Site icon Vistara News

Horoscope Today | ಸುಬ್ರಹ್ಮಣ್ಯ ಷಷ್ಠಿಯ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೋಣ

rashi bhavishya today in kannada

Horoscope Today

ಇಂದಿನ ಪಂಚಾಂಗ (29-11-2022)

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ.

ತಿಥಿ: ಷಷ್ಠಿ 11:03 ವಾರ: ಮಂಗಳವಾರ
ನಕ್ಷತ್ರ: ಶ್ರವಣ 08:37 ಯೋಗ: ಧ್ರುವ 14:51
ಕರಣ: ತೈತುಲ 11:03 ಇಂದಿನ ವಿಶೇಷ : ಸುಬ್ರಹ್ಮಣ್ಯ ಷಷ್ಠಿ.
ಅಮೃತಕಾಲ: ಬೆಳಗ್ಗೆ 09 ಗಂಟೆ 25 ನಿಮಿಷದಿಂದ 10 ಗಂಟೆ 55 ನಿಮಿಷದವರೆಗೆ.

ಸೂರ್ಯೋದಯ: 06: 25    ಸೂರ್ಯಾಸ್ತ: 05 : 51

ರಾಹುಕಾಲ : ಸಾಯಂಕಾಲ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ  (Horoscope Today)

ಮೇಷ: ನಿಮ್ಮ ಹಾಸ್ಯದ ಮನೋಭಾವ ಇತರರನ್ನು ಆಕರ್ಷಿಸುವುದು. ಹಣಕಾಸು ಪ್ರಗತಿ ಉತ್ತಮ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು. ಅಧ್ಯಾತ್ಮ ವ್ಯಕ್ತಿಗಳ ಮಾರ್ಗದರ್ಶನ ದೊರೆಯಲಿದೆ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

ವೃಷಭ: ವ್ಯವಹಾರದಲ್ಲಿ ಸಂಗಾತಿಯ ಹಸ್ತಕ್ಷೇಪ ನಿಮಗೆ ಕೋಪ ತರಿಸಬಹುದು, ತಾಳ್ಮೆಯಿಂದ ವರ್ತಿಸಿ. ಈ ಹಿಂದೆ ಕಾಡಿದ ವ್ಯಾಧಿ ಮರುಕಳಿಸುವ ಸಾಧ್ಯತೆ. ದಿನದ ಮಟ್ಟಿಗೆ ಖರ್ಚು ಹೆಚ್ಚು. ಏತನ್ಮಧ್ಯೆ ಅತಿಥಿಗಳ ಆಗಮನ ಹರ್ಷ ತರುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಮಿಥುನ: ಘಟಿಸಿ ಹೋದ ಘಟನೆಗಳನ್ನು ಮೆಲುಕು ಹಾಕುತ್ತಾ ಕಾಲಹರಣ ಮಾಡುವ ಬದಲು, ಮುಂದೆ ಆಗಬೇಕಿರುವ ಕೆಲಸಗಳ ಬಗ್ಗೆ ಕಾರ್ಯ ಪ್ರವೃತ್ತರಾಗಿ. ದಿನದ ಮಟ್ಟಿಗೆ ಅನಿವಾರ್ಯ ಕಾರಣಗಳಿಂದ ಖರ್ಚು. ಅನೇಕ ವಿಚಾರಗಳಿಂದ ಒತ್ತಡಕ್ಕೆ ಒಳಾಗಾಗುವ ಸಾಧ್ಯತೆ. ಕೋಪದಿಂದ ಏನನ್ನು ಸಾಧಿಸಲಾಗದು. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

ಕಟಕ: ಹಣದ ಹರಿವು ಹೆಚ್ಚಾಗಲಿದೆ. ಮಾನಸಿಕ ನೆಮ್ಮದಿ ಸಿಗುವುದು. ಹೊಸ ಭರವಸೆಯ ಅವಕಾಶಗಳು ಹುಡುಕಿಕೊಂಡು ಬರುವವು. ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಫಲ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಸಿಂಹ: ಕುಟುಂಬದ ಆಪ್ತರ ಹಾಗೂ ಸ್ನೇಹಿತರ ಸೂಕ್ತ ಸಲಹೆ ಸಹಕಾರ ಸಿಗುವುದು. ಒತ್ತಡದ ಜೀವನಕ್ಕೆ ಕೊಂಚ ಮಟ್ಟಿಗೆ ವಿಶ್ರಾಂತಿ ಸಿಗಲಿದೆ. ಹಣಕಾಸು ಪ್ರಗತಿ ಉತ್ತಮವಾಗಿರಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ, ಅಗತ್ಯವಿದ್ದಷ್ಟೆ ಮಾತನಾಡಿ. ಸಮಾಧಾನದಿಂದ ವರ್ತಿಸಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಕನ್ಯಾ: ಅನೇಕ ವಿಷಯಗಳು ನಿಮಗೆ ಒತ್ತಡ ಉಂಟುಮಾಡುವ ಸಾಧ್ಯತೆ. ಖರ್ಚು ಹೆಚ್ಚಾಗುವ ಸಾಧ್ಯತೆ. ನಿಮ್ಮ ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ. ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕುಟುಂಬದ ಅಸಹಕಾರದಿಂದ ಕಿರಿಕಿರಿಯಾಗಬಹುದು. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

ತುಲಾ: ಆಪ್ತ ಸಂಬಂಧಿಕರಿಂದ ಸಹಾಯ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿಯಾಗಲಿದೆ. ಹಣಕಾಸು ಪ್ರಗತಿ. ಹಳೆಯ ವಿಚಾರಗಳು ನಿಮ್ಮ ಮನಸ್ಸಿಗೆ ಘಾಸಿ ಮಾಡುವ ಸಾಧ್ಯತೆ, ಎಚ್ಚರಿಕೆ ಇರಲಿ. ಉತ್ತಮ ಆರೋಗ್ಯ, ಉದ್ಯೋಗದಲ್ಲಿ ಸಾಧಾರಣ. ಕುಟುಂಬದ ಸಹಕಾರ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ವೃಶ್ಚಿಕ: ವಾಹನ ಚಾಲನೆ ಮಾಡುವಾಗ ಆದಷ್ಟು ಎಚ್ಚರಿಕೆ ವಹಿಸಿ. ಆಪ್ತರ ಸಲಹೆಗಳನ್ನು ತಿರಸ್ಕಾರ ಭಾವದಿಂದ ನೋಡಬೇಡಿ, ವ್ಯತಿರಿಕ್ತವಾದ ಪರಿಣಾಮದಿಂದಾಗಿ ಸ್ನೇಹದಲ್ಲಿ ಬಿರುಕು ಮೂಡುವ ಸಾಧ್ಯತೆ. ಅನಗತ್ಯ ಖರ್ಚು. ಆರೋಗ್ಯ ಸಾಧಾರಣ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

ಧನಸ್ಸು: ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಆತುರದ ಭರದಲ್ಲಿ ಅತಿರೇಕದ ಮಾತುಗಳು ಜಗಳ ತರಬಹುದು, ಸಮಾಧಾನದಿಂದ ವರ್ತಿಸಿ. ಅಮೂಲ್ಯ ವಸ್ತುಗಳು ಕೈತಪ್ಪುವ ಸಾಧ್ಯತೆ, ಎಚ್ಚರಿಕೆ ಇರಲಿ. ಕುಟುಂಬ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡದಂತೆ ವರ್ತಿಸಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

ಮಕರ: ಆರೋಗ್ಯ ಉತ್ತಮವಾಗಿರಲಿದೆ. ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳವಾಗುವ ಭರವಸೆ ಇದೆ. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುಲು ಪ್ರಯತ್ನಿಸುವಿರಿ. ಶುಭ ಸಮಾರಂಭದ ಆಮಂತ್ರಣ ಬರುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಕುಂಭ: ಆಹಾರದ ಕ್ರಮ ಆರೋಗ್ಯದಲ್ಲಿ ವ್ಯತ್ಯಾಸ ಮೂಡಿಸಬಹುದು. ಅಮೂಲ್ಯ ವಸ್ತುಗಳ ಬಗೆಗೆ ಕಾಳಜಿ ವಹಿಸಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

ಮೀನ: ಹಾಸ್ಯ ಪ್ರಜ್ಞೆಯಿಂದ ಕಾರ್ಯವನ್ನು ಸಾಧಿಸುವುದರಲ್ಲಿ ಯಶಸ್ಸು ಪಡೆಯುವಿರಿ. ಸಂಗಾತಿಯ ಹಸ್ತಕ್ಷೇಪ ನಿಮಗೆ ಮುಜುಗರ ಉಂಟು ಮಾಡುವ ಸಾಧ್ಯತೆ. ಉದ್ಯೋಗದಲ್ಲಿ ಭರವಸೆ ಮೂಡಲಿದೆ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

ಇದನ್ನೂ ಓದಿ | ಭಾವಾಶ್ರಿತ ಗ್ರಹಫಲ | ಸೂರ್ಯನು ದಶಮ ಭಾವದಲ್ಲಿದ್ದರೆ ಬಲಿಷ್ಠ

Exit mobile version