Site icon Vistara News

Shukra Gochar 2023 : ಜು.7 ರಂದು ಸಿಂಹ ರಾಶಿಗೆ ಶುಕ್ರನ ಸಂಚಾರ; ಈ ಮೂರು ರಾಶಿಯವರಿಗೆ ಶುಭ ಫಲ

shukra gochar 2023

ಜ್ಯೋತಿಷ ಶಾಸ್ತ್ರದಲ್ಲಿ ಶುಕ್ರ ಗ್ರಹ ಐದನೇ ಸ್ಥಾನದಲ್ಲಿರುವ ಗ್ರಹ. ಶುಕ್ರ ಗ್ರಹ ಅನೇಕ ಶುಭಫಲಗಳನ್ನು ಪ್ರಾಪ್ತಿಸುತ್ತಾನೆ. ವಿವಿಧ ಸ್ಥಾನಗಳಲ್ಲಿ ಇದ್ದಾಗ ವಿವಿಧ ಫಲಗಳನ್ನು ನೀಡುತ್ತಾನೆ. ಶುಕ್ರಗ್ರಹವು ಜಾತಕದ ಲಗ್ನದಲ್ಲಿದ್ದರೆ ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ. ಇದೇ ಶುಕ್ರವಾರ ಅಂದರೆ ಜುಲೈ 7 ರಂದು ಶುಕ್ರನು ಸೂರ್ಯನ ಆಧಿಪತ್ಯ ಹೊಂದಿರುವ ಸಿಂಹ ರಾಶಿಯನ್ನು (Shukra Gochar 2023) ಪ್ರವೇಶಿಸುತ್ತಾನೆ. ಆಗಸ್ಟ್ 7 ರಂದು ಮತ್ತೆ ಹಿಮ್ಮುಖ ಸಂಚಾರ ನಡೆಸಿ ಕಟಕ ರಾಶಿಗೆ ಹಿಂತಿರುಗುತ್ತಾನೆ.

ಶುಕ್ರನನ್ನು ಪ್ರೀತಿ, ಮದುವೆ, ಸೌಂದರ್ಯ ಮತ್ತು ಸೌಕರ್ಯಗಳ ದೇವತೆ ಎಂದು ಪರಿಗಣಿಸಲಾಗುತ್ತದೆ. ಶುಕ್ರನು ವೃಷಭ ಮತ್ತು ತುಲಾ ರಾಶಿಗಳ ಅಧಿಪತಿಯಾಗಿದ್ದಾನೆ. ಶುಕ್ರನು ಶುಕ್ರವಾರ ಬೆಳಗ್ಗೆ 04:28 ಕ್ಕೆ ಸಿಂಹ ರಾಶಿಗೆ ಸಂಚಾರ ನಡೆಸುತ್ತಿರುವುದರಿಂದ ಮೂರು ರಾಶಿಗಳವರು ಉತ್ತಮ ಫಲ ಪಡೆಯಲಿದ್ದಾರೆ. ಆ ರಾಶಿಗಳು ಯಾವುವು. ಏನೆಲ್ಲಾ ಶುಭ ಫಲಗಳನ್ನು ಈ ರಾಶಿಯವರು ಪಡೆಯುತ್ತಾರೆ ಎಂಬುದನ್ನು ನೋಡೋಣ;

1. ಮೇಷ

ಮೇಷ ರಾಶಿಯವರಿಗೆ, ಶುಕ್ರನು ಎರಡನೇ ಮತ್ತು ಏಳನೇ ಮನೆಯ ಅಧಿಪತಿ. ಈಗ ಈ ಸಂಚಾರದ ಮೂಲಕ ನಿಮ್ಮ ಐದನೇ ಮನೆಗೆ ಬರಲಿದ್ದಾನೆ. ಶುಕ್ರನ ಈ ಸಂಚಾರವು ನಿಮ್ಮ ವೈವಾಹಿಕ ಮತ್ತು ಪ್ರೇಮ ಜೀವನವನ್ನು ಉನ್ನತ ಮಟ್ಟಕ್ಕೆ ಏರಿಸುತ್ತದೆ. ಈ ಸಮಯದಲ್ಲಿ, ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅದನ್ನು ಕುಟುಂಬದವರ ಗಮನಕ್ಕೆ ತರಬಹುದು. ಅವರು ನಿಮ್ಮ ಪ್ರೀತಿಯನ್ನು ಒಪ್ಪಿಕೊಳ್ಳಲಿದ್ದಾರೆ. ಪುರುಷರು ಮಹಿಳೆಯರಿಂದ ಮತ್ತು ಮಹಿಳೆಯರು ಪುರುಷರಿಂದ ಲಾಭ ಪಡೆಯುತ್ತಾರೆ. ನಿಮ್ಮ ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ನೀವು ನಿಮ್ಮ ಸಂಗಾತಿಯೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುತ್ತೀರಿ. ಪ್ರವಾಸಗಳಿಗೂ ಹೋಗಬಹುದು. ವ್ಯಾಪಾರಿ ವರ್ಗದವರು ಈ ಸಮಯದಲ್ಲಿ ಉತ್ತಮ ಲಾಭವನ್ನು ಪಡೆಯುತ್ತಾರೆ.

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

2. ಸಿಂಹ

ಸಿಂಹ ರಾಶಿಯವರಿಗೆ ಶುಕ್ರನು ಹತ್ತನೇ ಮತ್ತು ಮೂರನೇ ಮನೆಯ ಅಧಿಪತಿ. ಈಗ ಶುಕ್ರನ ಸಂಕ್ರಮಣವು ನಿಮ್ಮ ಲಗ್ನದಲ್ಲಿ ಮಾತ್ರ ನಡೆಯುತ್ತದೆ. ಈ ಮನೆಯಲ್ಲಿ ಕುಳಿತಿರುವ ಶುಕ್ರನ ಸಪ್ತಮ ದೃಷ್ಟಿ ನಿಮ್ಮ ಏಳನೇ ಮನೆಯ ಮೇಲೆ ಅಂದರೆ ಸಂಗಾತಿಯ ಮನೆಯ ಮೇಲೆ ಇರುತ್ತದೆ. ಈ ಮನೆಯಲ್ಲಿ ಶುಕ್ರನ ಸಂಚಾರದಿಂದಾಗಿ, ಈ ಸಮಯದಲ್ಲಿ ನೀವು ಮಾತಿನಿಂದಲೇ ಜನರ ಹೃದಯವನ್ನು ಗೆಲ್ಲಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಮಾತಿಗೆ ಬೆಲೆ ಇರುತ್ತದೆ. ಉದ್ಯೋಗದಲ್ಲಿ ಯಶಸ್ಸನ್ನು ಪಡೆಯುವಿರಿ. ನಿಮ್ಮ ಬಾಸ್‌ನೊಂದಿಗಿನ ನಿಮ್ಮ ವ್ಯಾವಹಾರಿಕ ಸಂಬಂಧ ಅತ್ಯುತ್ತಮ ಹಂತಕ್ಕೆ ತಲುಪಲಿದೆ. ನೀವು ಪುರುಷರಾಗಿದ್ದರೆ ಕೆಲಸದ ಸ್ಥಳದಲ್ಲಿ ಮಹಿಳೆಯ ಸಹಾಯದಿಂದ ನೀವು ದೊಡ್ಡ ಸ್ಥಾನವನ್ನು ಪಡೆಯಬಹುದು. ಈ ಸಮಯದಲ್ಲಿ ಅವಿವಾಹಿತರ ವಿವಾಹದ ಪ್ರಸ್ತಾಪವು ಮುನ್ನೆಲೆಗೆ ಬರಬಹುದು. ಒಡಹುಟ್ಟಿದವರು ಸಹ ನಿಮ್ಮ ಪ್ರಯೋಜನವನ್ನು ಪಡೆಯುತ್ತಾರೆ. ಕುಟುಂಬ ಸದಸ್ಯರೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ.

ಇದನ್ನೂ ಓದಿ: ಶುಕ್ರ ಗ್ರಹ ಲಗ್ನದಲ್ಲಿದ್ದರೆ ಉತ್ತಮ ಆರೋಗ್ಯ, ಉಳಿದ ಮನೆಯಲ್ಲಿದ್ದರೆ ಯಾವೆಲ್ಲಾ ಫಲ?

3. ಧನು

ಧನು ರಾಶಿಯವರಿಗೆ, ಶುಕ್ರನು ಆರು ಮತ್ತು ಹನ್ನೊಂದನೇ ಮನೆಯ ಅಧಿಪತಿ, ಅಂದರೆ ಲಾಭದ ಮನೆಯ ಯಜಮಾನ. ಈಗ ಶುಕ್ರನು ನಿಮ್ಮ ಅದೃಷ್ಟದ ಮನೆಯ ಮೂಲಕ ಅಂದರೆ ಒಂಬತ್ತನೇ ಮನೆಯ ಮೂಲಕ ಸಾಗುತ್ತಾನೆ. ಈ ಮನೆಯಲ್ಲಿ ಶುಕ್ರನು ಕುಳಿತು ಮೂರನೇ ಮನೆಯ ಮೇಲೆ ದೃಷ್ಟಿ ಬೀರುತ್ತಾನೆ. ಅಂದರೆ ಧೈರ್ಯ ಮತ್ತು ಶೌರ್ಯದ ಮನೆಯ ಮೇಲೆ ದೃಷ್ಟಿ ಇರುತ್ತದೆ. ಈ ಮನೆಯಲ್ಲಿ ಶುಕ್ರನ ಸಂಚಾರದಿಂದಾಗಿ, ನಿಮ್ಮೆಲ್ಲಾ ಕೆಲಸ ಕಾರ್ಯಗಳಿಗೆ ಗುರುಗಳ ಮತ್ತು ತಂದೆಯವ ಆಶೀರ್ವಾದ ದೊರೆಯಲಿದೆ. ನೀವು ದೂರದ ಪ್ರಯಾಣ ಮಾಡುವ ಯೋಚನೆಯಲ್ಲಿದ್ದರೆ ಇದು ಒಳ್ಳೆಯ ಕಾಲ. ನಿಮ್ಮ ಧೈರ್ಯ ಮತ್ತು ಶೌರ್ಯವು ಹೆಚ್ಚಾಗುತ್ತದೆ. ನೀವು ಉದ್ಯಮಿಯಾಗಿದ್ದರೆ ಮತ್ತು ಬಂಡವಾಳ ಹೂಡಿಕೆ ನಿರೀಕ್ಷೆಯಲ್ಲಿದ್ದರೆ ನೀವು ಸಾಕಷ್ಟು ಶುಭ ಫಲಗಳನ್ನು ಕಾಣುವಿರಿ. ಕೆಲಸವನ್ನು ಬದಲಾಯಿಸುವ ಯೋಚನೆಯಲ್ಲಿದ್ದರೆ ಇದು ಅನುಕೂಲಕರ ಸಮಯವಾಗಿದೆ. ನೀವು ಪುರುಷರಾಗಿದ್ದರೆ ಮಹಿಳೆಯ ಸಹಾಯದಿಂದ ದೊಡ್ಡ ವ್ಯವಹಾರ ನಡೆಸಬಹುದು.

ಸಿಂಹ ರಾಶಿಯವರಿಗೆ ಅದೃಷ್ಟ ಗ್ಯಾರಂಟಿ! ಈ ವಿಡಿಯೋ ನೋಡಿ.

ಪ್ರಶ್ನೋತ್ತರ

ಶುಕ್ರನು ಸಿಂಹ ರಾಶಿಯಲ್ಲಿ ಎಷ್ಟು ಸಮಯ ಇರುತ್ತಾನೆ?

ಜುಲೈ 7 ರಂದು ಶುಕ್ರನು ಸೂರ್ಯನ ಆಧಿಪತ್ಯ ಹೊಂದಿರುವ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಆಗಸ್ಟ್ 7 ರಂದು ಮತ್ತೆ ಹಿಮ್ಮುಖ ಸಂಚಾರ ನಡೆಸಿ ಕಟಕ ರಾಶಿಗೆ ಹಿಂತಿರುಗುತ್ತಾನೆ.

Exit mobile version