Site icon Vistara News

Horoscope Today | ಈ ಕ್ಯಾಲೆಂಡರ್‌ ವರ್ಷದ ಕೊನೆಯ ದಿನ ಹೀಗಿರಲಿದೆ ನಿಮ್ಮ ಭವಿಷ್ಯ

horoscope today

Horoscope Today

ಇಂದಿನ ಪಂಚಾಂಗ (31-12-2022)

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ.

ತಿಥಿ: ನವಮಿ 18:32 ವಾರ: ಶನಿವಾರ
ನಕ್ಷತ್ರ: ರೇವತಿ 11:45 ಯೋಗ: ಪರಿಘ 08:17
ಕರಣ: ಕೌಲವ 18:32 ಇಂದಿನ ವಿಶೇಷ: ಹೊಸವರ್ಷ ಮುನ್ನಾದಿನ
ಅಮೃತಕಾಲ: ಬೆಳಗ್ಗೆ 09 ಗಂಟೆ 21 ನಿಮಿಷದಿಂದ 10 ಗಂಟೆ 58 ನಿಮಿಷದವರೆಗೆ.

ಸೂರ್ಯೋದಯ: 06 : 41    ಸೂರ್ಯಾಸ್ತ: 0೬ : 04

ರಾಹುಕಾಲ : ಬೆಳಗ್ಗೆ 09 : 32 ರಿಂದ 10 : 57
ಗುಳಿಕಕಾಲ: ಬೆಳಗ್ಗೆ 06 : 41 ರಿಂದ 08 : 07
ಯಮಗಂಡಕಾಲ: ಮಧ್ಯಾಹ್ನ 01 : 48 ರಿಂದ 03 : 13

ದ್ವಾದಶ ರಾಶಿ ಭವಿಷ್ಯ  (Horoscope Today)

ಮೇಷ: ಅನೇಕ ವಿಚಾರಗಳು ಮಾನಸಿಕ ಒತ್ತಡ ತರುವ ಸಾಧ್ಯತೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ಇತರರು ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ವಹಿಸಿ. ಮೌನವಾಗಿದ್ದು ಕಾರ್ಯ ಸಾಧಿಸಿಕೊಳ್ಳುವುದು ಉತ್ತಮ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಹಣಕಾಸು ವ್ಯವಹಾರದಲ್ಲಿ ದಿನದ ಮಟ್ಟಿಗೆ ಸಾಧರಣ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:

ವೃಷಭ: ಇಂದು ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ, ಪ್ರೋತ್ಸಾಹ ಸಿಗಲಿದೆ. ಬಹಳ ದಿನಗಳ ಕನಸು, ಭೂ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು. ಆರೋಗ್ಯದ ಬಗೆಗೆ ಇಂದು ಕಾಳಜಿ ಇರಲಿ. ಕುಟುಂಬದಲ್ಲಿ ವಿನಾಕಾರಣ ಕಲಹಗಳು ನಡೆಯದಂತೆ ಎಚ್ಚರಿಕೆ ವಹಿಸಿ. ಆರ್ಥಿಕ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

ಮಿಥುನ: ಉದ್ಯೋಗ ಸಂಬಂಧಿ ಅಡತಡೆ ದೂರವಾಗಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆಯುವಿರಿ. ಅತ್ಯಂತ ಉತ್ಸಾಹದ ದಿನವಿಂದು. ಆತುರದಲ್ಲಿ ಹಣ ಹೂಡಿಕೆ ಮಾಡುವುದು ಬೇಡ. ಆರೋಗ್ಯ ಉತ್ತಮ. ಮಕ್ಕಳ ಕುರಿತಾಗಿ ಚಿಂತಿಸಿ ಉತ್ಸಾಹ ಕಳೆದುಕೊಳ್ಳುವುದು ಬೇಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಕಟಕ: ಪ್ರತಿಭೆಗೆ ತಕ್ಕ ಪ್ರೋತ್ಸಾಹ ಸಿಗುವುದು. ಅನಾವಶ್ಯಕ ಒತ್ತಡ ತೆಗೆದುಕೊಳ್ಳುವುದು ಬೇಡ. ಮನೆಯಲ್ಲಿನ ಕಲಹಗಳಿಗೆ ನೀವು ಧ್ವನಿಯಾಗುವುದು ಬೇಡ. ಆರ್ಥಿಕ ಪ್ರಗತಿ ಸಾಧಾರಣ. ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:

ಸಿಂಹ: ಅತಿಯಾದ ಆತ್ಮವಿಶ್ವಾಸದ ಭರದಲ್ಲಿ ದುಡುಕುವುದು ಬೇಡ. ಪಾಲುದಾರಿಕೆ ವ್ಯವಹಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಆಗುವ ಸಾಧ್ಯತೆ ಇರುವುದರಿಂದ ಎಚ್ಚರವಹಿಸಿ. ಮನೆಯಲ್ಲಿನ ಹಿರಿಯರ ಮಾರ್ಗದರ್ಶನ ಪಡೆಯಿರಿ. ಉದ್ಯೋಗದಲ್ಲಿ ಮಿಶ್ರ ಫಲ. ಆರೋಗ್ಯದ ಕಡೆಗೆ ಗಮನ ನೀಡಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:

ಕನ್ಯಾ: ತಾಳ್ಮೆಯಿಂದ ಕಾಯ್ದು ಕೊಂಡಿರುವ ಕೆಲಸವು ಇಂದು ಫಲ ನೀಡುವುದು.
ವ್ಯಾಪಾರ ವ್ಯವಹಾರಗಳಲ್ಲಿ ಕಾರ್ಯ ಸಿದ್ಧಿ. ಪ್ರಯಾಣದಿಂದ ಲಾಭ. ಆರೋಗ್ಯವು ಉತ್ತಮವಾಗಿರುವುದು. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

ತುಲಾ: ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಪ್ರೋತ್ಸಾಹ ಸಿಗುವುದು. ನಿಮ್ಮ ಸಭ್ಯ ನಡವಳಿಕೆ ಮೆಚ್ಚುಗೆ ಪಡೆಯುತ್ತದೆ. ಆರ್ಥಿಕ ಸಮಸ್ಯೆಗಳು ಪರಿಹಾರ ಆಗುವವು. ಆದರೂ ಯಾವುದಾದರೂ ಒಂದು ಕೊರತೆ ಕಾಡುವುದು. ಆಧ್ಯಾತ್ಮದ ಹಾದಿಯಲ್ಲಿ ಹೆಜ್ಜೆ ಹಾಕಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:

ವೃಶ್ಚಿಕ: ಅತಿಯಾದ ಮಾನಸಿಕ ಒತ್ತಡ ನಿಮ್ಮನ್ನು ಜರ್ಜರಿತರನ್ನಾಗಿ ಮಾಡಬಹುದು, ಅದರಿಂದ ಹೊರ ಬನ್ನಿ. ಚಾಲನೆ ಮಾಡುವಾಗ ಆದಷ್ಟು ಎಚ್ಚರಿಕೆಯಿಂದಿರಿ. ಮನೆಯಲ್ಲಿ ಮಾತಿಗೆ ಮಾತು ಬೆಳೆದು ಕಲಹವಾಗುವ ಸಾಧ್ಯತೆ. ಮೌನದಿಂದ ಕಾರ್ಯ ಸಾಧಿಸಿ. ಉದ್ಯೋಗದಲ್ಲಿ ಶುಭ ಫಲ.
ಅದೃಷ್ಟ ಸಂಖ್ಯೆ:

ಧನಸ್ಸು: ಅನಗತ್ಯವಾಗಿ ಹಣವನ್ನು ಖರ್ಚು ಮಾಡುವ ಸಾಧ್ಯತೆ. ದೀರ್ಘ ಕಾಲದ ಅನಾರೋಗ್ಯ ನಿಮ್ಮನ್ನು ಹಿಂಸೆಗೆ ಗುರಿ ಮಾಡಬಹುದು. ವಿಶ್ವಾದಿಂದ ಕಾರ್ಯ ಸಾಧನೆ ಮಾಡಿ ಶುಭವಾಗುವುದು. ವ್ಯಾಪಾರ-ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

ಮಕರ: ನಿಮ್ಮ ಪ್ರತಿ ಸ್ಪರ್ಧಿಗಳು ಕೆಟ್ಟದನ್ನು ಮಾಡಬಹುದು, ಆದಷ್ಟು ಅವರೊಂದಿಗೆ ಅಂತರ ಕಾಯ್ದುಕೊಳ್ಳಿ. ಅತಿಯಾದ ಭರವಸೆಯಿಂದ ದುಡುಕಿ ಅಪಾಯ ತಂದುಕೊಳ್ಳುವುದು ಬೇಡ. ಆರ್ಥಿಕ ಪ್ರಗತಿ ಉತ್ತಮ. ಆರೋಗ್ಯವು ಉತ್ತಮವಾಗಿರಿಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

ಕುಂಭ: ಇಂದು ಆತ್ಮ ವಿಶ್ವಾಸ ಹೆಚ್ಚಲಿದೆ. ಭೂ ವ್ಯವಹಾರದಲ್ಲಿ ಅನುಕೂಲ ಆಗಲಿದೆ. ಸಂಬಂಧಿಕರು ಮತ್ತು ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳು ದೊರೆಯುವವು. ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಇಂದು ಖರ್ಚು ಹೆಚ್ಚಾಗಬಹುದು. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

ಮೀನ: ನಿಮ್ಮ ಹಾಸ್ಯ ಪ್ರಜ್ಞೆ ಇತರರನ್ನು ಆಕರ್ಷಿಸಲಿದೆ. ಇಂದು ಮನೆಯಲ್ಲಿರುವ ಚಿಕ್ಕ
ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಸಿಗುವುದು. ಆರೋಗ್ಯದ ಕುರಿತು ಕಾಳಜಿ ಇರಲಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

ಇದನ್ನೂ ಓದಿ |Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ರಾಶಿಗಳಿಗೆ ಶುಭಾಶುಭ ಫಲಗಳಿವೆ?; ಇಲ್ಲಿದೆ ವರ್ಷ ಭವಿಷ್ಯ

Exit mobile version