Site icon Vistara News

Vastu Tips : ಮನೆ ಮಂದಿಯ ಆರೋಗ್ಯ ಮತ್ತು ಸಂಪತ್ತು ವೃದ್ಧಿಗೆ ಕನ್ನಡಿ ಕಾರಣ!

mirror in bedroom wall

#image_title

ಮನೆ ಎಂದ ಮೇಲೆ ಕನ್ನಡಿ ಇದ್ದೇ ಇರುತ್ತದೆ. ಅದನ್ನು ಎಲ್ಲಿ ಬೇಕಾದರೂ ಇಟ್ಟು ಕೊಳ್ಳಬಹುದು ಎಂಬ ಅಭಿಪ್ರಾಯ ಸಾಮಾನ್ಯವಾಗಿರುತ್ತದೆ. ಹಾಗಂತ ಕನ್ನಡಿಯನ್ನು (Mirror Vastu) ಎಲ್ಲೆಂದರಲ್ಲಿ ಇಟ್ಟುಕೊಂಡರೆ ನಕಾರಾತ್ಮಕ ಶಕ್ತಿಯನ್ನು ಬರ ಮಾಡಿಕೊಂಡಂತಾಗುತ್ತದೆ (Vastu Tips) ಎನ್ನುತ್ತದೆ ವಾಸ್ತು ಶಾಸ್ತ್ರ.

ಹೌದು, ವಾಸ್ತು ಶಾಸ್ತ್ರದಲ್ಲಿ (Vastu shastra) ಕನ್ನಡಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳ ಬಗ್ಗೆ ತಿಳಿಸಲಾಗಿದೆ. ʻʻಎಲ್ಲರ ಮನೆಯಲ್ಲಿಯೂ ಕನ್ನಡಿ ಇರುತ್ತದೆ, ಇದಕ್ಕೆಲ್ಲಾ ಎಂಥ ವಾಸ್ತುʼʼ ಎಂದು ಸುಮ್ಮನಾಗಬೇಡಿ. ಮನೆಯ ನೆಮ್ಮದಿ ಮತ್ತು ಆರೋಗ್ಯಕ್ಕೆ ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಕೆಲವು ಸಣ್ಣ ಪುಟ್ಟ ನಿಯಮಗಳನ್ನು ಪಾಲಿಸುವುದು ಬಹಳ ಅವಶ್ಯಕ. ಕೇವಲ ಕನ್ನಡಿ ನೋಡುವುದಕ್ಕಷ್ಟೇ ಇರುವುದಲ್ಲ, ಇದು ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ಆಕರ್ಷಿಸುವ ಶಕ್ತಿಯನ್ನು ಸಹ ಹೊಂದಿದೆ. ಹಾಗಾಗಿ ವಾಸ್ತು ಪ್ರಕಾರ ಕನ್ನಡಿಯಿಂದ ಪಡೆಯಬಹುದಾದ ಸಕಾರಾತ್ಮಕ ಶಕ್ತಿ ಮತ್ತು ಇದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ;

1. ಮನೆಯಲ್ಲಿ ಲಾಕರ್ ಇರುವ ಜಾಗದ ವಿರುದ್ಧ ದಿಕ್ಕಿಗೆ ಕನ್ನಡಿಯನ್ನು ಇಡುವುದರಿಂದ ಸಂಪತ್ತು ದುಪ್ಪಟ್ಟಾಗುತ್ತದೆ.

2. ಉತ್ತರ ದಿಕ್ಕಿಗೆ ಕನ್ನಡಿ ಇಡುವುದರಿಂದ ಹೆಚ್ಚು ಆರ್ಥಿಕ ಲಾಭವನ್ನು ಪಡೆಯಬಹುದಾಗಿದೆ. ಇದು ಸಂಪತ್ತಿಗೆ ಒಡೆಯನಾಗಿರುವ ಕುಬೇರ ದೇವರ ದಿಕ್ಕು ಎಂದು ಸಹ ಹೇಳಲಾಗುತ್ತದೆ. ಹಾಗಾಗಿ ಈ ದಿಕ್ಕು ಆದಷ್ಟು ಶಕ್ತಿಯುತವಾಗಿ ಮತ್ತು ಸಕಾರಾತ್ಮಕವಾಗಿ ಇರಬೇಕಾಗುತ್ತದೆ. ಈ ದಿಕ್ಕಿಗೆ ಕನ್ನಡಿ ಇಡುವುದು ಸೂಕ್ತವಾಗಿದೆ.

3. ಸಕಾರಾತ್ಮಕತೆಯನ್ನು ಸ್ಥಿರವಾಗಿಟ್ಟಕೊಳ್ಳುವುದರ ಮೂಲಕ ಸಂಪತ್ತನ್ನು ದುಪ್ಪಟ್ಟು ಮಾಡಿಕೊಳ್ಳುವ ಸರಳ ಉಪಾಯವೆಂದರೆ, ಹಣವನ್ನು ಇಡುವ ತಿಜೋರಿಗೆ ಹೊಂದಿಕೊಂಡಂತೆ ಒಂದು ಕನ್ನಡಿಯನ್ನು ಇಟ್ಟುಕೊಳ್ಳುವುದು. ಉದ್ಯಮಿಗಳಾಗಿದ್ದರೆ ಅಂಥವರು ಈ ಉಪಾಯವನ್ನು ಮಾಡುವುದರಿಂದ ಹಣವನ್ನು ದುಪ್ಪಟ್ಟು ಮಾಡಿಕೊಳ್ಳುವುದಲ್ಲದೇ, ಗ್ರಾಹಕರನ್ನು ಆಕರ್ಷಿಸಬಹುದಾಗಿದೆ.

4. ಬಾತ್‌ರೂಮ್‌ನಲ್ಲಿ ಕನ್ನಡಿಯನ್ನು ಪೂರ್ವ ಅಥವಾ ಉತ್ತರ ದಿಕ್ಕಿನ ಗೋಡೆಯಲ್ಲಿಡಬೇಕು. ಇದರಿಂದ ನಕಾರಾತ್ಮಕ ಶಕ್ತಿ ನಾಶವಾಗುವುದಲ್ಲದೇ, ಸ್ವಾಸ್ಥ್ಯ ಉತ್ತಮವಾಗಿರುತ್ತದೆ.

5. ಅಲಂಕಾರಕ್ಕೆಂದು ಕೋಣೆಯಲ್ಲಿ ಇಟ್ಟುಕೊಂಡಿರುವ ಕನ್ನಡಿಯು ಯಾವಾಗಲೂ ನೆಲದಿಂದ 4 ಅಥವಾ 5 ಅಡಿ ಎತ್ತರದಲ್ಲಿರಬೇಕು.

ಮನೆಯ ಮುಂದಿನ ರಂಗೋಲಿ ಹೇಗಿರಬೇಕು? ಈ ವಿಡಿಯೋ ನೋಡಿ.

ಕನ್ನಡಿ ಉಂಟು ಮಾಡುವ ನಕಾರಾತ್ಮಕ ಪರಿಣಾಮ

1. ಆಗ್ನೇಯ ದಿಕ್ಕನ್ನು ಅಗ್ನಿಯ ದಿಕ್ಕು ಎಂದು ಕರೆಯುತ್ತಾರೆ. ಇದು ಅಡುಗೆ ಮಾಡಲು ಉತ್ತಮವಾದ ದಿಕ್ಕಾಗಿದೆ. ಹಾಗಂತ ಈ ದಿಕ್ಕಿನಲ್ಲಿ ಕನ್ನಡಿಯನ್ನು ಇಡುವುದು ಸಲ್ಲದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದು ಅಗ್ನಿಯ ದಿಕ್ಕಾಗಿರುವ ಕಾರಣ ಇಲ್ಲಿ ಕನ್ನಡಿ ಇಡುವುದರಿಂದ ಮನೆಯಲ್ಲಿ ಕಲಹ, ಮನಸ್ತಾಪಗಳು ಉಂಟಾಗುತ್ತವೆ. ಹಾಗಾಗಿ ಈ ದಿಕ್ಕಿನಲ್ಲಿ ಕನ್ನಡಿಯನ್ನು ಇಟ್ಟುಕೊಂಡು ನೋಡಬಾರದೆಂದು ಹೇಳಲಾಗುತ್ತದೆ.

2. ಎದುರು ಬದುರಾಗಿ ಕನ್ನಡಿಯನ್ನು ಇಡಬಾರದೆಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಇದರಿಂದ ಒತ್ತಡ ಹೆಚ್ಚಾಗುತ್ತದೆ. ತಾಳ್ಮೆ ಇಲ್ಲದಂತಾಗುತ್ತದೆ. ಮನೆಯ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು ಸಹ ಉಂಟಾಗುತ್ತವೆ.

3. ಈಶಾನ್ಯ ದಿಕ್ಕಿನಲ್ಲೂ ಕನ್ನಡಿ ಇಡುವುದು ಉತ್ತಮವಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

4. ಉತ್ತಮ ಆರೋಗ್ಯ ಮತ್ತು ನೆಮ್ಮದಿಯ ನಿದ್ದೆಗೆ ಮಲಗುವ ಕೋಣೆಯಲ್ಲಿ ಕನ್ನಡಿ ಇರಬಾರದು. ಹೌದು, ಬೆಡ್‌ರೂಮ್‌ನಲ್ಲಿ ಕನ್ನಡಿ ಇಡಬಾರದೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅದರಲ್ಲೂ ಮಲಗುವ ಮಂಚ ಕನ್ನಡಿಯಲ್ಲಿ ಕಾಣಬಾರದು. ಇದರಿಂದ ದಾಂಪತ್ಯ ಜೀವನಕ್ಕೆ ತೊಡಕುಂಟಾಗುತ್ತದೆ.

ಜ್ಯೋತಿಷ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ (Click Here) ಕ್ಲಿಕ್‌ ಮಾಡಿ.

ಹೇಗಿರಬೇಕು ಕನ್ನಡಿ ?

1. ಚೌಕ ಮತ್ತು ಆಯತಾಕಾರದ ಕನ್ನಡಿಯನ್ನು ಮನೆಯಲ್ಲಿ ಇಟ್ಟು ಕೊಳ್ಳಬಹುದಾಗಿದೆ. ಇದು ಶುಭವನ್ನುಂಟು ಮಾಡುತ್ತದೆ. ಮೊಟ್ಟೆಯಾಕಾರ ಮತ್ತು ವೃತ್ತಾಕಾರಾದ ಕನ್ನಡಿಯನ್ನು ಬಳಸದಿರುವುದು ಒಳ್ಳೆಯದು.

2. ಸ್ನಾನದ ಕೋಣೆಯಲ್ಲಿರುವ ಕನ್ನಡಿಯನ್ನು ಬೆಳಕಿನಲ್ಲಿಡಬೇಕು. ಅದಕ್ಕೆ ಕತ್ತಲಾಗಬಾರದು. ಬಿಂಬ ಕಾಣದ, ತುಕ್ಕು ಹಿಡಿದಿರುವ, ಒಡೆದಿರುವ ಅಥವಾ ಬಳಸದ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಇದು ಮನೆಯ ಅವನತಿಗೆ ಕಾರಣವಾಗುತ್ತದೆ.

ಇದನ್ನೂ ಓದಿ : Vastu Tips : ಮನೆಯಲ್ಲಿ ಕುಡಿಯುವ ನೀರಿನ ಫಿಲ್ಟರನ್ನು ಈ ದಿಕ್ಕಿನಲ್ಲಿಟ್ಟರೆ ಬಹಳ ಒಳ್ಳೆಯದು!

Exit mobile version