ಇಂದಿನ ಪಂಚಾಂಗ (29-05-2023)
ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ.
ತಿಥಿ: ನವಮಿ 11:48 ವಾರ: ಸೋಮವಾರ
ನಕ್ಷತ್ರ: ಉತ್ತರ 28:27 ಯೋಗ: ವಜ್ರ 20:59
ಕರಣ: ಕೌಲವ 11:48
ಅಮೃತಕಾಲ: ರಾತ್ರಿ 08 ಗಂಟೆ 38 ನಿಮಿಷದಿಂದ ರಾತ್ರಿ 10 ಗಂಟೆ 23 ನಿಮಿಷದವರೆಗೆ.
ಸೂರ್ಯೋದಯ: 05:52 ಸೂರ್ಯಾಸ್ತ: 06:42
ರಾಹುಕಾಲ : ಬೆಳಗ್ಗೆ 7.30 ರಿಂದ 9.00
ಗುಳಿಕಕಾಲ: ಮಧ್ಯಾಹ್ನ 1.30 ರಿಂದ 3.00
ಯಮಗಂಡಕಾಲ: ಬೆಳಗ್ಗೆ 10.30 ರಿಂದ 12.00
ಮೇಷ: ನಿಮ್ಮ ಸತತ ಪ್ರಯತ್ನ ಹಾಗೂ ಕುಟುಂಬದ ಸದಸ್ಯರ ಸಕಾಲಿಕ ಬೆಂಬಲದಿಂದಾಗಿ ಕೆಲಸದಲ್ಲಿ ನಿರೀಕ್ಷಿತ ಫಲಿತಾಂಶಗಳು ದೊರೆಯುತ್ತದೆ. ಆರೋಗ್ಯ ಪರಿಪೂರ್ಣ. ಅನಿವಾರ್ಯ ಕಾರಣಗಳಿಂದ ಖರ್ಚು. ಉದ್ಯೋಗದ ಸ್ಥಳದಲ್ಲಿ ಹೆಚ್ಚಿನ ಒತ್ತಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2
ವೃಷಭ: ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿ. ಆರ್ಥಿಕವಾಗಿ ಸುಧಾರಣೆ ಆಗಲಿದೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಕುಟುಂಬ ಸದಸ್ಯರೊಂದಿಗೆ ತಾಳ್ಮೆಯಿಂದ ವರ್ತಿಸಿ. ಅಚಾತುರ್ಯದಿಂದ ಆಡಿದ ಮಾತುಗಳು ಅಪಾಯ ತರುವ ಸಾಧ್ಯತೆ, ಎಚ್ಚರಿಕೆ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2
ಮಿಥುನ: ಹೂಡಿಕೆ ವ್ಯವಹಾರಗಳ ಕುರಿತು ಆಲೋಚನೆ ಮಾಡುವಿರಿ. ಆರ್ಥಿಕವಾಗಿ ಪ್ರಗತಿ. ಅತಿಥಿಗಳ ಆಗಮನದಿಂದ ಅವರೊಂದಿಗೆ ಸಮಯ ಕಳೆಯುವ ಸಾಧ್ಯತೆ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9
ಕಟಕ: ಅತಿಯಾದ ಕೆಲಸದ ಒತ್ತಡದಿಂದ ದೈಹಿಕವಾಗಿ ಬಳಲುವ ಸಾಧ್ಯತೆ. ಅಮೂಲ್ಯ ವಸ್ತುಗಳ ಬಗೆಗೆ ಜಾಗೃತಿ ಇರಲಿ. ಸಂಗಾತಿಯೊಂದಿಗೆ ಮುಖ್ಯ ವಿಷಯಗಳ ಕುರಿತು ಚರ್ಚೆ. ಆರೋಗ್ಯ ಪರಿಪೂರ್ಣ. ಅನಿವಾರ್ಯ ಕಾರಣಗಳಿಂದ ಖರ್ಚು. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3
ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಆಗುವ ಸಾಧ್ಯತೆ,ಎಚ್ಚರವಹಿಸಿ. ಹಿರಿಯರ ಮಾರ್ಗದರ್ಶನ ಪಡೆಯಿರಿ. ಅತಿಯಾದ ಆತ್ಮವಿಶ್ವಾಸದ ಭರದಲ್ಲಿ ದುಡುಕುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6
ಕನ್ಯಾ: ನಿಮ್ಮ ಕ್ರಿಯಾಶೀಲ ಕಾರ್ಯ ಯೋಜನೆ ಸಫಲತೆಯನ್ನು ತಂದು ಕೊಡಲಿದೆ. ಆಪ್ತರು ನಿಮ್ಮ ಸಹನೆಯನ್ನು ಪರೀಕ್ಷಿಸುವ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಪ್ರಗತಿ. ಉದ್ಯೋಗಿಗಳಿಗೆ ಕಿರಿಕಿರಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಆರೋಗ್ಯ ಪರಿಪೂರ್ಣ ಅದರ ಹೊರತಾಗಿಯೂ ಅನೇಕ ವಿಷಯಗಳು ನಿಮಗೆ ಒತ್ತಡ ಉಂಟುಮಾಡುವ ಸಾಧ್ಯತೆ. ಖರ್ಚು ಹೆಚ್ಚಾಗುವ ಸಾಧ್ಯತೆ. ಗೌಪ್ಯ ವಿಷಯಗಳು ಬಹಿರಂಗ ವಾಗದಿರಲಿ. ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕುಟುಂಬದ ಅಸಹಕಾರದಿಂದ ಕಿರಿಕಿರಿ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2
ವೃಶ್ಚಿಕ: ಬಿಡುವಿಲ್ಲದ ಕಾರ್ಯದಿಂದ ಆಯಾಸ, ಇದರಿಂದಾಗಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಆದಷ್ಟು ವಿಶ್ರಾಂತಿ ಪಡೆಯಿರಿ. ಅನಗತ್ಯ ಖರ್ಚು. ಹಿರಿಯರಿಂದ ಮಾರ್ಗದರ್ಶನ. ಉದ್ಯೋಗಿಗಳಿಗೆ ಮಿಶ್ರ ಫಲ. ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 4
ಧನಸ್ಸು: ಸಂತೋಷ ತುಂಬಿದ ವಾತಾವರಣ. ಮಕ್ಕಳಿಗಾಗಿ ಖರ್ಚು ಮಾಡುವ ಸಾಧ್ಯತೆ. ಸಂಗಾತಿಯ ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1
ಮಕರ: ಆತ್ಮವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು. ಈ ದಿನ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ನಿಮ್ಮಲ್ಲಿರುವ ನಾಯಕತ್ವ ಗುಣವನ್ನು ಗುರುತಿಸುವ ಸಾಧ್ಯತೆ. ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1
ಕುಂಭ: ಇಂದು ಕೈಗೊಂಡ ಧರ್ಮಾರ್ಥ ಕಾರ್ಯವು ಮಾನಸಿಕ ಶಾಂತಿ ನೀಡುತ್ತದೆ. ಹಣಕಾಸು ವ್ಯವಹಾರ ಖಂಡಿತವಾಗಿಯೂ ವೃದ್ಧಿಯಾಗುತ್ತದೆ, ಆದರೆ ಅದೇ ಸಮಯದಲ್ಲಿ ಖರ್ಚೂ ತುಂಬಾ ಹೆಚ್ಚಾಗುತ್ತದೆ. ನಿಮ್ಮ ಬಗೆಗೆ ಕಾಳಜಿ ಮಾಡುವವರ ಬಗ್ಗೆ ಉದಾಸೀನತೆ ಬೇಡ. ದೀರ್ಘಕಾಲದ ಪ್ರಯತ್ನಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ. ಆರೋಗ್ಯ ಪರಿಪೂರ್ಣ ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8
ಮೀನ: ವಿನಾಕಾರಣ ವಿಚಾರ ಮಾಡಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದು ಬೇಡ.
ಅನಗತ್ಯವಾಗಿ ಹಣವನ್ನು ಖರ್ಚು ಮಾಡುವ ಸಾಧ್ಯತೆ. ಸಂಗಾತಿಯ ಸಲಹೆ ಹಿತಕರವೆನಿಸುವುದು. ಆತ್ಮೀಯರೊಂದಿಗೆ ಕಾಲ ಕಳೆಯುವ ಸಾಧ್ಯತೆ. ದಿನದ ಮಟ್ಟಿಗೆ ಆರೋಗ್ಯ ಹದಗೆಡುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com
ಇದನ್ನೂ ಓದಿ : ಶುಕ್ರ ಗ್ರಹ ಲಗ್ನದಲ್ಲಿದ್ದರೆ ಉತ್ತಮ ಆರೋಗ್ಯ, ಉಳಿದ ಮನೆಯಲ್ಲಿದ್ದರೆ ಯಾವೆಲ್ಲಾ ಫಲ?