Site icon Vistara News

Horoscope Today | ಶ್ರಾವಣ ಶುಕ್ಲ ತದಿಗೆಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೀಗಿದೆ

horoscope today

horoscope

ಇಂದಿನ ಪಂಚಾಂಗ

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ

ತಿಥಿ: ತೃತೀಯ 28:17 ವಾರ:  ಭಾನುವಾರ
ನಕ್ಷತ್ರ: ಮಘಾ 14:18 ಯೋಗ: ವರಿಯಾನ 19:09
ಕರಣ: ತೈತುಲ 15:41 ದಿನ ವಿಶೇಷ: ಸಂಪತ್‌ಗೌರಿ ವ್ರತ

ಸೂರ್ಯೋದಯ:  06:09     ಸೂರ್ಯಾಸ್ತ: 06:57

ರಾಹು ಕಾಲ : ಸಾಯಂಕಾಲ 4.30 ರಿಂದ 6.00
ಗುಳಿಕಕಾಲ: ಸಾಯಂಕಾಲ 3.00 ರಿಂದ 10.30
ಯಮಗಂಡಕಾಲ: ಮಧ್ಯಾಹ್ನ 12.00 ರಿಂದ 1.30

ದ್ವಾದಶ ರಾಶಿ ಭವಿಷ್ಯ (Horoscope Today)

ಮೇಷ: ನಿಮ್ಮ ವೈಯಕ್ತಿಕ ಜೀವನದಲ್ಲಿ ಇತರರು ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ವಹಿಸಿ. ಅನೇಕ ವಿಚಾರಗಳು ಮಾನಸಿಕ ಒತ್ತಡ ತರುವ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಹಣಕಾಸು ವ್ಯವಹಾರದಲ್ಲಿ ಸಾಧರಣ ಫಲ. ಉದ್ಯೋಗದಲ್ಲಿ ಮಿಶ್ರ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:

ವೃಷಭ: ಬಹಳ ದಿನಗಳ ಕನಸು, ಭೂ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು. ಇಂದು ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ, ಪ್ರೋತ್ಸಾಹ ಸಿಗಲಿದೆ. ಆರೋಗ್ಯದ ಬಗೆಗೆ ಕಾಳಜಿ ಇರಲಿ. ಕುಟುಂಬದಲ್ಲಿ ವಿನಾಕಾರಣ ಕಲಹಗಳು ನಡೆಯದಂತೆ ಎಚ್ಚರಿಕೆ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:

ಮಿಥುನ: ಅತ್ಯಂತ ಉತ್ಸಾಹದ ದಿನವಿಂದು. ಆತುರದಲ್ಲಿ ಹಣ ಹೂಡಿಕೆ ಮಾಡುವುದು ಬೇಡ. ಆರೋಗ್ಯದಲ್ಲಿ ಉತ್ತಮ. ಮಕ್ಕಳ ಕುರಿತಾಗಿ ಚಿಂತಿಸಿ ಉತ್ಸಾಹ ಕಳೆದುಕೊಳ್ಳುವುದು ಬೇಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ಕಟಕ: ಅನಾವಶ್ಯಕ ಒತ್ತಡ ತೆಗೆದುಕೊಳ್ಳುವುದು ಬೇಡ. ಮನೆಯಲ್ಲಿನ ಕಲಹಗಳಿಗೆ ನೀವು ಧ್ವನಿಯಾಗುವುದು ಬೇಡ. ಪ್ರತಿಭೆಗೆ ತಕ್ಕ ಪ್ರೋತ್ಸಾಹ ಸಿಗುವುದು. ಆರ್ಥಿಕ ಪ್ರಗತಿ ಸಾಧಾರಣ. ಸಂಗಾತಿಯ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಆಗುವ ಸಾಧ್ಯತೆ, ಎಚ್ಚರವಹಿಸಿ. ಹಿರಿಯರ ಮಾರ್ಗದರ್ಶನ ಪಡೆಯಿರಿ. ಅತಿಯಾದ ಆತ್ಮವಿಶ್ವಾಸದಿಂದ ಯಾವುದೇ ಕೆಲಸದಲ್ಲಿ ದುಡಕ ಬೇಡಿ, ಯೋಚಿಸಿ ಮುಂದುವರಿಯಿರಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:

ಕನ್ಯಾ: ವ್ಯಾಪಾರ ವ್ಯವಹಾರಗಳಲ್ಲಿ ಕಾರ್ಯ ಸಿದ್ಧಿ. ಪ್ರಯಾಣದಿಂದ ಲಾಭ. ತಾಳ್ಮೆಯಿಂದ ಮಾಡಿದ ಕೆಲಸವು ಫಲ ನೀಡುವುದು.ಆರೋಗ್ಯದಲ್ಲಿ ಉತ್ತಮ. ನೀವಂದುಕೊಂಡಿರುವ ಕೆಲಸವು ಇಂದು ಈಡೇರಬಹುದು. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:

ತುಲಾ: ಪ್ರಸಂಶೆ ಪ್ರೋತ್ಸಾಹ ಸಿಗುವುದು. ನಿಮ್ಮ ಸಭ್ಯ ನಡವಳಿಕೆ ಮೆಚ್ಚುಗೆ ಪಡೆಯುತ್ತದೆ. ಆರ್ಥಿಕ ಸಮಸ್ಯೆಗಳು ಪರಿಹಾರ ಆಗುವವು. ಆದರೂ ಯಾವುದಾದರೂ ಒಂದು ಕೊರತೆ ಕಾಡುವುದು. ಆಧ್ಯಾತ್ಮದ ಹಾದಿಯಲ್ಲಿ ಹೆಜ್ಜೆ ಹಾಕಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:

ವೃಶ್ಚಿಕ: ಅತಿಯಾದ ಮಾನಸಿಕ ಒತ್ತಡ ನಿಮ್ಮನ್ನು ಜರ್ಜರಿತ ರನ್ನಾಗಿ ಮಾಡಬಹುದು, ಆದ್ದರಿಂದ ಇವುಗಳಿಂದ ಹೊರ ಬರಲು ಪ್ರಯತ್ನಿಸಿ. ಮನೆಯಲ್ಲಿ ಮಾತಿಗೆ ಮಾತು ಬೆಳೆದು ಕಲಹವಾಗುವ ಸಾಧ್ಯತೆ ಇದೆ. ನೀವು ತಾಳ್ಮೆಯಿಂದ ವರ್ತಿಸಿ, ಪರಿಸ್ಥಿತಿ ತಿಳಿಗೊಳಿಸಿ. ಮೌನದಿಂದ ಎಲ್ಲ ಕಾರ್ಯಗಳನ್ನೂ ಸಾಧಿಸಿ.
ಅದೃಷ್ಟ ಸಂಖ್ಯೆ:

ಧನಸ್ಸು: ದೀರ್ಘ ಕಾಲದ ಅನಾರೋಗ್ಯ ನಿಮ್ಮನ್ನು ಹಿಂಸೆಗೆ ಗುರಿ ಮಾಡಬಹುದು. ವಿಶ್ವಾದಿಂದ ಕಾರ್ಯ ಸಾಧನೆ ಮಾಡಿ ಶುಭವಾಗುವುದು.ಅರ್ಥಿಕವಾಗಿ ಶುಭ ಫಲವಿದೆ. ವ್ಯಾಪಾರ-ವ್ಯವಹಾರಗಳಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟರೆ ನಿರೀಕ್ಷಿತ ಫಲ ಪಡೆಯಬಹುದು. ಕೌಟುಂಬಿಕವಾಗಿ ಶುಭ ಫಲ
ಅದೃಷ್ಟ ಸಂಖ್ಯೆ:

ಮಕರ: ಅತಿಯಾದ ಭರವಸೆಯಿಂದ ದುಡುಕುವುದು ಬೇಡ. ಆರ್ಥಿಕ ಪ್ರಗತಿ ಉತ್ತಮ. ನಿಮ್ಮ ಪ್ರತಿ ಸ್ಪರ್ಧಿಗಳು ಕೆಟ್ಟದನ್ನು ಮಾಡಬಹುದು. ನೀವು ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಗೆಲುವು ನಿಮ್ಮದಾಗುತ್ತದೆ. ಆರೋಗ್ಯವು ಉತ್ತಮ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:

ಕುಂಭ: ಭೂ ವ್ಯವಹಾರದಲ್ಲಿ ಅನುಕೂಲತೆ. ಸಂಬಂಧಿಕರು ಮತ್ತು ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳು ದೊರೆಯುವವು. ನೀವು ಅಂದುಕೊಂಡಿರುವ ಕೆಲಸಗಳು ಇಂದು ಸಾಧ್ಯವಾಗುತ್ತವೆ. ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:

ಮೀನ: ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ. ಆರ್ಥಿಕ ಪ್ರಗತಿ ಸಾಧಾರಣ. ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಸಿಗುವುದು. ವ್ಯಾಪಾರ-ವ್ಯವಹಾರಗಳಲ್ಲಿ ಇಂದು ಹೆಚ್ಚಿನ ಲಾಭ ಪಡೆಯುವಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

ಇದನ್ನೂ ಓದಿ | ಭಾವಾಶ್ರಿತ ಗ್ರಹಫಲ | ಸೂರ್ಯನು ದಶಮ ಭಾವದಲ್ಲಿದ್ದರೆ ಬಲಿಷ್ಠ

Exit mobile version