Site icon Vistara News

Horoscope Today : ದ್ವಾದಶಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೀಗಿದೆ…

Horoscope Today

ಇಂದಿನ ಪಂಚಾಂಗ (01-06-2023)

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ.

ತಿಥಿ: ದ್ವಾದಶಿ 13:38 ವಾರ: ಗುರುವಾರ
ನಕ್ಷತ್ರ: ಚಿತ್ತಾ 06:47 ಯೋಗ: ವರಿಯಾನ 18:58
ಕರಣ: ಬಾಲವ 13:38 ಇಂದಿನ ವಿಶೇಷ: ಪಕ್ಷ ಪ್ರದೋಷ, ವಿಶ್ವ ಹಾಲು ದಿನ.
ಅಮೃತಕಾಲ: ರಾತ್ರಿ 10 ಗಂಟೆ 03 ನಿಮಿಷದಿಂದ ರಾತ್ರಿ 11 ಗಂಟೆ 39 ನಿಮಿಷದವರೆಗೆ.

ಸೂರ್ಯೋದಯ : 05:52 ಸೂರ್ಯಾಸ್ತ : 06:43

ರಾಹುಕಾಲ : ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ: ಬೆಳಗ್ಗೆ 9.00 ರಿಂದ 10.30
ಯಮಗಂಡಕಾಲ: ಬೆಳಗ್ಗೆ 6.00 ರಿಂದ 7.30

ದ್ವಾದಶ ರಾಶಿ ಭವಿಷ್ಯ (Horoscope Today)

ಮೇಷ: ಆತ್ಮವಿಶ್ವಾಸದ ಕೊರತೆಯಿಂದಾಗಿ ಕಾರ್ಯದಲ್ಲಿ ಮಂದಗತಿ. ಆರೋಗ್ಯ ಸಂಬಂಧಿ ಖರ್ಚು ಸಾಧ್ಯತೆ. ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲ ಸಿಗಲಿದೆ. ಅಪರೂಪದ ವ್ಯಕ್ತಿಗಳ ಪರಿಚಯದಿಂದಾಗಿ ಅನೇಕ ವಿಚಾರಗಳು ಮನಸ್ಸಿನ ಆಳಕ್ಕೆ ಇಳಿಯುವವು. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ವೃಷಭ: ಹೂಡಿಕೆಯಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ಆರ್ಥಿಕವಾಗಿ ಸದೃಢತೆ. ಅನೇಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಉತ್ತಮ. ವೃತಾ ಕಾಲ ಹರಣಮಾಡಿ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಮಿಥುನ: ಸಂತೃಪ್ತ ಜೀವನ, ಕಾರ್ಯದಲ್ಲಿ ಯಶಸ್ಸು ಸಿಗುವುದು. ಯಾರನ್ನೂ ನಂಬಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಆಪ್ತ ಸ್ನೇಹಿತರೊಂದಿಗೆ ಮಾತು. ದಿನದ ಕೊನೆಯ ಭಾಗದಲ್ಲಿ ಮಾನಸಿಕವಾಗಿ ದುರ್ಬಲವಾಗುವ ಸಾಧ್ಯತೆ. ಮಕ್ಕಳು ಸಿಟ್ಟು ತರಿಸಬಹುದು. ಆರ್ಥಿಕವಾಗಿ ಸಾಧಾರಣ. ಗುರುಗಳ ಅನುಗ್ರಹ ಪಡೆಯಿರಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

ಕಟಕ: ಬೇರೆಯವರನ್ನು ಟೀಕೆ ಮಾಡುವ ಭರದಲ್ಲಿ ನೀವು ಟೀಕೆಗೆ ಒಳಗಾಗುವುದು ಬೇಡ.
ಆಪ್ತರೊಂದಿಗೆ ಅತಿಯಾದ ಸಲುಗೆ ಒಳ್ಳೆಯದಲ್ಲ. ದಿನದ ಮಟ್ಟಿಗೆ ಖರ್ಚು. ಆತುರದ ಮಾತುಗಳಿಗೆ ನಿಯಂತ್ರಣ ಇರಲಿ. ಉದ್ಯೋಗಿಗಳಿಗೆ ಯಶಸ್ಸು. ಅತಿಥಿಗಳ ಆಗಮನದಿಂದ ಕಾರ್ಯ ವಿಳಂಬ. ಆರೋಗ್ಯದ ಕುರಿತಾಗಿ ಕಾಳಜಿ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

ಸಿಂಹ: ಒತ್ತಡದಿಂದ ಹೊರಬಂದು ಉತ್ಸಾಹದ ಚಿಲುಮೆ ಉಕ್ಕಲಿದೆ. ದೈಹಿಕವಾಗಿ ಮಾನಸಿಕವಾಗಿ ಆರೋಗ್ಯ ಉತ್ತಮ. ಹಣಕಾಸು, ಹೂಡಿಕೆ,ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ದಿಢೀರ್‌ ಧನಾಗಮನವಾಗಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಕೀರ್ತಿ ಸಿಗಲಿದೆ. ಉದ್ಯೋಗಿಗಳಿಗೆ ಹೊಸ ಅವಕಾಶಗಳ ಸೂಚನೆ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಕನ್ಯಾ: ಬಹಳ ದಿನಗಳಿಂದ ಬರದೆ ಇರುವ ನಿಮ್ಮ ಹಣ ಮರಳುವ ಸಾಧ್ಯತೆ. ಆರೋಗ್ಯದ ಬಗೆಗೆ ತುಂಬಾ ಕಾಳಜಿ ವಹಿಸಿ. ದಿನದ ಮಟ್ಟಿಗೆ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ. ಕುಟುಂಬದಲ್ಲಿ ಸಾಮರಸ್ಯ ಮೂಡಲಿದೆ. ಆಪ್ತರೊಂದಿಗೆ ಮಾತುಕತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಅನಿವಾರ್ಯ ಕಾರಣಗಳಿಂದ ನೀವು ಇತರರೊಂದಿಗೆ ಜಗಳಕ್ಕೆ ಇಳಿಯುವ ಸಾಧ್ಯತೆ. ಆದಷ್ಟು ಮಾತಿನಲ್ಲಿ ನಿಯಂತ್ರಣ ಇರಲಿ. ಕುಟುಂಬದ ಆಪ್ತರು, ಸ್ನೇಹಿತರಿಂದ ಉಡುಗೊರೆ ಸಿಗುವ ಸಾಧ್ಯತೆ. ಆರ್ಥಿಕವಾಗಿ ಪ್ರಗತಿ. ಆರೋಗ್ಯದ ಕುರಿತು ಕಾಳಜಿ ಇರಲಿ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

ವೃಶ್ಚಿಕ: ಇಂದು ಮನರಂಜನೆಗಾಗಿ ಹೆಚ್ಚು ಮಹತ್ವ ಕೊಡುವ ಸಾಧ್ಯತೆ. ಆಪ್ತರು ಹಾಗೂ ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ. ಆತ್ಮವಿಶ್ವಾಸದಿಂದ ಮಾಡಿದ ಕಾರ್ಯ ಯಶಸ್ಸನ್ನು ತಂದು ಕೊಡಲಿದೆ. ಅನಿವಾರ್ಯ ಕಾರಣಗಳಿಂದ ಖರ್ಚು. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

ಧನಸ್ಸು: ಬಹಳ ದಿನಗಳ ಕನಸು ನನಸಾಗಲಿದೆ. ಆರೋಗ್ಯ ಪರಿಪೂರ್ಣ. ಆರ್ಥಿಕವಾಗಿ ಇಂದು ಸಬಲತೆ ಹೊಂದುವಿರಿ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಸಂತೋಷದ ಜೊತೆ ಜೊತೆಗೆ ನಿಮ್ಮನ್ನು ಯಾರಾದರೂ ಟೀಕಿಸುವ ಸಾಧ್ಯತೆ. ದಿನದ ಕೊನೆಯಲ್ಲಿ ಕೌಟುಂಬಿಕ ತಾಪತ್ರಯ ನಿಮ್ಮನ್ನು ನಿರಾಸೆಗೊಳಿಸಬಹುದು. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 6

ಮೂಲ ನಕ್ಷತ್ರದಲ್ಲಿ ಜನಿಸಿದರೆ ಒಳಿತಲ್ಲವೇ?

ಮಕರ: ಆರೋಗ್ಯ ದಿನದ ಮಟ್ಟಿಗೆ ಹದಗೆಡುವ ಸಾಧ್ಯತೆ ಇದೆ, ಆದಷ್ಟು ಎಚ್ಚರಿಕೆ ಇರಲಿ. ಕುಟುಂಬದ ಸದಸ್ಯರ ಬೆಂಬಲ ನಿಮಗೆ ಯಶಸ್ಸು ತಂದುಕೊಡಲಿದೆ. ಆರ್ಥಿಕವಾಗಿ ಬಲಗೊಳ್ಳುವಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

ಕುಂಭ: ಒಂಟಿತನ ನಿಮ್ಮನ್ನು ಕಾಡಬಹುದು. ಕುಟುಂಬ ಸದಸ್ಯರ ಅನಾರೋಗ್ಯ ಕಾರಣಗಳಿಂದ ಖರ್ಚು ಸಾಧ್ಯತೆ. ಬಾಕಿ ಇರುವ ಕೆಲಸ ಕಾರ್ಯಗಳನ್ನು ಮುಂದೂಡುವುದು ಬೇಡ. ಅತಿಯಾದ ಆಲಸ್ಯದಿಂದ ಹೊರ ಬಂದು ಮಾಡಬೇಕಾದ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ.
ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಮೀನ: ಭರವಸೆಯ ಬದುಕು ರೂಪುಗೊಳ್ಳಲಿದೆ. ಆಪ್ತರು ನೀಡುವ ಶುಭ ಸಂದೇಶ ನಿಮ್ಮನ್ನು ಹರ್ಷಿತರನ್ನಾಗಿ ಮಾಡುವುದು. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ. ಉದ್ಯೊಗದಲ್ಲಿ ಹೊಸ ಭರವಸೆ ಮೂಡಲಿದೆ. ಆರ್ಥಿಕವಾಗಿ ಬಲಿಷ್ಠರಾಗುವಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಇದನ್ನೂ ಓದಿ : Saturn Astrology : ಈ ಮೂರು ರಾಶಿಯವರಿಗೆ ಸದಾ ಇರಲಿದೆ ಶನಿ ದೇವರ ಕೃಪೆ!

Exit mobile version