Site icon Vistara News

Horoscope Today | ಸೂರ್ಯ ಷಷ್ಠಿಯ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೀಗಿದೆ

Horoscope Today daily horoscope

Horoscope Today

ಇಂದಿನ ಪಂಚಾಂಗ (02-09-2022)

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು, ಭಾದ್ರಪದ
ಮಾಸ, ಶುಕ್ಲ ಪಕ್ಷ
ತಿಥಿ: ಷಷ್ಠಿ 13:50 ವಾರ: ಶುಕ್ರವಾರ
ನಕ್ಷತ್ರ: ವಿಶಾಖ 23:46 ಯೋಗ: ಇಂದ್ರ 19:14
ಕರಣ: ತೈತುಲ 13:50 ದಿನ ವಿಶೇಷ: ಸೂರ್ಯ ಷಷ್ಠಿ
ಅಮೃತಕಾಲ: ಮಧ್ಯಾಹ್ನ 3 ಗಂಟೆ 6 ನಿಮಿಷದಿಂದ ಸಂಜೆ 4 ಗಂಟೆ 40 ನಿಮಿಷದವರೆಗೆ

ಸೂರ್ಯೋದಯ:  06: 15     ಸೂರ್ಯಾಸ್ತ: 06: 45

ರಾಹು ಕಾಲ : ಪ್ರಾತಃ ಕಾಲ 10.30 ರಿಂದ 12.00
ಗುಳಿಕಕಾಲ:
ಪ್ರಾತಃ ಕಾಲ 7.30 ರಿಂದ 9.00 
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Horoscope Today)

ಮೇಷ: ದಿನದ ಮಟ್ಟಿಗೆ ಒತ್ತಡ ಉಂಟುಮಾಡುವ ವಿಚಾರಗಳಿಂದ ಮಾನಸಿಕ ನೆಮ್ಮದಿ ಕಡಿಮೆ. ಆರ್ಥಿಕ ಪ್ರಗತಿ. ಉದ್ಯೋಗದಲ್ಲಿ ಕಿರಿಕಿರಿ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಲ್ಪ ವಿಜಯ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ವೃಷಭ: ಕೋಪದಿಂದ ವರ್ತಿಸಿ ವಾತಾವರಣ ಹದಗೆಡಲು ನೀವು ಕಾರಣರಾಗುವುದು ಬೇಡ. ಮನೆಯಲ್ಲಿನ ಸದಸ್ಯರು ತಮಗೆ ಅಸಹಕಾರ ನೀಡವ ಸಾಧ್ಯತೆ. ಆರೋಗ್ಯ ಮಧ್ಯಮ. ಖರ್ಚು ಹೆಚ್ಚಾದಿತು. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 6

ಮಿಥುನ: ಆಕರ್ಷಕ ವ್ಯಕ್ತಿತ್ವ ಇತರರ ಗಮನ ಸೆಳೆಯುವುದು. ಹಣಕಾಸು ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ, ಖರ್ಚು ಹೆಚ್ಚು. ಹೊಸ ಪ್ರಯತ್ನ ವಿಫಲ. ಆರೋಗ್ಯ ಉತ್ತಮ. ಉದ್ಯೋಗಿಗಳಿಗೆ ಉತ್ತಮ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಕಟಕ: ಒತ್ತಡದ ಮಧ್ಯೆಯೂ ಕಾರ್ಯದಲ್ಲಿ ಯಶಸ್ಸು ಕೀರ್ತಿ ಸಿಗುವುದು. ಹಣದ ಹರಿವು ಹೆಚ್ಚಾಗಲಿದೆ. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ. ಆರೋಗ್ಯ ಉತ್ತಮ. ಆಪ್ತರನ್ನು ಭೇಟಿ ಮಾಡುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ಸಿಂಹ: ಏಕಾಗ್ರತೆಗೆ ಭಂಗ ತರುವ ಸಾಧ್ಯತೆಗಳು ಹೆಚ್ಚು. ಆರೋಗ್ಯ ಪರಿಪೂರ್ಣ. ಮನೆಯಲ್ಲಿ ವಿನಾಕಾರಣ ಕಲಹಗಳು ನಡೆಯುವ ಸಾಧ್ಯತೆ. ತಾಳ್ಮೆಯಿಂದ ವರ್ತಿಸಿ. ಉದ್ಯೋಗದಲ್ಲಿ ಮಿಶ್ರ ಫಲ. ಹಳೆಯ ಹೂಡಿಕೆಯಿಂದ ಲಾಭ ಪಡೆಯಬಹುದು. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

ಕನ್ಯಾ: ಶ್ರಮದ ಕಾರಣ, ಆಯಾಸ, ಒತ್ತಡ ಉಂಟಾಗುವ ಸಾಧ್ಯತೆ. ದಿನದ ಮಟ್ಟಿಗೆ ವಿಶ್ರಾಂತಿ ಅತ್ಯಾವಶ್ಯಕ. ಮನೆಯಲ್ಲಿ ಮಾತಿಗೆ ಮಾತು ಬೆಳೆಸುವುದು ಬೇಡ. ಉದ್ಯೋಗಿಗಳಿಗೆ ಸ್ವಲ್ಪ ಮಟ್ಟಿಗೆ ಒತ್ತಡ ಹೆಚ್ಚಾಗಲಿದೆ. ಆರೋಗ್ಯ ಮಧ್ಯಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ತುಲಾ: ಸಕಾರಾತ್ಮಕ ಆಲೋಚನೆಗಳು ಸದಾ ಯಶಸ್ಸು ತಂದು ಕೊಡುವುದು. ಹಣಕಾಸು ಹಾಗೂ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಯಶಸ್ಸು. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ವೃಶ್ಚಿಕ: ಆಕರ್ಷಕ ವರ್ತನೆ ಇತರರ ಗಮನ ಸೆಳೆಯುವುದು. ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ. ಹಣದ ಹರಿವು ಹೆಚ್ಚಾಗಲಿದೆ. ಕುಟುಂಬದ ಸದಸ್ಯರ ವರ್ತನೆ ನಿಮಗೆ ಕೋಪ ತರಿಸಬಹುದು. ಉದ್ಯೋಗಿಗಳಿಗೆ ಶುಭ ಫಲ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಧನಸ್ಸು: ಯಾವುದಾದರೂ ಸುದ್ದಿ ನಿಮ್ಮ ಮನಸ್ಸಿಗೆ ನೋವು ತರುವ ಸಾಧ್ಯತೆ. ಕುಟುಂಬದ ಆಪ್ತರೊಂದಿಗೆ ಸಮಯ ಹಂಚಿಕೊಳ್ಳುವಿರಿ. ಆರ್ಥಿಕ ಲಾಭ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಅಪರಿಚಿತರೊಂದಿಗೆ ವಾದಕ್ಕಿಳಿಯುವುದು ಬೇಡ. ಆರೋಗ್ಯ ಉತ್ತಮ, ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

ಮಕರ: ಒತ್ತಡದ ಮಧ್ಯೆಯೂ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುವಿರಿ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಮಾನಸಿಕ ಆರೋಗ್ಯ ಹದಗೆಡುವ ಸಾಧ್ಯತೆ. ಅಪೇಕ್ಷಿತ ವಿಷಯದ ಕುರಿತು ಚರ್ಚೆ, ಕುಟುಂಬದ ಸದಸ್ಯರ ಮಧ್ಯೆ ಕಲಹ ಮೂಡುವ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

ಕುಂಭ: ಇಂದು ಜವಾಬ್ದಾರಿಗಳು ಹೆಚ್ಚಾಗಲಿವೆ. ಸಹನೆ ಮಿತಿಮೀರಿ ಕೋಪಗೊಳ್ಳುವ ಸಾಧ್ಯತೆ. ಗೌಪ್ಯ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ. ದಿನದ ಮಟ್ಟಿಗೆ ಖರ್ಚು. ಆರೋಗ್ಯದ ಕಾಳಜಿ ಅವಶ್ಯ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

ಮೀನ: ಹಳೆಯ ವ್ಯಾಧಿಯು ಉಲ್ಬಣ ಗೊಳ್ಳುವ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಪ್ರಯಾಣದಿಂದ ದಿನದ ಮಟ್ಟಿಗೆ ಖರ್ಚು. ಇಂದು ಚಿಕ್ಕ ಚಿಕ್ಕ ವಿಷಯಗಳಿಗೆ ಕಿರಿಕಿರಿಯಾಗುತ್ತದೆ. ನಿಮ್ಮ ಆಪ್ತರೊಂದಿಗೆ ಸಮಯ ಹಂಚಿಕೊಳ್ಳುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

Exit mobile version