ಕಾಲ ಕಾಲಕ್ಕೆ ಗ್ರಹಗಳು ಒಂದು ಮನೆಯಿಂದ ಮತ್ತೊಂದು ಮನೆಗೆ ಸಂಚಾರ ನಡೆಸುತ್ತಲೇ ಇರುತ್ತವೆ. ಇದರಿಂದಾಗಿಯೇ ಪ್ರತಿಯೊಬ್ಬರ ಗ್ರಹಗತಿ ಬದಲಾಗುತ್ತಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ರೀತಿಯ ಗ್ರಹಗಳ ಸಂಚಾರಕ್ಕೆ ವಿಶೇಷ ಮಹತ್ವವನ್ನು ನೀಡಲಾಗುತ್ತದೆ. ಈ ರೀತಿ ಗ್ರಹಗಳ ಸಂಚಾರ (Mars Transit 2023) ಪ್ರತಿಯೊಂದು ರಾಶಿಗಳ ಮೇಲೆ ಯಾವೆಲ್ಲಾ ಪರಿಣಾಮ ಬೀರುತ್ತವೆ ಎಂಬುದನ್ನು ನೋಡಲಾಗುತ್ತದೆ.
ಮಂಗಳ ಗ್ರಹವನ್ನು ಸೌರ ಮಂಡಲದ ಸೇನಾಧಿಪತಿ ಎಂದು ಕರೆಯುತ್ತಾರೆ. ಸಾಹಸ, ಉತ್ಸಾಹ, ಪರಿಶ್ರಮ ಮತ್ತು ಪರಾಕ್ರಮದ ಕಾರಕ ಗ್ರಹವಾಗಿರುವ ಮಂಗಳ ಗ್ರಹವು ಇದೇ ಜನವರಿ 13ರಂದು ಮಾರ್ಗಿ ಸ್ಥಿತಿಯಲ್ಲಿ ವೃಷಭ ರಾಶಿಗೆ ಪ್ರವೇಶಿಸಲಿದೆ. ಮಂಗಳನ ಈ ಸಂಚಾರದಿಂದ ಕೆಲವು ರಾಶಿಗಳ ಮೇಲೆ ಶುಭ ಪ್ರಭಾವ ಉಂಟಾಗಲಿದೆ. ಆ ರಾಶಿಗಳು ಯಾವವು ಎಂಬುದನ್ನು ತಿಳಿಯೋಣ. ಜೊತೆಗೆ ಜಾತಕದಲ್ಲಿ ಮಂಗಳ ಗ್ರಹದ ಉಚ್ಛ ಸ್ಥಿತಿಯ ಪರಿಣಾಮದಿಂದಾಗಿ ಭಾಗ್ಯವನ್ನು ಪಡೆಯುವ ರಾಶಿಗಳು ಯಾವವು ನೋಡೋಣ.
ಯಾವೆಲ್ಲಾ ರಾಶಿಗೆ ಶುಭ ಫಲ?
ಕಟಕ: ಈ ರಾಶಿಯವರ ವ್ಯಾಪಾರ ಮತ್ತು ಉದ್ಯೋಗಕ್ಕೆ ತಕ್ಕ ಫಲ ದೊರೆಯಲಿದೆ. ಮಂಗಳ ಗ್ರಹದ ಮಾರ್ಗಿ ಪರಿವರ್ತನೆಯಿಂದಾಗಿ ಆರ್ಥಿಕ ಲಾಭ ಉಂಟಾಗುವುದಲ್ಲದೇ, ಗೌರವ ಮತ್ತು ಪ್ರತಿಷ್ಠೆಗಳು ಹೆಚ್ಚುತ್ತವೆ. ಶೇರ್ ಮಾರ್ಕೆಟ್‌ಗಳಲ್ಲಿ ಹೂಡಿಕೆ ಮಾಡಿದವರಿಗೆ ಹೆಚ್ಚಿನ ಲಾಭ ದೊರೆಯಲಿದೆ. ವ್ಯಕ್ತಿಗತವಾಗಿ ಮತ್ತು ಉದ್ಯೋಗದಲ್ಲಿಯೂ ಅತ್ಯಂತ ಸಫಲತೆ ದೊರೆಯಲಿದೆ. ಮಕ್ಕಳ ಜೊತೆ ಸಂಬಂಧ ಸುಧಾರಿಸಲಿದೆ.
ಮಕರ: ಈ ರಾಶಿಯ ವ್ಯಕ್ತಿಗಳಿಗೆ ಕಾರ್ಯಕ್ಷೇತ್ರದಲ್ಲಿ ಬಡ್ತಿ ಸಿಗಲಿದೆ. ಮಂಗಳ ಗ್ರಹ ಮಾರ್ಗಿ ಸಂಚಾರದಿಂದ ಈ ರಾಶಿಯ ವ್ಯಾಪರಸ್ಥರಿಗೆ ಅತ್ಯಂತ ಲಾಭ ಉಂಟಾಗಲಿದೆ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಫಲ ದೊರಕಲಿದೆ. ಧ್ಯಾನ ಮತ್ತು ಯೋಗ ಮಾಡುವ ಮೂಲಕ ಮಾನಸಿಕ ಮತ್ತು ಶಾರಿರೀಕ ಸ್ವಾಸ್ಥ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.
ಕುಂಭ: ಈ ರಾಶಿಯ ವ್ಯಕ್ತಿಗಳಿಗೆ ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಸಿಗಲಿದೆ. ಹೆಚ್ಚಿನ ಜವಾಬ್ದಾರಿಯನ್ನು ನಿಭಾಯಿಸುವ ಮನಸ್ಥಿತಿಯನ್ನು ಹೊಂದುವ ಅಗತ್ಯವೂ ಇದೆ. ಜಮೀನು, ಆಸ್ತಿ, ನಿವೇಶನ ಅಥವಾ ವಾಹನಗಳ ಖರೀದಿ ಮಾತುಕತೆ ಲಾಭ ತರಲಿದೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಲ್ಲದೇ, ಅವರ ಅಗತ್ಯತೆಗಳನ್ನು ಪೂರೈಸುವಲ್ಲಿ ಗಮನಹರಿಸುವುದು ಉತ್ತಮ. ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲಕರವಾಗಿರುತ್ತದೆ.
ಸೌಭಾಗ್ಯ ಮತ್ತು ಸಂಪತ್ತನ್ನು ಪಡೆಯುವ ರಾಶಿಗಳಿವು
ಮೇಷ: ಈ ರಾಶಿಯ ದ್ವಿತೀಯ ಭಾವದಲ್ಲಿ ಮಾರ್ಗಿಯಾಗುತ್ತಿರುವ ಮಂಗಳ ಗ್ರಹದ ಪರಿಣಾಮದಿಂದಾಗಿ ಈ ರಾಶಿಯವರಿಗೆ ಶುಭ ಪ್ರಭಾವ ಉಂಟಾಗಲಿದೆ. ಇದು ಹಣ ಮತ್ತು ವಾಣಿಯ ಸ್ಥಾನವಾಗಿದ್ದು, ಈ ವ್ಯಕ್ತಿಗಳಿಗೆ ಆಕಸ್ಮಿಕ ಧನ ಲಾಭ ಉಂಟಾಗುವ ಸಾಧ್ಯತೆ ಇದೆ. ಆದಾಯವು ಹೆಚ್ಚಲಿದ್ದು ಆರ್ಥಿಕ ಸ್ಥಿತಿ ಉತ್ತಮವಾಗಲಿದೆ.
ಸಿಂಹ: ರಾಶಿಯ ದಶಮ ಭಾವದಲ್ಲಿ ಮಾರ್ಗಿಯಾಗುತ್ತಿರುವ ಮಂಗಳ ಗ್ರಹವು ಈ ರಾಶಿಯವರಿಗೆ ಭಾಗ್ಯವನ್ನು ತಂದುಕೊಡಲಿದೆ. ಇದು ಉದ್ಯೋಗ ಮತ್ತು ಕಾರ್ಯಕ್ಷೇತ್ರದ ಸ್ಥಾನವೆಂದು ಹೇಳಲಾಗುತ್ತದೆ. ಇದರಿಂದಾಗಿ ಹೊಸ ಉದ್ಯೋಗಾವಕಾಶಗಳು ಲಭಿಸುವ ಸಾಧ್ಯತೆ ಇದೆ. ಜೊತೆಗೆ ಆದಾಯವು ಸಹ ಹೆಚ್ಚಲಿದೆ.
ಕನ್ಯಾ: ಈ ರಾಶಿಯ ನವಮ ಭಾವದಲ್ಲಿ ಮಾರ್ಗಿಯಾಗುತ್ತಿರುವ ಮಂಗಳ ಗ್ರಹವು ಈ ರಾಶಿಯವರಿಗೆ ಅದೃಷ್ಟವನ್ನು ತಂದುಕೊಡಲಿದೆ. ಇದು ಭಾಗ್ಯ ಮತ್ತು ವಿದೇಶ ಯೋಗದ ಸ್ಥಾನವೆಂದು ಹೇಳಲಾಗುತ್ತದೆ. ಇದರಿಂದ ಕಾರ್ಯಕ್ಷೇತ್ರದಲ್ಲಿ ಸಫಲತೆಯು ಸಿಗಲಿದೆ. ಮಂಗಳ ಗ್ರಹದ ಕೃಪೆಯಿಂದಾಗಿ ವಿದೇಶ ಯಾತ್ರೆಯ ಯೋಗವು ಸಹ ದೊರಕಲಿದೆ.
ಇದನ್ನೂ ಓದಿ| Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ರಾಶಿಗಳಿಗೆ ಶುಭಾಶುಭ ಫಲಗಳಿವೆ?; ಇಲ್ಲಿದೆ ವರ್ಷ ಭವಿಷ್ಯ