Site icon Vistara News

Horoscope Today | ನವರಾತ್ರಿಯ ಮೂರನೇ ದಿನ ದ್ವಾದಶ ರಾಶಿಗಳ ಭವಿಷ್ಯ ಹೀಗಿದೆ

Horoscope Today

ಇಂದಿನ ಭವಿಷ್ಯ

ಇಂದಿನ ಪಂಚಾಂಗ (28-09-2022)

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು, ಆಶ್ವಯುಜ ಮಾಸ, ಶುಕ್ಲ ಪಕ್ಷ

ತಿಥಿ: ತದಿಗೆ 25:27 ವಾರ: ಬುಧವಾರ
ನಕ್ಷತ್ರ: ಸ್ವಾತಿ 29:51 ಯೋಗ: ವೈಧೃತಿ 27:05
ಕರಣ: ತೈತುಲ 13:59 ದಿನ ವಿಶೇಷ: ಗಜಗೌರೀ ವ್ರತ, ನವರಾತ್ರಿಯ ತೃತೀಯಾ ದಿನ. ಚಂದ್ರಘಂಟಾ ಅವತಾರ. ವರ್ಣ: ನೀಲಿ
ಅಮೃತಕಾಲ: ರಾತ್ರಿ 09 ಗಂಟೆ 12 ನಿಮಿಷದಿಂದ 10 ಗಂಟೆ 47 ನಿಮಿಷದವರೆಗೆ.

ಸೂರ್ಯೋದಯ: 06: 20     ಸೂರ್ಯಾಸ್ತ: 06: 20

ರಾಹುಕಾಲ : ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ: ಬೆಳಗ್ಗೆ 10.30 ರಿಂದ 12.00
ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00

ದ್ವಾದಶ ರಾಶಿ ಭವಿಷ್ಯ (Horoscope Today)

ಮೇಷ: ಭರವಸೆಯ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ. ಹಣಗಳಿಸುವ ವಿವಿಧ ಮಾರ್ಗಗಳು ಗೋಚರಿಸಲಿವೆ. ಅನಗತ್ಯವಾಗಿ ಇತರರ ಬಗ್ಗೆ ಮನೆಯಲ್ಲಿ ಚರ್ಚಿಸುವುದು ಬೇಡ, ಇದರಿಂದ ಮನೆಯ ವಾತಾವರಣ ಕೆಡುವ ಸಾಧ್ಯತೆ. ಉದ್ಯೋಗ ಹಾಗೂ ಆರೋಗ್ಯದಲ್ಲಿ ಸಾಧಾರಣ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9

ವೃಷಭ: ಗತಿಸಿದ ಘಟನೆಗಳ ಬಗ್ಗೆ ಚಿಂತಿಸಿ, ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಸಾಧ್ಯವಾದಷ್ಟು ತಾಳ್ಮೆಯಿಂದ ಇರಿ. ಭೂಮಿ, ಆಸ್ತಿ ಖರೀದಿ ವ್ಯವಹಾರದಲ್ಲಿ ದಿನದ ಮಟ್ಟಿಗೆ ತೊಡಗುವುದು ಬೇಡ. ಖರ್ಚು ಹೆಚ್ಚಾಗಲಿದೆ. ಆರೋಗ್ಯ ಹಾಗೂ ಉದ್ಯೋಗದಲ್ಲಿ ಸಾಧಾರಣ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

ಮಿಥುನ: ಅನಿವಾರ್ಯವಾಗಿ ಖರ್ಚು. ಪ್ರಯಾಣ ಮಾಡುವ ಸಾಧ್ಯತೆ. ಕುಟುಂಬದಲ್ಲಿ ಯಾವುದೋ ವಿಷಯಕ್ಕೆ ಪರಸ್ಪರರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ. ತಾಳ್ಮೆಯಿಂದ ವರ್ತಿಸಿ. ಅರ್ಹ ನೌಕರರಿಗೆ ಇಂದು ಉದ್ಯೋಗದಲ್ಲಿ ಬಡ್ತಿ ಹೊಂದುವ ಅವಕಾಶ ಕೂಡಿಬರಲಿದೆ. ಆರೋಗ್ಯ ಉತ್ತಮ, ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 6

ಕಟಕ: ಹಳೆಯ ವಿಚಾರಗಳನ್ನು ಕೆದಕಿ ಮನಸ್ಸಿಗೆ ಘಾಸಿ ಮಾಡಿಕೊಳ್ಳುವುದು ಬೇಡ. ಮನರಂಜನೆಗಾಗಿ ಖರ್ಚು ಮಾಡುವ ಸಾಧ್ಯತೆ. ಸಭೆ ಸಮಾರಂಭದ ಆಮಂತ್ರಣ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗ ಹಾಗೂ ಕೌಟುಂಬಿಕ ಶುಭ ಫಲ.
ಅದೃಷ್ಟ ಸಂಖ್ಯೆ:

ಸಿಂಹ: ಇತರರಿಂದ ಪ್ರಶಂಸೆ ವ್ಯಕ್ತವಾಗಲಿದೆ. ಬಾಕಿ ಇರುವ ಸಾಲ ಮರುಪಾವತಿ ಆಗಲಿದೆ. ಆರ್ಥಿಕವಾಗಿ ಲಾಭ. ಹೊಸ ಹೂಡಿಕೆ ವ್ಯವಹಾರಗಳು ಗರಿಗೆದರಲಿವೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ಕನ್ಯಾ: ಹಳೆಯ ವಿಚಾರಗಳು ನಿಮ್ಮನ್ನು ಮಾನಸಿಕ ಕುಂದಿಸುವ ಸಾಧ್ಯತೆ. ಅನಗತ್ಯವಾಗಿ ಯಾವುದೇ ವಿಷಯದ ಕುರಿತು ಯೋಚನೆಗಳು ಬೇಡ. ಆರೋಗ್ಯದಲ್ಲಿ ವ್ಯತ್ಯಾಸ. ಹಣಕಾಸು ವ್ಯವಹಾರ ಉತ್ತಮ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ತುಲಾ: ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ಸಮಯದ ಅಭಾವ. ವ್ಯಪಾರ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿವೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ. ಆರೋಗ್ಯ ಸಾಧಾರಣ. ಉದ್ಯೋಗಿಗಳಿಗೆ ಒತ್ತಡ, ತಾಳ್ಮೆ ಅತ್ಯವಶ್ಯ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ವೃಶ್ಚಿಕ: ನಕಾರಾತ್ಮಕ ಆಲೋಚನೆಗಳು ಬರದಂತೆ ಸೃಜನಾತ್ಮಕ ಕಾರ್ಯಗಳಲ್ಲಿ ತೊಡಗಿ. ಕುಲ ದೇವತಾ ದರ್ಶನ, ಅಧ್ಯಾತ್ಮ ಗುರುಗಳ ಮಾರ್ಗದರ್ಶನ ಪಡೆಯಿರಿ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಅತಿಥಿಗಳ ಆಗಮನದಿಂದ ಸಂತಸ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2

ಧನಸ್ಸು: ಸಾಮಾಜಿಕ ಜವಾಬ್ದಾರಿಗಳು ಹೆಚ್ಚಾಗಲಿವೆ. ಅದರ ಮಧ್ಯೆಯೂ ಆರೋಗ್ಯದ ಕುರಿತು ಕಾಳಜಿ ವಹಿಸಿ. ಸೌಂದರ್ಯ ಪ್ರಜ್ಞೆ ಮೂಡಲಿದೆ. ಭವಿಷ್ಯದ ಹೂಡಿಕೆಗಗಳ ಬಗ್ಗೆ ಆಲೋಚನೆ. ಉದ್ಯೋಗಿಗಳಿಗೆ ಯಶಸ್ಸು. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ಮಕರ: ಭಾವೋದ್ವೇಗದ ದಿನ. ಆತುರದಲ್ಲಿ ತೆಗೆದುಕೊಂಡ ನಿರ್ಧಾರ ಅಪಾಯ ತರಬಹುದು. ಕುಟುಂಬದಲ್ಲಿ ಪರಸ್ಪರರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ. ತಂದೆ-ತಾಯಿಯರ ಆರೋಗ್ಯದಲ್ಲಿ ವ್ಯತ್ಯಾಸ. ದಿನದ ಮಟ್ಟಿಗೆ ಖರ್ಚು. ಮಾತಿನಲ್ಲಿ ಹಿಡಿತವಿರಲಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

ಕುಂಭ: ಆರೋಗ್ಯ ಉತ್ತಮ. ಆರ್ಥಿಕ ಹೂಡಿಕೆ ವ್ಯವಹಾರದಲ್ಲಿ ಪ್ರಗತಿ, ಲಾಭ. ವೃತ್ತಿಪರರಿಗೆ ಶುಭ ಫಲ. ಕಾರ್ಯದ ಒತ್ತಡದಿಂದ ಕುಟುಂಬದವರೊಂದಿಗೆ ಕಾಲ ಕಳೆಯಲು ಸಮಯದ ಅಭಾವ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

ಮೀನ: ಮಾನಸಿಕ ಆರೋಗ್ಯ ಹದಗೆಡಲಿದೆ. ತಾಳ್ಮೆಯಿಂದ ಇರಿ. ಯಾರ ಪರವೂ ವಹಿಸಿ ಮಾತನಾಡುವುದು ಬೇಡ, ಇದು ನಿಮಗೆ ಅಪಾಯ ತರುವುದು. ಹಣಕಾಸು ಪ್ರಗತಿ ಸಾಧಾರಣ. ಸಂಗಾತಿಯ ವರ್ತನೆ ಮುಜುಗರ ಉಂಟು ಮಾಡುತ್ತದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

ಇದನ್ನೂ ಓದಿ | Navaratri 2022 | ಎರಡನೇ ದಿನ ಆರಾಧಿಸಲ್ಪಡುವ ದೇವಿ ಯಾರು? ಯಾವ ವರ್ಣದ ವಸ್ತ್ರ ಶ್ರೇಷ್ಠ?

Exit mobile version