Site icon Vistara News

Horoscope Today | ಇಂದು ವರಮಹಾಲಕ್ಷ್ಮೀ ವ್ರತ; ದ್ವಾದಶ ರಾಶಿಗಳ ಭವಿಷ್ಯ ಹೀಗಿದೆ

horoscope today

ವಾರ ಭವಿಷ್ಯ

ಇಂದಿನ ಪಂಚಾಂಗ (05-08-2022)

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ

ತಿಥಿ: ಅಷ್ಟಮಿ 27:56 ವಾರ:  ಶುಕ್ರವಾರ
ನಕ್ಷತ್ರ: ಸ್ವಾತಿ 18:36 ಯೋಗ: ಶುಭ 14:50
ಕರಣ: ವಿಷ್ಟಿ (ಭದ್ರ)16:35 ದಿನ ವಿಶೇಷ: ವರಮಹಾಲಕ್ಷ್ಮೀ ವ್ರತ

ಸೂರ್ಯೋದಯ:  06: ೧೧     ಸೂರ್ಯಾಸ್ತ: 06:57

ರಾಹು ಕಾಲ : ಪ್ರಾತಃ ಕಾಲ 10.30 ರಿಂದ 12.00
ಗುಳಿಕಕಾಲ: ಪ್ರಾತಃ ಕಾಲ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Horoscope Today)

ಮೇಷ: ಇಂದು ನಿಮ್ಮ ದೈಹಿಕ ಶ್ರಮ ಹೆಚ್ಚಲಿದೆ. ಸಂಶಯಾಸ್ಪದವಾದ ಹಣಕಾಸು ವ್ಯವಹಾರದಲ್ಲಿ ತೊಡಗುವುದು ಬೇಡ. ಸಾಮಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ. ಆಪ್ತರಿಂದ ಸಿಹಿ ಸುದ್ದಿ ಬರಬಹುದು. ದಿನದ ಮಟ್ಟಿಗೆ ಖರ್ಚು. ಸಂಗಾತಿಯ ಮಧುರ ಮಾತುಗಳು ಹಿತವೇನಿಸುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ವೃಷಭ: ಕುಟುಂಬದ ಆಪ್ತರಿಂದ ಆರ್ಥಿಕ ಸಹಾಯದ ಬೇಡಿಕೆ. ಮಾನಸಿಕ ಒತ್ತಡ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಮನೋಬಲ ಹೆಚ್ಚಿಸಿಕೊಳ್ಳುವುದು ಅವಶ್ಯಕ. ಅಧೈರ್ಯ ಕಾಡಬಹುದು. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುವುದು. ಆರೋಗ್ಯ ಮಧ್ಯಮ. ಉದ್ಯೋಗಿಗಳಿಗೆ ಇಂದು ಸ್ವಲ್ಪ ಕಿರಿಕಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ಮಿಥುನ: ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುವುದು ವೃಥಾ ಕಾಲಹರಣ, ಬೇರೇನೂ ಲಾಭವಿಲ್ಲ. ಆರ್ಥಿಕವಾಗಿ ಬೇರೆಯವರಿಗೆ ಸಹಾಯ ಮಾಡಿ ನೀವು ಹಣಕಾಸಿನ ಸಮಸ್ಯೆಯಲ್ಲಿ ಸಿಲುಕುವುದು ಬೇಡ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ಕಟಕ: ಕುಟುಂಬದ ಸದಸ್ಯರಿಂದ ಆರ್ಥಿಕ ಬೆಂಬಲ ಸಿಗಲಿದೆ. ಉದ್ಯೋಗಿಗಳಿಗೆ ಶುಭ ಫಲ. ಹಣದ ಹರಿವು ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಪ್ರಗತಿ. ಆರೋಗ್ಯ ಪರಿಪೂರ್ಣ. ಆಪ್ತ ವ್ಯಕ್ತಿಗಳೊಂದಿಗೆ ಮಾತುಕತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ಸಿಂಹ: ಕೆಲವು ಘಟನೆಗಳು ಮನಸ್ಸಿನ ಮೇಲೆ ಪರಿಣಾಮ ಬೀರುವವು. ಆರೋಗ್ಯ ಪರಿಪೂರ್ಣ. ಸಹೋದ್ಯೋಗಿಗಳಿಂದ ಬೆಂಬಲ ಸಿಗಲಿದೆ. ಕ್ಷೇತ್ರ ದರ್ಶನ, ಆಧ್ಯಾತ್ಮಿಕ ಗುರುಗಳ ಮಾರ್ಗದರ್ಶನ ಸಿಗಲಿದೆ. ಉದ್ಯೋಗಿಗಳಿಗೆ ಕಿರಿಕಿರಿಯಾಗುವ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:

ಕನ್ಯಾ: ದೀರ್ಘಕಾಲದ ಕೆಲಸ ಕಾರ್ಯಗಳು ಇಂದು ಯಶಸ್ಸನ್ನು ತಂದು ಕೊಡಲಿವೆ. ಆದಾಯದ ಮೂಲ ಹೆಚ್ಚಾಗಲಿದೆ. ಆಪ್ತರೊಂದಿಗೆ ಮಾತುಕತೆ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ, ಕುಟುಂಬದ ವಾತಾವರಣ ಹದಗೆಡುವ ಸಾಧ್ಯತೆ. ಉದ್ಯೋಗಿಗಳಿಗೆ ಕಿರಿಕಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ತುಲಾ: ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಸ್ನೇಹಿತರೊಂದಿಗೆ ಸಮಯ ಹಂಚಿಕೊಳ್ಳುವಿರಿ. ಹಣಕಾಸು, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಪ್ರಗತಿ. ಈ ಹಿಂದೆ ನಿಮ್ಮನ್ನು ದ್ವೇಷಿಸುತ್ತಿದ್ದ ಜನರು ನಿಮ್ಮೊಂದಿಗೆ ಪ್ರೀತಿಯಿಂದ ವರ್ತಿಸುವ ಸಾಧ್ಯತೆ. ಉದ್ಯೋಗಿಗಳಿಗೆ ಶುಭಕಾಲ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ವೃಶ್ಚಿಕ: ಆರೋಗ್ಯದ ಕುರಿತು ಕಾಳಜಿ ಇರಲಿ. ನ್ಯಾಯಾಲಯದಲ್ಲಿರುವ ವ್ಯಾಜ್ಯಗಳು ವಿಜಯವನ್ನು ತಂದುಕೊಡುವ ಸಾಧ್ಯತೆ. ಹಣಕಾಸು, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಉದ್ಯೋಗಿಗಳಿಗೆ ಯಶಸ್ಸು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ಧನಸ್ಸು: ಮಾನಸಿಕ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ಹಾದಿ ಅತ್ಯವಶ್ಯಕ. ಹಣಕಾಸು ವಿಷಯದಲ್ಲಿ ಪ್ರಗತಿ. ಉದ್ಯೋಗಿಗಳಿಗೆ ಮಿಶ್ರಫಲ. ಕೆಲಸ ಕಾರ್ಯಗಳಲ್ಲಿ ಯಶಸ್ಸು. ಆರೋಗ್ಯ ಉತ್ತಮ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ಮಕರ: ಬುದ್ಧಿವಂತಿಕೆಯಿಂದ ಕೆಲಸಕಾರ್ಯಗಳಲ್ಲಿ ಯಶಸ್ಸು ಕೀರ್ತಿ ಸಿಗುವುದು. ಶೀಘ್ರಕೋಪ ಅಪಾಯ ತರುವುದು. ಆರೋಗ್ಯ ಪರಿಪೂರ್ಣ. ಆರ್ಥಿಕ ಲಾಭ. ಹೊಸ ಸ್ನೇಹಿತರ ಪರಿಚಯವಾಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:

ಕುಂಭ: ದುಂದುವೆಚ್ಚವನ್ನು ತಪ್ಪಿಸಿ. ಬುದ್ದಿವಂತಿಕೆಯಿಂದ ಕೆಲಸಮಾಡಿ, ವ್ಯರ್ಥ ಪ್ರಯತ್ನ ಮಾಡುವುದು ಬೇಡ. ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ. ಆರ್ಥಿಕ ಪ್ರಗತಿ ಸಾಧಾರಣ. ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ಮೀನ: ಮನರಂಜನೆಗಾಗಿ ಸಮಯ ಕಳೆಯುವ ಸಾಧ್ಯತೆ. ಆರೋಗ್ಯ ಮಧ್ಯಮ. ಆರ್ಥಿಕವಾಗಿ ಪ್ರಗತಿ. ನಿಮ್ಮ ಸಂಗಾತಿ ಇಂದು ನಿಮ್ಮೊಂದಿಗೆ ಮುಖ್ಯ ವಿಷಯದ ಕುರಿತು ಚರ್ಚಿಸಬಹುದು. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

ಇದನ್ನೂ ಓದಿ | Saturn In Astrology | ಜಾತಕದಲ್ಲಿ ಶನಿ ಲಗ್ನದಲ್ಲಿದ್ದರೆ ರಾಜನಂತೆ ಮೆರೆಯಬಹುದು! ಉಳಿದ ಮನೆಗಳಲ್ಲಿದ್ದರೆ ಏನು ಫಲ?

Exit mobile version