Site icon Vistara News

Horoscope Today | ಇಂದು ಶ್ರಾವಣ ಶನಿವಾರ; ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

Horoscope Today daily horoscope

Horoscope Today

ಇಂದಿನ ಪಂಚಾಂಗ (06-08-2022)

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ

ತಿಥಿ: ನವಮಿ 26:10 ವಾರ:  ಶನಿವಾರ
ನಕ್ಷತ್ರ: ವಿಶಾಖ 17:50 ಯೋಗ: ಶುಕ್ಲ 12:40
ಕರಣ: ಬಾಲವ 15:07 ದಿನ ವಿಶೇಷ: ಶ್ರಾವಣ ಶನಿವಾರ

ಸೂರ್ಯೋದಯ:  06: ೧೧     ಸೂರ್ಯಾಸ್ತ: 06:57

ರಾಹು ಕಾಲ : ಪ್ರಾತಃ ಕಾಲ 9.00 ರಿಂದ 10.30
ಗುಳಿಕಕಾಲ: ಪ್ರಾತಃ ಕಾಲ  6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00

ದ್ವಾದಶ ರಾಶಿ ಭವಿಷ್ಯ (Horoscope Today)

ಮೇಷ: ಮಾನಸಿಕ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ. ಆಪ್ತ ವ್ಯಕ್ತಿಗಳಿಗೆ ಸಹಾಯ. ಮನೆಯಲ್ಲಿ ಕಲಹಗಳಿಗೆ ಆಸ್ಪದ ಕೊಡಬೇಡಿ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಕಿರಿಕಿರಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

ವೃಷಭ: ಅತಿರೇಕದಲ್ಲಿ ಮಾತನಾಡುವ ಮುನ್ನ ಯೋಚಿಸಿ. ತಿಳಿಯದೆ ನಿಮ್ಮ ಅಭಿಪ್ರಾಯಗಳು ಬೇರೊಬ್ಬರ ಭಾವನೆಗಳಿಗೆ ಧಕ್ಕೆಯುಂಟು ಮಾಡಬಹುದು. ದಿನದ ಮಟ್ಟಿಗೆ ಖರ್ಚು. ಉದ್ಯೋಗಿಗಳಿಗೆ ಶುಭ ಫಲ. ಕುಟಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ:

ಮಿಥುನ: ಆರೋಗ್ಯ ಪರಿಪೂರ್ಣ. ಸ್ನೇಹಿತರಿಗೆ ಸಹಾಯ ಮಾಡುವ ಸಾಧ್ಯತೆ. ಆರ್ಥಿಕ ಪ್ರಗತಿ ಸಾಧಾರಣ. ಸಕರಾತ್ಮಕ ಆಲೋಚನೆಗಳು ಪುಷ್ಟಿ ನೀಡುತ್ತದೆ. ಉದ್ಯೋಗಿಗಳಿಗೆ ಸ್ವಲ್ಪ ಕಿರಿಕಿರಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:

ಕಟಕ: ಕೆಲಸ ಕಾರ್ಯಗಳಲ್ಲಿ ಒತ್ತಡ ಉಂಟುಮಾಡುವ ವಿಚಾರಗಳಿಂದ ದೂರ ಇರಿ. ತಾಳ್ಮೆ ಇರಲಿ. ಅಗತ್ಯಕ್ಕಾಗಿ ಯಾರದಾದರೂ ಹಣದ ಸಹಾಯ ಬೇಡುವ ಸಾಧ್ಯತೆ, ಆಲೋಚಿಸಿ ಮುಂದುವರಿಯಿರಿ. ಆರೋಗ್ಯದ ಬಗೆಗೆ ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:

ಸಿಂಹ: ಇತರರು ನಿಮ್ಮ ಕಾರ್ಯಗಳಿಗೆ ಪ್ರಶಂಸೆ ವ್ಯಕ್ತಪಡಿಸುವರು. ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಆರ್ಥಿಕ ಪ್ರಗತಿ ಸಾಧಾರಣ. ಉದ್ಯೋಗ, ಆರೋಗ್ಯ, ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ಕನ್ಯಾ: ನಿಮ್ಮ ಒತ್ತಡವನ್ನು ಇತರರ ಮೇಲೆ ಹಾಕಿ ಕೋಪಗೊಳ್ಳುವುದು ಬೇಡ. ಸಮಾಧಾನದಿಂದ ವರ್ತಿಸಿ. ಆರ್ಥಿಕವಾಗಿ ಸಾಧಾರಣ. ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ತುಲಾ: ಆಪ್ತರೊಂದಿಗೆ ಬಾಲ್ಯದ ನೆನಪು ಹಂಚಿಕೊಳ್ಳುವಿರಿ. ಮನಸ್ಸಿನ ಒತ್ತಡ ಈ ಮೂಲಕ ಹೊರಹಾಕುವಿರಿ. ಆರೋಗ್ಯ ಮಧ್ಯಮ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ. ಕಾರ್ಯದಲ್ಲಿ ನಿಧಾನ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.ಆರ್ಥಿಕವಾಗಿ ಪ್ರಗತಿ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಪ್ರತಿಫಲ ಸಿಗುವುದು. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ. ಈ ಹಿಂದೆ ನಿಮ್ಮನ್ನು ದ್ವೇಷಿಸುತ್ತಿದ್ದ ಜನರು ನಿಮ್ಮೊಂದಿಗೆ ಪ್ರೀತಿಯಿಂದ ವರ್ತಿಸುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ಧನಸ್ಸು: ಚುರುಕು ತನದಿಂದ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ಹೂಡಿಕೆ ವ್ಯವಹಾರದಲ್ಲಿ ಲಾಭ. ಹೊಸ ಸ್ನೇಹಿತರ ಪರಿಚಯ ಆಗಲಿದೆ. ಆರೋಗ್ಯ ಪರಿಪೂರ್ಣ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ಮಕರ: ಸಮಯ ವ್ಯರ್ಥಮಾಡಿ ಕೊರಗುವುದು ಬೇಡ. ಅನಗತ್ಯವಾಗಿ ಖರ್ಚು ಮಾಡುವ ಸಾಧ್ಯತೆ. ಉತ್ತಮ ಆಲೋಚನೆಗಳು ಇರಲಿ. ಹಳೆಯ ನೆನಪುಗಳು ಮಾನಸಿಕ ಒತ್ತಡ ಉಂಟುಮಾಡುವ ಸಾಧ್ಯತೆ. ದೈಹಿಕ ಆರೋಗ್ಯ ಉತ್ತಮ. ವಿನಾಕಾರಣ ಕುಟುಂಬದ ಸದಸ್ಯರೊಂದಿಗೆ ಕಲಹಗಳು ಸೃಷ್ಟಿ ಆಗುವ ಸಾಧ್ಯತೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:

ಕುಂಭ: ಅಧಿಕ ಶ್ರಮದಿಂದ ಆರೋಗ್ಯ ಕೊಂಚ ಹದಗೆಡುವ ಸಾಧ್ಯತೆ, ಕಾಳಜಿ ಇರಲಿ. ಸಾಂಕ್ರಮಿಕ ರೋಗ ಕಾಡುವ ಭೀತಿ ಇದೆ, ಆದಷ್ಟು ಮುಂಜಾಗ್ರತೆ ವಹಿಸುವುದು ಒಳ್ಳೆಯದು. ಸ್ನೇಹಿತರ ಸಹಕಾರ ಸಿಗಲಿದೆ. ಸಂಗಾತಿಯೊಂದಿಗೆ ಮಾತು ಬೆಳೆಸುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:

ಮೀನ: ಅಗತ್ಯ ವಸ್ತುಗಳ ಖರೀದಿಯಿಂದ ಖರ್ಚು. ಆರೋಗ್ಯ ಪರಿಪೂರ್ಣ. ಕುಟುಂಬದಲ್ಲಿ ಕಲಹಗಳಿಗೆ ಅವಕಾಶ ಮಾಡಿಕೊಡಬೇಡಿ. ಉದ್ಯೋಗದಲ್ಲಿ ಹೊಸ ಭರವಸೆ. ಮನಸ್ಸಿನ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ಸಾಧನೆ ಮಾಡಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

Exit mobile version