Site icon Vistara News

Horoscope Today : ಮಿಥುನ ಸಂಕ್ರಮಣದ ಈ ದಿನ ಕೆಲ ರಾಶಿಯ ಉದ್ಯೋಗಿಗಳಿಗೆ ಶುಭ ಫಲ

mithuna sankranti horoscope today

#image_title

ಇಂದಿನ ಪಂಚಾಂಗ (15-06-2023)

ಶ್ರೀ ಶಕೇ 1945, ಶೋಭಕೃತ್‌ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ.

ತಿಥಿ: ದ್ವಾದಶಿ 08:31 ವಾರ: ಗುರುವಾರ
ನಕ್ಷತ್ರ: ಭರಣಿ 14:10 ಯೋಗ: ಸುಕರ್ಮ 26:00
ಕರಣ: ತೈತುಲ 08:31 ಇಂದಿನ ವಿಶೇಷ: ಪ್ರದೋಷ, ಮಿಥುನ ಸಂಕ್ರಾಂತಿ
ಅಮೃತಕಾಲ: ಬೆಳಗ್ಗೆ 09 ಗಂಟೆ 17 ನಿಮಿಷದಿಂದ 10 ಗಂಟೆ 56 ನಿಮಿಷದವರೆಗೆ.

ಸೂರ್ಯೋದಯ : 05:54 ಸೂರ್ಯಾಸ್ತ : 06:47

ರಾಹುಕಾಲ : ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ: ಬೆಳಗ್ಗೆ 9.00 ರಿಂದ 10.30
ಯಮಗಂಡಕಾಲ: ಬೆಳಗ್ಗೆ 6.00 ರಿಂದ 7.30

ದ್ವಾದಶ ರಾಶಿ ಭವಿಷ್ಯ (Horoscope Today)

ಮೇಷ: ಮಾನಸಿಕವಾಗಿ ನೆಮ್ಮದಿ. ಅಗತ್ಯ ವಸ್ತುಗಳ ಖರೀದಿಗಾಗಿ ಖರ್ಚು, ಆರ್ಥಿಕ ಪ್ರಗತಿ ಸಾಧಾರಣ. ಕಾರ್ಯಸ್ಥಳದಲ್ಲಿ ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ. ದಿನದ ಕೊನೆಯಲ್ಲಿ ಸಂಗಾತಿಯೊಂದಿಗೆ ಮನಸ್ತಾಪ. ಹಿರಿಯರಿಂದ ಮಾರ್ಗದರ್ಶನ. ಆರೋಗ್ಯ ಮಧ್ಯಮ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3

ವೃಷಭ: ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿ ವಹಿಸುವುದು ಸೂಕ್ತ. ನಿಮ್ಮ ನಡವಳಿಕೆಯಿಂದಾಗಿ ಕುಟುಂಬದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ. ಕುಟುಂಬದ ಆಪ್ತರೊಂದಿಗೆ ಮಾತುಕತೆ. ಆರೋಗ್ಯ ಮಧ್ಯಮ. ಉದ್ಯೋಗಿಗಳಿಗೆ ಶುಭ ಫಲ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಆರ್ಥಿಕವಾಗಿ ಪ್ರಗತಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

ಮಿಥುನ: ಹೂಡಿಕೆ ವ್ಯವಹಾರದಲ್ಲಿ ತೊಡಗುವ ಸಾಧ್ಯತೆ. ಬಿಡುವಿರದ ಕೆಲಸದ ಮಧ್ಯೆಯೂ ಆರೋಗ್ಯ ಪರಿಪೂರ್ಣ. ಆಪ್ತರೊಂದಿಗೆ ಮಾತುಕತೆ. ಆರ್ಥಿಕ ಪ್ರಗತಿ ಉತ್ತಮ. ಉದ್ಯೋಗಿಗಳಿಗೆ ಶುಭ ಫಲ. ವಿವಾಹಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಕಟಕ: ಇಂದು ಪ್ರಯಾಣ ಮಾಡುವ ಸಾಧ್ಯತೆ. ಇದರಿಂದ ನೀವು ದೈಹಿಕವಾಗಿ ಬಳಲಲಿದ್ದೀರಿ. ಹೂಡಿಕೆ ವ್ಯವಹಾರಗಳಲ್ಲಿ ಪ್ರಗತಿ. ಈ ಹಿಂದೆ ನೀಡಿದ ಹಣ ಮರಳುವ ಸಾಧ್ಯತೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಿ, ಮಾರ್ಗದರ್ಶನ ಮಾಡುವ ಸಾಧ್ಯತೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ಸಿಂಹ: ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. ಅನಾವಶ್ಯಕ ಕಾರಣಗಳಿಂದ ಖರ್ಚು. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವಿರಿ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಉತ್ಸಾಹದ ದಿನ. ವ್ಯಾಪಾರ ವ್ಯವಹಾರದಲ್ಲಿ ಸಾಧಾರಣ ಪ್ರಗತಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಕನ್ಯಾ: ಆರೋಗ್ಯ ಪರಿಪೂರ್ಣ. ಅನಗತ್ಯ ಖರ್ಚುಗಳ ಮೇಲೆ ನಿಯಂತ್ರಣ ಸಾಧಿಸುವಿರಿ. ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ. ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ, ಕಿರಿಕಿರಿ ಸಾಧ್ಯತೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಉದ್ಯೋಗದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಹೆಚ್ಚಿನ ಒತ್ತಡ. ಮನೆಯಲ್ಲಿನ ಭಿನ್ನಾಭಿಪ್ರಾಯಗಳು ನಿಮ್ಮ ಏಕಾಗ್ರತೆಗೆ ಭಂಗ ತರುವ ಸಾಧ್ಯತೆ. ಆದಷ್ಟು ಮಾತಿನ ಮೇಲೆ ಹಿಡಿತವಿರಲಿ. ಹಿರಿಯರಿಂದ ಮಾರ್ಗದರ್ಶನ. ದೈಹಿಕ ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

ವೃಶ್ಚಿಕ: ಆತುರದಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವುದು ಬೇಡ. ದಿನದ ಮಟ್ಟಿಗೆ ಯಾವುದೇ ಹೂಡಿಕೆ ವ್ಯವಹಾರದಲ್ಲಿ ತೊಡಗುವುದರಿಂದ ನಷ್ಟವಾಗುವ ಸಾಧ್ಯತೆ. ಕೆಲವು ರಹಸ್ಯ ಸುದ್ದಿಗಳಿಂದ ನಿಮಗೆ ಅಚ್ಚರಿ. ನಿಮ್ಮ ಅಚ್ಚು ಕಟ್ಟು ಕೆಲಸದಿಂದ ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಆರ್ಥಿಕ ಪ್ರಗತಿ ಉತ್ತಮ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಧನಸ್ಸು: ಆರ್ಥಿಕ ಪ್ರಗತಿ ಸಾಧಾರಣವಾಗಿರುವುದರಿಂದ ಹೆಚ್ಚಿದ ಒತ್ತಡ. ಪ್ರಮುಖ ಕೆಲಸ ಕಾರ್ಯಗಳು ನಿಧಾನವಾಗಿ ಸಾಗುವವು. ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ. ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತುಕತೆ. ಉದ್ಯೋಗಿಗಳಿಗೆ ಶುಭ ಫಲ. ದೈಹಿಕ ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ಮಕರ: ಅನೇಕ ಕಾರಣಗಳಿಂದ ಒತ್ತಡಕ್ಕೆ ಒಳಗಾಗುವ ಸಾಧ್ಯತೆ. ಆರ್ಥಿಕವಾಗಿ ಪ್ರಗತಿ ಕಂಡರೂ, ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ. ಆಪ್ತರೊಂದಿಗೆ ಮಾತುಕತೆ. ವ್ಯಾಪಾರದ ಉದ್ದೇಶದಿಂದಾಗಿ ಕೈಕೊಂಡ ಪ್ರವಾಸದಲ್ಲಿ ಯಶಸ್ಸು. ಆರೋಗ್ಯ ಕೊಂಚಮಟ್ಟಿಗೆ ಹದಗೆಡುವ ಸಾಧ್ಯತೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ನಿಮಗೆ ಈ ಕಲರ್‌ & ಸಂಖ್ಯೆ ಸೂಕ್ತವಾಗುತ್ತಾ? ಈ ವಿಡಿಯೋ ನೋಡಿ.

ಕುಂಭ: ಮನರಂಜನೆಗಾಗಿ ಸಮಯವನ್ನು ಕಳೆಯುವಿರಿ. ಸೃಜನಶೀಲ ಕಾರ್ಯಗಳಿಂದಾಗಿ ವ್ಯಕ್ತಿತ್ವ ಪ್ರಕಾಶಿಸುವ ಸಾಧ್ಯತೆ. ನಿಮ್ಮ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳುವಿರಿ. ಆಧ್ಯಾತ್ಮಿಕ ಗುರುಗಳ ಮಾರ್ಗದರ್ಶನ ಪಡೆಯುವ ಸಾಧ್ಯತೆ. ಆರ್ಥಿಕ ಪ್ರಗತಿ ಉತ್ತಮ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

ಮೀನ : ಆಹಾರದ ವ್ಯತ್ಯಾಸದಿಂದಾಗಿ ಆರೋಗ್ಯದಲ್ಲಿ ಕೊಂಚ ಏರುಪೇರು, ಕಾಳಜಿ ವಹಿಸುವುದು ಸೂಕ್ತ. ಹೂಡಿಕೆ ಕುರಿತಾಗಿ ಆಲೋಚನೆ. ಅನಿವಾರ್ಯ ಕಾರಣಗಳಿಂದ ಖರ್ಚು. ಆಪ್ತರೊಂದಿಗೆ ಮಾತುಕತೆ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಇದನ್ನೂ ಓದಿ : ಬಹುತೇಕ ಶುಭಫಲಗಳನ್ನೇ ನೀಡುವ ಬುಧನ ಭಾವಫಲಗಳು ಹೀಗಿವೆ

Exit mobile version