ಇಂದಿನ ಪಂಚಾಂಗ
ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ
ತಿಥಿ: ಪಾಡ್ಯ 25:20 ವಾರ: ಶುಕ್ರವಾರ
ನಕ್ಷತ್ರ: ಪುಷ್ಯ 09:45 ಯೋಗ: ಸಿದ್ಧಿ 18:33
ಕರಣ: ಕಿಂಸ್ತುಘ್ನ 12:24 ದಿನ ವಿಶೇಷ : ಶ್ರಾವಣ ಮಾಸ ಆರಂಭ
ಸೂರ್ಯೋದಯ: 06:09 ಸೂರ್ಯಾಸ್ತ: 06:57
ರಾಹು ಕಾಲ : ಪ್ರಾತಃ ಕಾಲ 10.30 ರಿಂದ 12.00
ಗುಳಿಕಕಾಲ: ಪ್ರಾತಃ ಕಾಲ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30
ದ್ವಾದಶ ರಾಶಿ ಭವಿಷ್ಯ (Horoscope Today)
ಮೇಷ: ಹೊಸದಾದ ಹಣಕಾಸಿನ ವ್ಯವಹಾರ ಲಾಭವೆಂದು ಕಂಡರು ಅಷ್ಟೇನೂ ಲಾಭ ಸಿಗುವುದಿಲ್ಲ. ಮಾನಸಿಕ ನೆಮ್ಮದಿಗಾಗಿ ಒತ್ತಡದಿಂದ ಹೊರಬರಲು ಯೋಗ, ಧ್ಯಾನ ಮಾಡಿ. ಇವು ದಿನವಿಡೀ ನೀವು ಉತ್ಸಾಹದಿಂದ ಇರುವಂತೆ ಮಾಡುತ್ತವೆ. ಆಪ್ತ ಸಂಬಂಧಿಗಳೊಂದಿಗೆ ಮಾತುಕತೆ ನಡೆಸಿ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: ೨
ವೃಷಭ: ಕುಟುಂಬದ ಆಪ್ತರೊಂದಿಗೆ ಪ್ರಯಾಣ ಮಾಡುವ ಸಾಧ್ಯತೆ. ನಿಮ್ಮ ವರ್ತನೆಯಿಂದ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: ೨
ಮಿಥುನ: ಆರೋಗ್ಯದ ಕಡೆಗೆ ಗಮನ ಹರಿಸಿ. ದಿನದ ಮಟ್ಟಿಗೆ ಖರ್ಚು. ಸಂಗಾತಿಯೊಂದಿಗೆ ವಿನಾಕಾರಣ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಗೌಪ್ಯವಿಷಯಗಳು ಕಾರ್ಯದಲ್ಲಿ ಯಶಸ್ಸು ತರುವವರೆಗೆ ರಟ್ಟಾಗದಿರಲಿ. ಧರ್ಮ ಕಾರ್ಯಗಳಿಗೆ ಖರ್ಚು. ಉದ್ಯೋಗಿಗಳಿಗೆ ಒತ್ತಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: ೯
ಕಟಕ: ಇತರರು ತಮಗೆ ನೀಡುವ ಸಲಹೆಗಳಿಗೆ ಮನ್ನಣೆ ನೀಡಿ. ತಪ್ಪು ಹಾಗೂ ಆತುರದ ನಿರ್ಧಾರ ಕೈಗೊಂಡ ಮೇಲೆ ಪಶ್ಚಾತಪ ಪಡುವುದು ಬೇಡ. ಒತ್ತಡದಿಂದ ದೂರ ಇರಿ. ಪ್ರಸಂಶೆ ಸಿಗಲಿದೆ. ಆರೋಗ್ಯ ಮಧ್ಯಮ. ಉದ್ಯೋಗದಲ್ಲಿ ಯಶಸ್ಸು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: ೩
ಸಿಂಹ: ಮನೋರಂಜನೆಗಾಗಿ ಖರ್ಚು. ಅವಸರದಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುವುದೂ ಬೇಡ. ಬೇರೆಯವರಿಗೆ ಸಲಹೆಗಳನ್ನು ನೀಡುವ ಸಾಧ್ಯತೆ. ಬಾಕಿ ಇರುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯ ಉತ್ತಮ. ವ್ಯಪಾರ ವ್ಯವಹಾರಗಳಲ್ಲಿ ಮಧ್ಯಮ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: ೨
ಕನ್ಯಾ: ಇತರರೊಂದಿಗೆ ಅನಾವಶ್ಯಕವಾಗಿ ವಾದಕ್ಕೆ ಇಳಿಯುವುದು ಬೇಡ. ಹಿಂದೆ ಪಡೆದಿರುವ ಸಾಲವನ್ನು ಮರಳಿಸುವ ಸಾಧ್ಯತೆ. ತಾಳ್ಮೆಯಿಂದ ವರ್ತಿಸಿ. ಕುಟುಂಬದ ಸಹಕಾರ ಸಿಗಲಿದೆ. ಆರೋಗ್ಯ ಉತ್ತಮ. ಉದ್ಯೋಗಿಗಳಿಗೆ ಹಾಗೂ ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: ೯
ತುಲಾ: ದೀರ್ಘಕಾಲದ ಅನಾರೋಗ್ಯ ಉಲ್ಬಣಗೊಳ್ಳುವ ಸಾಧ್ಯತೆ. ಮಾನಸಿಕ ಒತ್ತಡ ಹೆಚ್ಚಾಗಲಿದೆ, ಆದಷ್ಟು ಧ್ಯಾನ, ಕ್ಷೇತ್ರ ದರ್ಶನ, ಆಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ ಪಡೆಯುವುದು ಒಳ್ಳೆಯದು. ಆಲಸ್ಯದಿಂದ ಕಾರ್ಯ ವಿಳಂಬವಾಗುವ ಸಾಧ್ಯತೆ. ಹಣಕಾಸು, ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: ೨
ವೃಶ್ಚಿಕ: ನಿಮ್ಮ ಉದಾರತೆ ಸ್ವಭಾವ ಇಮ್ಮಡಿ ಸಂತೋಷ ತರುವುದು. ಧರ್ಮ ಕಾರ್ಯಗಳಿಗೆ ಖರ್ಚು ಮಾಡುವ ಸಾಧ್ಯತೆ. ದೀರ್ಘಕಾಲದ ಕಾರ್ಯ ಯೋಜನೆ ಅಪಾರ ಯಶಸ್ಸನ್ನು ತಂದುಕೊಡಲಿದೆ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: ೪
ಧನಸ್ಸು: ಹಣಕಾಸಿನ ಹೂಡಿಕೆ ವ್ಯವಹಾರದಲ್ಲಿ ತೊಡುಗುವ ಮುನ್ನ ಆಲೋಚಿಸಿ ಮುಂದೆ ಹೆಜ್ಜೆ ಇಡಿ. ಆರೋಗ್ಯ ಉತ್ತಮ. ಆದಷ್ಟು ಒತ್ತಡದಿಂದ ಮುಕ್ತರಾಗಿ. ಆಪ್ತರ, ಹಿರಿಯರ ಮಾರ್ಗದರ್ಶನ ಸಿಗಲಿದೆ. ಆಪ್ತರಿಂದ ಶುಭ ಸುದ್ದಿ ಕೇಳುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: ೧
ಮಕರ: ಎಂದು ಕಾಣದ ಆಶಾಭಾವನೆ, ಸಂತೋಷ, ನೆಮ್ಮದಿ ಸಿಗುವ ಸಾಧ್ಯತೆ. ಹಣಗಳಿಕೆ ಆಗಲಿದೆ. ಮನದಲ್ಲಿ ಗೊತ್ತಿಲ್ಲದಂತೆ ಪ್ರೇಮಾಂಕುರವಾಗಲಿದೆ. ಬಾಕಿ ಇರುವ ಕಾರ್ಯಗಳಲ್ಲಿ ಯಶಸ್ಸು ಕೀರ್ತಿ ಸಿಗುವುದು. ಆರೋಗ್ಯ ಉತ್ತಮ. ಆತುರದಲ್ಲಿ ಯಾವುದೇ ಸಂಕಲ್ಪ ಬೇಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: ೧
ಕುಂಭ: ಅತಿಯಾದ ಕೆಲಸದಿಂದ ಒತ್ತಡ ತಂದುಕೊಳ್ಳುವುದು ಬೇಡ. ಆದಷ್ಟು ತಾಳ್ಮೆಯಿಂದ ವರ್ತಿಸಿ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ, ಆಸ್ತಿ ಖರೀದಿ ಲಾಭ ತರಲಿದೆ. ಕುಟುಂಬದವರ ಬೆಂಬಲ ಸಿಗಲಿದೆ. ಉದ್ಯೋಗಿಗಳಿಕೆ ಕಿರಿಕಿರಿ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: ೮
ಮೀನ: ನಿಮ್ಮ ಅಸಡ್ಡೆ ವರ್ತನೆ ಹಿರಿಯರ ಮನಸ್ಸಿಗೆ ನೋವು ತರುವ ಸಾಧ್ಯತೆ. ಆರೋಗ್ಯ ಮಧ್ಯಮ. ಆರ್ಥಿಕ ಪ್ರಗತಿ. ಉದ್ಯೋಗಿಗಳಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಯಾರೊಂದಿಗೂ ಅತಿಯಾದ ಸಲುಗೆ ಒಳ್ಳೆಯದಲ್ಲ. ನಿಮ್ಮ ಬಗ್ಗೆ ಟೀಕೆಗಳು ಶುರು ಆದವು, ಎಚ್ಚರಿಕೆ ಇರಲಿ. ಕೌಟುಂಬಿಕವಾಗಿ ಮಧ್ಯಮ ಫಲ.
ಅದೃಷ್ಟ ಸಂಖ್ಯೆ: ೬
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com
ಇದನ್ನೂ ಓದಿ | Saturn In Astrology | ಜಾತಕದಲ್ಲಿ ಶನಿ ಲಗ್ನದಲ್ಲಿದ್ದರೆ ರಾಜನಂತೆ ಮೆರೆಯಬಹುದು! ಉಳಿದ ಮನೆಗಳಲ್ಲಿದ್ದರೆ ಏನು ಫಲ?