Site icon Vistara News

Horoscope Today | ಉತ್ಥಾನದ್ವಾದಶಿಯ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡಿ

horoscope today

horoscope

ಇಂದಿನ ಪಂಚಾಂಗ (05-11-2022)

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ.

ತಿಥಿ: ದ್ವಾದಶಿ 17:06 ವಾರ: ಶನಿವಾರ
ನಕ್ಷತ್ರ: ಉತ್ತರಭಾದ್ರ 23:55 ಯೋಗ: ಹರ್ಷಣ 25:21
ಕರಣ: ಬಾಲವ 17:06 ಇಂದಿನ ವಿಶೇಷ: ಉತ್ಥಾನದ್ವಾದಶಿ, ತುಳಸಿ ಹಬ್ಬ, ಶನಿ ಪ್ರದೋಷ.
ಅಮೃತಕಾಲ: ಸಂಜೆ 07 ಗಂಟೆ 12 ನಿಮಿಷದಿಂದ 08 ಗಂಟೆ 47 ನಿಮಿಷದವರೆಗೆ.

ಸೂರ್ಯೋದಯ: 06: 14    ಸೂರ್ಯಾಸ್ತ: 05 : 52

ರಾಹುಕಾಲ : ಬೆಳಗ್ಗೆ 9.00 ರಿಂದ 10.30
ಗುಳಿಕಕಾಲ: ಬೆಳಗ್ಗೆ 6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00

ದ್ವಾದಶ ರಾಶಿ ಭವಿಷ್ಯ  (Horoscope Today)

ಮೇಷ: ದೈಹಿಕ ಶ್ರಮ ಹೆಚ್ಚಲಿದೆ. ಸಂಶಯಾಸ್ಪದವಾದ ಹಣಕಾಸು ವ್ಯವಹಾರದಲ್ಲಿ ತೊಡಗುವುದು ಬೇಡ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ. ಆಪ್ತರಿಂದ ಸಿಹಿ ಸುದ್ದಿ. ದಿನದ ಮಟ್ಟಿಗೆ ಖರ್ಚು. ಸಂಗಾತಿಯ ಮಧುರ ಮಾತುಗಳು ಹಿತವೇನಿಸುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ವೃಷಭ: ಕುಟುಂಬದ ಆಪ್ತರಿಂದ ಆರ್ಥಿಕ ಸಹಾಯದ ಬೇಡಿಕೆ. ಮಾನಸಿಕ ಒತ್ತಡ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಮನೋಬಲ ಹೆಚ್ಚಿಸಿಕೊಳ್ಳುವುದು ಅವಶ್ಯಕ. ಅಧೈರ್ಯ ಕಾಡಬಹುದು. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುವುದು. ಆರೋಗ್ಯ ಮಧ್ಯಮ. ಉದ್ಯೋಗಿಗಳಿಗೆ ಕಿರಿಕಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ಮಿಥುನ: ಸದಾ ಹಗಲು ಕನಸುಗಳನ್ನು ಕಾಣುವುದರಿಂದ ಕಾಲಹರಣ. ಬೇರೆಯವರಿಗೆ ಆರ್ಥಿಕವಾಗಿ ಸಹಾಯ ಮಾಡಿ ನೀವು ಹಣಕಾಸಿನ ಸಮಸ್ಯೆಯಲ್ಲಿ ಸಿಲುಕುವುದು ಬೇಡ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ಕಟಕ: ಕುಟುಂಬದ ಸದಸ್ಯರಿಂದ ಆರ್ಥಿಕ ಬೆಂಬಲ ದೊರೆಯಲಿದೆ. ಉದ್ಯೋಗಿಗಳಿಗೆ ಶುಭ ಫಲ. ಹಣದ ಹರಿವು ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಪ್ರಗತಿ. ಆರೋಗ್ಯ ಪರಿಪೂರ್ಣ. ಆಪ್ತ ವ್ಯಕ್ತಿಗಳೊಂದಿಗೆ ಮಾತುಕತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಸಿಂಹ: ಕೆಲವು ಘಟನೆಗಳು ಮನಸ್ಸಿನ ಮೇಲೆ ಪರಿಣಾಮ ಬೀರುವವು. ಆರೋಗ್ಯ ಪರಿಪೂರ್ಣ. ಸಹೋದ್ಯೋಗಿಗಳಿಂದ ಬೆಂಬಲ ದೊರೆಯಲಿದೆ. ಕ್ಷೇತ್ರ ದರ್ಶನ, ಆಧ್ಯಾತ್ಮಿಕ ಗುರುಗಳ ಮಾರ್ಗದರ್ಶನ ಸಿಗಲಿದೆ. ಉದ್ಯೋಗಿಗಳಿಗೆ ಕಿರಿಕಿರಿಯಾಗುವ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3

ಕನ್ಯಾ: ದೀರ್ಘಕಾಲದ ಕೆಲಸ ಕಾರ್ಯಗಳು ಇಂದು ಯಶಸ್ಸನ್ನು ತಂದು ಕೊಡಲಿವೆ. ಆದಾಯದ ಮೂಲ ಹೆಚ್ಚಾಗಲಿದೆ. ಆಪ್ತರೊಂದಿಗೆ ಮಾತುಕತೆ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ, ಕುಟುಂಬದ ವಾತಾವರಣ ಹದಗೆಡುವ ಸಾಧ್ಯತೆ. ಉದ್ಯೋಗಿಗಳಿಗೆ ಕಿರಿಕಿರಿ. ಉತ್ತಮ ಆರೋಗ್ಯ.
ಅದೃಷ್ಟ ಸಂಖ್ಯೆ: 1

ತುಲಾ: ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಸ್ನೇಹಿತರೊಂದಿಗೆ ಸಮಯ ಹಂಚಿಕೊಳ್ಳುವಿರಿ. ಹಣಕಾಸು, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಪ್ರಗತಿ. ಈ ಹಿಂದೆ ನಿಮ್ಮನ್ನು ದ್ವೇಷಿಸುತ್ತಿದ್ದ ಜನರು ನಿಮ್ಮೊಂದಿಗೆ ಪ್ರೀತಿಯಿಂದ ವರ್ತಿಸುವ ಸಾಧ್ಯತೆ. ಉದ್ಯೋಗಿಗಳಿಗೆ ಶುಭ ಕಾಲ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ವೃಶ್ಚಿಕ: ಆರೋಗ್ಯದ ಕುರಿತು ಕಾಳಜಿ ಇರಲಿ. ನ್ಯಾಯಾಲಯದಲ್ಲಿರುವ ವ್ಯಾಜ್ಯಗಳು ವಿಜಯವನ್ನು ತಂದುಕೊಡುವ ಸಾಧ್ಯತೆ. ಹಣಕಾಸು, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಉದ್ಯೋಗಿಗಳಿಗೆ ಯಶಸ್ಸು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಧನಸ್ಸು: ಮಾನಸಿಕ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ಹಾದಿ ಅತ್ಯವಶ್ಯಕ. ಹಣಕಾಸು ವಿಷಯದಲ್ಲಿ ಪ್ರಗತಿ. ಉದ್ಯೋಗಿಗಳಿಗೆ ಮಿಶ್ರ ಫಲ. ಕೆಲಸ ಕಾರ್ಯಗಳಲ್ಲಿ ಯಶಸ್ಸು. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಮಕರ: ಬುದ್ಧಿವಂತಿಕೆಯಿಂದ ಕೆಲಸಕಾರ್ಯಗಳಲ್ಲಿ ಯಶಸ್ಸು ಕೀರ್ತಿ ಸಿಗುವುದು. ಶೀಘ್ರಕೋಪ ಅಪಾಯ ತರುವುದು. ಆರೋಗ್ಯ ಪರಿಪೂರ್ಣ. ಆರ್ಥಿಕ ಲಾಭ. ಹೊಸ ಸ್ನೇಹಿತರ ಪರಿಚಯವಾಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2

ಕುಂಭ: ದುಂದುವೆಚ್ಚವನ್ನು ತಪ್ಪಿಸಿ. ಬುದ್ಧಿವಂತಿಕೆಯಿಂದ ಕೆಲಸ ಮಾಡಿ ವ್ಯರ್ಥ ಪ್ರಯತ್ನ ಮಾಡುವುದು ಬೇಡ. ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ. ಆರ್ಥಿಕ ಪ್ರಗತಿ ಸಾಧಾರಣ. ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಮೀನ: ಮನರಂಜನೆಗಾಗಿ ಸಮಯ ಕಳೆಯುವ ಸಾಧ್ಯತೆ. ಆರೋಗ್ಯ ಮಧ್ಯಮ. ಆರ್ಥಿಕವಾಗಿ ಪ್ರಗತಿ. ಸಂಗಾತಿ ಇಂದು ನಿಮ್ಮೊಂದಿಗೆ ಮುಖ್ಯ ವಿಷಯದ ಕುರಿತು ಚರ್ಚಿಸಬಹುದು. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

ಇದನ್ನೂ ಓದಿ | Chandra Grahan 2022 | ಚಂದ್ರ ಗ್ರಹಣ ಎಷ್ಟು ಹೊತ್ತಿಗೆ ಸಂಭವಿಸಲಿದೆ? ಆಹಾರ ಸೇವನೆ ಯಾವಾಗ?

Exit mobile version