಮ್ಮ ಮನಸ್ಥಿತಿ ಹಾಳುಮಾಡುವ ಸಾಧ್ಯತೆ, ಆದ್ದರಿಂದ ಶಾಂತವಾಗಿರಿ. ಸೂಕ್ತ ವ್ಯಕ್ತಿಗಳ ಮಾರ್ಗದರ್ಶನ ಸಿಗಲಿದೆ. ಉದ್ಯೋಗದಲ್ಲಿ ಸ್ವಲ್ಪ ಮಟ್ಟಿಗೆ ಒತ್ತಡ ತರುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಕುಂಭ: ಮನೋರಂಜನೆಯಿಂದಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳ ಸಹಕಾರ ಸಿಗಲಿದೆ. ಮನೆಯಲ್ಲಿ ಹಿರಿಯರೊಂದಿಗೆ ಮಾತಿಗೆ ಮಾತು ಬೆಳೆಸಬೇಡಿ. ಮೌನವಾಗಿರುವುದು ಉತ್ತಮ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಮೀನ: ಕೆಲಸದಲ್ಲಿ ಹಿರಿಯರಿಂದ ಒತ್ತಡ ಮತ್ತು ಮನೆಯಲ್ಲಿ ಅಪಶ್ರುತಿ ನಿಮ್ಮ ಏಕಾಗ್ರತೆಗೆ ತೊಂದರೆ ತರಬಹುದು. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯ ಉತ್ತಮ. ಸಂಗಾತಿಯಿಂದ ಶುಭ ಸುದ್ದಿ ಸಿಗುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

ಇದನ್ನೂ ಓದಿ | ಬಹುತೇಕ ಶುಭಫಲಗಳನ್ನೇ ನೀಡುವ ಬುಧನ ಭಾವಫಲಗಳು ಹೀಗಿವೆ

Exit mobile version