ಇಂದಿನ ಪಂಚಾಂಗ (24-05-2023)
ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ.
ತಿಥಿ: ಪಂಚಮಿ 27:00 ವಾರ: ಬುಧವಾರ
ನಕ್ಷತ್ರ: ಪುರ್ನವಸು 15:05 ಯೋಗ: ಗಂಡ 17:18
ಕರಣ: ಭವ 13:56 ಇಂದಿನ ವಿಶೇಷ: ಶ್ರುತ ಪಂಚಮಿ, ಕಾಮನ್‌ವೆಲ್ತ್ ದಿನ
ಅಮೃತಕಾಲ: ಮಧ್ಯಾಹ್ನ 12 ಗಂಟೆ 28 ನಿಮಿಷದಿಂದ 02 ಗಂಟೆ 13 ನಿಮಿಷದವರೆಗೆ.
ಸೂರ್ಯೋದಯ : 05:53 ಸೂರ್ಯಾಸ್ತ : 06:40
ರಾಹುಕಾಲ : ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ: ಬೆಳಗ್ಗೆ 10.30 ರಿಂದ 12.00
ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00
ಮೇಷ: ಹಣಕಾಸಿನ ಹೂಡಿಕೆ ವ್ಯವಹಾರದಲ್ಲಿ ಹೊಸ ಆಲೋಚನೆಗಳನ್ನು ಮಾಡುವಿರಿ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಸಮಯ ವ್ಯರ್ಥ ಮಾಡದೇ ಕಾರ್ಯದಲ್ಲಿ ಮುನ್ನುಗ್ಗಿ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8
ವೃಷಭ: ಹಿರಿಯರ ಸಲಹೆ ಆರ್ಥಿಕವಾಗಿ ಲಾಭ ತರುವುದು. ಕುಟುಂಬದ ಸದಸ್ಯರ ಬೆಂಬಲ ಕೆಲಸ ಕಾರ್ಯಗಳಲ್ಲಿ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಅಭಿಪ್ರಾಯಗಳಿಗೆ ಮನ್ನಣೆ ಸಿಕ್ಕು ಪ್ರಶಂಸೆ ಪಡೆಯುವಿರಿ. ಅಪರಿಚಿತರೊಂದಿಗೆ ಅನಿವಾರ್ಯ ಕಾರಣಗಳಿಂದ ವಾದಕ್ಕೆ ಇಳಿಯುವುದು ಬೇಡ. ಮಾತು ಮಿತವಾಗಿರಲಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8
ಮಿಥುನ: ಆಶಾವಾದಿಗಳಾಗಿರಿ, ಆತ್ಮವಿಶ್ವಾಸದಿಂದ ಮಾಡಿದ ಕಾರ್ಯ ಯಶಸ್ಸನ್ನು ತಂದು ಕೊಡುವುದು. ಅನಿವಾರ್ಯ ಕಾರಣಗಳಿಂದ ಖರ್ಚು ಮಾಡುವ ಸಾಧ್ಯತೆ. ಹಳೆಯ ಪರಿಚಿತರ ಸಂಪರ್ಕ ಪುನಃ ಸ್ಥಾಪಿತವಾಗುವುದು. ವೈವಾಹಿಕ ಜೀವನಕ್ಕೆ ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6
ಕಟಕ: ಅವಿರತವಾಗಿ ಶ್ರಮಿಸಿದ ಜೀವಕೆ ವಿಶ್ರಾಂತಿಯು ದೊರೆಯಲಿದೆ. ಸಂಗಾತಿಯೊಂದಿಗೆ ಹೂಡಿಕೆ ಕೂರಿತಾಗಿ ಚರ್ಚೆಮಾಡುವಿರಿ. ಉತ್ತಮ ವ್ಯಕ್ತಿಗಳ ಸಂಪರ್ಕ, ಮಾರ್ಗದರ್ಶನ ಸಿಗಲಿದೆ. ಆರ್ಥಿಕವಾಗಿ ಲಾಭ ಸಿಗಲಿದೆ. ಆರೋಗ್ಯ ಪರಿಪೂರ್ಣ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ. ತಾಳ್ಮೆಯಿಂದ ಸಹಕರಿಸಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9
ಸಿಂಹ: ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ. ಹಣಕಾಸು ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ. ಅಗತ್ಯ ವಸ್ತುಗಳ ಖರೀದಿ ಸಾಧ್ಯತೆ. ಅತಿರೇಕದ ಮಾತುಗಳು ಸುತ್ತಮುತ್ತಲಿನ ಜನರೊಂದಿಗೆ ವಾದಕ್ಕೆ ಇಳಿಯುವಂತೆ ಮಾಡಬಹುದು, ಎಚ್ಚರಿಕೆ ಇರಲಿ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8
ಕನ್ಯಾ: ಹೊಸ ಆರ್ಥಿಕ ಒಪ್ಪಂದಗಳು ಗರಿಗೆದರಲಿವೆ. ಆಪ್ತರಿಂದ ಆಮಂತ್ರಣ ಸಿಗಲಿದೆ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಆಸ್ತಿ ಖರೀದಿ ವ್ಯವಹಾರದ ಕುರಿತು ಚರ್ಚೆ. ಸಂಗಾತಿಯ ಮಾತುಗಳಿಗೆ ಮನ್ನಣೆ ಸಿಗದೇ ಇರುವದರಿಂದ ನಿಮ್ಮ ಮೇಲೆ ಕೋಪಿಸಿಕೊಳ್ಳುವ ಸಾಧ್ಯತೆ. ನಗುವಿನ ಮೂಲಕ ಪರಿಸ್ಥಿತಿ ತಿಳಿಗೊಳಿಸಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 6
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಹಗಲುಗನಸು ಕಾಣುತ್ತಾ ಸಮಯ ಮತ್ತು ಶ್ರಮವನ್ನು ವ್ಯರ್ಥ ಮಾಡಬೇಡಿ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ. ಕುಟುಂಬದ ಸದಸ್ಯರ ಮಾರ್ಗದರ್ಶನ ಪಡೆಯುವುದು ಒಳ್ಳೆಯದು. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಸ್ವಲ್ಪ ಕಿರಿಕಿರಿ ಉಂಟಾಗುವ ಸಾಧ್ಯತೆ. ಸಂಗಾತಿಯ ಮಧುರ ಪ್ರೀತಿ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8
ವೃಶ್ಚಿಕ: ಆತ್ಮವಿಶ್ವಾಸದಿಂದ ಮಾಡಿದ ಕಾರ್ಯದಲ್ಲಿ ಯಶಸ್ಸು ಸಿಗುವುದು. ಹಣಕಾಸಿನ ವ್ಯವಹಾರ ನಿರೀಕ್ಷಿಸಿದಷ್ಟು ಸಾಧ್ಯವಿಲ್ಲ. ಅತಿಥಿಗಳ ಆಗಮನದಿಂದ ನಿಮ್ಮ ಯೋಜಿತ ಕಾರ್ಯ ವಿಳಂಬವಾಗುವ ಸಾಧ್ಯತೆ. ಆತುರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಬೇಡ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1
ಧನಸ್ಸು: ಕುಟುಂಬದ ಸದಸ್ಯರೊಂದಿಗೆ ಪ್ರಯಾಣ ಮಾಡುವ ಸಾಧ್ಯತೆ. ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಯಾವುದೇ ಹಣಕಾಸು ಒಪ್ಪಂದಗಳನ್ನು ಮಾಡಿಕೊಳ್ಳುವುದು ಬೇಡ. ಪ್ರೀತಿ ಪಾತ್ರರೊಂದಿಗೆ ಬಿರುಸು ಮಾತುಗಳಿಂದ ಸಂಬಂಧ ಹಳಸುವ ಸಾಧ್ಯತೆ. ನಿಧಾನಿಸಿ, ಯೋಚಿಸಿ ಮಾತನಾಡಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7
ಮಕರ: ಬಹಳ ದಿನಗಳ ಕನಸು ನನಸಾಗುವ ಕಾಲ. ಆತುರದಲ್ಲಿ ಯಾವುದೇ ಸಂಕಲ್ಪ ಮಾಡುವುದು ಬೇಡ. ಸ್ನೇಹಿತರ ಕಷ್ಟಕಾಲಕ್ಕೆ ಸ್ಪಂದಿಸುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಉದ್ಯೋಗದಲ್ಲಿ ಯಶಸ್ಸು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7
ಕುಂಭ: ಅತಿಯಾದ ಒತ್ತಡದಿಂದ ಹೊರಬರಲು ವ್ಯಸನಗಳ ಮೊರೆ ಹೋಗುವುದು ಬೇಡ. ಆಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ ಪಡೆಯಿರಿ. ತಾಳ್ಮೆಯಿಂದ ವರ್ತಿಸಿ. ಮಾತು ಮಿತವಾಗಿರಲಿ. ಉದ್ಯೋಗಿಗಳಿಗೆ ಹೆಚ್ಚಿನ ಒತ್ತಡ. ಕುಟುಂಬದ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5
ಮೀನ: ಕೋಪದಿಂದ ಅಪಾಯ ತಂದುಕೊಳ್ಳುವುದು ಬೇಡ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆಗುವ ಸಾಧ್ಯತೆ, ಕಾಳಜಿ ವಹಿಸುವುದು ಸೂಕ್ತ. ವ್ಯಾಪಾರ ವ್ಯವಹಾರದಲ್ಲಿ ಸಾಧಾರಣ ಫಲ. ದಿನದ ಮಟ್ಟಿಗೆ ಖರ್ಚು. ಸಂಗಾತಿಯ ವರ್ತನೆ ನಿಮಗೆ ಕೋಪ ತರಿಸಬಹುದು. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com
ಇದನ್ನೂ ಓದಿ : ಬಹುತೇಕ ಶುಭಫಲಗಳನ್ನೇ ನೀಡುವ ಬುಧನ ಭಾವಫಲಗಳು ಹೀಗಿವೆ