Site icon Vistara News

Horoscope Today : ಗುರುಪುಷ್ಯಯೋಗದ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೊಣ

horoscope today

horoscope

ಇಂದಿನ ಪಂಚಾಂಗ (27-04-2023)

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ.

ತಿಥಿ: ಸಪ್ತಮಿ 13:38 ವಾರ: ಗುರುವಾರ
ನಕ್ಷತ್ರ: ಪುನರ್ವಸು 06:58 ಯೋಗ: ಧೃತಿ 08:45
ಕರಣ: ವಾಣಿಜ 13:38 ಇಂದಿನ ವಿಶೇಷ: ಗಂಗಾಸಪ್ತಮಿ, ಭಾಗೀರಥ ಜಯಂತಿ, ಗುರುಪುಷ್ಯಯೋಗ
ಅಮೃತಕಾಲ: ಶುಕ್ರವಾರ ಮುಂಜಾನೆ 02 ಗಂಟೆ 43 ನಿಮಿಷದಿಂದ 04 ಗಂಟೆ 30 ನಿಮಿಷದವರೆಗೆ.

ಸೂರ್ಯೋದಯ : 06:01 ಸೂರ್ಯಾಸ್ತ : 06:34

ರಾಹುಕಾಲ : ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ: ಬೆಳಗ್ಗೆ 9.00 ರಿಂದ 10.30
ಯಮಗಂಡಕಾಲ: ಬೆಳಗ್ಗೆ 6.00 ರಿಂದ 7.30

ದ್ವಾದಶ ರಾಶಿ ಭವಿಷ್ಯ (Horoscope Today)

ಮೇಷ : ನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುವ ದಿನ. ಕೆಲಸ-ಕಾರ್ಯಗಳಲ್ಲಿ ಯಶಸ್ಸು.
ಆರ್ಥಿಕವಾಗಿ ಪ್ರಗತಿ ಕಾಣಲಿದ್ದಿರಿ. ಉತ್ಸಾಹದ ಭರದಲ್ಲಿ ಯಾವುದೇ ರೀತಿಯ ಆಶ್ವಾಸನೆ ನೀಡುವುದು ಅಪಾಯ ತರುವ ಸಾಧ್ಯತೆ ಹೆಚ್ಚು, ಎಚ್ಚರಿಕೆಯಿಂದ ಇರಿ. ಆರೋಗ್ಯ ಪರಿಪೂರ್ಣ.
ವ್ಯಾಪರ ವ್ಯವಹಾರದಲ್ಲಿ ಪ್ರಗತಿ. ಕೌಟುಂಬಿಕವಾಗಿ ಮಧ್ಯಮ ಫಲ.
ಅದೃಷ್ಟ ಸಂಖ್ಯೆ: 7

ವೃಷಭ: ನಿಮ್ಮ ಆಕರ್ಷಣೆ ಹಾಗೂ ವ್ಯಕ್ತಿತ್ವ ನಿಮಗೆ ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡುತ್ತದೆ. ಹೂಡಿಕೆ ವ್ಯವಹಾರದ ಕುರಿತು ಆಲೋಚನೆ. ವ್ಯಾಪಾರ ವ್ಯವಹಾರದ ಕುರಿತಾಗಿ ಬೆಳೆಸಿದ ಪ್ರಯಾಣ ಲಾಭ ತಂದುಕೊಡಲಿದೆ. ಉದ್ಯೋಗಿಗಳಿಗೆ ಮೆಚ್ಚುಗೆ ಸಿಗಲಿದೆ. ಆರೋಗ್ಯ ಉತ್ತಮ. ಆರ್ಥಿಕವಾಗಿ ಪ್ರಗತಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

ಮಿಥುನ: ಹತಾಶೆಯಿಂದ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಅನಿರೀಕ್ಷಿತ ಲಾಭ ಸಿಗುವ ಸಾಧ್ಯತೆ. ಪ್ರೀತಿಪಾತ್ರರ ಜೊತೆ ವಾದಗಳಿಗೆ ಕಾರಣವಾಗಬಹುದಾದ ವಿವಾದಾತ್ಮಕ ವಿಷಯಗಳಿಂದ ದೂರ ಇರಿ. ಎಚ್ಚರಿಕೆಯಿಂದ ಮಾತನಾಡಿ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಸದೃಢ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ
ಅದೃಷ್ಟ ಸಂಖ್ಯೆ: 4

ಕಟಕ: ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯ ಪರಿಪೂರ್ಣ. ಹರ್ಷ ತುಂಬಿದ ಮನಸ್ಸು ನಿಮ್ಮ
ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಹಳೆಯ ಬಾಕಿ ಮರುಪಾವತಿ ಮಾಡುವ ಸಾಧ್ಯತೆ. ಆರ್ಥಿಕ ಪ್ರಗತಿ ಸಾಧಾರಣ. ಉದ್ಯಮಿಗಳಿಗೆ ಒಳ್ಳೆಯ ದಿನ. ವ್ಯಾಪಾರದ ಉದ್ದೇಶಕ್ಕಾಗಿ ಕೈಗೊಂಡ ಪ್ರವಾಸ ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತದೆ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಸಿಂಹ: ಬಹಳ ದಿನಗಳಿಂದ ಕಾಡುತ್ತಿರುವ ಸಮಸ್ಯಗೆ ಪರಿಹಾರ ಸಿಗಲಿದೆ. ಭವಿಷ್ಯದ ಹೂಡಿಕೆ ವ್ಯವಹಾರದ ಕುರಿತಾಗಿ ಆಲೋಚನೆ. ನಿಮ್ಮ ಹಿಂದೆ ನಿಮಗೆ ಆಗದವರು ಪಿತೂರಿ ನಡೆಸುವ ಸಾಧ್ಯತೆ. ಅಂತವರ ಬಗ್ಗೆ ಎಚ್ಚರಿಕೆ ಇರಲಿ. ದಿಢೀರ್‌ ಪ್ರಯಾಣ ಬೆಳೆಸುವ ಸಾಧ್ಯತೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

ಕನ್ಯಾ: ಸೃಜನಾತ್ಮಕ ಕ್ಷೇತ್ರಗಳಲ್ಲಿರುವವರು ಬಹಳ ದಿನಗಳಿಂದ ಕಾಯುತ್ತಿದ್ದ ಪ್ರಸಿದ್ಧಿ ಮತ್ತು ಗೌರವ ಪಡೆಯುವ ಯಶಸ್ವಿ ದಿನ. ಭೂಮಿ ಸಂಬಂಧಿ ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ದಿನಕ್ಕಿಂತ ಹೆಚ್ಚಿನ ಸಂತೋಷ. ಆರ್ಥಿಕ ಚಟುವಟಿಕೆಗೆ ಗರಿಗೆದರಲಿದೆ. ದಿನದ ಕೊನೆಯಲ್ಲಿ ಕೌಟುಂಬಿಕ ಕಲಹಗಳು ನಡೆಯುವ ಸಾಧ್ಯತೆ, ಮಾತಿನಲ್ಲಿ ಹಿಡಿತವಿರಲಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಕೆಲಸದಲ್ಲಿ, ಮನೆಯಲ್ಲಿ ಒತ್ತಡ ತುಂಬಿದ ವಾತಾವರಣ. ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ. ವ್ಯಾಪಾರ ವ್ಯವಹಾರದಲ್ಲಿ ತೊಡಗಿರುವವರಿಗೆ ದಿನದ ಮಟ್ಟಿಗೆ ಹೆಚ್ಚಿನ ಲಾಭ ಸಿಗಲಿದೆ. ಕುಟುಂಬ ಸಹಿತರಾಗಿ ಪ್ರಯಾಣ ಬೆಳೆಸುವ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಆರ್ಥಿಕವಾಗಿ ಪ್ರಗತಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ವೃಶ್ಚಿಕ: ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ. ನಿಮ್ಮ ಸಂತೋಷದ ಸಂಗತಿಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಅಗತ್ಯ ವಸ್ತುಗಳ ಖರೀದಿಯಿಂದ ಆರ್ಥಿಕವಾಗಿ ಸಾಧಾರಣ ಫಲ. ಅಮೂಲ್ಯ ವಸ್ತುಗಳ ಬಗೆಗೆ ಜಾಗ್ರತೆ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

ಧನಸ್ಸು: ಬೇರೆಯವರು ತೆಗೆದುಕೊಳ್ಳುವ ಕೆಲವು ಪ್ರಮುಖ ನಿರ್ಧಾರಗಳು ನಿಮ್ಮ ಮೇಲೆ ಪರಿಣಾಮ ಬೀರಬಹುದು. ಅದರ ಹೊರತಾಗಿ ಇಂದು ಮಾಡಿದ ಹೂಡಿಕೆ ನಿಮ್ಮ ಅಭ್ಯುದಯ ಮತ್ತು ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ. ಕುಟುಂಬ ಸದಸ್ಯರ ಮಾತುಗಳು ನಿಮ್ಮನ್ನು ಘಾಸಿಗೊಳಿಸಬಹುದು. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಮಿಶ್ರ ಫಲ. ಆರ್ಥಿಕ ಪ್ರಗತಿ ಸಾಧಾರಣ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

ಮಕರ: ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ. ಅದರಲ್ಲಿಯೂ ಗರ್ಭಿಣಿಯರು ಹೆಚ್ಚಿನ ಮುತುವರ್ಜಿ ವಹಿಸಬೇಕು. ಅನಾವಶ್ಯಕ ಖರ್ಚುಗಳಿಂದ ಆರ್ಥಿಕವಾಗಿ ಬಳಲುವ ಸಾಧ್ಯತೆ. ಸಂಬಂಧ ಪಡದೇ ಇರುವ ವಿಷಯದ ಕುರಿತು ಮೂಗು ತೂರಿಸುವುದು ಬೇಡ. ಟೀಕೆಗಳನ್ನು ಎದಿರಿಸಬೇಕಾದಿತು, ಎಚ್ಚರಿಕೆ ಇರಲಿ. ಉದ್ಯೋಗಿಗಳಿಗೆ ಒತ್ತಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

ಕುಂಭ: ವಿವಾದಾತ್ಮಕ ವಿಷಯಗಳಿಂದ ದೂರ ಇರಿ. ಮಾತಿನಲ್ಲಿ ಹಿಡಿತವಿರಲಿ. ತಮ್ಮ ಬಳಿ ಯಾರಾದರೂ ಹಣದ ಸಹಾಯ ಬೇಡುವ ಸಾಧ್ಯತೆ, ಆಲೋಚಿಸಿ ಮುಂದುವರಿಯಿರಿ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ಮೀನ: ಮಾನಸಿಕ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ಸಾಧನೆ ಮಾಡಿ. ಆರೋಗ್ಯ ಪರಿಪೂರ್ಣ. ಕೆಲಸ ಕಾರ್ಯಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಸದೃಢ. ಉದ್ಯೋಗಿಗಳಿಗೆ ಅಭದ್ರತೆಯ ಭಾವನೆ ಕಾಡಲಿದೆ. ನಿಮ್ಮ ಸಹನೆಯನ್ನು ಪರೀಕ್ಷಿಸುವ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಇದನ್ನೂ ಓದಿ : Prerane : ತಪ್ಪು ಮಾಡಿದವರಿಗೆ ಶಿಕ್ಷೆ ಹೇಗಿರಬೇಕು?

Exit mobile version