ಶನಿಯನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಪ್ರತಿಯೊಬ್ಬರಿಗೂ ಅವರ ಕರ್ಮಗಳಿಗೆ ಅನುಸಾರವಾಗಿ ಫಲ ನೀಡುವ ಗ್ರಹ ಶನಿ(Shani Gochar 2023). ನೀವು ಒಳ್ಳೆಯ ಕೆಲಸ ಮಾಡಿದರೆ ಶನಿಯು ನಿಮಗೆ ಸುಖ ಸಂತೋಷ ದಯಪಾಲಿಸುತ್ತಾನೆ. ಅದೇ ರೀತಿ ಕೆಟ್ಟ ಕೆಲಸ ಮಾಡಿದರೆ ಆತನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.
ತ್ರಿಶೂಲ, ಬಿಲ್ಲು, ಬಾಣ ಮತ್ತು ಕೊಡಲಿ ಶನಿಯ ಆಯುಧಗಳು. ಶನಿ ನ್ಯಾಯದೇವತೆ. ಶಿಕ್ಷಿಸುವ ಅಧಿಕಾರ ಹೊಂದಿರುವ ದೇವರು. ನಾವು ಮಾಡಿದ್ದ ತಪ್ಪುಗಳಿಗೆಲ್ಲಾ ಯೋಗ್ಯತಾನುಸಾರ ಶಿಕ್ಷೆ ವಿಧಿಸುತ್ತಾನೆ. ದೇವತೆಗಳನ್ನೂ ಬಿಡದೆ ಪ್ರತಿಯೊಬ್ಬರೂ ತಮ್ಮ ಕರ್ಮಲ ಅನುಭವಿಸುವಂತೆ ನೋಡಿಕೊಳ್ಳುವ ಹೊಣೆಯನ್ನು ಹೊತ್ತಿದ್ದಾನೆ.
ಈ ಶನಿಯು ಜನವರಿ 17 ರಂದು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ (Shani Gochar 2023). ಸಂಜೆ 18.01 ಕ್ಕೆ ಈ ಸಂಚಾರ ನಡೆಯಲಿದೆ. ಇದರ ಪುಣ್ಯಕಾಲ ಮಧ್ಯಾಹ್ನ 3.07 ರಿಂದ ರಾತ್ರಿ 8.55ರ ವರೆಗಿರಲಿದೆ. ಈ ಕುಂಭ ರಾಶಿಯಲ್ಲಿ ನೆಲೆಸಿರುವ ಶನಿಯು ಕುಂಭಕ್ಕೆ ಮೊದಲನೇಯ, ಮಕರಕ್ಕೆ ಎರಡನೇಯ, ಧನುಗೆ ಮೂರನೇಯ, ವೃಶ್ಚಿಕಕ್ಕೆ ನಾಲ್ಕನೇಯ, ತುಲಾಕ್ಕೆ ಐದನೇಯ, ಕನ್ಯಾಗೆ ಆರನೇಯ, ಸಿಂಹಕ್ಕೆ ಏಳನೇಯ, ಕಟಕಕ್ಕೆ ಎಂಟನೇಯ, ಮಿಥನಕ್ಕೆ ಒಂಬತ್ತನೇಯ, ವೃಷಭಕ್ಕೆ ಹತ್ತನೇಯ, ಮೇಷಕ್ಕೆ ಹೊನ್ನೊಂದನೇಯ, ಮೀನಕ್ಕೆ ಹನ್ನೆರಡನೇಯವನಾಗಿರುತ್ತಾನೆ.
ಶನಿಯ ಈ ಸಂಚಾರದಿಂದ ಧನು ರಾಶಿಯವರ ಸಾಡೇಸಾತಿಯು ಮುಗಿಯಲಿದೆ. ಅಂತೆಯೇ ಮಕರ-ಕುಂಭ, ಮೀನ ರಾಶಿಯವರಿಗೆ ಸಾಡೇ ಸಾತಿಯು ಆರಂಭವಾಗಲಿದೆ. 2025ರ ಮಾರ್ಚ್ 29 ರಂದು ಶನಿ ಸಂಚಾರ ನಡೆಯಲಿದ್ದು, ಅಂದು ಕುಂಭದಿಂದ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ.
ಯಾವ ರಾಶಿಯವರಿಗೆ ಏನು ಫಲ?
ಮಕರ ರಾಶಿಯಿಂದ ಕುಂಭ ರಾಶಿಗೆ ಸಂಚಾರ ನಡೆಸಲಿರುವ ಶನಿಯು ಯಾವ ರಾಶಿಗೆ ಯಾವ ಫಲ ನೀಡುತ್ತಾನೆಂದು ನೋಡೋಣ;
ಜನ್ಮ ರಾಶಿ | ಪಾದ | ಫಲ |
ಮಿಥುನ-ವೃಶ್ಚಿಕ- ಮಕರ | ಸುವರ್ಣ | ಚಿಂತೆ |
ಕಟಕ-ತುಲಾ-ಮೀನ | ರೌಪ್ಯ | ಶುಭ |
ವೃಷಭ-ಕನ್ಯಾ-ಕುಂಭ | ತಾಮ್ರ | ಶ್ರೀಪಾಪ್ತಿ |
ಮೇಷ-ಸಿಂಹ-ಧನು | ಲೋಹ | ಕಷ್ಟ |
ಶನಿ ಪೀಡಾ ಪರಿಹಾರಕ್ಕೆ ಮಂತ್ರ
ಶನಿಯ ಈ ಸಂಚಾರದಿಂದ ದೋಷ ಹೊಂದಿರುವ ರಾಶಿಯವರು ಇದರ ಪರಿಹಾರಕ್ಕೆ ಈ ಕೆಳಗಿನ ಶನಿ ಪುರಾಣದ ಮಂತ್ರವನ್ನು ಜಪಿಸಬಹುದು.
ನೀಲಾಂಜನಸಮಾಭಾಸಂ ರವಿಪುತ್ರಂ ಯಮಾಗ್ರಜಮ್ |
ಛಾಯಾಮಾರ್ತಂಡಸಂಭೂತಂ ತಂ ನಮಾಮಿ ಶನೈಶ್ಚರಮ್ ||
ಯಾರಿಗೆ ಸಾಡೇಸಾತಿ ಇದೆಯೋ ಅವರು ಪ್ರತಿದಿನ ಶನಿಸ್ತೋತ್ರವನ್ನು ಪಠಿಸಬೇಕು. ಶನಿಯ ನಿಮಿತ್ತವಾಗಿ ಜಪ, ದಾನ, ಪೂಜಾದಿಗಳನ್ನು ನೆರವೇರಿಸಬೇಕೆಂದು ಜ್ಯೋತಿಷ ಶಾಸ್ತ್ರ ಹೇಳುತ್ತದೆ.
ಇದನ್ನೂ ಓದಿ | Saturn In Astrology | ಜಾತಕದಲ್ಲಿ ಶನಿ ಲಗ್ನದಲ್ಲಿದ್ದರೆ ರಾಜನಂತೆ ಮೆರೆಯಬಹುದು! ಉಳಿದ ಮನೆಗಳಲ್ಲಿದ್ದರೆ ಏನು ಫಲ?