Site icon Vistara News

Horoscope Today | ಮಿಥುನ ರಾಶಿಯವರಿಗೆ ಇಂದು ಉತ್ಸಾಹದ ದಿನ; ನಿಮ್ಮ ರಾಶಿ ಭವಿಷ್ಯ ಹೇಗಿದೆ?

rashi bhavishya today in kannada

Horoscope Today

ಇಂದಿನ ಪಂಚಾಂಗ (31-10-2022)

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ.

ತಿಥಿ: ಸಪ್ತಮಿ 25:11 ವಾರ: ಸೋಮವಾರ
ನಕ್ಷತ್ರ: ಉತ್ತರಾಷಾಢ 28:14 ಯೋಗ: ಧೃತಿ 16:10
ಕರಣ: ಗರಜ 14:18 ದಿನ ವಿಶೇಷ: ಯಾಜ್ಞವಲ್ಕ್ಯ ಜಯಂತಿ, ಕಾರ್ತಿಕ ಸೋಮವಾರ, ಮಹಾಸಪ್ತಮಿ.
ಅಮೃತಕಾಲ: ರಾತ್ರಿ 10 ಗಂಟೆ 16 ನಿಮಿಷದಿಂದ 11 ಗಂಟೆ 46 ನಿಮಿಷದವರೆಗೆ.

ಸೂರ್ಯೋದಯ: 06: 13     ಸೂರ್ಯಾಸ್ತ: 05 :53

ರಾಹುಕಾಲ : ಬೆಳಗ್ಗೆ 7.30 ರಿಂದ 9.00
ಗುಳಿಕಕಾಲ: ಮಧ್ಯಾಹ್ನ 1.30 ರಿಂದ 3.00
ಯಮಗಂಡಕಾಲ: ಬೆಳಗ್ಗೆ 10.30 ರಿಂದ 12.00

ದ್ವಾದಶ ರಾಶಿ ಭವಿಷ್ಯ  (Horoscope Today)

ಮೇಷ: ನಿಮ್ಮ ಜೀವನದಲ್ಲಿ ಇತರರು ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ವಹಿಸಿ. ಅನೇಕ ವಿಚಾರಗಳು ಮಾನಸಿಕ ಒತ್ತಡ ತರುವ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಹಣಕಾಸು ವ್ಯವಹಾರದಲ್ಲಿ ಸಾಧರಣ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

ವೃಷಭ: ಬಹಳ ದಿನಗಳ ಕನಸು, ಭೂ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು. ಇಂದು ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ, ಪ್ರೋತ್ಸಾಹ ಸಿಗಲಿದೆ. ಆರೋಗ್ಯದ ಬಗೆಗೆ ಕಾಳಜಿ ಇರಲಿ. ಕುಟುಂಬದಲ್ಲಿ ವಿನಾಕಾರಣ ಕಲಹಗಳು ನಡೆಯದಂತೆ ಎಚ್ಚರಿಕೆ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:

ಮಿಥುನ: ಅತ್ಯಂತ ಉತ್ಸಾಹದ ದಿನವಿಂದು. ಆತುರದಲ್ಲಿ ಹಣ ಹೂಡಿಕೆ ಮಾಡುವುದು ಬೇಡ. ಆರೋಗ್ಯದಲ್ಲಿ ಉತ್ತಮ. ಮಕ್ಕಳ ಕುರಿತಾಗಿ ಚಿಂತಿಸಿ ಉತ್ಸಾಹ ಕಳೆದುಕೊಳ್ಳುವುದು ಬೇಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಕಟಕ: ಅನಾವಶ್ಯಕ ಒತ್ತಡ ತೆಗೆದುಕೊಳ್ಳುವುದು ಬೇಡ. ಮನೆಯಲ್ಲಿನ ಕಲಹಗಳಿಗೆ ನೀವು ಧ್ವನಿಯಾಗುವುದು ಬೇಡ. ಪ್ರತಿಭೆಗೆ ತಕ್ಕ ಪ್ರೋತ್ಸಾಹ ಸಿಗುವುದು. ಆರ್ಥಿಕ ಪ್ರಗತಿ ಸಾಧಾರಣ. ಸಂಗಾತಿಯ ಬೆಂಬಲ ಸಿಗಲಿದೆ.
ಅದೃಷ್ಟ ಸಂಖ್ಯೆ: 8

ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಆಗುವ ಸಾಧ್ಯತೆ, ಎಚ್ಚರವಹಿಸಿ. ಹಿರಿಯರ ಮಾರ್ಗದರ್ಶನ ಪಡೆಯಿರಿ. ಅತಿಯಾದ ಆತ್ಮವಿಶ್ವಾಸದಿಂದ ಕೆಲಸದಲ್ಲಿ ದುಡುಕುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

ಕನ್ಯಾ: ವ್ಯಾಪಾರ ವ್ಯವಹಾರಗಳಲ್ಲಿ ಕಾರ್ಯ ಸಿದ್ಧಿ. ಪ್ರಯಾಣದಿಂದ ಇಂದು ನಿಮಗೆಲಾಭವಾಗಲಿದೆ. ತಾಳ್ಮೆಯಿಂದ ಕಾಯ್ದು ಕೊಂಡಿರುವ ಕೆಲಸವು ಫಲ ನೀಡುವುದು. ಆರೋಗ್ಯದಲ್ಲಿ ಉತ್ತಮ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

ತುಲಾ: ಎಲ್ಲ ಕೆಲಸಗಳಿಗೆ ಪ್ರಶಂಸೆ, ಪ್ರೋತ್ಸಾಹ ದೊರೆಯುವುದು. ನಿಮ್ಮ ಸಭ್ಯ ನಡವಳಿಕೆ ಮೆಚ್ಚುಗೆ ಪಡೆಯುತ್ತದೆ. ಆರ್ಥಿಕ ಸಮಸ್ಯೆಗಳು ಪರಿಹಾರ ಆಗುವವು. ಆದರೂ ಯಾವುದಾದರೂ ಒಂದು ಕೊರತೆ ಕಾಡುವುದು. ಆಧ್ಯಾತ್ಮದ ಹಾದಿಯಲ್ಲಿ ಹೆಜ್ಜೆ ಹಾಕಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7

ವೃಶ್ಚಿಕ: ಅತಿಯಾದ ಮಾನಸಿಕ ಒತ್ತಡ ನಿಮ್ಮನ್ನು ಜರ್ಜರಿತರನ್ನಾಗಿ ಮಾಡಬಹುದು, ಅದರಿಂದ ಹೊರ ಬನ್ನಿ. ಮನೆಯಲ್ಲಿ ಮಾತಿಗೆ ಮಾತು ಬೆಳೆದು ಕಲಹವಾಗುವ ಸಾಧ್ಯತೆ. ಮೌನದಿಂದ ಕಾರ್ಯ ಸಾಧಿಸಿ. ಉದ್ಯೋಗದಲ್ಲಿ ಯಶಸ್ಸು. ಆರೋಗ್ಯ ಉತ್ತಮ.
ಅದೃಷ್ಟ ಸಂಖ್ಯೆ: 9

ಧನಸ್ಸು: ದೀರ್ಘ ಕಾಲದ ಅನಾರೋಗ್ಯ ನಿಮ್ಮನ್ನು ಹಿಂಸೆಗೆ ಗುರಿ ಮಾಡಬಹುದು. ಆತ್ಮ ವಿಶ್ವಾಸದಿಂದ ಕಾರ್ಯ ಸಾಧನೆ ಮಾಡಿ ಶುಭವಾಗುವುದು. ಅರ್ಥಿಕವಾಗಿ ಶುಭ ಫಲ. ಉದ್ಯೋಗದಲ್ಲಿ ಯಶಸ್ಸು. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

ಮಕರ: ಅತಿಯಾದ ಭರವಸೆಯಿಂದ ಯಾವುದೇ ಕೆಲಸದಲ್ಲಿ ದುಡುಕುವುದು ಬೇಡ. ಆರ್ಥಿಕ ಪ್ರಗತಿ ಉತ್ತಮ. ನಿಮ್ಮ ಪ್ರತಿ ಸ್ಪರ್ಧಿಗಳು ಕೆಟ್ಟದನ್ನು ಮಾಡಬಹುದು. ಈ ಬಗ್ಗೆ ಎಚ್ಚರಿಕೆಯಿಂದಿರಿ. ಆರೋಗ್ಯವು ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

ಕುಂಭ: ಭೂ ವ್ಯವಹಾರದಲ್ಲಿ ಅನುಕೂಲತೆ. ಸಂಬಂಧಿಕರು ಮತ್ತು ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳು ದೊರೆಯುವವು. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗದಲ್ಲಿ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

ಮೀನ: ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ. ನಿಮ್ಮ ಆರೋಗ್ಯ ಉತ್ತಮ. ಆರ್ಥಿಕ ಪ್ರಗತಿ ಸಾಧಾರಣ. ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ದೊರೆಯುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

ಇದನ್ನೂ ಓದಿ | ಬಹುತೇಕ ಶುಭಫಲಗಳನ್ನೇ ನೀಡುವ ಬುಧನ ಭಾವಫಲಗಳು ಹೀಗಿವೆ

Exit mobile version