ವಾಸ್ತು ಶಾಸ್ತ್ರದ ಪ್ರಕಾರ (Vastu Tips) ಪೂರ್ವಕ್ಕೆ ಮುಖ್ಯ ದ್ವಾರವಿರುವ ಮನೆ ವಾಸಕ್ಕೆ ಅತ್ಯಂತ ಯೋಗ್ಯ ಎಂದು ಪರಿಗಣಿಸಲಾಗುತ್ತದೆ. ಜೊತೆಗೆ ಪಶ್ಚಿಮ ಮತ್ತು ಉತ್ತರಕ್ಕೆ ಬಾಗಿಲಿರುವ ಮನೆ ಸಹ ಶುಭವೆಂದೇ ಹೇಳಲಾಗುತ್ತದೆ. ಆದರೆ ಕೆಲವೊಮ್ಮೆ ಹಲವಾರು ಕಾರಣಗಳಿಂದ ದಕ್ಷಿಣ ದಿಕ್ಕಿಗೆ ಮುಖ್ಯ ದ್ವಾರವನ್ನು ಇಟ್ಟು ಮನೆ ನಿರ್ಮಾಣ ಮಾಡಬೇಕಾಗಿ ಬರುತ್ತದೆ. ಕೆಲವರಿಗೆ ದಕ್ಷಿಣ ದಿಕ್ಕಿಗೆ ಬಾಗಿಲಿರುವ ಮನೆಯಲ್ಲಿಯೇ ವಾಸಿಸುವ ಅನಿವಾರ್ಯತೆಯೂ ಸೃಷ್ಟಿಯಾಗುತ್ತದೆ. ಸಾಮಾನ್ಯ ತಿಳುವಳಿಕೆ ಏನೆಂದರೆ ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕೆಗೆ ಮುಖ್ಯದ್ವಾರವಿರುವ ಮನೆಯಲ್ಲಿ ವಾಸಿಸುವುದು ಶುಭವಲ್ಲ!
ಇದು ನಿಜವೇ?, ಖಂಡಿತಾ ಸರಿಯಲ್ಲ. ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿಗಿರುವ ಮನೆ (South Facing House) ಅಶುಭವೇನಲ್ಲ. ಇದು ಶುಭವೇ ಆಗಿದ್ದು, ಕೆಲ ರಾಶಿ ನಕ್ಷತ್ರದವರಿಗೆ ದಕ್ಷಿಣ ದಿಕ್ಕು ಅತ್ಯಂತ ಶುಭ ದಿಕ್ಕಾಗಿರುತ್ತದೆ. ದಕ್ಷಿಣ ದಿಕ್ಕಿಗೆ ಬಾಗಿಲಿರುವ ಮನೆಯಲ್ಲಿ ಕೆಲವು ವಾಸ್ತು ನಿಯಮಗಳನ್ನು ಅಳವಡಿಸಿಕೊಂಡಲ್ಲಿ ಎಲ್ಲವೂ ಒಳಿತಾಗುತ್ತದೆ.
ಮುಖ್ಯವಾಗಿ ಮನೆ ನಿರ್ಮಾಣದ ಸಮಯದಲ್ಲಿ ದಕ್ಷಿಣ ದಿಕ್ಕಿಗೆ ಮುಖ್ಯದ್ವಾರ ಬರುತ್ತದೆ ಎಂದಾದರೆ, ಆ ಸಮಯದಲ್ಲಿಯೇ ಕೆಲವು ವಾಸ್ತು ನಿಯಮಗಳನ್ನು ಪಾಲಿಸಿ ಮನೆ ನಿರ್ಮಿಸಿಕೊಂಡರೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಈಗಾಗಲೇ ಮನೆ ನಿರ್ಮಾಣವಾಗಿದ್ದರೆ ಕೆಲ ವಾಸ್ತು ನಿಯಮಗಳ್ನು ಪಾಲಿಸಿದರೂ ಸಾಕು. ಅವು ಯಾವುವು ಎಂಬುದನ್ನು ತಿಳಿಯೋಣ.
ದೋಷ ಪರಿಹಾರಕ್ಕೆ ಹೀಗೆ ಮಾಡಿ!
ಮುಖ್ಯವಾಗಿ ದಕ್ಷಿಣ ದಿಕ್ಕಿನ ದೋಷವನ್ನು ಪರಿಹರಿಸಿಕೊಳ್ಳಲು ಮನೆಯ ಮುಖ್ಯದ್ವಾರದ ಮೇಲೆ ಪಂಚಮುಖಿ ಆಂಜನೇಯನ ಚಿತ್ರವನ್ನು ಹಾಕಬೇಕು. ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಯ ಒಳಗೆ ಪ್ರವೇಶಿಸುವುದಿಲ್ಲ.
ದಕ್ಷಿಣ ದ್ವಾರವಿರುವ ಮನೆಯ ಮುಖ್ಯ ದ್ವಾರದ ಎದುರಿಗೆ ಸ್ವಲ್ಪ ದೂರದಲ್ಲಿ ಕಹಿಬೇವಿನ ಗಿಡವನ್ನು ನೆಡುವುದು ಒಳ್ಳೆಯದು. ಇದರಿಂದ ದಕ್ಷಿಣ ದಿಕ್ಕಿನ ನಕಾರಾತ್ಮಕ ಪ್ರಭಾವಗಳು ಕಡಿಮೆಯಾಗುತ್ತವೆ.
ದಕ್ಷಿಣ ದಿಕ್ಕಿಗಿರುವ ಮನೆಯ ಎದುರಿಗೆ ಯಾವುದಾದರೂ ಇದಕ್ಕಿಂತ ಎರಡು ಪಟ್ಟು ಎತ್ತರದ ಮನೆ ಇದ್ದರೆ ಅದರಿಂದ ದಕ್ಷಿಣ ದಿಕ್ಕಿನ ದೋಷಗಳು ಸ್ವಲ್ಪ ಮಟ್ಟಿಗೆ ನಿವಾರಣೆಯಾಗುತ್ತವೆ.
ಆಗ್ನೇಯ ಮೂಲೆಯಲ್ಲಿ ಮುಖ್ಯದ್ವಾರವಿರಲಿ
ದಕ್ಷಿಣ ದಿಕ್ಕಿನ ಮನೆಯಾದರೂ ಮುಖ್ಯದ್ವಾರ ಆಗ್ನೇಯ ಮೂಲೆಯಲ್ಲಿದ್ದರೆ, ವಾಸ್ತು ದೃಷ್ಟಿಯಿಂದ ಇದು ಒಳ್ಳೆಯದೆಂದು ಹೇಳಲಾಗುತ್ತದೆ. ಉತ್ತರ ಮತ್ತು ಪೂರ್ವ ದಿಕ್ಕಿಗೆ ಹೆಚ್ಚು, ದಕ್ಷಿಣ ಮತ್ತು ಪಶ್ಚಿಮ ದಿಕ್ಕಿಗೆ ಕಡಿಮೆ ಖಾಲಿ ಜಾಗವನ್ನು ಬಿಟ್ಟರೆ ದಕ್ಷಿಣದ ದೋಷ ನಿವಾರಣೆಯಾಗುತ್ತದೆ. ಜೊತೆಗೆ ಪೂರ್ವ ಮತ್ತು ಈಶಾನ್ಯ ದಿಕ್ಕಿಗೆ ಚಿಕ್ಕ ಚಿಕ್ಕ ಗಿಡಗಳನ್ನು ಹಾಕಿಕೊಳ್ಳುವುದರಿಂದ ಸಹ ದಕ್ಷಿಣ ದಿಕ್ಕಿನ ನಕಾರಾತ್ಮಕ ಪ್ರಭಾವಗಳಿಂದ ಪಾರಾಗಬಹುದು.
ಆಗ್ನೇಯ ಮೂಲೆಯಲ್ಲಿರುವ ಬಾಗಿಲಿಗೆ ಕೆಂಪು ಅಥವಾ ಕಂದು ಬಣ್ಣ ಬಳಿದರೆ ಉತ್ತಮ ಫಲ ಪ್ರಾಪ್ತವಾಗುತ್ತದೆ. ಅಲ್ಲದೇ ತಿಳಿ ಕೇಸರಿ ಅಥವಾ ಬೂದು ಬಣ್ಣ ಸಹ ಉತ್ತಮವೆಂದೇ ಹೇಳಲಾಗುತ್ತದೆ. ನೀಲಿ ಅಥವಾ ಕಪ್ಪು ಬಣ್ಣವನ್ನು ಯಾವುದೇ ಅನಿವಾರ್ಯ ಪರಿಸ್ಥಿತಿಯಲ್ಲೂ ಬಳಿಯಬಾರದೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ವಾದ ವಿವಾದಗಳು, ಜಗಳದಂತ ಸನ್ನಿವೇಶಗಳು ಎದುರಾಗುತ್ತವೆ.
ಜ್ಯೋತಿಷ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ (Click Here) ಕ್ಲಿಕ್ ಮಾಡಿ.
ಕನ್ನಡಿಯಿಂದ ದೋಷ ನಿವಾರಣೆ
ದಕ್ಷಿಣ ದಿಕ್ಕಿಗೆ ಬಾಗಿಲಿರುವ ಮನೆಯಲ್ಲಿ ಬಾಗಿಲಿನ ಎದುರಿಗೆ ದೊಡ್ಡ ಕನ್ನಡಿ ಹಾಕುವುದು ಉತ್ತಮ. ಇದರಿಂದ ಮನೆಯ ಒಳಗೆ ಪ್ರವೇಶಿಸುತ್ತಿದ್ದಂತೆಯೇ, ಬರುವವರ ಪೂರ್ಣ ಪ್ರತಿಬಿಂಬ ಕನ್ನಡಿಯಲ್ಲಿ ಕಾಣುವಂತೆ ಮಾಡುವುದು ಉತ್ತಮ. ಇದರಿಂದ ಮನೆಗೆ ಪ್ರವೇಶಿಸುವ ವ್ಯಕ್ತಿಯ ಜೊತೆಗೆ ಬರುವ ನಕಾರಾತ್ಮಕ ಶಕ್ತಿಗಳು ಹಿಂತಿರುಗಿ ಹೋಗುವಂತಾಗುತ್ತದೆ.
ಮನೆಯ ಮುಖ್ಯ ದ್ವಾರ ದಕ್ಷಿಣ ದಿಕ್ಕಿಗಿದ್ದರೂ, ಅಡುಗೆ ಮನೆಗೆ ಆಗ್ನೇಯ ದಿಕ್ಕನ್ನೇ ಆಯ್ಕೆ ಮಾಡಿಕೊಳ್ಳಬೇಕು. ಜೊತೆಗೆ ಅಡುಗೆ ತಯಾರಿಸುವ ಸಂದರ್ಭದಲ್ಲಿ ಅಡುಗೆ ಮಾಡುವವರ ಮುಖ ಪೂರ್ವ ದಿಕ್ಕಿಗಿರಬೇಕು. ನೀರಿಗೆ ಸಂಬಂಧಿಸಿದ ಯಾವುದೇ ನಲ್ಲಿ ಅಥವಾ ಸಿಂಕ್ ದಕ್ಷಿಣ ದಿಕ್ಕಿಗೆ ಇರಬಾರದು.
ಇದನ್ನೂ ಓದಿ : Vastu Tips : ಮನೆಯ ಈ ದಿಕ್ಕಿನಲ್ಲಿಟ್ಟರೆ ಪೊರಕೆ; ಸಿಗಲಿದೆ ಲಕ್ಷ್ಮೀ ಕೃಪೆ!