Site icon Vistara News

Mars Transit 2023 : ಸಿಂಹ ರಾಶಿಗೆ ಕುಜನ ಸಂಚಾರ; ಯಾವ ರಾಶಿಗೆ ಶುಭ? ಅಶುಭ?

Mars Transit 2023 ಮಂಗಳ ಸಂಚಾರ

Mars Transit 2023 How it will impact different zodiac signs

ಆಚಾರ್ಯ ಶ್ರೀ ವಿಠ್ಠಲ ಭಟ್ಟ ಕೆಕ್ಕಾರು
ಮಂಗಳ ಗ್ರಹವನ್ನು ಸೌರ ಮಂಡಲದ ಸೇನಾಧಿಪತಿ ಎಂದು ಕರೆಯುತ್ತಾರೆ. ಸಾಹಸ, ಉತ್ಸಾಹ, ಪರಿಶ್ರಮ ಮತ್ತು ಪರಾಕ್ರಮ ಕಾರಕ ಗ್ರಹವಾಗಿರುವ ಮಂಗಳ ಗ್ರಹವು ಇಂದು ಅಂದರೆ ಜುಲೈ 01 ರಂದು ಸಿಂಹ ರಾಶಿಗೆ (Mars Transit 2023) ಪ್ರವೇಶಿಸಲಿದೆ. ಆಗಸ್ಟ್‌ 18ರ ವರೆಗೆ ಈ ರಾಶಿಯಲಿದ್ದು, ಮುಂದೆ ಕನ್ಯಾ ರಾಶಿಗೆ ಪ್ರವೇಶಿಸಲಿದೆ.

ಕುಜ, ಅಂಗಾರ ಎಂದೆಲ್ಲಾ ಕರೆಯಲ್ಪಡುವ ಈ ಗ್ರಹ ಭೂಮಿಯ ಪುತ್ರ ಎಂದು ಜ್ಯೋತಿಷ ಶಾಸ್ತ್ರದಲ್ಲಿ ಹೇಳಲಾಗಿದೆ. ಮಂಗಳನಲ್ಲಿನ ವಾತಾವರಣದ ಬಗ್ಗೆ ಈಗ ಅಧ್ಯಯನಗಳು ನಡೆಯುತ್ತಿವೆ. ಆದರೆ ಆಗಲೇ ನಮ್ಮವರು ಅಂಗಾರಕನಲ್ಲಿನ ವಾತಾವರಣ, ಅಲ್ಲಿಯ ಸ್ಥಿತಿಯನ್ನು ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದಾರೆ. ಇದುವರೆಗೂ ಕುಜ ಕರ್ಕಟಕ ರಾಶಿಯಲ್ಲಿ, ನೀಚ ಸ್ಥಿತಿಯಲ್ಲಿದ್ದ. ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿತ್ತು. ಕಳೆದ 45 ದಿನಗಳ ಕಾಲ ಏನೆಲ್ಲಾ ಸಮಸ್ಯೆಗಳನ್ನು ನಾವು ಎದುರಿಸಿದ್ದೇವೋ ಅದಕ್ಕೆ ಕುಜನ ನೀಚ ಸ್ಥಿತಿಯೇ ಕಾರಣ. ಮಳೆ ಬಾರದೆ, ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳವಾಗಲೂ ಕುಜನ ಈ ನೀಚ ಸ್ಥಿತಿ ಕಾರಣವಾಗಿದೆ. ದ್ವಾದಶ ರಾಶಿಗಳೆಲ್ಲರೂ ಕುಜನ ಪರಿಣಾಮದಿಂದಾಗಿ ಕಷ್ಟನಷ್ಟವನ್ನು ಎದುರಿಸಬೇಕಾಗಿ ಬಂದಿತ್ತು.

ಈಗ ಕುಜ ಕರ್ಕಟಕ ರಾಶಿಯಿಂದ ಹೊರಬಂದು ಸಿಂಹ ರಾಶಿಗೆ ಸಂಚಾರ ನಡೆಸುತ್ತಿರುವುದು ಸಮಾಧಾನದ ತರುವಂತಹದ್ದು. ಕುಜ ಎಂದರೆ ಕೆಂಡ ಇದ್ದ ಹಾಗೆ. ಕುಜ ಇದ್ದಲ್ಲಿ ಉದ್ರಿಕ್ತವಾತಾರವಣ, ಕೋಪ, ಉಗ್ರತೆ ಇರುತ್ತದೆ. ಕುಜನ ಸ್ವಭಾವ ಅರ್ಥಮಾಡಿಕೊಂಡರೆ ಆತನ ಪ್ರಭಾವ ಏನೆಂದು ತಿಳಿದುಕೊಳ್ಳಬಹುದು. ಕುಜನ ಈ ಸಂಚಾರ ದ್ವಾದಶ ರಾಶಿಗಳ ಮೇಲೂ ಪರಿಣಾಮ ಬೀರುತ್ತವೆ. ಮೇಷ ಮತ್ತು ವೃಶ್ಚಿಕ ರಾಶಿಯವರಿಗೆ ರಾಶ್ಯಾಧಿಪತಿಯೇ ಕುಜವಾಗಿರುವುದರಿಂದ ಈ ರಾಶಿಗಳ ಮೇಲೆ ಪ್ರಭಾವ ಹೆಚ್ಚಿರುತ್ತದೆ.

ಅಂಗಾರಕನ ಈ ಸಂಚಾರದಿಂದ ದ್ವಾದಶ ರಾಶಿಗಳ ಮೇಲೆ ಯಾವೆಲ್ಲಾ ಪರಿಣಾಮಗಳಾಗಲಿವೆ ನೋಡೋಣ;

ಮೇಷ : ಮೇಷ ರಾಶಿಯವರಿಗೆ ಇದು ನೆಮ್ಮದಿಯ ಸಮಯ. ಆರೋಗ್ಯದಲ್ಲಿ ವೃದ್ಧಿ, ಸಮಾಜದಲ್ಲಿ ಪ್ರಾಮುಖ್ಯತೆ ಲಭ್ಯ. ಕೈ ಹಾಕಿದ ಕೆಲಸಗಳು ನೆರವೇರುವುವು. ಒಟ್ಟಾರೆಯಾಗಿ ಈ ರಾಶಿಯವರಿಗೆ ಇದು ಉತ್ತಮ ದಿನಗಳು.

ವೃಷಭ: ಈ ರಾಶಿಯವರ ದಾಂಪತ್ಯ ಕಲಹಗಳು ಸರಿಹೋಗುವ ಸಮಯ. ಅವಿವಾಹಿತರಿಗೆ ವಿವಾಹವಾಗುವ ಅನುಕೂಲಗಳಿವೆ. ಪಾಲುದಾರಿಕೆಯ ಕೆಲಸದಲ್ಲಿ ಲಾಭ ಪಡೆಯಬಹುದು.

ಮಿಥುನ: ಈ ರಾಶಿಯ ವ್ಯಾಪಾರಿಗಳಿಗೆ ಅನುಕೂಲ. ಮನೆಯಲ್ಲಿ ಸಹೋದರರೊಂದಿಗೆ ಜಗಳವಾಗುವ ಸಾಧ್ಯತೆ. ಕೆಲಸ ಕಾರ್ಯದಲ್ಲಿ ಲಾಭ ಉಂಟಾಗಲಿದೆ. ಸಾಲ ಸೌಲಭ್ಯಗಳು ದೊರಕುತ್ತವೆ.

ಕಟಕ : ಈ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅಧ್ಯಯನದಲ್ಲಿ ಯಶಸ್ಸು ಪಡೆಯುತ್ತಾರೆ. ವಿವಾಹಿತ ಸ್ತ್ರೀಯರಿಗೆ ತವರಿನಿಂದ ಭೂಮಿ, ಹಣ ಸಿಗುವ ಸಾಧ್ಯತೆಗಳಿವೆ.

ಸಿಂಹ : ಈ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿ ಸಿಗುವ ಸಾಧ್ಯತೆ ಇದೆ. ಮಗ ಮತ್ತು ತಂದೆಯ ನಡುವೆ ಭಾಂಧವ್ಯ ವೃದ್ಧಿಯಾಗಲಿದೆ. ಸಿಟ್ಟು ಹೆಚ್ಚಾಗುತ್ತದೆ, ಇದರಿಂದ ಶರೀರದಲ್ಲಿ ಉಷ್ಣಾಂಶ ಜಾಸ್ತಿ.
ಆಹಾರ ಸೇವನೆ ಮಾಡುವಾಗ ಹೆಚ್ಚಿನ ಗಮನ ನೀಡುವುದು ಅಗತ್ಯ.

ಕನ್ಯಾ: ಸಹೋದರರೊಂದಿಗೆ ಕಲಹ, ಮನಸ್ತಾಪಗಳಾಗಬಹುದು. ಆರೋಗ್ಯದಲ್ಲಿ ಏರುಪೇರು.
ವಿವಾಹಿತ ಸ್ತ್ರೀಯರ ಯಜಮಾನರ ಆರೋಗ್ಯ ಸಮಸ್ಯೆ ಎದುರಿಸಬೇಕಾಗಿ ಬರಬಹುದು.

ತುಲಾ: ಕುಜನ ಬಲ ದೊರೆಯಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ. ಆರ್ಥಿಕ ವೃದ್ಧಿಯ ಅವಕಾಶಗಳಿವೆ.
ದೂರ ಪ್ರಯಾಣದ ಸಾಧ್ಯತೆ. ವರ್ಗಾವಣೆ ಕೈ ಹಿಡಿಯಲಿದೆ. ಕೌಟುಂಬಿಕ ಕಲಹಗಳಿಂದ ಮುಕ್ತಿ.

ವೃಶ್ಚಿಕ : ಮಿಶ್ರ ಫಲದ ಯೋಗವಿದೆ. ಉದ್ಯೋಗದಲ್ಲಿ ಅನುಕೂಲ. ಶತ್ರುಗಳ ಸಂಖ್ಯೆ ಹೆಚ್ಚಾಗುತ್ತದೆ. ಸಾಲಾ ಬಾಧೆ ಆಗುವ ಸಂಭವ. ಕೆಲಸ ಮಾಡುವ ಸ್ಥಳದಲ್ಲಿ ಜಗಳ ಹಾಗೂ ಮನಸ್ತಾಪಗಳಾಗಬಹುದು.

ಧನು: ತಂದೆಯೊಂದಿಗೆ ಕಲಹ ಸಂಭವ. ಪಿತ್ರಾರ್ಜಿತ ಆಸ್ತಿ, ಭೂಮಿ ಸ್ಪಲ್ಪದರಲ್ಲಿ ಕೈ ತಪ್ಪುವ ಸಾಧ್ಯತೆ.
ತಂದೆಯ ಆರೋಗ್ಯದಲ್ಲಿ ಏರುಪೇರು. ಮಕ್ಕಳಿಗೆ ಒಳ್ಳೆಯ ಸ್ಥಾನ ಸಿಗಬಹುದು.

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಮಕರ : ಗಂಡನ ವಿಚಾರದಲ್ಲಿ ಹೆಂಡತಿ ಎಚ್ಚರಿಕೆ ವಹಿಸಬೇಕು. ಅವಘಡಗಳನ್ನು ಎದುರಿಸಬೇಕಾದ ಸನ್ನಿವೇಶ. ಆರೋಗ್ಯ ಹಾಳಾಗುವ ಸಾಧ್ಯತೆ. ತಂದೆ, ತಾಯಿಯರಲ್ಲೂ ಆರೋಗ್ಯ ಸಮಸ್ಯೆ. ವಿದ್ಯಾರ್ಥಿಗಳಿಗೂ ಹಿನ್ನಡೆ ಸಾಧ್ಯತೆ.

ಕುಂಭ: ದಾಂಪತ್ಯದಲ್ಲಿ ಕಲಹ ಉಂಟಾಗಬಹುದು. ಸ್ನೇಹಿತರ ನಡುವೆ ಮನಸ್ತಾಪಗಳು ಕಾಣಿಸುತ್ತವೆ.
ಅಪಘಾತ, ದೂರ ಪ್ರಯಾಣದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಭೂಮಿ ವಿಚಾರದಲ್ಲಿ ಕೊಂಚ ಅನುಕೂಲ. ನಿರುದ್ಯೋಗಿಗಳಿಗೆ ಕೆಲಸ ಸಿಗುವ ಅವಕಾಶಗಳಿವೆ.

ಮೀನ : ಆರನೇ ಸ್ಥಾನದಲ್ಲಿ ಕುಜ ಶುಭಫಲವನ್ನೇ ನೀಡುತ್ತಾನೆ. ಆರ್ಥಿಕವಾಗಿಯೂ ಸಹ ಶುಭಫಲ ಪ್ರಾಪ್ತಿ. ಅದೃಷ್ಟ ಚೆನ್ನಾಗಿ ಕೈ ಹಿಡಿಯುತ್ತದೆ. ಈ ರಾಶಿಯವರಿಗೆ ಕೆಡಕು ಮಾಡಬೇಕಂದ್ರೂ ಸಾಧ್ಯವಾಗುವುದಿಲ್ಲ.

ಮಂಗಳನ ಸಂಚಾರದ ಕುರಿತು ಮತ್ತು ಹೆಚ್ಚಿನ ರಾಶಿಫಲದ ಮಾಹಿತಿ ಪಡೆಯಲು ಈ ವಿಡಿಯೋ ನೋಡಿ;

ಸಿಂಹ ರಾಶಿಗೆ ಮಂಗಳನ ಸಂಚಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಲು ಈ ವಿಡಿಯೋ ನೋಡಿ.

ಇದನ್ನೂ ಓದಿ : Mithuna Sankranti 2023 : ಸೂರ್ಯನ ಈ ಸಂಚಾರ‌, ಕೆಲವರ ಬದುಕಲ್ಲಿ ಬಂಗಾರ!

Exit mobile version