Site icon Vistara News

Horoscope Today | ಕಟಕ ರಾಶಿಯವರ ಅದೃಷ್ಟ ಸಂಖ್ಯೆ 1; ನಿಮ್ಮ ಅದೃಷ್ಟ ಸಂಖ್ಯೆ ಎಷ್ಟು?

horoscope today

Horoscope Today

ಇಂದಿನ ಪಂಚಾಂಗ (02-12-2022)

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ.

ತಿಥಿ: ದಶಮಿ 29:38 ವಾರ: ಶುಕ್ರವಾರ
ನಕ್ಷತ್ರ: ಉತ್ತರಭಾದ್ರಪದ 29:44 ಯೋಗ: ವಜ್ರ 07:28
ಕರಣ: ತೈತುಲ 17:52
ಅಮೃತಕಾಲ: ಮಧ್ಯರಾತ್ರಿ 12 ಗಂಟೆ 57 ನಿಮಿಷದಿಂದ 02 ಗಂಟೆ 33 ನಿಮಿಷದವರೆಗೆ.

ಸೂರ್ಯೋದಯ: 06: 27    ಸೂರ್ಯಾಸ್ತ: 05 : 51

ರಾಹುಕಾಲ : ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ  (Horoscope Today)

ಮೇಷ: ದಿನದ ಮಟ್ಟಿಗೆ ಒತ್ತಡ ಉಂಟುಮಾಡುವ ವಿಚಾರಗಳಿಂದ ಮಾನಸಿಕ ನೆಮ್ಮದಿ ಕಡಿಮೆ. ಆರ್ಥಿಕ ಪ್ರಗತಿ. ಉದ್ಯೋಗದಲ್ಲಿ ಕಿರಿಕಿರಿ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ವೃಷಭ: ಕೋಪದಿಂದ ವರ್ತಿಸಿ, ಮನೆಯ ವಾತಾವರಣ ಹದಗೆಡಲು ಕಾರಣರಾಗುವುದು ಬೇಡ. ಮನೆಯಲ್ಲಿನ ಸದಸ್ಯರು ತಮಗೆ ಅಸಹಕಾರ ನೀಡುವ ಸಾಧ್ಯತೆ. ಆರೋಗ್ಯ ಮಧ್ಯಮ. ಖರ್ಚು ಹೆಚ್ಚಾಗುವ ಸಂಭವ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

ಮಿಥುನ: ನಿಮ್ಮ ಆಕರ್ಷಕ ವ್ಯಕ್ತಿತ್ವ ಇತರರ ಗಮನ ಸೆಳೆಯುವುದು. ಹಣಕಾಸು ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ, ಖರ್ಚು ಹೆಚ್ಚು. ಆರೋಗ್ಯ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಉತ್ತಮ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಕಟಕ: ಒತ್ತಡದ ಮಧ್ಯೆಯೂ ಕಾರ್ಯದಲ್ಲಿ ಯಶಸ್ಸು ಕೀರ್ತಿ ಸಿಗುವುದು. ಹಣದ ಹರಿವು ಹೆಚ್ಚಾಗಲಿದೆ. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ. ಆರೋಗ್ಯ ಉತ್ತಮವಾಗಿರಲಿದೆ. ಆಪ್ತರನ್ನು ಭೇಟಿ ಮಾಡುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ಸಿಂಹ: ಇಂದು ಏಕಾಗ್ರತೆಗೆ ಭಂಗ ತರುವ ಸಾಧ್ಯತೆಗಳು ಹೆಚ್ಚು. ಆರೋಗ್ಯ ಪರಿಪೂರ್ಣ. ಮನೆಯಲ್ಲಿ ವಿನಾಕಾರಣ ಕಲಹಗಳು ನಡೆಯುವ ಸಾಧ್ಯತೆ. ಉದ್ಯೋಗದಲ್ಲಿ ಯಶಸ್ಸು. ತಾಳ್ಮೆಯಿಂದ ವರ್ತಿಸಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

ಕನ್ಯಾ: ಶ್ರಮದ ಕಾರಣ, ಆಯಾಸ, ಒತ್ತಡ ಉಂಟಾಗುವ ಸಾಧ್ಯತೆ. ದಿನದ ಮಟ್ಟಿಗೆ ವಿಶ್ರಾಂತಿ ಅತ್ಯಾವಶ್ಯಕ. ಮನೆಯಲ್ಲಿ ಮಾತಿಗೆ ಮಾತು ಬೆಳೆಸುವುದು ಬೇಡ. ಉದ್ಯೋಗಿಗಳಿಗೆ ಸ್ವಲ್ಪ ಮಟ್ಟಿಗೆ ಒತ್ತಡ ಹೆಚ್ಚಾಗಲಿದೆ. ಆರೋಗ್ಯ ಮಧ್ಯಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ತುಲಾ: ಸಕಾರಾತ್ಮಕ ಆಲೋಚನೆಗಳು ಸದಾ ಯಶಸ್ಸು ತಂದು ಕೊಡುವುದು. ಹಣಕಾಸು ಹಾಗೂ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 1

ವೃಶ್ಚಿಕ: ಆಕರ್ಷಕ ವರ್ತನೆ ಇತರರ ಗಮನ ಸೆಳೆಯುವುದು. ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ. ಹಣದ ಹರಿವು ಹೆಚ್ಚಾಗಲಿದೆ. ಕುಟುಂಬದ ಸದಸ್ಯರ ವರ್ತನೆ ನಿಮಗೆ ಕೋಪ ತರಿಸಬಹುದು. ಉದ್ಯೋಗಿಗಳಿಗೆ ಶುಭ ಫಲ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಧನಸ್ಸು: ಯಾವುದಾದರೂ ಸುದ್ದಿ ನಿಮ್ಮ ಮನಸ್ಸಿಗೆ ನೋವು ತರುವ ಸಾಧ್ಯತೆ. ಕುಟುಂಬದ ಆಪ್ತರೊಂದಿಗೆ ಸಮಯ ಹಂಚಿಕೊಳ್ಳುವಿರಿ. ಆರ್ಥಿಕ ಲಾಭ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಅಪರಿಚಿತರೊಂದಿಗೆ ವಾದಕ್ಕಿಳಿಯುವುದು ಬೇಡ. ಆರೋಗ್ಯ ಉತ್ತಮ, ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

ಮಕರ: ಒತ್ತಡದ ಮಧ್ಯೆಯೂ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುವಿರಿ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಮಾನಸಿಕ ಆರೋಗ್ಯ ಹದಗೆಡುವ ಸಾಧ್ಯತೆ. ಅನಪೇಕ್ಷಿತ ವಿಷಯದ ಕುರಿತು ಚರ್ಚೆ, ಕುಟುಂಬದ ಸದಸ್ಯರ ಮಧ್ಯೆ ಕಲಹ ಮೂಡುವ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

ಕುಂಭ: ಜವಾಬ್ದಾರಿಗಳು ಹೆಚ್ಚಾಗಲಿವೆ. ಕೆಲವು ಕಾರಣಗಳಿಂದ ಮಿತಿ ಮೀರಿ ಕೋಪ ಬರುವ ಸಾಧ್ಯತೆ. ಗೌಪ್ಯ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ. ದಿನದ ಮಟ್ಟಿಗೆ ಖರ್ಚು. ಆರೋಗ್ಯದ ಕಾಳಜಿ ಅವಶ್ಯ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

ಮೀನ: ಹಳೆಯ ವ್ಯಾಧಿಯು ಉಲ್ಬಣ ಗೊಳ್ಳುವ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಪ್ರಯಾಣದಿಂದ ದಿನದ ಮಟ್ಟಿಗೆ ಖರ್ಚು. ಉದ್ಯೋಗದಲ್ಲಿ ಮಿಶ್ರ ಫಲ. ನಿಮ್ಮ ಆಪ್ತರೊಂದಿಗೆ ಸಮಯ ಹಂಚಿಕೊಳ್ಳುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

Exit mobile version