Site icon Vistara News

Vakri Budh 2022 | ಬುಧನ ವಕ್ರಿ ಸಂಚಾರ; ಯಾವ ರಾಶಿಯ ಮೇಲೆ ಏನು ಪರಿಣಾಮ?

Budh Vakri Gochar 2022 Budh Vakri 2022

ಜ್ಯೋತಿಷ ಶಾಸ್ತ್ರದಲ್ಲಿ ಅತ್ಯಂತ ಮಹತ್ವ ಪಡೆದ ಬುಧ ಗ್ರಹವು ಡಿಸೆಂಬರ್ 29ರಂದು ವಕ್ರಿಯವಾಗಿ (Vakri Budh 2022) ಧನು ರಾಶಿಗೆ ಪ್ರವೇಶಿಸಲಿದೆ. ಇದು ಅತ್ಯಂತ ವೇಗವಾಗಿ ಚಲಿಸುವ ಗ್ರಹವಾಗಿದ್ದು ಹೆಚ್ಚಾಗಿ ವಕ್ರಿ ಸ್ಥಿತಿಯಲ್ಲಿಯೇ ಇರುತ್ತದೆ. ಇದು 2023 ಜನವರಿ 18ರ ಬುಧವಾರದಂದು ಮಾರ್ಗಿಯಾಗಿ ಸಂಚಾರವನ್ನು ಆರಂಭಿಸಿ ನಂತರ 2023 ಫೆಬ್ರವರಿ 7ರಂದು ಮಕರ ರಾಶಿ ಪ್ರವೇಶಿಸಲಿದೆ.

ಬುದ್ಧಿ ಮತ್ತು ವಾಣಿಯ ಕಾರಕ ಗ್ರಹವಾಗಿದೆ. ವರ್ಷಾಂತ್ಯದಲ್ಲಿ ನಡೆಯುತ್ತಿರುವ ಬುಧ ಗ್ರಹದ ವಕ್ರಿಯ ಸಂಚಾರ ದ್ವಾದಶ ರಾಶಿಗಳ ಮೇಲಾಗುವ ಪರಿಣಾಮಗಳೇನು ಎಂಬುದನ್ನು ತಿಳಿಯೋಣ.

ವಕ್ರಿ ಸಂಚಾರ ಎಂದರೇನು?
ಗ್ರಹಗಳು ಸರಿಯಾದ ದಿಕ್ಕಿನಲ್ಲಿ ಅಂದರೆ ನೇರವಾಗಿ ಸಂಚರಿಸಿಸುತ್ತಿದ್ದ ಅದನ್ನು “ಮಾರ್ಗಿ ಸಂಚಾರʼʼ ಎಂದು ಕರೆಯಲಾಗುತ್ತದೆ. ಅದೇ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿದರೆ ಅದನ್ನು ” ವಕ್ರಿ ಸಂಚಾರʼʼ ಎಂದು ಕರೆಯುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಹು ಮತ್ತು ಕೇತು ಗ್ರಹಗಳು ಯಾವಾಗಲೂ ವಕ್ರೀಯವಾಗಿ ಸಂಚರಿಸುತ್ತವೆ. ಅದೇ ಸೂರ್ಯ ಮತ್ತು ಚಂದ್ರ ಗ್ರಹಗಳು ಯಾವಾಗಲೂ ಮಾರ್ಗಿಯಾಗಿ ಸಂಚರಿಸುತ್ತವೆ.

ಬೇರೆ ಎಲ್ಲ ಗ್ರಹಗಳು ತಮ್ಮ ವೇಗಕ್ಕೆ ಅನುಸರಿಸಿ ಒಮ್ಮೊಮ್ಮೆ ಮಾರ್ಗಿ ಮತ್ತು ವಕ್ರಿಯವಾಗಿ ಸಂಚರಿಸುತ್ತವೆ. ಹಾಗೆಯೆ ಬುಧಗ್ರಹವು ಈಗ ವಕ್ರಿಯವಾಗಿ ಸಂಚರಿಸುತ್ತಿದ್ದು, ಈ ಸಂಚಾರ ಕೆಲ ರಾಶಿಗಳವರಿಗೆ ಶುಭ ಪರಿಣಾಮವನ್ನು ಮತ್ತೆ ಕೆಲ ರಾಶಿಯವರಿಗೆ ಅಶುಭವನ್ನು ನೀಡುತ್ತದೆ. ಹೀಗಾಗಿ ದ್ವಾದಶ ರಾಶಿಗಳ ಫಲಾಫಲದ ಬಗ್ಗೆ ತಿಳಿದುಕೊಳ್ಳೋಣ.

ಮೇಷ : ಬುಧ ಗ್ರಹವು ವಕ್ರೀಯವಾಗಿ ಸಂಚರಿಸುವ ಕಾರಣ ಈ ರಾಶಿಯವರು ವ್ಯಾಪರ ಮತ್ತು ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದಾಯ ಕಡಿಮೆ ಆಗುವ ಸಂಭವವಿದ್ದು, ಖರ್ಚಿನ ಬಗ್ಗೆ ನಿಗಾ ವಹಿಸುವುದು ಉತ್ತಮ. ಆರೋಗ್ಯದಲ್ಲಿ ಏರು ಪೇರಾಗುವ ಸಾಧ್ಯತೆ ಸಹ ಹೆಚ್ಚಿದೆ.

ವೃಷಭ : ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಮಸ್ಯೆಗಳು ಎದುರಾಗುವ ಸಂಭವ ಹೆಚ್ಚಿದೆ. ಕಾರ್ಯ ಸ್ಥಳದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಇದೆ. ಜೊತೆಗೆ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇದೆ.

ಮಿಥುನ: ವ್ಯಾಪಾರ ವ್ಯವಹಾರಗಳಲ್ಲಿ ಸುಧಾರಣೆಯನ್ನು ಕಾಣಬಹುದಾಗಿದೆ. ಕಾರ್ಯ ಕ್ಷೇತ್ರದಲ್ಲಿ ಸ್ಥಾನ ಬದಲಾವಣೆಯಾಗುವ ಸಾಧ್ಯತೆ ಇದೆ. ಸಂಸಾರದಲ್ಲಿ ಸಾಮರಸ್ಯ ಹೆಚ್ಚುವುದಲ್ಲದೇ, ಖರ್ಚು ಸಹ ಹೆಚ್ಚಾಗುತ್ತದೆ.

ಕರ್ಕಾಟಕ: ಕಾರ್ಯ ಸ್ಥಳದಲ್ಲಿ ಅಧಿಕಾರಿಗಳ ಮತ್ತು ಸಹೋದ್ಯೋಗಿಗಳ ಸಹಯೋಗ ಸಿಗಲಿದೆ. ಸಂಸಾರದಲ್ಲಿ ನೆಮ್ಮದಿ ಇರಲಿದೆ. ಆದರೆ ಮಾನಸಿಕ ಅಶಾಂತಿ ಕಾಡುವ ಸಾಧ್ಯತೆ ಇದೆ.

ಸಿಂಹ : ಸಂಸಾರದಲ್ಲಿ ಅನೇಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಮನೆಯ ಸದಸ್ಯರೊಂದಿಗೆ ಮನಸ್ತಾಪಗಳಾಗುವ ಸಂಭವ ಇರುತ್ತದೆ. ಆದಾಯ ಕಡಿಮೆಯಾಗುವ ಸಾಧ್ಯತೆ ಇದೆ.

ಕನ್ಯಾ: ಉದ್ಯೋಗದಲ್ಲಿ ಯಶಸ್ಸು ಪಡೆಯಲು ಅವಕಾಶಗಳು ದೊರೆಯುತ್ತವೆ. ಮನೆಯ ಸದಸ್ಯರ ಇಷ್ಟ – ಕಷ್ಟಗಳ ಬಗ್ಗೆ ಗಮನಹರಿಸುವುದು ಉತ್ತಮ. ಹಿರಿಯ ಮಹಿಳೆಯಿಂದ ಧನ ಲಾಭವಾಗುವ ಸಾಧ್ಯತೆ ಇದೆ.

ತುಲಾ: ಸಂಯಮದಿಂದ ಇದ್ದರೆ ಮಾತ್ರ ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಸಿಗಲಿದೆ. ಸಂಗಾತಿಯೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ. ಉದ್ಯೋಗದಲ್ಲಿ ಹೆಚ್ಚಿನ ಶ್ರಮ ವಹಿಸಿದಲ್ಲಿ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ.

ವೃಶ್ಚಿಕ : ಬುಧ ವಕ್ರಿಯಾಗಿ ಗೋಚಾರವಾಗುವ ಈ ಸಂದರ್ಭದಲ್ಲಿ, ಕಾರ್ಯ ಸ್ಥಳದ ವ್ಯಾಪ್ತಿ ಹೆಚ್ಚಲಿದೆ. ಜೊತೆಗೆ ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಂಭವವಿದೆ. ಉನ್ನತ ಅಧಿಕಾರಿಗಳ ಸಹಯೋಗವು ಸಹ ದೊರಕಲಿದೆ.

ಧನು : ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಂದರ್ಭ ಒದಗಿ ಬರಲಿದೆ. ಇದರಿಂದ ಧನ ಲಾಭವಾಗುವ ಯೋಗ ಸಹ ಇದೆ. ವ್ಯಾಪಾರದ ವ್ಯಾಪ್ತಿ ಸಹ ಹೆಚ್ಚಲಿದೆ.

ಮಕರ : ಉದ್ಯೋಗದಲ್ಲಿ ಸ್ಥಾನ ಪರಿವರ್ತನೆಯಾಗುವ ಯೋಗವಿದೆ. ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ಯಾವುದೋ ಮೂಲದ ಸಂಪತ್ತಿನಿಂದ ಧನ ಲಾಭವಾಗುವ ಸಾಧ್ಯತೆ ಇದೆ.

ಕುಂಭ : ಈ ಅವಧಿಯು ಕುಂಭ ರಾಶಿಯವರಿಗೆ ಮಿಶ್ರ ಪರಿಣಾಮವನ್ನು ಉಂಟುಮಾಡಲಿದೆ. ಇತರೊಂದಿಗೆ ಪ್ರೇಮ ಮತ್ತು ಸಾಮರಸ್ಯ ಹೆಚ್ಚಲಿದೆ. ಉದ್ಯೋಗ ಮತ್ತು ವ್ಯಾಪರದಲ್ಲಿ ಹೆಚ್ಚಿನ ಪರಿಶ್ರಮ ಪಡುವ ಅಗತ್ಯವಿದೆ.

ಮೀನ: ಉದ್ಯೋಗದಲ್ಲಿ ಹೊಸ ಅವಕಾಶಗಳು ಲಭ್ಯವಾಗುತ್ತವೆ. ಸಂಸಾರದ ಸಮಸ್ಯೆಗಳನ್ನು ನಿರ್ಲಕ್ಷಿಸುವು ಒಳ್ಳೆಯದಲ್ಲ. ಆದಾಯ ಮತ್ತು ಖರ್ಚು ಎರಡೂ ಹೆಚ್ಚಲಿದೆ. ಹಾಗಾಗಿ ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡುವುದು ಉತ್ತಮ.

ಇದನ್ನೂ ಓದಿ | Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ರಾಶಿಗಳಿಗೆ ಶುಭಾಶುಭ ಫಲಗಳಿವೆ?; ಇಲ್ಲಿದೆ ವರ್ಷ ಭವಿಷ್ಯ

Exit mobile version