Site icon Vistara News

Mercury Transit 2022: ಇಂದು ವೃಷಭ ರಾಶಿಯಲ್ಲಿ ಬುಧ ಸಂಕ್ರಮಣ; ಈ ಐದು ರಾಶಿಯವರಿಗೆ ಶುಭವಾಗಲಿದೆ!

mercury transit 2022

ಕಳೆದ ಮೇ 10 ರಿಂದ ಅಂದರೆ  ಕಳೆದ 23 ದಿನಗಳಿಂದ, ಬುಧನು ವೃಷಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದ. ಆದರೆ ಇಂದಿನಿಂದ (ಜೂನ್ 3) ಬುಧನ ಚಲನೆ ಮತ್ತೆ ಬದಲಾಗಲಿದೆ. ಬುಧನ ಚಲನೆಯಲ್ಲಿನ ( Mercury Transit 2022) ಬದಲಾವಣೆಯು ಹಣ, ಸಂವಹನ ಕಲೆ, ವ್ಯಾಪಾರ- ವ್ಯವಹಾರಗಳಂತಹ ಪ್ರಮುಖ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. 

ವೃಷಭ ರಾಶಿಯಲ್ಲಿ ಬುಧನ ನೇರ ಚಲನೆ ಈಗ ಆರಂಭವಾಗಿದ್ದು, ಇದು  ಪ್ರಮುಖವಾಗಿ 5 ರಾಶಿಯ ಜನರಿಗೆ ವಿಶೇಷವಾಗಿ ವೃತ್ತಿಜೀವನದಲ್ಲಿ ಬಹು ದೊಡ್ಡ ಯಶಸ್ಸು ತಂದು ಕೊಡಲಿದೆ. ಅಲ್ಲದೆ, ಆರ್ಥಿಕ ಸ್ಥಿತಿಯಲ್ಲಿಯೂ ಉತ್ತಮ ಬದಲಾವಣೆಯಾಗಲಿದೆ. 

ವೃಷಭ ರಾಶಿಯಲ್ಲಿ ಬುಧ ಸಂಕ್ರಮಣದಿಂದ  ಈ ಕೆಳಗಿನ ಐದು ರಾಶಿಯವರಿಗೆ ಶುಭವಾಗಲಿದೆ

ಮೇಷ : ಈ ರಾಶಿಯವರಿಗೆ ಬುಧ ಗ್ರಹದ ನೇರ ಚಲನೆ ಬಹಳಷ್ಟು ಲಾಭವನ್ನು ತಂದುಕೊಡಲಿದೆ. ಈ ಬದಲಾವಣೆ ಅವರ ಜೀವನದಲ್ಲಿ ಸುವರ್ಣ ದಿನಗಳನ್ನು ತೆರೆಯುತ್ತದೆ. ಜೀವನದಲ್ಲಿ ದೊಡ್ಡ ಮಟ್ಟಿನ ಯಶಸ್ಸು ಸಿಗುತ್ತದೆ. ಮನೆಯಲ್ಲಿ ಸಂತೋಷ ಇರುತ್ತದೆ.

ವೃಷಭ: ಈ ರಾಶಿಯಲ್ಲಿ ಬುಧನು ವೃಷಭ ಸಂಚಾರ ಮಾಡುತ್ತಿದ್ದು ಈ ರಾಶಿಯವರಿಗೆ ಶುಭ ಫಲ ನೀಡುತ್ತಾನೆ. ಕೆಲಸದಲ್ಲಿ ಒಂದರ ನಂತರ ಒಂದರಂತೆ ತ್ವರಿತ ಯಶಸ್ಸು ಸಿಗುತ್ತದೆ. ಉತ್ತಮ ವೇತನದ ಕೆಲಸ ಸಿಗಬಹುದು, ಉದ್ಯೋಗದಲ್ಲಿ ಬಡ್ತಿ, ಹಿರಿಯ ಅಧಿಕಾರಿ ವರ್ಗದವರಿಂದ ಪ್ರಶಂಸೆ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವವರಿಗೆ ಯಶಸ್ಸು ಸಿಗಲಿದೆ. ವಿವಾಹ ಆಕಾಂಕ್ಷಿಗಳಿಗೆ, ಅದರಲ್ಲಿಯೂ ಪ್ರೇಮಿಗಳಿಗೆ ಮದುವೆ ಪ್ರಸ್ತಾಪಕ್ಕೆ ಈ ಸಮಯ ತುಂಬಾ ಒಳ್ಳೆಯದು. 

ಸಿಂಹ : ಈ ರಾಶಿಯವರಿಗೆ ಬುಧನು ಅದೃಷ್ಟವನ್ನು ತರುತ್ತಾನೆ. ಅವರು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಬಡ್ತಿ- ವೇತನದಲ್ಲಿ ಹೆಚ್ಚಳ ಅಥವಾ ಹೊಸ ಉದ್ಯೋಗ ಸಿಗಬಹುದು. ಜನರು ನಿಮ್ಮ ಕೆಲಸವನ್ನು ಇಷ್ಟಪಡುತ್ತಾರೆ. ಕುಟುಂಬದಲ್ಲಿಯೂ ಸಂತೋಷ ಇರುತ್ತದೆ. 

ತುಲಾ: ತುಲಾ ರಾಶಿಯವರಿಗೆ ಬುಧನು ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು ನೀಡುತ್ತಾನೆ. ಉದ್ಯೋಗದಲ್ಲಿ ಬಡ್ತಿಯ ನಿರೀಕ್ಷೆ ಇರುವವರಿಗೆ ಬಡ್ತಿ ಸಿಗಲಿದೆ. ಉದ್ಯೋಗ ಬದಲಾಯಿಸಲು ಬಯಸುವ ಜನರ ಆಸೆಯೂ ಈ ತಿಂಗಳು ಈಡೇರಲಿದೆ. ಹೂಡಿಕೆದಾರರಿಗೆ ಲಾಭವಾಗಲಿದೆ. ಆದಾಯ ಹೆಚ್ಚಲಿದೆ. 

ವೃಶ್ಚಿಕ : ಬುಧನು ವೃಶ್ಚಿಕ ರಾಶಿಯವರಿಗೆ ಅದೃಷ್ಟ ನೀಡಲಿದ್ದಾನೆ. ವೃತ್ತಿಯಲ್ಲಿ ಶುಭ ಫಲಿತಾಂಶ ಸಿಗಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಉದ್ಯೋಗದಲ್ಲಿ ಪ್ರಗತಿಯಾಗಲಿದೆ. ಆದಾಯ ಹೆಚ್ಚಲಿದೆ. ವಿಶೇಷವಾಗಿ ಈ ರಾಶಿಯ ಉದ್ಯಮಿಗಳಿಗೆ ಈ ಸಮಯವು ಅನುಕೂಲ ಆಗಲಿದೆ.

ಇದನ್ನೂ ಓದಿ | ಭಾವಾಶ್ರಿತ ಗ್ರಹಫಲ | ಚಂದ್ರನು ನೀಡುವ ಫಲಗಳೇನು?

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

Exit mobile version